Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಈ ಬಂಡೆ ಗಾಳಿಯಲ್ಲಿ ತೇಳುತ್ತಿದೆಯೇ..? ಇದರ ಸತ್ಯಾಂಶವೇನು..?
ಆಪ್ಟಿಕಲ್ ಇಲ್ಯೂಷನ್‌ಗೆ ಸಂಬಂಧಿಸಿದಂತೆ ಹತ್ತಾರು ಫೋಟೋಗಳನ್ನು ಚಿತ್ರಗಳನ್ನು ನಾವು ನಿತ್ಯವೂ ನೋಡುತ್ತಿರುತ್ತೇವೆ. ಕೆಲವೊಂದು ನಮ್ಮ ಬುದ್ಧಿಗೆ ಸವಾಲು ಹಾಕಿದರೆ ಮತ್ತೆ ಕೆಲವು ಕಾಡುತ್ತಲೇ ಇರುತ್ತವೆ. ಅದರಲ್ಲೂ ಕೆಲವೊಂದು ಚಿತ್ರವಂತು ಉತ್ತರ ಸಿಗದೆ ನಾವೇ ಪರಿತಪಿಸುವಂತೆ ಮಾಡಿಬಿಡುತ್ತವೆ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಒಂದು ರೀತಿಯಲ್ಲಿ ನಮ್ಮ ಮೆದುಳಿಗೆ ಕೆಲಸ ಕೊಡುವ ಚಿತ್ರಗಳು ಇವು ನಿಮಗೆ ಒಂದಿಷ್ಟು ಕೆಲಸ ನೀಡುತ್ತವೆ. ನಿಮ್ಮ ಜೊತೆ ಮೆದುಳಿಗೂ ಒಂದಿಷ್ಟು ಕೆಲಸ ನೀಡುತ್ತವೆ. ಇದರಿಂದ ನಿಮ್ಮ ಬುದ್ದಿ ಶಕ್ತಿಗೂ ಉತ್ತಮ ವ್ಯಾಯಾಮವಿದ್ದಂತೆ.

ಹೀಗೆ ಆನ್‌ಲೈನ್‌ನಲ್ಲಿ ಹರಿದಾಡುವ ಹಲವಾರು ಪೋಟೋಗಳ ಪೈಕಿ ಇಲ್ಲೊಂದು ಫೋಟೋ ಜನರ ನಿದ್ದೆ ಗೆಡಿಸಿದೆ. ಅದೇನೆಂದರೆ ಈ ಫೋಟೋದಲ್ಲಿರುವ ದೊಡ್ಡ ಬಂಡೆಯೊಂದು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣಿಸಲಿದೆ. ಹೌದು ನಿಮಗೂ ಸಹ ಈ ಬಂಡೆ ಗಾಳಿಯಲ್ಲಿ ತೇಲಿದಂತೆಯೇ ಕಂಡುಬರಲಿದೆ.
ಆದರೆ ಬಂಡೆ ಕಲ್ಲು ಗಾಳಿಯಲ್ಲಿ ತೇಲಲು ಹೇಗೆ ಸಾಧ್ಯ ಇದು ಅಸಾಧ್ಯದ ಮಾತು. ಇಲ್ಲಿ ಬಂಡೆ ಗಾಳಿಯಲ್ಲಿ ತೇಲುತ್ತಿಲ್ಲ ಬದಲಿಗೆ ಅದು ನೀರಿನಲ್ಲಿ ಅರ್ಧ ಮುಳುಗಿದೆ. ಆ ನೀರಿನಲ್ಲಿ ಆಕಾಶದ ಪ್ರತಿಬಿಂಬ ಕಾಣುತ್ತಿದೆ. ಹೀಗಾಗಿ ನಮಗೆ ಆ ಬಂಡೆ ಗಾಳಿಯಲ್ಲಿ ತೇಲುತ್ತಿರುವಂತೆ ಕಂಡುಬರುತ್ತಿದೆ.
ಈ ಫೋಟೋವನ್ನು ಗಮನವಿಟ್ಟು ನೋಡಿದಾಗ ಅಥವಾ ಇನ್ನೊಂದು ದಿಕ್ಕಿನಲ್ಲಿ ನೋಡಿದಾಗ ಮಾತ್ರ ಇದರ ಸತ್ಯಾಂಶ ಕಣ್ಣಿಗೆ ಬೀಳುತ್ತೆ. ಅಲ್ಲಿ ಬಂಡೆ ನೀರಿನಲ್ಲಿ ಮುಳುಗಿದ್ದು ಅದರ ಅರ್ಧ ನೆರಳು ನೀರಿನಲ್ಲಿದೆ. ಜೊತೆಗೆ ಆಕಾಶದ ಪ್ರತಿಬಿಂಬ ನೀರಿನಲ್ಲಿ ಹೊಳೆಯುತ್ತಿದೆ. ಹೀಗಾಗಿ ನಮ್ಮ ಮೆದುಳು ಅದನ್ನು ಆಕಾಶದಲ್ಲಿ ಬಂಡೆ ಹಾರುತ್ತಿರುವಂತೆ ಗ್ರಹಿಸುತ್ತಿದೆ.
ಈ ಫೋಟೋವನ್ನು ಟ್ವಿಟರ್ ಖಾತೆಯಲ್ಲಿ ಒಬ್ಬರು ಹಂಚಿಕೊಂಡ ಬಳಿಕ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮೊದಲ ಬಾರಿ ಕಂಡ ಜನರು ಅಚ್ಚರಿಗೆ ಒಳಗಾಗಿದ್ದಾರೆ. ಏಕೆಂದರೆ ಅವರಿಗೂ ಈ ಬಂಡೆ ಗಾಳಯಲ್ಲಿ ತೇಲುತ್ತಿರುವಂತೆಯೇ ಕಂಡುಬಂದಿದೆ. ಹೀಗಾಗಿ ಒಬ್ಬಬ್ಬರು ಒಂದೊಂದು ರೀತಿಯ ಕಮೆಂಟ್‌ಗಳ ಮಾಡುತ್ತಿದ್ದಾರೆ.
ಕೆಲವರು ಅಚ್ಚರಿಯಾಗಿ ಈ ಫೋಟೋವನ್ನು ಗಮನಿಸಿ ಇದು ಹೇಗೆ ಸಾಧ್ಯ.? ಇದು ನಕಲಿಯಾಗಿರಬಹುದು ಎಂದಿದ್ದಾರೆ. ಮತ್ತೆ ಕೆಲವರು ಈ ಫೋಟೋ ನೋಡಿದ ತಕ್ಷಣ ಇದು ನೀರಿನಲ್ಲಿರುವ ಕಲ್ಲು ಎಂದು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೊದಲು ಚಿಟ್ಟೆಯ ಫೋಟೋವೊಂದು ವೈರಲ್ ಆಗಿತ್ತು. ಚಿತ್ರದಲ್ಲಿದ್ದ ಚಿಟ್ಟೆಗಳ ಪೈಕಿ ವಿಭಿನ್ನವಾದ ಚಿಟ್ಟೆಯನ್ನು ಗುರುತಿಸುವಂತೆ ಸವಾಲು ಹಾಕಲಾಗಿತ್ತು. ಈ ಚಿತ್ರ ಕಂಡ ನೆಟ್ಟಿಗರು ತಲೆ ಕೆರೆದುಕೊಂಡು ಆ ಒಂದು ವಿಭಿನ್ನ ಚಿಟ್ಟೆಯ ಹುಡುಕಲು ಮುಂದಾಗಿದ್ದರು.
ಇದಲ್ಲದೆ ಮರದಲ್ಲಿ ಅಡಗಿರುವ ಗೂಬೆಯೊಂದನ್ನು ಹುಡುಕುವಂತೆ ಸವಾಲು ಹಾಕಲಾಗಿತ್ತು. ಈ ಚಿತ್ರದಲ್ಲಿ ಗೂಬೆ ಮರದ ಬಣ್ಣವೇ ಇದ್ದ ಕಾರಣ ಸುಲಭವಾಗಿ ಹುಡುಕುವುದು ಕಣ್ಣಿಗೊಂದು ಸವಾಲಾಗಿತ್ತು. ಆದರೆ ಮರದ ಮಧ್ಯದಲ್ಲಿ ಗೂಬೆಯ ತಲೆ ಮಾತ್ರ ಕಾಣಿಸುತ್ತಿರುವುದನ್ನು ನೆಟ್ಟಿಗರು ಪತ್ತೆ ಮಾಡಿದ್ದರು.
ಇಂತಹ ಹತ್ತು ಹಲವು ಚಿತ್ರಗಳು ಆನ್‌ಲೈನ್‌ನಲ್ಲಿ ನಿತ್ಯವೂ ಹರಿದಾಡುತ್ತಿರುತ್ತವೆ, ಕೆಲವೊಂದಕ್ಕೆ ಸುಲಭವಾಗಿ ಉತ್ತರ ಸಿಕ್ಕರೆ ಮತ್ತೆ ಕೆಲವು ಪ್ರಶ್ನೆಗಳಾಗಿಯೇ ಕಾಡುತ್ತವೆ. ಇನ್ನು ಈ ಚಿತ್ರದಲ್ಲಿ ಬಂಡೆ ಕಲ್ಲು ಗಾಳಿಯಲ್ಲಿ ಹಾರುತ್ತಿದೆ ಎಂದು ಭಾವಿಸಲಾಗಿದೆ. ಅದ್ರೆ ಅಚ್ಚರಿ ಎಂದರ ಅದು ನೀರಿನಲ್ಲಿದೆ. ಕೆಲವರಿಗೆ ಇದನ್ನು ಗುರುತಿಸಲು ಸಾಧ್ಯವಾಗಿದ್ದರೆ ಮತ್ತೆ ಕೆಲವರಿಗೆ ಇದು ಕಷ್ಟವಾಗಿದೆ.
ಕೆಲವರು ಇದನ್ನು ಫೋಟೋಶಾಪ್ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಫೋಟೊ ನೈಜವಾಗಿದ್ದು, ನಮ್ಮ ಮೆದುಳು ಅದನ್ನು ಗ್ರಹಿಸುವಲ್ಲಿ ಸೋಲುತ್ತಿದೆ.



Click it and Unblock the Notifications
