Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಕನ್ನಡಿಗರೇ ತಪ್ಪಾಯ್ತು, ಕ್ಷಮಿಸಿ ಎಂದ ಫೋನ್ ಪೇ ಸಿಇಒ: ಕನ್ನಡಿಗರಿಗೆ ಮೀಸಲಾತಿ ಬೇಡ ಎನ್ನುವ ಉದ್ಯಮಿಗಳೇ ಈ ಸವಾಲು ಸ್ವೀಕರಿಸಿ
ಕನ್ನಡಿಗರನ್ನು ಕೆಣಕಿದರೆ ಸುಮ್ಮನೆ ಬಿಡುತ್ತಾರೆಯೇ? ಸಾಮಾನ್ಯವಾಗಿ ಕನ್ನಡಿಗರು ಯಾರ ತಂಟೆಗೂ ಹೋಗಲ್ಲ, ಆದರೆ ನಮ್ಮನ್ನು ಕೆಣಕಿದರೆ ಅವರಿಗೆ ಪಾಠ ಕಲಿಸುವವರೆಗೆ ಸುಮ್ಮನೆ ಇಲ್ಲ.
ಬೇರೆ ಯಾವುದೇ ಭಾಷೆಯವರು ಆಗಲಿ ಅವರ ಜೊತೆ ಪ್ರೀತಿಯಿಂದ ಮಾತನಾಡುತ್ತೇವೆ. ಅವರು ಕನ್ನಡ ಕಲಿಯದಿದ್ದರೂ ನಾವು ಅವರ ಭಾಷೆ ಕಲಿತು ಅವರ ಜೊತೆ ಅವರ ಭಾಷೆಯಲ್ಲಿ ಮಾತನಾಡುತ್ತೇವೆ, ಆದರೆ ನಮ್ಮ ಜೊತೆ ಕನ್ನಡ ಕಲಿಯಲ್ಲ ಎಂದು ಧಿಮಾಕು ತೋರಿಸುತ್ತಾರೆ, ಅದರಲ್ಲಿಯೂ ಕನ್ನಡಿಗರಿ ಖಾಸಗಿ ವಲಯದಲ್ಲಿ ಮಿಸಲಾತಿ ನೀಡಲು ಕಾಯ್ದೆ ತರಲು ಸರ್ಕಾರ ಮುಂದಾಗಿದೆ ಎಂದು ತಿಳಿಯುತ್ತಿದ್ದಂತೆ ಎಷ್ಟೊ ಜನರು ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಆಡಲಾಂಭಿಸಿದರು.

ಬಯೋಕಾನ್ ಕಿರಣ್ ಮುಜುಂದಾರ್ , ಮೋಹಾನ್ ದಾಸ್ ಪೈ ಉದ್ಯಮಿಗಳಂತೂ ಹೀಗೆ ಮೀಸಲಾತಿ ನೀಡಿದರೆ ನಮ್ಮ ಸಾಮ್ರಾಜ್ಯ ಮುಳುಗಿಯೆ ಹೋಗುತ್ತದೆ ಎಂಬಂತೆ ಬೊಬ್ಬೆ ಹಾಕಲಾರಂಭಿಸಿದರು, ಅವರ ಸಾಮ್ರಾಜ್ಯ ಅಷ್ಟು ದೊಡ್ಡದಾಗಿ ಬೆಳೆಯಲು ನಮ್ಮ ಬೆಂಗಳೂರು ಕಾರಣ ಎಂಬುವುದನ್ನು ಮರೆತು ಟ್ವೀಟ್ ಮೇಲೆ ಟ್ವೀಟ್ ಮಾಡಿದರು, ಅವರಲ್ಲಿ ಫೋನ್‌ಪೇ ಸಿಇಒ ಅಹಂಕಾರದಿಂದ ಟ್ವೀಟ್ ಮಾಡಿದರು, ಇದನ್ನು ನೋಡಿದ ಕನ್ನಡಿಗರು ಅವರಿಗೆ ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಯಾವಾಗ ಫೋನ್‌ಪೇ ಅನ್‌ಇನ್‌ಸ್ಟಾಲ್ ಮಾಡಲಾರಂಭಿಸಿದರೋ ಆವಾಗ ಇವರಿಗೆ ಬುದ್ಧಿ ಬಂದಿದೆ.
ಉದ್ಯಮಿಗಳೇ ಕನ್ನಡಿಗರಿಗೆ ಮೀಸಲಾತಿ ನೀಡುವುದರಿಂದ ನಿಮಗಾಗುವ ನಷ್ಟವಾದರು ಎನು?
ಕನ್ನಡಿಗರಿಗೆ ಮೀಸಲಾತಿ ಎಂದ ತಕ್ಷಣ ಏಕೆ ಇಷ್ಟೊಂದು ಆತಂಕ ನಿಮಗೆ? ಮೀಸಲಾತಿ ಹೆಸರಿನಲ್ಲಿ ಕೌಶಲ್ಯ ಇಲ್ಲದವರನ್ನು ಉದ್ಯೋಗಿಗಳಾಗಿ ತೆಗೆದುಕೊಳ್ಳಿ ಎಂದು ಯಾರಾದರೂ ಹೇಳಿದ್ದಾರಾ? ನಿಮ್ಮ ಕೆಲಸಕ್ಕೆ ಯಾವೆಲ್ಲಾ ಕೌಶಲ್ಯ ಬೇಕು ಎಂದು ನೀವು ಸಂದರ್ಶನ ಮಾಡಿ ತಾನೆ ಕೆಲಸಕ್ಕೆ ತೆಗೆದುಕೊಳ್ಳುವುದು? ಈ ಮೀಸಲಾತಿ ಬಂದರೂ ಅತಿ ನಿಪುಣರಾದ ಉದ್ಯೋಗಿಗಳನ್ನು ಆಯ್ಕೆ ಮಾಡಬಹುದಲ್ಲವೇ?
ಮೀಸಲಾತಿ ಬೇಡ ಎಂದು ಹೇಳುವ ಮೂಲಕ ಕನ್ನಡಿಗರ ಕೌಶಲ್ಯಕ್ಕೆ ಅವಮಾನ ಮಾಡುತ್ತಿರುವ ಉದ್ಯಮಿಗಳು
ಅಯ್ಯೋ ಮಿಸಲಾತಿ ಬಂದರೆ ನಮಗೆ ಉದ್ಯಮ ನಡೆಸಲು ಕಷ್ಟವಾಗುತ್ತೆ ಎಂದು ಹೇಳುತ್ತಿರುವ ಕನ್ನಡ ನೆಲದಲ್ಲಿರುವ ಉದ್ಯಮಿಗಳೇ... ಹೀಗೆ ಹೇಳುವ ಮೂಲಕ ನೀವು ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದೀರಿ ಎಂಬುವುದನ್ನು ಮರೆತ್ತಿದ್ದೀರಾ? ನಿಮ್ಮ ಕಂಪನಿಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕನ್ನಡಿಗರಿಗೆ ಇಲ್ಲವೇ, ಇತರ ರಾಜ್ಯದವರಿಗೆ ಮಾತ್ರ ಇರುವುದಾ?
ಕನ್ನಡಿಗರಿಗೆ ಮೀಸಲಾತಿ ಬಂದರೆ ನಿಮಗೆ ಆಗುವ ನಷ್ಟವಾದರೂ ಏನು? ಸುಮ್ಮನೆ ಹೇಳುವ ಮುಲಕ ಕನ್ನಡಿಗರಿಗೆ ಅವಮಾನ ಮಾಡಿದ್ದೀರಿ. ಶೇ. 100 ರಷ್ಟು ಕನ್ನಡಿಗರೇ ಇರಬೇಕೆಂದು ಹೇಳುತ್ತಿಲ್ಲ, ನಿಮ್ಮ ಕಂಪನಿಯಲ್ಲಿ ಶೇ. ಇಷ್ಟು ಮೀಸಲಾತಿ ನೀಡಿ ಎಂದಷ್ಟೇ ಕೇಳುತ್ತಿರುವುದು. ನಿಮ್ಮ ಕೆಲಸಕ್ಕೆ ಸೇರುವ ಉದ್ಯೋಗಿಗೆ ಎಂಥ ಕೌಶಲ್ಯ ಬೇಕು ಎಂಬುವುದು ನಿಮಗೆ ಗೊತ್ತಿರುತ್ತದೆ, ಅದಕ್ಕಿಂತ ಕಡಿಮೆ ಕೌಶಲ್ಯದ ವ್ಯಕ್ತಿಯನ್ನು ಆಯ್ಕೆ ಮಾಡಲು ಹೇಳಿಲ್ಲ ಅಲ್ವಾ?
ಕನ್ನಡಿಗರೇ, ಮೀಸಲಾತಿ ತರಬೇಡಿ ಎಂದು ಹೇಳುತ್ತಿರುವ ಉದ್ಯಮಿಗಳಿಗೆ ಹಾಕಿ ಈ ಒಪನ್ ಚಾಲೆಂಜ್
ಚಿಕ್ಕ ಕಂಪನಿಯಿಂದ ಹಿಡಿದು ಇಸ್ರೋದಂಥ ಸಂಸ್ಥೆಗಳಲ್ಲಿ ನಮಮ್ಮ ಕನ್ನಡಿಗರು ಇದ್ದಾರೆ. ಪ್ರತಿವರ್ಷ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳಲ್ಲಿ ನೈಪೂಣ್ಯತೆ ಪಡೆದು ಹೊರ ಬರುತ್ತಿದ್ದಾರೆ, ಇವರಲ್ಲಿ ನಿಮಗೆ ನಿಮ್ಮ ಕಂಪನಿಗೆ ಬೇಕಾದ ಬುದ್ಧಿವಂತ, ವೃತ್ತಿ ನಿಪುಣರು ಇಲ್ಲವೆಂದು ಹೇಳುತ್ತಿದ್ದೀರಾ? ಯಾವ ಕ್ಷೇತ್ರದಲ್ಲಿ ಕನ್ನಡಿಗರು ಅಸಮರ್ಥರು ಎಂಬುವುದನ್ನು ತೋರಿಸಿ, ಇದು ಕನ್ನಡಿಗರಿಗೆ ಮೀಸಲಾತಿ ಬೇಡ ಎನ್ನುವವರಿಗೆ ಓಪನ್ ಚಾಲೆಂಜ್...
'I am truly sorry... ಎಂದು ಫೋನ್‌ಪೇ ಸಿಇಒ ಕ್ಷಮೆ ಕೇಳಿರುವಂತೆ ಕನ್ನಡಿಗರನ್ನು ಕಡೆಗಣಿಸುವ ಪ್ರತಿಯೊಬ್ಬರಿಗೆ ಪಾಠ ಕಲಿಸಬೆಕಾಗಿದೆ... ಜೈ ಕರ್ನಾಟಕ...



Click it and Unblock the Notifications
