Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
ಈ ಮಾಂಟೆಸ್ಸರಿ, ಎಲ್ ಕೆಜಿ, ಯುಕೆಜಿ ಕ್ಲಾಸ್‌ಗಳಿಗೆ ಕಲಿಸುವ ಟೀಚರ್‌ಗಳು ಇದ್ದಾರಲ್ಲಾ ಅವರು ದೇವತೆಗಳು... ಪುಟಾಣಿಗಳನ್ನು ನೋಡಿಕೊಂಡು ಕಲಿಸುವುದು ಇದೆಯೆಲ್ಲಾ ಅದಕ್ಕೆ ಅಷ್ಟೊಂದು ತಾಳ್ಮೆ ಬೇಕು.
ಒಂದು ಕಡೆ ಕೂರು ಅಂದ್ರೆ ಕೂರಲ್ಲ, ಒಂದೊಂದು ಮಕ್ಕಳು ಒಂದೊಂದು ರೀತಿ, ಅವರನ್ನೆಲ್ಲಾ ಮ್ಯಾನೇಜ್ ಮಾಡಿಕೊಂಡು ಹೋಗುವುದು ಇದೆಯೆಲ್ಲಾ ಅಷ್ಟು ಸುಲಭದ ಕೆಲಸ ಅಲ್ವೇ ಅಲ್ಲ, ಇಲ್ಲೊಬ್ಬರು ತಮ್ಮ ಮುದ್ದು ಮಕ್ಕಳ ಮುಖದಲ್ಲಿ ನಗು ತರಿಸಲು ಮಾಡಿದ ಸರ್ಕಸ್ ವೈರಲ್ ಆಗುತ್ತಿದೆ. ಎಲ್ಲರೂ ಆ ಟೀಚರ್ ಮಾಡಿದ ಕೆಲಸಕ್ಕೆ ಎಲ್ಲರೂ ಹ್ಯಾಟ್ಸಪ್ ಹೇಳುತ್ತಿದ್ದಾರೆ.

ಆ ಕ್ಲಿಪ್‌ನಲ್ಲಿ "Only For these cute smiles"ಎಂಬ ಕ್ಯಾಪ್ಷನ್ ನೀಡಲಾಗಿದೆ. ಇದನ್ನು ನೋಡಿದ ವೀಕ್ಷಕರು ತುಂಬಾನೇ ಖುಷಿಯಾಗಿದ್ದಾರೆ, ಟೀಚರ್ ಅಂದರೆ ಹೀಗಿರಬೇಕು ಎಂದು ಜನರು ಹೊಗಳುತ್ತಿದ್ದಾರೆ. ಮಕ್ಕಳನ್ನು ಫೋಟೋಗೆ ಸಾಲಾಗಿ ಕೂರಿಸಲಾಗಿದೆ. ಟೀಚರ್ ಅಡ್ಡವಾಗಿ ಮಲಗಿ ಫೋನ್ ಹಿಡಿದಿದ್ದಾರೆ, ಮತ್ತೊಬ್ಬರು ಎಳೆದುಕೊಂಡು ಹೋಗುತ್ತಿದ್ದಾರೆ. ಇದನ್ನು ನೋಡಿ ಮಕ್ಕಳು ತುಂಬಾನೇ ಖುಷಿ ಪಡುತ್ತಿದ್ದಾರೆ.
ಈ ವೀಡಿಯೋವನ್ನು ಕೆಲವು ದಿನಗಳ ಹಿಂದೆಯಷ್ಟೇ ಪೋಸ್ಟ್ ಮಾಡಲಾಗಿತ್ತು. ಮುಗ್ಧ ಮಕ್ಕಳಿಗೆ ಕೊಡಬೇಕಾಗಿರುವುದೇ ಈ ಖುಷಿ. ಈ ವೀಡಿಯೋ 19.4 ಮಿಲಿಯನ್ ರೀಚ್ ಆಗಿದೆ. ಈ ಟೀಚರ್ ತೆಗೆದ ಎಫರ್ಟ್ ಮೆಚ್ಚಿಕೊಳ್ಳಲೇಬೇಕು. ನೆಲದ ಮೇಲೆ ಒಬ್ಬರು ಎಳೆದುಕೊಂಡು ಹೋಗುವ ವೀಡಿಯೋವನ್ನು ಮೆಚ್ಚಿಕೊಳ್ಳದೆ ಇರಲಿಕ್ಕೆ ಸಾಧ್ಯವೇ?
ಮಕ್ಕಳಿಗೆ ಬಾಲ್ಯದಲ್ಲಿ ಇಂಥ ಸಿಹಿ ನೆನಪುಗಳನ್ನೇ ಸೃಷ್ಟಿಸಬೇಕು
ಬಾಲ್ಯ ಎಂಬುವುದು ತುಂಬಾನೇ ಅದ್ಭುತವಾದ ಸಮಯ, ಆ ಸಮಯದಲ್ಲಿ ಮಗುವನ್ನು ಖುಷಿಯಾಗಿಡಲು ನೋಡಬೇಕು. ಅದಕ್ಕಾಗಿ ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ಶ್ರಮಿಸಬೇಕು. ಆ ಮಕ್ಕಳ ಮುಖದಲ್ಲಿ ನಗು ನೋಡಿ, ಎಂತ ಚಂದ ಅಲ್ವಾ? ಮಕ್ಕಳ ಜೊತೆ ಸೇರಿ ಮಕ್ಕಳಾಗುವುದು ಎಂದರೆ ಇದೆನೇ...
ಮಕ್ಕಳಿಗೆ ಶಿಕ್ಷಕರು ಇಷ್ಟವಾದರೆ ಅವರು ಮಾಡಿದ ಪಾಠ ಚೆನ್ನಾಗ ಅರ್ಥವಾಗುತ್ತದೆ
ಶಿಕ್ಷಕರು ಮಕ್ಕಳಿಗೆ ಚೆನ್ನಾಗಿ ಕಲಿಸಬೇಕೆಂದರೆ ಮೊದಲು ಅವರ ಪ್ರೀತಿಯನ್ನು ಗಳಿಸಬೇಕು. ಹೊಡೆದು, ಗದರಿಸಿ ಕಲಿಸಿದರೆ ಮಕ್ಕಳು ಕಲಿಯುವುದು ಕಡಿಮೆ, ಅದರೆ ಖುಷಿ ಖುಷಿಯಾಗಿ ಅವರನ್ನು ನಲಿಸಿ ಕಲಿತರೆ ಅವರು ಚೆನ್ನಾಗಿಯೇ ಕಲಿಯುತ್ತಾರೆ. ಮಕ್ಕಳನ್ನು ಖುಷಿ ಖುಷಿಯಿಂದ ಕಲಿಸಿದರೆ ಅವರು ಶಾಲೆಗೆ ಖುಷಿಯಾಗಿ ಬರುತ್ತಾರೆ, ಅದರಲ್ಲೂ ಚಿಕ್ಕ ಕ್ಲಾಸ್‌ನ ಮಕ್ಕಳು ಮನೆ ಬಿಟ್ಟು ಬಂದಿರುವ ಆತಂಕ ಅವರಲ್ಲಿ ಇರುತ್ತದೆ, ಅಮ್ಮನ ಬಿಟ್ಟು ಬರುವಾಗ ಮಕ್ಕಳು ಆತಂಕ ಪಡುತ್ತಾರೆ, ಶಾಲೆ ಎಂಬ ಹೊಸ ವಾತಾರಣ ಅಲ್ಲಿ ಟೀಚರ್, ಆಯಾ ಆಂಟಿ, ಸ್ವಲ್ಪ ಫ್ರೆಂಡ್ಸ್, ಇವರ ಹೊಂದಿಕೊಳ್ಳಲು ಕಷ್ಟವಾಗುವುದು. ಟೀಚರ್ ಮಕ್ಕಳ ಜೊತೆ ಎಷ್ಟು ಪ್ರೀತಿಯಿಂದ ನಡೆದುಕೊಳ್ಳುತ್ತಾರೋ ಮಕ್ಕಳಿಗೆ ಶಾಲೆ ಇಷ್ಟವಾಗುವುದು.
ಪ್ರೀತಿ ನೀಡಬೇಕು, ಮಕ್ಕಳಿಗೆ ಅವರನ್ನು ನೋಡಿದರೆ ಭಯವೂ ಇರಬೇಕು
ಟೀಚರ್ ಮಕ್ಕಳನ್ನು ನಿಭಾಯಿಸಲು ಪ್ರೀತಿಯನ್ನು ನೀಡಬೇಕು, ಸ್ವಲ್ಪ ಗದರಿಸಲೂ ಬೇಕು ಆವಾಗ ಮಾತ್ರ ಟೀಚರ್‌ಗೆ ಕ್ಲಾಸ್ ನಡೆಸಿಕೊಂಡು ಹೋಗುವುದು ಸುಲಭವಾಗುವುದು ಅಲ್ವಾ?
ಹೀಗೆ ಮತ್ತೊಂದು ವೀಡಿಯೋ ಗಮನ ಸೆಳೆದಿತ್ತು... ಹಳದಿ ಬಣ್ಣದ ಉಡುಪುಗಳನ್ನು ಧರಿಸಿ , ಮುಖದಲ್ಲಿ ಮೇಕಪ್ ಹಚ್ಚಿ ಮುದ್ದು ಮುದ್ದಾಗಿರುವ ಪುಟಾಣಿಗಳು ನೃತ್ಯ ಮಾಡುತ್ತಿರುತ್ತಾರೆ. ಅದರಲ್ಲಿ ಒಂದು ಮಗುವಿಗೆ ನಡೆದಾಡುವುದು ಕಷ್ಟ, ವಿಶೇಷ ಚೇತನ ಮಗುವಾಗಿತ್ತು, ಉಳಿದ ಎಲ್ಲಾ ಮಕ್ಕಳು ನೃತ್ಯ ಮಾಡುವಾಗ ಆ ಮಗುವನ್ನು ನೋಡಿ ಟೀಚರ್ ಓಡಿ ಬಂದು ಸಪೋರ್ಟ್ ಕೊಟ್ಟು ನಿಲ್ಲಿಸಿ ನೃತ್ಯ ಮಾಡಿಸಿರುತ್ತಿರುವ ದೃಶ್ಯ ಗಮನ ಸೆಳೆದಿತ್ತು.



Click it and Unblock the Notifications
