Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಸವಿಯಲು ಇಟ್ಟ ತಟ್ಟೆಯಿಂದ ಇಳಿದು ಓಡಿದ ಆಕ್ಟೋಪಸ್..! ವಿಡಿಯೋ ವೈರಲ್
ನೀವು ಸೀಫುಡ್ ಪ್ರಿಯರಾಗಿದ್ದರೆ ಅದಕ್ಕೆಂದೇ ಮೀಸಲಿರುವ ಹೋಟೆಲ್‌ಗಳಿಗೆ ತೆರಳಿ ಸೀ ಫುಡ್ ಸೇವಿಸುತ್ತೀರಿ. ಸಮುದ್ರದ ಜೀವಿಗಳಿಂದ ಮಾಡಲ್ಪಟ್ಟ ಆಹಾರ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಹಲವು ರೀತಿಯ ವಿಟಮಿನ್, ಪೋಷಕಾಂಶಗಳು ಸೇರಿದಂತೆ ಹಲವು ಆರೋಗ್ಯಕರ ಅಂಶಗಳಿಗೆ ಕಾರಣವಾಗುತ್ತವೆ.
ಹೀಗಾಗಿ ಸೀಫುಡ್‌ಗೆ ಎಲ್ಲಿಲ್ಲದ ಬೇಡಿಕೆಯ ಜೊತೆಗೆ ಅವುಗಳ ದರವೂ ಹೆಚ್ಚಿರುತ್ತದೆ. ಇನ್ನು ಸಮುದ್ರ ತೀರದ ನಗರಗಳಲ್ಲಿ ಸೀಫುಡ್ ಸಿಕ್ಕಾಪಟ್ಟೆ ದುಬಾರಿ. ಅಲ್ಲಿ ಸೀಫುಡ್‌ಗೆ ಪ್ರವಾಸಿಗರು ಸೇರಿ ಗ್ರಾಹಕರು ಹೆಚ್ಚಾಗಿಯೇ ಇರುತ್ತಾರೆ. ಇತ್ತ ಸೀ ಫುಡ್‌ನಲ್ಲಿ ಹತ್ತಾರು ಬಗೆಯ ಮೀನು, ಏಡಿ, ಸೀಗಡಿ, ಆಕ್ಟೋಪಸ್ ಸೇರಿದಂತೆ ಹತ್ತು ಹಲವು ವಿಧನಗಳಿವೆ.

ಆದರೆ ಯಾವಾಗಾದರು ನೀವು ಸೀಫುಡ್ ಸವಿಯಲು ಕುಳಿತಾಗ ತಟ್ಟೆಯಲ್ಲಿರುವ ಜೀವಿ ಎದ್ದು ಸಮುದ್ರದ ಕಡೆ ಓಡಿದರೆ ಹೇಗಾಗುತ್ತದೆ? ಹೌದು ಇಂತಹದೊಂದು ಘಟನೆ ನಡೆದಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗ್ತಿದೆ. ವ್ಯಕ್ತಿಯೊಬ್ಬರ ತಟ್ಟೆಯಲ್ಲಿ ಸವಿಯಲು ಇಟ್ಟಿದ್ದ ಪುಟ್ಟ ಆಕ್ಟೋಪಸ್ ಒಂದು ತಟ್ಟೆಯಿಂದ ಇಳಿದು ಓಡುತ್ತಿದೆ.
ಆಕ್ಟೋಪಸ್‌ಗಳು ಹಲವು ದೇಶಗಳಲ್ಲಿ ಜನಪ್ರಿಯ ಸೀ ಫುಡ್ ಆಗಿವೆ. ಇದನ್ನು ಜೀವಂತವಾಗಿ ಸೇವಿಸುವ ಮಂದಿಯೂ ಇದ್ದಾರೆ. ಅಲ್ಲದೆ ಹಲವು ರೀತಿಯ ಖಾದ್ಯ ಮಾಡಿ ಅವುಗಳ ಸೇವಿಸುತ್ತಾರೆ. ಇಲ್ಲೊಂದು ಕಡೆ ತಟ್ಟೆಯಲ್ಲಿ ಇಟ್ಟಿದ್ದ ಆಕ್ಟೋಪಸ್ ಓಡುತ್ತಿದ್ದು, ಇದನ್ನು ಕಂಡ ಜನರು ಶಾಕ್ ಆಗಿದ್ದಾರೆ.
ವೀಡಿಯೊವನ್ನು Instagram ನಲ್ಲಿ "bestfishing2024" ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿರುವ ದೃಶ್ಯವು ಎಂತವರಿಗೆ ಒಮ್ಮೆ ಆಘಾತ ಉಂಟುಮಾಡುತ್ತದೆ. ಒಂದು ಟೇಬಲ್ ಮೇಲೆ ಸೀಫುಡ್‌ಗಳನ್ನು ಜೋಡಿಸಲಾಗಿದೆ. ಅಲ್ಲಿ ವಿವಿಧ ರೀತಿಯ ಖಾದ್ಯಗಳ ನಾವು ನೋಡಬಹುದು. ಈ ನಡುವೆ ಟೇಬಲ್ ಮಧ್ಯದಿಂದ ತಟ್ಟೆಯಿಂದ ಆಕ್ಟೋಪಸ್ ಒಂದು ತೆವಳುತ್ತ ಟೇಬಲ್‌ನಿಂದ ಕೆಳಗಿಳಿದು ಓಡುತ್ತಿರುವುದನ್ನು ಸಹ ನೋಡಬಹುದು.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪ ಸಮಯದ ಹಿಂದೆ ಶೇರ್ ಮಾಡಲಾಗಿತ್ತು. ಪೋಸ್ಟ್ ಮಾಡಿದ ನಂತರ, ಇದು ಸುಮಾರು ಐದು ಲಕ್ಷ ಲೈಕ್‌ಗಳನ್ನು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ. ಈ ದೃಶ್ಯ ಕಂಡ ಜನರು ಅಕ್ಷರಶಃ ಇಂತಹ ಆಹಾರ ಸೇವಿಸಲು ಎಂದಿಗೂ ಮುಂದಾಗಬಾರದು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ.
ಜನರು ಈಗ ನಾಗರಿಕತೆಗೆ ಬಂದಿದ್ದಾರೆ. ಮಾಂಸಹಾರದ ಜೊತೆಗೆ ಮಾಂಸವನ್ನು ಬೇಯಿಸಿ ತಿನ್ನಬೇಕು ಎಂಬುದನ್ನು ಸಹ ಆತ ಕಲಿತ್ತಿದ್ದಾನೆ. ಹೀಗಿದ್ದರೂ ಜೀವಂತವಾಗಿ ಆಕ್ಟೋಪಸ್ ಸವಿಯಲು ಮುಂದಾಗುವ ಆಲೋಚನೆಯೇ ಅತ್ಯಂತ ಘೋರ ಎನ್ನುತ್ತಿದ್ದಾರೆ.
ಮತ್ತೊಂದೆಡೆ ಇಂತಹ ವಿಡಿಯೋಗಳನ್ನು ನೆಟ್ಟಿಗರು ಸಹಿಸುವುದಿಲ್ಲ. ಅವರು ಟೀಕೆಯ ಜೊತೆಗೆ ಕೆಲವು ತಮಾಷೆಯ ಕಮೆಂಟ್ ಮೂಲಕ ತಿಳಿ ಹೇಳುವ ಪ್ರಯತ್ನ ಮಾಡುತ್ತಾರೆ. 'ಬಡ ಪ್ರಾಣಿಗಳನ್ನು ಹಿಡಿಯುವುದಲ್ಲದೆ ಅವು ಜೀವಂತ ಇರುವಾಗಲೇ ಸೇವಿಸುಷ್ಟು ಕ್ರೂರಿ ಮಾನವರಿಗಿಂತ ಮತ್ತೊಂದು ಪ್ರಾಣಿ ಸಿಗಲಾರದು' ಎಂದಿದ್ದಾರೆ.
'ಇದು ನಿಜವಾಗಿಯೂ ಭಯನಾಕ ಆ ಪ್ರಾಣಿ ಬದುಕುಳಿಯುವ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿದೆ. ಅದು ಮುಂದೆ ಬದುಕಿದೆಯೇ?' ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಒಂದು ವೇಳೆ ಆತ ಜೀವಂತ ಇದ್ದಾಗಲೇ ಅದನ್ನು ಸೇವಿಸಿದ್ದರೇ ಏನಾಗುತ್ತಿತ್ತು? ಈ ಆಕ್ಟೋಪಸ್ ಸೇವಿಸಲು ಯೋಗ್ಯವೇ? ಅವು ವಿಷಕಾರಿ ಅಲ್ಲವೆ? ಎಂದು ಮತ್ತೊಬ್ಬ ಬಳಕೆದಾರ ಅತ್ಯಂತ ಕುತೂಹಲದಿಂದ ಪ್ರಶ್ನೆಸಿರುವುದು ಸಹ ಕಂಡುಬಂದಿದೆ.
ಹೀಗೆ ಈ ಆಕ್ಟೋಪಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೋಡಿದ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಈ ವಿಡಿಯೋ ನೋಡಿದ ಬಳಿಕ ನಿಮ್ಮ ಅನಿಸಿಕೆ ಏನು?



Click it and Unblock the Notifications
