Latest Updates
-
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ
ವಿರಾಟ್ ಮೊಬೈಲ್ ವಾಲ್‌ಪೇಪರ್ ಅನುಷ್ಕಾ-ಮಕ್ಕಳ ಫೋಟೋವಿಲ್ಲ: ಅಲ್ಲಿರೋದು ನೀಮ್ ಕರೋಲಿ ಬಾಬಾ!
ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಕ್ರಿಕೆಟ್ ಪ್ರೇಮಿಗಳ ಪಾಲಿನ ಕಿಂಗ್ ವಿರಾಟ್ ಕೊಹ್ಲಿ ನಿಂತರು ಕುಂತರು ಸುದ್ದಿಯಾಗುತ್ತಾರೆ. ಏಕೆಂದರೆ ಆನ್‌ಲೈನ್‌ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರೀಡಾಪಟುಗಳ ಪೈಕಿ ಕೊಹ್ಲಿ ಸಹ ಒಬ್ಬರು ಹೀಗಾಗಿ ಅವರ ಪೋಸ್ಟ್‌ಗಳು, ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆಯುತ್ತೆ.
ಇನ್ನು ಅವರ ಬಗ್ಗೆ ತಿಳಿದುಕೊಳ್ಳಲು ಕ್ರಿಕೆಟ್ ಪ್ರೇಮಿಗಳು ಯಾವಾಗಲು ಇಷ್ಟಪಡುತ್ತಾರೆ. ಅವರು ಮೈದಾನದಲ್ಲಿದ್ದಾಗ ಅವರ ನೋಡಲೆಂದೆ ಫ್ಯಾನ್ಸ್ ಸೇರಿರುತ್ತಾರೆ, ಜೊತೆಗೆ ಭದ್ರತೆಗಳ ದಾಟಿ ಭೇಟಿಗೆ ಯತ್ನಿಸುವುದು ಸಹ ನಾವು ನೋಡಿರುತ್ತೇವೆ. ಇತ್ತೀಚಿಗೆ ವಿರಾಟ್ ಕೊಹ್ಲಿ ತಮ್ಮ ಪತ್ನಿ ಜೊತೆ ವಿವಿಧ ಯಾತ್ರಾ ಸ್ಥಳಗಳ ಭೇಟಿ ಮಾಡಿದ್ದು ನಮಗೆ ತಿಳಿದಿದೆ.

ಕೊಹ್ಲಿ ತನ್ನ ಪತ್ನಿಯೊಂದಿಗೆ ಭಾರತ ಸೇರಿ ವಿದೇಶದಲ್ಲೂ ರೌಂಡ್ಸ್ ಹಾಕುತ್ತಾರೆ. ಆದರೆ ಕಳೆದ ಎರಡು ಮೂರು ವರ್ಷಗಳಿಂದ ಅವರು ಭಾರತದ ಕೆಲವು ಪ್ರಮುಖ ದೇವಾಲಯಗಳು, ಮಠಗಳಿಗೆ ಭೇಟಿ ನೀಡಿರುವುದು ಗಮನಿಸಿರಬಹುದು. ಅವರು ಮಹಾನ್ ಧೈವ ಭಕ್ತ ಅನ್ನೋದನ್ನು ಹಿಂದೆಯೇ ಖಾತ್ರಿ ಪಡಿಸಿದ್ದಾರೆ.
ಆದ್ರೆ ಈಗ ಅವರು ಕಾರಿನಿಂದ ಇಳಿಯುವಾಗ ಅವರ ಮೊಬೈಲ್ ಫೋನ್‌ನಲ್ಲಿ ಬಾಬಾ ಒಬ್ಬರ ವಾಲ್‌ಪೇಪರ್ ಇಟ್ಟಿರುವುದನ್ನು ಅಭಮಾನಿಯೊಬ್ಬರು ಗುರುತಿಸಿದ್ದಾರೆ. ಲಂಡನ್ ತೆರಳುವ ವೇಳೆ ಅವರು ಕಾರಿನಿಂದ ಇಳಿದು ತಮ್ಮ ಮೊಬೈಲ್ ಬಳಸುವಾಗ ಕ್ಯಾಮರಾ ಕಣ್ಣಿಗೆ ಅವರ ಮೊಬೈಲ್ ಸೆರೆಯಾಗಿದೆ.
ಈ ವೇಳೆ ಅವರ ವಾಲ್‌ಪೇಪರ್‌ನಲ್ಲಿ ಬಾಬಾ ನೀಮ್ ಕರೋಲಿ ಅವರ ಫೋಟೋ ಇರುವುದನ್ನು ಅಭಿಮಾನಿಯೊಬ್ಬರು ಪತ್ತೆ ಮಾಡಿದ್ದಾರೆ. ಭಾರತ ಟಿ 20 ವಿಶ್ವಕಪ್ ಗೆದ್ದ ಬಳಿಕ ಭಾರತದಲ್ಲಿ ಸಂಭ್ರಮಾಚರಣೆಗೆಂದು ಬಂದಿದ್ದ ಅವರು ವಾಪಾಸು ತೆರಳುವಾಗ ಕ್ಯಾಮರಾ ಕಣ್ಣಿಗೆ ಈ ವಾಲ್‌ಪೇಪರ್ ಬಿದ್ದಿದೆ.
ಹೀಗಾಗಿ ವಿರಾಟ್ ಕೊಹ್ಲಿ ತಮ್ಮ ವಾಲ್‌ಪೇಪರ್‌ನಲ್ಲಿ ಅನುಷ್ಕಾ, ಮಕ್ಕಳ ಫೋಟೋ ಇಟ್ಟುಕೊಳ್ಳದೆ ಈ ಬಾಬಾ ಫೋಟೋ ಇಟ್ಟಿದ್ದಾರೆ ಅಂದರೆ ಅವರು ಯಾರು? ಅವರ ಶಕ್ತಿ ಏನು ಎಂಬುದನ್ನು ಜನರು ಹುಡುಕಾಡಲು ಆರಂಭಿಸಿದ್ದಾರೆ.
ಹಾಗಾದ್ರೆ ಯಾರು ಈ ಬಾಬಾ ನೀಮ್ ಕರೋಲಿ?
ದೇವಭೂಮಿ ಉತ್ತರಾಖಂಡ್‌ನ ಚಿಕ್ಕ ಹಳ್ಳಿಯಾಗಿರುವ ಕೈಂಚಿ ಧಾಮ್‌ನಲ್ಲಿ ಈ ನೀಮ್ ಕರೋಲಿ ಬಾಬಾ ನೆಲೆಸಿದ್ದಾರೆ. 1964ರಲ್ಲಿ ಇಲ್ಲಿಯೇ ಆಶ್ರಮ ನಿರ್ಮಿಸಿ ನೆಲೆಸಿದ್ದಾರೆ. ಅವರ ಭಕ್ತರು ಅವರನ್ನು ಸಾಕ್ಷಾತ್ ಹನುಮನ ಅವತಾರ ಎಂದು ನಂಬುತ್ತಾರೆ. ಅವರು ಹಲವು ಪವಾಡಗಳ ಮಾಡುವ ಮೂಲಕ ಹೆಸರಾಗಿದ್ದಾರೆ.
ನೀಮ್ ಕರೋಲಿ ಬಾಬಾ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಅಕ್ಬರ್‌ಪುರ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರು 11 ವರ್ಷದವರಾಗಿದ್ದಾಗ ಬ್ರಾಹ್ಮಣ ಹುಡುಗಿಯನ್ನು ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ, ಅವರು ತಮ್ಮ ಮನೆಯನ್ನು ತೊರೆದರು ಮತ್ತು ಸಾಧುವಾಗಿ ಭಾರತದಾದ್ಯಂತ ಅಲೆದರು ಮತ್ತು ಅನೇಕ ಹೆಸರುಗಳಿಂದ ಕರೆಯಲ್ಪಟ್ಟರು.
ವರದಿಯ ಪ್ರಕಾರ, ಆಪಲ್ ಸಿಇಒ ಸ್ಟೀವ್ ಜಾಬ್ಸ್ ಮತ್ತು ಫೇಸ್‌ಬುಕ್ ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಜೊತೆಗೆ, ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಸಹ ಬಾಬಾ ನೀಮ್ ಕರೋಲಿಯ ಭಕ್ತರಾಗಿದ್ದಾರಂತೆ. 2023ರಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ನೀಮ್ ಕರೋಲಿ ಬಾಬಾ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ಕಳೆದ ವರ್ಷ ಹೋಳಿ ಹಬ್ಬದಂದು ರೋಹಿತ್ ಶರ್ಮಾ ಕೂಡ ಬಾಬಾ ಅವರ ಭೇಟಿ ಮಾಡಿದ್ದರು.
ಈಗ ವಿರಾಟ್ ಮೊಬೈಲ್ ವಾಲ್‌ಪೇಪರ್‌ನಲ್ಲೂ ಇರುವುದು ಇದೇ ಬಾಬಾ ಅವರ ಫೋಟೋ ಆಗಿದೆ. ಅವರು ಈ ಬಾಬಾ ಅವರನ್ನು ಭೇಟಿಯಾದ ಬಳಿಕವೇ ವೃತ್ತಿ ಜೀವನದಲ್ಲಿ ಮತ್ತೆ ಯಶಸ್ಸಿನತ್ತ ಗಮನ ಹರಿಸಿದರು ಎಂದು ಹೇಳಲಾಗುತ್ತದೆ.



Click it and Unblock the Notifications