Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಒಳ್ಳೆಯ ಸೊಸೆ ಹೇಗಿರಬೇಕೆಂದು ಹೇಳಿ ಹಿಗ್ಗಾಮುಗ್ಗ ಟ್ರೋಲ್‌ಗೆ ಒಳಗಾದ ನಿವೇದಿತಾ ಗೌಡ!
ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಅನಿಸಿಕೊಂಡಿದ್ದ ಚಂದನ್ ಶೆಟ್ಟಿ- ನಿವೇದಿತಾ ಗೌಡ ವಿಚ್ಛೇದನ ಪಡೆದು ತಮ್ಮ-ತಮ್ಮ ದಾರಿ ನೋಡಿಕೊಂಡಿದ್ದಾರೆ. ಆದರೆ ಇವರ ಬಗ್ಗೆ ಆಗುತ್ತಿರುವ ಟ್ರೋಲ್‌ಗಳು ನಿಂತಿಲ್ಲ,ಅದರಲ್ಲಿಯೂ ನಿವೇದಿತಾ ಗೌಡಗೆ ವಿಚ್ಛೇದನ ಬಳಿಕ ನೆಗೆಟಿವ್ ಟ್ರೋಲ್‌ಗಳು ಹೆಚ್ಚಾಗಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಕಾಣಬಹುದು, ಈಗಲೂ ಅಷ್ಟೇ ಒಳ್ಳೆ ಸೊಸೆ ಹೇಗಿರಬೇಕು ಎಂದು ವೀಕ್ಷಕರಿಗೆ ಹೇಳಿದ ನಿವೇದಿತಾ ಗೌಡ ವೀಡಿಯೋ ತುಂಬಾನೇ ಟ್ರೋಲ್ ಆಗುತ್ತಿದೆ.

ಕಲರ್ಸ್ ಕನ್ನಡ ಪ್ರತಿವರ್ಷ ಅನುಬಂಧ ಅವಾರ್ಡ್ ಕಾರ್ಯಕ್ರಮ ನಡೆಸುತ್ತದೆ, ಅದರಲ್ಲಿ ಜನ ಮೆಚ್ಚಿದ ಕಿರುತೆರೆ ನಟ, ನಟ, ಸೀರಿಯಲ್ ಹೀಗೆ ಹಲವು ಅವಾರ್ಡ್‌ಗಳನ್ನು ನೀಡಲಾಗುವುದು, ಈಗಾಗಲೇ ಅದರ ಸಿದ್ಧತೆ ನಡೆಯುತ್ತಿದ್ದು, ಪ್ರೊಮೋ ಬಿಡುತ್ತಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ನಿವೇದಿತಾ ಗೌಡ ಸೀರಿಯಲ್ ಕುಟುಂಬಗಳನ್ನು ಭೇಟಿ ಮಾಡಿ ಆ ಕುಟುಂಬವನ್ನು ಮಾತನಾಡಿಸಿ, ಆ ಸೀರಿಯಲ್ ಪಾತ್ರಗಳ ಬಗ್ಗೆ ಪರಿಚಯ ಕೇಳಿ ಬರುವಂಥ ಪ್ರೋಮೋ ಅದು. ಈಗ ಆ ಪ್ರೋಮೋಗೆ ಸಿಕ್ಕಾಪಟ್ಟೆ ನೆಗೆಟಿವ್ ಟ್ರೋಲ್‌ಗಳು ಬರುತ್ತಿವೆ.
ಏನಿದೆ ಆ ಪ್ರೋಮೋದಲ್ಲಿ
ಭಾಗ್ಯಲಕ್ಷ್ಮಿ ಸೀರಿಯಲ್ ತಂಡವನ್ನು ಭೇಟಿ ಮಾಡಿದ ನಿವೇದಿತಾ ಗೌಡ ಸೊಸೆಯೆಂದರೆ ಹೇಗಿರಬೇಕು ಎಂದು ವೀಕ್ಷಕರಿಗೆ ಪಾಠ ಮಾಡಿದ್ದಾರೆ, ಈಗ ಆ ಮಾತಿಗೆ ತುಂಬಾನೇ ಟ್ರೋಲ್ ಆಗುತ್ತಿದೆ. ನಿವೇದಿತಾ ಗೌಡರ ವೈಯಕ್ತಿಕ ಬದುಕಿಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ. ಆ ವೀಡಿಯೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವುದರಿಂದ ಈ ಆ ಚಾನಲ್‌ನ ಇನ್‌ಸ್ಟಾದಲ್ಲಿ ಮತ್ತೊಂದು ತಂಡದ ಜೊತೆ ನಿವೇದಿತಾ ಗೌಡ ಮಾತನಾಡಿರುವ ಪ್ರೋಮೋ ಮಾತ್ರ ಕಾಣಬಹುದು.
ಒಳ್ಳೆಯ ಸೊಸೆ ಎಂದರೆ ಭಾಗ್ಯ ರೀತಿ ಇರಬೇಕೆಂದ ನಿವೇದಿತಾ ಗೌಡ
ಭಾಗ್ಯ ಆ ಸೀರಿಯಲ್ ಒಂದು ಪಾತ್ರ, ಆದರೆ ನಾವು ಪಾತ್ರಗಳಲ್ಲಿ ಕಾಣುವಂತೆಯೇ ಅವರು ಇರುತ್ತಾರೆ ಎಂದು ಬಹುತೇಕ ಸೀರಿಯಲ್ ವೀಕ್ಷಕರ ನಂಬುತ್ತಾರೆ. ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಾರಿಗೆ ಅತ್ತೆ ಕಾಟ, ಗಂಡನ ಕಾಟ ಹೀಗೆ ಏನೋ ಒಂದು ಇರುತ್ತದೆ, ಅದನ್ನು ನೋಡಿದ ಮೇಲೆ ಆ ಅತ್ತೆ ಅಥವಾ ಗಂಡನ ಪಾತ್ರ ಮಾಡಿದವರು ನಿಜವಾಗಲೂ ಹಾಗೇ ಇರುತ್ತಾರೆ ಎಂಬಂತೆ ಅವರನ್ನು ದ್ವೇಷಿಸಲಾರಂಭಿಸುತ್ತಾರೆ. ಎಲ್ಲವೂ ಕಾಲ್ಪನಿಕ ಕತೆಗಳು ಅದರಲ್ಲಿ ಅವರುಗಳು ನಟಿಸುತ್ತಾರೆ, ಮನರಂಜಿಸುತ್ತಾರೆ. ಸೀರಿಯಲ್‌ನಲ್ಲಿ ಲಂಗ ಧಾವಣಿ ಹಾಕಿ ಹಳ್ಳಿಯ ಮುಗ್ಧ ಹೆಣ್ಣಿನ ಪಾತ್ರದಲ್ಲಿರುವವಳು ತನ್ನ ಇನ್‌ಸ್ಟಾದಲ್ಲಿ ಬಿಕಿನಿ ಫೋಟೋ ಹಾಕಿದರೆ ಅಯ್ಯೋ ಇವಳು ಇಂಥ ಫೋಟೋ ಏಕೆ ಹಾಕಿಕೊಂಡಿದ್ದಾಳೆ ಎಂದು ಹೆಳುವವರೂ ಇದ್ದಾರೆ.
ಸ್ವಂತ ಬದುಕು ಎಂಬುವುದು ನಾವು ಹೇಗಿರಬೇಕು ಎಂಬುವುದನ್ನು ನಾವು ನಿರ್ಧರಿಸುವುದು, ಅದೇ ಸೀರಿಯಲ್, ಸಿನಿಮಾಗಳಲ್ಲಿ ಡೈರೆಕ್ಟರ್ ಕೊಟ್ಟ ಸ್ಕ್ರಿಪ್ಟ್‌ನಂತೆ ಹೇಳಬೇಕು ನಟಿಸಬೇಕು. ಸೀರಿಯಲ್ ತಂಡವನ್ನು ಹೇಗೆ ಪರಿಚಯಿಸಬೇಕೆಂದು ಅವರಿಗೆ ಸ್ಕ್ರಿಪ್ಟ್ ನೀಡಿರುತ್ತಾರೆ ಅದರಂತೆ ಒಳ್ಳೆಯ ಸೊಸೆ ಪಾಠ ಮಾಡಿದ್ದಾರೆ ಅಷ್ಟೇ....
ನಟನೆಗೂ- ವೈಯಕ್ತಿಕ ಬದುಕಿಗೂ ತಾಳೆ ಹಾಕಲೇಬಾರದು
ನಟರು, ನಟಿಯರು ನಿಜ ಜೀವನದಲ್ಲಿ ಆ ಪಾತ್ರಗಳಲ್ಲಿ ಕಾಣಿಸಿಕೊಂಡಂತೆ ಹೀರೋಗಳಾಗಿರುತ್ತಾರೆ ಎಂದಲ್ಲ, ಅವರೂ ಮನುಷ್ಯರೇ, ನಮ್ಮಲ್ಲಿರುವಂತೆ ಒಳ್ಳೆಯ, ಕೆಟ್ಟ ಗುಣಗಳು ಅವರಲ್ಲಿಯೂ ಇರುತ್ತದೆ, ಅವರ ವೃತ್ತಿ ಬದುಕಿನ ಜೊತೆಗೆ ನಿಜ ಜೀವನವನ್ನು ಹೋಲಿಕೆ ಮಾಡುವುದೇ ತಪ್ಪು... ಅವರುಗಳನ್ನು ಬದುಕಿನ ಹೀರೋ ಎಂದು ನಟನೆ ನೋಡಿ ಹೇಳಬಾರದು, ಗುಣ, ಪರೋಪಕಾರ, ಸ್ವಭಾವ ನೋಡಿ ಆದರ್ಶವಾಗಿ ತಗೋಬೇಕು, ಎನಂತೀರಿ?
ಏನಂತೀರಿ?



Click it and Unblock the Notifications
