Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮದುವೆ ದಿನ ನೀತಾ ಅಂಬಾನಿ ಕೈಯಲ್ಲಿತ್ತು 'ರಾಮನ್ ಡಿವೋ'! ಇದೇನು ಗೊತ್ತಾ?
ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಶುಕ್ರವಾರ ರಾತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮುಂಬೈನ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿರುವ ಅಂಬಾನಿ ಒಡೆತನದ ಕನ್ವೆನ್ಷನ್ ಸೆಂಟರ್ ನಲ್ಲಿ 29 ವರ್ಷದ ಅನಂತ್ ಅಂಬಾನಿ, ಭಾರತೀಯ ಫಾರ್ಮಾ ಉದ್ಯಮಿಗಳಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ವಿವಾಹವಾದರು.

ಈ ಅದ್ದೂರಿ ವಿವಾಹಕ್ಕೆ ವಿಶ್ವದ ಗಣ್ಯಾತಿಗಣ್ಯರು ಆಗಮಿಸಿದ್ದಾರೆ. ಜೊತೆಗೆ ಇಡೀ ವಿಶ್ವವೇ ಈ ಅದ್ದೂರಿ ಮದುವೆ ಕಂಡು ಬೆರಗಾಗಿದ್ದಾರೆ. ಹಲವು ಕಾರಣಕ್ಕೆ ಈ ವಿವಾಹ ಸಮಾರಂಭ ಸುದ್ದಿಯಾಗುತ್ತಲೆ ಇದೆ. ಅದ್ದೂರಿ ತನ ಸೇರಿ ವಧು ವರರು, ನೀತಾ ಅಂಬಾನಿ, ಮುಕೇಶ್ ಅಂಬಾನಿಯ ಐಷಾರಾಮಿ ವಸ್ತುಗಳು ಕೋಟಿ ಕೋಟಿ ಬೆಲೆ ಬಾಳುವಂತಹ ಆಭರಣ ನೋಡಿ ನೋಡಿ ಅಚ್ಚರಿಗೆ ಒಳಗಾಗಿದ್ದಾರೆ.
ಇದೆಲ್ಲದ ನಡುವೆ ನೀತಾ ಅಂಬಾನಿ ನಿನ್ನೆ ಪುತ್ರ ವಿವಾಹ ಸಮಾರಂಭಕ್ಕೆ ಆಗಮಿಸುವಾಗ ತಮ್ಮ ಮುಂಬೈ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ಗೆ ಆಗಮಿಸುತ್ತಿದ್ದಂತೆ, ಅವರು ಸಾಂಪ್ರದಾಯಿಕ 'ರಾಮನ್ ಡಿವೋ' ದೀಪವನ್ನು ಹಿಡಿದು ಕಾಣಿಸಿಕೊಂಡರು. ಆದ್ರೆ ಅವರ ಕೈಯಲ್ಲಿ ಈ ರಾಮನ್ ಡೀವೋ ನೋಡಿದ ಮಂದಿ ಇದೇನು ಚಿನ್ನದ ಆಭರಣದಂತೆ ಕಾಣುತ್ತಿದೆ ಎಂದು ತಲೆ ಕೆಡಿಸಿಕೊಂಡಿದ್ದಾರೆ.
ರಾಮನ್ ಡಿವೋ ಎಂದರೇನು?
ಗುಜರಾತಿ ವಿವಾಹಗಳ ಮಹತ್ವದ ಭಾಗವಾದ 'ರಾಮನ್ ಡಿವೋ'ವನ್ನು ವರನ ತಾಯಿ ಹೊತ್ತು ತರಬೇಕು. ಅಂಧಕಾರವನ್ನು ಹೋಗಲಾಡಿಸಲು ಮತ್ತು ದಂಪತಿಗೆ ಆಶೀರ್ವಾದವನ್ನು ನೀಡಲು ಇದು ಮಂಗಳಕರ ಬೆಳಕು ಎಂಬ ಸಂಪ್ರದಾಯವಿದೆ.
ನೀತಾ ಅಂಬಾನಿ ಈ ಸಂಪ್ರದಾಯವನ್ನು ಅನುಸರಿಸುತ್ತಿರುವುದು ಇದೇ ಮೊದಲಲ್ಲ. ಆಕೆ ತನ್ನ ಹಿರಿಯ ಮಗ ಆಕಾಶ್‌ನ ಮದುವೆಯಲ್ಲಿ 'ರಾಮನ್ ಡಿವೋ' ಅನ್ನು ಹೊತ್ತೊಯ್ಯುತ್ತಿದ್ದರು.
ಈ ಸಂಪ್ರದಾಯ ಗುಜರಾತಿ ವಿವಾಹದಲ್ಲಿ ಸಾಮಾನ್ಯವಾಗಿದೆ. ಅದರೆ ನೀತಾ ಅಂಬಾನಿ ಹಿಡಿದು ಬಂದ ಈ ದೀಪವು ಚಿನ್ನದಿಂದ ಮಾಡಿದ್ದ ದೀಪವೇ ಎಂಬ ಅನುಮಾನ ಸಹ ಮೂಡಿದೆ. ಏಕೆಂದರೆ ಗಣೇಶನ ವಿಗ್ರಹ ಹೊಂದಿದ್ದ ಆ ರಾಮನ್ ಡಿವೋ ಚಿನ್ನದಂತೆ ಹೊಳೆಯುತ್ತಿತ್ತು.
ಇನ್ನು ನೀತಾ ಅಂಬಾನಿ ಅವರ ಕೈಗೆ ಹಾಕಲಾಗಿದ್ದ ಮದರಂಗಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಏಕೆಂದರೆ ಈ ಮದರಂಗಿ ವಿನ್ಯಾಸ ನೋಡಿದ ಮಂದಿ ಅಚ್ಚರಿ ಹೊರಹಾಕಿದ್ದಾರೆ. ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಅವರ ಹೆಸರುಗಳು ನೀತಾ ಅಂಬಾನಿಯವರ ಮೆಹಂದಿಯ ಭಾಗವಾಗಿದ್ದವು ಮತ್ತು ಅವರ ಮಗಳು ಇಶಾ ಮತ್ತು ಪತಿ ಆನಂದ್ ಪಿರಾಮಲ್ ಅವರ ಹೆಸರುಗಳು; ಮಗ ಆಕಾಶ್ ಮತ್ತು ಅವನ ಹೆಂಡತಿ ಶ್ಲೋಕಾ ಮೆಹ್ತಾ ಹೆಸರು ಕೂಡ ಅವರ ಕೈ ಮೇಲೆ ಮದರಂಗಿಯಾಗಿ ಮೂಡಿತ್ತು. ಜುಲೈ 13 ರಂದು 'ಶುಭ ಆಶೀರ್ವಾದ' ಮತ್ತು ಜುಲೈ 14 ರಂದು 'ಮಂಗಲ್ ಉತ್ಸವ' ಅಥವಾ ಮದುವೆಯ ಆರತಕ್ಷತೆ ನಡೆಯಲಿದೆ. ಜುಲೈ 15 ರಂದು ಮುಂಬೈನಲ್ಲಿ ಮತ್ತೊಂದು ಆರತಕ್ಷತೆ ಪಾರ್ಟಿ ನಡೆಯಲಿದೆ ಎಂದು ತಿಳಿದುಬಂದಿದೆ.



Click it and Unblock the Notifications
