Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಶ್ರಾವಣ ಮಾಸದಲ್ಲಿದೆ 17 ಪ್ರಮುಖ ಹಬ್ಬಗಳು, ವ್ರತಗಳಿವೆ
ಆಗಸ್ಟ್ 17ರಿಂದ ನಿಜ ಶ್ರಾವಣ ಮಾಸ ಶುರುವಾಗಿದೆ. ನಿಜ ಶ್ರಾವಣ ಮಾಸ ಶುರುವಾಯಿತೆಂದರೆ ಹಬ್ಬಗಳು ಶುರುವಾಯಿತೆಂದರ್ಥ. ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ತಿಂಗಳೆಂದು ಪರಿಗಣಿಸಲಾಗಿದೆ. ಈ ಪವಿತ್ರ ತಿಂಗಳಿನಲ್ಲಿ ಹಲವಾರು ಪ್ರಮುಖ ಹಬ್ಬಗಳು, ವ್ರತಗಳಿವೆ.
ಈ ತಿಂಗಳಿನ ಮೊದಲ ಹಬ್ಬ ನಾಗರ ಪಂಚಮಿಯಿಂದ ಶುರುವಾಗುವುದು. ಈ ತಿಂಗಳಿನಲ್ಲಿ ಯಾವೆಲ್ಲಾ ಹಬ್ಬಗಳು, ವ್ರತಗಳಿವೆ ಎಂದು ನೋಡೋಣ ಬನ್ನಿ:

ಆಗಸ್ಟ್ 21: ನಾಗರ ಪಂಚಮಿ
ಆಗಸ್ಟ್ 25: ಮಹಾ ವರಲಕ್ಷ್ಮಿ ವ್ರತ
ಆಗಸ್ಟ್ 30: ಶ್ರಾವಣ ಪೂರ್ಣಿಮಾ
ಸೆಪ್ಟೆಂಬರ್ 6: ಗೋಕುಲಾಷ್ಟಮಿ, ಕೃಷ್ಣ ಜನ್ಮಾಷ್ಟಮಿ
ಶ್ರಾವಣ ಸೋಮವಾರ
ಆಗಸ್ಟ್ 21
ಆಗಸ್ಟ್ 28
ಸೆಪ್ಟೆಂಬರ್ 4
ಸೆಪ್ಟೆಂಬರ್ 11
ಮಂಗಳ ಗೌರಿ ವ್ರತ
ಆಗಸ್ಟ್ 22
ಆಗಸ್ಟ್ 29
ಸೆಪ್ಟೆಂಬರ್ 56
ಸೆಪ್ಟೆಂಬರ್ 12
ಶ್ರಾವಣ ಶುಕ್ರವಾರ
ಆಗಸ್ಟ್ 18
ಆಗಸ್ಟ್ 25
ಸೆಪ್ಟೆಂಬರ್ 1
ಸೆಪ್ಟೆಂಬರ್ 8
ಸೆಪ್ಟೆಂಬರ್ 15
ನಾಗ ಪಂಚಮಿ
ನಾಗರ ಪಂಚಮಿ:ಎಲ್ಲಾ ಹಬ್ಬಗಳಿಗೆ ಮುನ್ನುಡಿಯಾಗಿ ನಗರ ಪಂಚಮಿ ಹಬ್ಬ ಬರುತ್ತಿದೆ,ನಾಗರ ಪಂಚಮಿ ಹಬ್ಬವನ್ನು ದೇಶದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು. ನಾಗ ಮೂರ್ತಿಗಳಿಗೆ ಹಾಲೆರೆದು ಈ ಹಬ್ಬವನ್ನು ಆಚರಿಸಲಾಗುವುದು. ನಾವು ಆಚರಣೆ ಮಾಡುವ ಹಬ್ಬಗಳಿಗೂ ಪ್ರಕೃತಿಗೂ ಸಂಬಂಧವಿದೆ. ನಾಗರ ಪಂಚಮಿ ಎಂದರೆ ಮಳೆಗಾಲ, ಮಳೆಗಾಲದಲ್ಲಿ ಹಾವುಗಳು ಹುತ್ತವನ್ನು ಸೇರಿರುತ್ತದೆ, ನಮಗೆ ಏನೂ ತೊಂದರೆ ಮಾಡಬೇಡ ಎಂದು ಹಾವುಗಳನ್ನು ಪ್ರಾರ್ಥಿಸಿದರೆ ಹಾವುಗಳು ನಮಗೆ ಯಾವುದೇ ತೊಂದರೆ ಮಾಡುವುದಿಲ್ಲ ಎಂಬ ನಂಬಿಕೆ. ಹೀಗಾಗಿ ನಾಗರ ಪಂಚಮಿಯಂದು ಹಾವಿಗೆ ಹಾಲೆರೆದು ಹಬ್ಬವನ್ನು ಆಚರಿಸಲಾಗುವುದು.
ಶ್ರಾವಣ ಸೋಮವಾರ: ಪ್ರತಿ ಶ್ರಾವಣ ಸೋಮವಾರದಂದು ಶಿವನಿಗೆ ವಿಶೇಷ ಪೂಜೆಯಲ್ಲಿ ಸಲ್ಲಿಸಲಾಗುವುದು. ಶ್ರಾವಣ ಸೋಮವಾರ ಶಿವನ ಆರಾಧನೆ ಮಾಡುವುದರಿಂದ ಶಿವನ ವಿಶೇಷ ಕೃಪೆಗೆ ಪಾತ್ರರಾಗಬಹುದು, ಇದರಿಂದ ಜೀವನದಲ್ಲಿನ ಕಷ್ಟಗಳು ದೂರಾಗುವುದು ಎಂಬುವುದು ಭಕ್ತರ ಅಚಲ ನಂಬಿಕೆ.
ಮಂಗಳ ಗೌರಿ ವ್ರತ: ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳ ಗೌರಿ ವ್ರತವನ್ನು ಆಚರಿಸಲಾಗುವುದು. ಪತಿಯ ಆಯುಸ್ಸು ಹಾಗೂ ಸಂತಾನ ಭಾಗ್ಯಕ್ಕಾಗಿ ವಿವಾಹವಾದ 5 ವರ್ಷದೊಳಗಿನ ಮುತ್ತೈದೆಯರು ಈ ವ್ರತವನ್ನು ಆಚರಿಸುತ್ತಾರೆ.
ಶ್ರಾವಣ ಶುಕ್ರವಾರ: ಶ್ರಾವಣ ಶುಕ್ರವಾರದಂದು ಲಕ್ಷ್ಮಿಯ ಆರಾಧನೆ ಮಾಡುವುದು. ಲಕ್ಷ್ಮಿಯ ಆರಾಧನೆ ಮಾಡುವುದರಿಂದ ಸಂಪತ್ತು ವೃದ್ಧಿಸಲಿದೆ.
ಮಹಾ ವರಲಕ್ಷ್ಮಿ ವ್ರತ: ಶ್ರಾವಣ ಮಾಸದ ಹುಣ್ಣಿಮೆಗಿಂತ ಮೊದಲು ಬರುವ ಶುಕ್ರವಾರದಂದು ಮಹಾ ವರಲಕ್ಷ್ಮಿ ವ್ರತ ಆಚರಿಸಲಾಗುವುದು.
ಶ್ರಾವಣ ಪೂರ್ಣಿಮಾ: ಶ್ರಾವಣ ಮಾಸದ ಹುಣ್ಣಮೆಯೆಂದು ರಕ್ಷಾಬಂಧನ ಪೂಜೆ ಮಾಡಲಾಗುವುದು.
ಗೋಕುಲಾಷ್ಟಮಿ: ಈ ದಿನ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಈ ದಿನ ಆಚರಿಸಲಾಗುವುದು.



Click it and Unblock the Notifications