Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
'ಬಾ ಗುರು ಶೆಡ್‌ಗೆ ಟೀ ಕುಡಿ': ವೈರಲ್ ಆಗುತ್ತಿದೆ ಹೊಸ ಟೀ ಅಂಗಡಿ ಪೋಸ್ಟರ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಪೊಲೀಸರು ಇನ್ನು ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ, ಈ ನಡುವೆ ದರ್ಶನ್ ಅವರನ್ನ ಬಳ್ಳಾರಿ ಸೆಂಟ್ರಲ್ ಜೈಲ್‌ಗೆ ಶಿಫ್ಟ್ ಮಾಡಲಾಗಿದೆ. ಸದ್ಯ ದರ್ಶನ್ ಜೊತೆಗಿದ್ದ ಹಲವರನ್ನು ರಾಜ್ಯದ ವಿವಿಧ ಜೈಲುಗಳಿಗೆ ವರ್ಗಾಯಿಸಲಾಗಿದೆ.
ಈಗ ದರ್ಶನ್ ಬಳ್ಳಾರಿಗೆ ಶಿಫ್ಟ್ ಆಗುವಾಗ ಹಾಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಂಟಾಗಿದ್ದ ಘಟನೆ ಸಂಬಂಧ ತನಿಖೆಯೂ ನಡೆಯುತ್ತಿದೆ. ಆದ್ರೆ ಬಳ್ಳಾರಿ ಜೈಲು ಸೇರುವ ಮುನ್ನ ದರ್ಶನ್ ಅಭಿಮಾನಿಗಳು ಜೈಲು ಹೊರಗೆ ಸೇರಿ ಜೈಕಾರ ಕೂಗಿದ್ದರು. ಅಲ್ಲದೆ ಅವರು ಜೈಲು ಸೇರಿದ ಬಳಿಕ ಅವರ ಫ್ಯಾನ್ಸ್ ಕ್ರೇಜ್ ಹೆಚ್ಚಾಗುತ್ತಲೇ ಇದೆ.

ಇದಕ್ಕೆ ಉದಾಹರಣೆಯಾಗಿ ನಾವು ಸಾಮಾಜಿಕ ಜಾಲತಾಣದಲ್ಲಿ ಹತ್ತು ಹಲವು ರೀತಿಯ ಘಟನೆಗಳ ನೋಡಬಹುದು. ಈ ಮೊದಲು ದರ್ಶನ್‌ಗೆ ನೀಡಲಾದ ಕೈದಿ ನಂಬರ್ ಅನ್ನು ಸಹ ಹಚ್ಚೆ ಹಾಕಿಸಿಕೊಳ್ಳುವುದು, ವಾಹನಗಳ ಮೇಲೆ ಬರೆಸಿಕೊಳ್ಳುವುದು. ಅವರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಹೀಗೆ ಹತ್ತಾರು ಘಟನೆ ನೋಡಿದ್ದೆವು.
ಈಗ ಅವರ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಮತ್ತೊಂದು ಸಾಹಸ ಮಾಡಿದ್ದಾರೆ. ದರ್ಶನ್ ಪ್ರಕರಣದ ಬಳಿಕ ಪಟ್ಟಣಗೆರೆ ಶೆಡ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪಟ್ಟಣಗೆರೆ ಶೆಡ್ ಕುರಿತಂತೆ ಹತ್ತಾರು ವಿಡಿಯೋಗಳ ನಾವು ನೋಡಬಹುದು. ಆದ್ರೆ ಈಗೊಂದು ವಿಡಿಯೋ ಫುಲ್ ವೈರಲ್ ಆಗಿದೆ.
ಈ ಹಿಂದೆ ವೈರಲ್ ಆಗಿದ್ದ ಶೆಡ್‌ಗೆ ಹೋಗೋಣ ಬಾ ಎಂಬ ಡೈಲಾಗ್ ಈಗ ಟೀ ಅಂಗಡಿಯಾಗಿ ಬದಲಾಗಿದೆ. ಹೌದು ಶೆಡ್ ಟೀ ಸ್ಟಾಲ್ ಎಂಬ ಟೀ ಅಂಗಡಿ ತಲೆ ಎತ್ತಿದ್ದು, 'ಬಾ ಗುರು ಶೆಡ್‌ಗೆ ಟೀ ಕುಡಿ' ಎಂಬ ಬರಹ ಅದರಲ್ಲಿದ್ದು, ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ.
ಶೆಡ್ ಟೀ ಸ್ಟಾಲ್ ಎಂಬ ಪೋಸ್ಟರ್ ಅನ್ನು ಅಂಗಡಿ ಮುಂದೆ ಹಾಕಲಾಗಿದ್ದು, ಬಾ ಗುರು ಶೆಡ್‌ಗೆ ಟೀ ಕುಡಿ ಎಂದು ಬರೆಯಲಾಗಿದೆ. ಈ ಪೋಸ್ಟ್ ಅನ್ನು ಕನ್ನಡ ಬೀಟ್ ಬಾಕ್ಸ್ (kannada_beatbox) ಎಂಭ ಇನ್ಸ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಸ್ ಸಹ ಆಗುತ್ತಿದೆ.
ಪೋಸ್ಟರ್‌ನಲ್ಲಿ ತಿಳಿಸುವಂತೆ ಈ ಅಂಗಡಿ ಇರುವು ಚಿಕ್ಕಮಗಳೂರಿನ ತರೀಕೆರೆ ಪಟ್ಟಣದ ಎಂ.ಜಿ ರಸ್ತೆ ಎಂಬ ಮಾಹಿತಿ ಸಿಗುತ್ತದೆ. ಪೋಸ್ಟರ್ ಮೇಲೂ ಈ ವಿಳಾಸ ನೋಡಬಹುದು. ಬುದ್ಧಿವಂತ ವ್ಯಾಪಾರಿಯೊಬ್ಬ ಈ ರೀತಿ ಟ್ರಿಕ್ಸ್ ಮಾಡಿರುವುದು ಜನರ ಗಮನ ಸೆಳೆಯುತ್ತಿದೆ. ಹಾಗೆ ಪೋಸ್ಟರ್‌ನಲ್ಲಿ 'ನಮ್ಮಲ್ಲಿ ಬೀಡಾ, ಟೀ, ಕಾಫಿ, ಬೂಸ್ಟ್, ಹಾಲು ದೊರೆಯುತ್ತದೆ ಎಂದು ಬರೆಯಲಾಗಿದೆ. ಅಂದ್ರೆ ಇದೊಂದು ಚಿಕ್ಕ ಪೆಟ್ಟಿ ಅಂಗಡಿಯಾಗಿದ್ದು, ಗ್ರಾಹಕರ ಸೆಳೆಯಲು ಆತ ಈ ರೀತಿ ಪ್ಲಾನ್ ಮಾಡಿದ್ದಾನೆ.
ಈ ಫೋಟೋ ನೋಡಿದ ಮಂದಿ ತಮಾಷೆಯ ಕಮೆಂಟ್‌ಗಳ ಮಾಡಿದ್ದಾರೆ. ಟೀ ಕುಡಿಯೋಣ ಶೆಡ್ ಹತ್ರ ಬಾ ಎಂದು ಬಳಕೆದಾರನೊಬ್ಬ ತಮಾಷೆಯಾಗಿ ಬರೆದುಕೊಂಡಿದ್ದರೆ ಮತ್ತೋರ್ವ ಟೀ ಕುಡಿಯಲು ನನ್ನ ಸ್ನೇಹಿತನ ಶೆಡ್‌ಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದಾನೆ.



Click it and Unblock the Notifications
