Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೇಪಾಳ ಪಿಎಂ ರೇಸಲ್ಲಿ ಬೆಳಗಾವಿಯಲ್ಲಿ ಓದಿದ ಬಾಲೆನ್ ಷಾ! ಯಾರು ಈ ಯುವ ಸಮುದಾಯದ ನಾಯಕ?
ನೇಪಾಳದ ಪ್ರತಿಭಟನೆ ಈಗ ಸೇನೆಯಿಂದ ನಿಯಂತ್ರಿಸಲ್ಪಟ್ಟಿದೆ. ಜೆನ್-ಜಿ ಪ್ರೊಟೆಸ್ಟ್‌ನಿಂದ ಇಡೀ ದೇಶ ತಲ್ಲಣಗೊಂಡಿದೆ. ರಾಜಕೀಯ ನಾಯಕರು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದಿದ್ದಾರೆ. ಹಾಗೆ ಸಾರ್ವಜನಿಕ ಆಸ್ತಿ ಸೇರಿದಂತೆ ಎಲ್ಲಾ ಕಡೆಯಲ್ಲೂ ಬೆಂಕಿ ಹಚ್ಚಿರುವ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಹಾಗೆ ಪೊಲೀಸರ ದಾಳಿಗೆ ಈವರೆಗೆ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸದ್ಯ ನೇಪಾಳದ ಹಲವು ಭಾಗದಲ್ಲಿ ಈಗ ಕರ್ಫ್ಯೂ ಹೇರಲಾಗಿದೆ. ಕಠ್ಮುಂಡುವಿನಲ್ಲಿ ಸಂಪೂರ್ಣ ಸೇನೆ ಸುತ್ತುವರೆದಿದೆ. ಇದರ ನಡುವೆ ಈಗ ಯುವ ಸಮುದಾಯ ಮತ್ತೆ ದೇಶ ಕಟ್ಟುವ ಸುಲುವಾಗಿ ನಗರವನ್ನು ಸ್ವಚ್ಛ ಮಾಡಲು ನಿಂತಿದ್ದಾರೆ.

ಇದರ ನಡುವೆ ನೇಪಾಳದ ಮುಂದಿನ ಪಿಎಂ ಯಾರು ಎಂಬ ದೊಡ್ಡ ಪ್ರಶ್ನೆ ಎದ್ದಿದೆ, ಹಾಗೆ ಈ ಯುವ ಸಮುದಾಯದ ನಾಯಕರು ಯಾರು ಎಂಬುದು ಕೂಡ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಹೋರಾಟಗಾರರ ಬೇಡಿಕೆಯಲ್ಲಿ ಈಗಿನ ರಾಜಕಾರಣಗಳು ದೇಶವನ್ನು ಮುನ್ನಡೆಸಬಾರದು ಎಂದು ಹೇಳಿದ್ದಾರೆ. ಸದ್ಯ ಹೊಸ ನಾಯಕತ್ವದ ಆಯ್ಕೆ ನಡೆಯಲಿದೆ ಎಂದು ತಿಳಿದುಬಂದಿದೆ.
ಆದ್ರೆ ಈ ಎಲ್ಲಾ ಮಾತುಗಳು ನಡುವೆ ಬಾಲೆನ್ ಷಾ ಎಂಬ ನಾಯಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆತ ಮುಂದಿನ ಪಿಎಂ ಅಥವಾ ಮುಂದಿನ ನಾಯಕನಾಗುವ ಎಲ್ಲಾ ಸಾಧ್ಯತೆ ಇದೆ. ಆತ ಪ್ರಸ್ತುತ ಕಠ್ಮುಂಡುವಿನ ಮೇಯರ್ ಆಗಿದ್ದಾರೆ. ಸದ್ಯ ಈ ಯುವ ಸಮುದಾಯದ ಗಮನ ಸೆಳೆದಿರುವ ಈ ನಾಯಕ ಮುಂದೆ ದೇಶದ ಚುಕ್ಕಾಣಿ ಹಿಡಿಯಬಹುದು ಎನ್ನಲಾಗಿದೆ.
ಕರ್ನಾಟದಲ್ಲಿ ಓದಿದ್ದ ಬಾಲೆನ್ ಷಾ
ಬಾಲೆನ್ ಷಾ ಈ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಕಂಡುಬಂದಿದ್ದರು. ಅವರು ಕಾರಿನ ಮೇಲೆ ನಿಂತು ಪ್ರತಿಭಟನಾಕಾರರ ನಡುವೆ ಬರುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಎಲ್ಲಾ ರಾಜಕೀಯ ನಾಯಕರು ಸುರಕ್ಷಿತ ಸ್ಥಳಕ್ಕೆ ಪರಾರಿಯಾಗುತ್ತಿರುವಾಗ ಈ ನಾಯಕ ಯಾವ ಭಯವೂ ಇಲ್ಲದೆ ಕಾರಿನಲ್ಲಿ ಬರುತ್ತಿದ್ದ ವಿಡಿಯೋ ನೋಡಿ ಎಲ್ಲರು ಅಚ್ಚರಿಗೊಳಗಾದರು.
ಆತನಿಗೆ ಯುವ ಸಮುದಾಯದ ಬೆಂಬಲವೂ ಇರುವುದು ತಿಳಿದುಬಂದಿದೆ. ಆತ ಕರ್ನಾಟಕದ ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಮಾಡಿರುವುದಾಗಿ ತಿಳಿದಿಬಂದಿದೆ. ಷಾ 1990 ರಲ್ಲಿ ರಾಜಧಾನಿಯಲ್ಲಿ ಮೈಥಿಲ್ ಮಾಧೇಸಿ ಮೂಲದ ನೇವರ್ ಬೌದ್ಧ ಕುಟುಂಬದಲ್ಲಿ ಜನಿಸಿದರು ಮತ್ತು ಹಿಪ್-ಹಾಪ್ ಸೆಟ್ಟಿಂಗ್‌ನಲ್ಲಿ, ರಾಪರ್ ಆಗಿಯೂ ತಮ್ಮನ್ನು ಗುರುತಿಸಿಕೊಂಡರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (ವಿಟಿಯು) ರಚನಾತ್ಮಕ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
2022 ರಲ್ಲಿ, ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಠ್ಮಂಡುವಿನ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹಾಗೆ 61 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಜಯ ದಾಖಲಿಸಿ ಗಮನ ಸೆಳೆದರು, ಬಳಿಕ ಹೋರಾಟಗಳು, ಚಳವಳಿಗಳ ನಡೆಸಿಕೊಂಡು ಬಂದಿದ್ದರು. ಹೀಗಾಗಿ ಯುವ ಸಮುದಾಯಕ್ಕೆ ಬಹಳ ಹತ್ತಿರವಾಗಿದ್ದರು.
ಪ್ರಧಾನಿ ಕೆ ಪಿ ಶರ್ಮಾ ಓಲಿ ತಮ್ಮ ರಾಜೀನಾಮೆಯನ್ನು ಅಂತಿಮಗೊಳಿಸುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯುವಕರು ಬ್ಯಾಲೆನ್ ಅವರನ್ನು ಆ ಹುದ್ದೆಯನ್ನು ಅಲಂಕರಿಸುವಂತೆ ಒತ್ತಾಯಿಸುತ್ತಿರುವುದು ಕಾಣಬಹುದು. ಅವರನ್ನು ಸೇರಿ ಇನ್ನಿತರೆ ಮೂವರನ್ನು ಪ್ರಧಾನಿ ಹುದ್ದೆಗೆ ಸೂಕ್ತ ಎಂದು ಹೆಸರಿಸುತ್ತಿದ್ದಾರೆ.
ರಾಜಕೀಯದ ಬಗ್ಗೆ ಬಾಲೆನ್ ಷಾ ಅವರ ದೃಷ್ಟಿಕೋನವು ಉಲ್ಲಾಸಕರವೆಂದು ಪರಿಗಣಿಸಲಾಗಿದೆ, ಪ್ರಸ್ತುತ ಭ್ರಷ್ಟ ಆಡಳಿತದಿಂದ ಬೇಸತ್ತ ಯುವ ಸಮುದಾಯವನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ಬಾಲನ್ ಷಾ ನಾಯಕತ್ವ ಅವಶ್ಯಕ ಎಂದು ವಿವರಿಸಲಾಗುತ್ತಿದೆ. ಆದ್ರೆ ಪ್ರಧಾನಿ ಹುದ್ದೆ ರೇಸ್‌ನಲ್ಲಿ ಹಲವರ ಹೆಸರು ಕೇಳಿಬರಲು ಆರಂಭಿಸಿದೆ.



Click it and Unblock the Notifications
