Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೈಸೂರು ಅಲ್ಲ.. ಈ ಸ್ಥಳಗಳು ನವರಾತ್ರಿ ಆಚರಣೆಗೆ ಪ್ರಸಿದ್ಧ! ಇಲ್ಲಿನ ಆಚರಣೆ ಮೈ ನವಿರೇಳಿಸುತ್ತೆ
ನವರಾತ್ರಿ ಹಬ್ಬ ಭಕ್ತಿ, ಉತ್ಸಾಹ ಮತ್ತು ಬಣ್ಣಗಳ ಸಂಗಮ. ಇದು ಒಂಬತ್ತು ರಾತ್ರಿಗಳ ಹಬ್ಬವಾಗಿದ್ದು, ದುರ್ಗಾ ದೇವಿಗೆ ಸಮರ್ಪಿತವಾಗಿದೆ. ಇದನ್ನು ದೇಶದಾದ್ಯಂತ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 22 ರಂದು ನವರಾತ್ರಿ (Navratri 2025) ಪ್ರಾರಂಭವಾಗಲಿದೆ. ಈ ಹಬ್ಬದ ಆಗಮನದೊಂದಿಗೆ, ಮಾರುಕಟ್ಟೆಯಲ್ಲಿ ಹೊಸ ಕಳೆ ಮೂಡುತ್ತದೆ. ಜನರು ಗರ್ಬಾ ಅಭ್ಯಾಸಗಳಲ್ಲಿ ತೊಡಗುತ್ತಾರೆ. ಜೊತೆಗೆ ದೇವಾಲಯಗಳು ಸುಂದರವಾಗಿ ಅಲಂಕೃತಗೊಳ್ಳುತ್ತವೆ. ಆದರೆ, ನವರಾತ್ರಿಯ ನಿಜವಾದ ಸಾರವನ್ನು ಅನುಭವಿಸಲು ದೇಶದ ಕೆಲವು ಅದ್ಭುತ ಸ್ಥಳಗಳಿಗೆ (Navratri Travel Places) ನೀವು ಭೇಟಿ ನೀಡಲೇಬೇಕು. ಅವುಗಳ ಬಗ್ಗೆ ಇಲ್ಲಿದೆ ವಿವರ.
ಗುಜರಾತ್: ಗರ್ಬಾ ಮತ್ತು ದಾಂಡಿಯಾ ವೈಭವ
ನವರಾತ್ರಿ ಎಂದಾಕ್ಷಣ ಮೊದಲು ನೆನಪಾಗುವುದೇ ಗುಜರಾತ್. ಇಲ್ಲಿ ನವರಾತ್ರಿ (Navratri Festival) ಕೇವಲ ಒಂದು ಹಬ್ಬವಲ್ಲ, ಇದೊಂದು ಸಾಂಸ್ಕೃತಿಕ ಆಚರಣೆ. ರಾತ್ರಿ ಇಡೀ ನಡೆಯುವ ಗರ್ಬಾ (Garba) ಮತ್ತು ದಾಂಡಿಯಾ ನೃತ್ಯಗಳು ಗುಜರಾತ್ ನವರಾತ್ರಿಯ ಪ್ರಮುಖ ಆಕರ್ಷಣೆ. ಚನಿಯಾ ಚೋಲಿ ಮತ್ತು ಕೇಡಿಯಾ ಕುರ್ತಾದಂತಹ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ಜನರು ಹಾಡುತ್ತಾ ಮತ್ತು ನೃತ್ಯ ಮಾಡುತ್ತಾ ದುರ್ಗಾ ದೇವಿಯನ್ನು ಸ್ವಾಗತಿಸುತ್ತಾರೆ. ಅಹಮದಾಬಾದ್, ವಡೋದರಾ, ಸೂರತ್ ಮತ್ತು ಗಾಂಧಿನಗರ ಸೇರಿದಂತೆ ಇನ್ನಿತರ ನಗರಗಳಲ್ಲಿ ನಡೆಯುವ ನವರಾತ್ರಿ ಆಚರಣೆಗಳು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಪಶ್ಚಿಮ ಬಂಗಾಳ: ದುರ್ಗಾ ಪೂಜೆಯ ಅದ್ಧೂರಿತನ
ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯನ್ನು ದುರ್ಗಾ ಪೂಜೆಯಾಗಿ ಆಚರಿಸಲಾಗುತ್ತದೆ. ನವರಾತ್ರಿಯ ಅಂತಿಮ ನಾಲ್ಕು ದಿನಗಳು ಇಲ್ಲಿ ಅತೀ ಹೆಚ್ಚು ಮಹತ್ವ ಪಡೆಯುತ್ತವೆ. ಈ ಸಮಯದಲ್ಲಿ ಇಡೀ ರಾಜ್ಯವು ಬಣ್ಣ ಮತ್ತು ದೀಪಗಳಿಂದ ಕಂಗೊಳಿಸುತ್ತದೆ. ಇಲ್ಲಿ ಕಲಾತ್ಮಕವಾಗಿ ನಿರ್ಮಿಸಲಾದ ಪೂಜಾ ಪೆಂಡಾಲ್ ಮತ್ತು ದುರ್ಗಾ ದೇವಿಯ ಭವ್ಯ ಮೂರ್ತಿಗಳು ವಿಶೇಷ ಆಕರ್ಷಣೆಯಾಗಿಲಿವೆ. ದುರ್ಗಾ ದೇವಿ ಸ್ವರ್ಗದಿಂದ ಭೂಮಿಯಲ್ಲಿರುವ ತನ್ನ ಮನೆಗೆ ಮರಳುತ್ತಾಳೆ ಎಂದು ನಂಬಲಾಗಿದೆ. ಹೀಗಾಗಿ, ಭಕ್ತರು ದುರ್ಗಾ ದೇವಿಯನ್ನು ಸಡಗರ, ಸಂಭ್ರಮದಿಂದ ಸ್ವಾಗತಿಸುತ್ತಾರೆ.
ದೆಹಲಿ: ರಾಮಲೀಲಾ ಮತ್ತು ದುರ್ಗಾ ಪೂಜೆಯ ಸಂಗಮ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನವರಾತ್ರಿ ಮತ್ತು ದುರ್ಗಾ ಪೂಜೆ ಎರಡನ್ನೂ ಒಟ್ಟಾಗಿ ಆಚರಿಸಲಾಗುತ್ತದೆ. ನಗರದಲ್ಲಿ ಬಂಗಾಳಿ ಸಮುದಾಯದ ದೊಡ್ಡ ಸಂಖ್ಯೆ ಇದೆ. ಹೀಗಾಗಿ, ಭವ್ಯವಾದ ದುರ್ಗಾ ಪೂಜೆಯನ್ನು ಆಯೋಜಿಸಲಾಗುತ್ತದೆ. ಅದೇ ಸಮಯದಲ್ಲಿ, ರಾಮಲೀಲಾ ಮೈದಾನದಲ್ಲಿ ರಾಮಲೀಲಾ ನಾಟಕ ಪ್ರದರ್ಶಿಸಲಾಗುತ್ತದೆ. ದುರ್ಗಾ ಮಾತೆಯ ಆಶೀರ್ವಾದದ ಜೊತೆಗೆ, ರಾಮನ ವಿಜಯದ ಸಂಭ್ರಮವೂ ಇಲ್ಲಿ ಜರುಗುತ್ತದೆ. ಈ ಎರಡು ಸಂಪ್ರದಾಯಗಳ ಮಿಶ್ರಣವು ದಿಲ್ಲಿಯ ನವರಾತ್ರಿಯನ್ನು ಮತ್ತಷ್ಟು ಸಂಭ್ರಮಗೊಳಿಸುತ್ತದೆ.
ಮಹಾರಾಷ್ಟ್ರ: ಸಂಪ್ರದಾಯದ ಸೊಬಗು
ಮಹಾರಾಷ್ಟ್ರದ ಜನರು ನವರಾತ್ರಿ ಹಬ್ಬವನ್ನು ಬಹಳ ಭಕ್ತಿಯಿಂದ ಆಚರಿಸುತ್ತಾರೆ. ಇಲ್ಲಿ ಘಟಸ್ಥಾಪನ ಸಂಪ್ರದಾಯಕ್ಕೆ ಹೆಚ್ಚಿನ ಮಹತ್ವವಿದೆ. ನವರಾತ್ರಿಯನ್ನು ಹೊಸ ಆರಂಭ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮನೆಗಳಿಗೆ ಹೊಸ ವಸ್ತುಗಳನ್ನು ಖರೀದಿಸುವುದು ಇಲ್ಲಿನ ಪ್ರಮುಖ ಸಂಪ್ರದಾಯವಾಗಿದೆ.
ಹಿಮಾಚಲ ಪ್ರದೇಶ: ಕುಲ್ಲು ದಸರಾ
ಹಿಮಾಚಲ ಪ್ರದೇಶದಲ್ಲಿಯೂ ನವರಾತ್ರಿಯನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ಹತ್ತನೇ ದಿನವನ್ನು 'ಕುಲ್ಲು ದಸರಾ' (Dussehra) ಎಂದು ಕರೆಯಲಾಗುತ್ತದೆ. ಇದು ಪ್ರಪಂಚದಲ್ಲೇ ವಿಶಿಷ್ಟವಾದ ಹಬ್ಬ. ಶ್ರೀರಾಮನು ಅಯೋಧ್ಯೆಗೆ ಮರಳಿದ ಸಂಭ್ರಮವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಜನರು ದುರ್ಗಾ ದೇವಾಲಯಗಳಿಗೆ ಭೇಟಿ ನೀಡುತ್ತಾರೆ.
ಒಟ್ಟಾರೆಯಾಗಿ, ಈ ಎಲ್ಲಾ ಸ್ಥಳಗಳಲ್ಲಿ ನವರಾತ್ರಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಆದರೂ, ಭಕ್ತಿ ಮತ್ತು ಉತ್ಸಾಹವು ಎಲ್ಲೆಡೆ ಒಂದೇ ರೀತಿ ಇರುತ್ತದೆ. ಈ ನವರಾತ್ರಿ ಹಬ್ಬದ ಸಮಯದಲ್ಲಿ ನೀವು ಈ ಸ್ಥಳಗಳಿಗೆ ಭೇಟಿ ನೀಡಬಹುದು. ಅಲ್ಲಿನ ಸಂಭ್ರಮವನ್ನು ಕಣ್ತುಂಬಿಕೊಳ್ಳಬಹುದು.



Click it and Unblock the Notifications
