Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವರಾತ್ರಿ: ಕರ್ನಾಟಕದ ಪ್ರಸಿದ್ಧ 9 ದೇವಿ ಕ್ಷೇತ್ರಗಳು
ಎಲ್ಲಾ ಕಡೆ ನವರಾತ್ರಿಯ ಸಂಭ್ರಮ, ದುರ್ಗೆಯ 9 ಅವತಾರಗಳನ್ನು ಈ ದಿನಗಳಲ್ಲಿ ಆರಾಧಿಸಲಾಗುವುದು. ಕರ್ನಾಟಕದಲ್ಲಿ ನವಶಕ್ತಿ ಪೀಠಗಳಿಗೆ, ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಕರ್ನಾಟಕದಲ್ಲಿರುವ ಆ ನವಶಕ್ತಿ ಪೀಠಗಳಾವುವು ಎಂದು ನೋಡೋಣ ಬನ್ನಿ:

ಶೃಂಗೇರಿ ಶಾರದಾಂಬೆ: ಶೃಂಗೇರಿಯಲ್ಲಿರುವ ಶಾರದಾಂಬೆ ದೇವಾಲಯ ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು ಶ್ರೀ ಶಂಕರಚಾರ್ಯರು ಪ್ರತಿಷ್ಠಾಪಿಸಿದರು. ಈ ಮಠವನ್ನು ಸನಾತನ ಧರ್ಮವನ್ನು ಒಗ್ಗೂಡಿಸಲು ಮತ್ತು ಅದೈತ ಸಿದ್ಧಾಂತವನ್ನು ಪ್ರತಿಪಾದಿಸಲು ಈ ದೇವಾಲಯವನ್ನು ನಿರ್ಮಿಸಿದರು. ಶೃಂಗೇರಿ ಶಾರದ ಪೀಠದ ಬಗ್ಗೆ ಹೇಳುವುದಾದರೆ ಉರಿ ಬಿಸಿಲಿನಲ್ಲಿ ಕಪ್ಪೆಯೊಂದು ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಾಗ ಕಪ್ಪೆಯೊಂದು ಹೆಡೆ ಬಿಡಿಸಿ ಬಿಸಿಲಿನಿಂದ ರಕ್ಷಣೆ ನೀಡಿತ್ತು, ಇದನ್ನು ನೋಡಿದ ಶಂಕರಚಾರ್ಯ ಅದ್ವೈತ ಮಠ ಸ್ಥಾಪಿಸಲು ಇದೇ ಪುಣ್ಯಭೂಮಿಯೆಂದು ಇಲ್ಲಿ ಶಾರದಾ ಪೀಠ ಸ್ಥಾಪಿಸಿದರು.
ಕೊಲ್ಲೂರು ಮೂಕಂಬಿಕಾ ದೇವಿ ದೇವಾಲಯ
ಕೊಲ್ಲೂರು ಮೂಕಾಂಬಿಕಾ ದೇವಿ ದೇವಾಲಯ ಉಡುಪಿಯ ಜಿಲ್ಲೆಯಲ್ಲಿದೆ. ಕರ್ನಾಟದ ಪ್ರಸಿದ್ಧ ಕ್ಷೇತ್ರದಲ್ಲಿ ಇದು ಒಂದಾಗಿದೆ. ಪೌರಾಣಿಕ ಕತೆ ಪ್ರಕಾರ ಪರಶುರಾಮ ನಿರ್ಮಿಸಿದ ಏಳು ಮೋಕ್ಷ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಿ ಆದಿ ಲಕ್ಷ್ಮಿಯ ರೂಪವಾಗಿದೆ. ಇಲ್ಲಿ ದೇವಿಯನ್ನು ಸರಸ್ವತಿ, ಲಕ್ಷ್ಮಿ, ಪಾರ್ವತಿ ರೂಪವನ್ನು ಆರಾಧಿಸಲಾಗುವುದು.
ಮೈಸೂರು ಚಾಮುಂಡೇಶ್ವರಿ ದೇವಾಲಯ: ಭಾರತದಲ್ಲಿರುವ ಶಕ್ತಿ ಪೀಠಗಳಲ್ಲಿ ಇದು ಕೂಡ ಒಂದು, ಸತಿಯ ಕೂದಲು ಬಿದ್ದ ಸ್ಥಳವೆಂದು ಹೇಳಲಾಗುವುದು. ಅದರಲ್ಲಿಯೂ ನವರಾತ್ರಿ ಹಾಗೂ ದಸರಾ ಎಂದರೆ ಮೈಸೂರಿನಲ್ಲಿ ಅದ್ಧೂರಿಯ ಸಂಭ್ರಮ. ಕರ್ನಾಟಕದ ನಾಡಹಬ್ಬವಾಗಿ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸಲಾಗುವುದು. ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ಸಂಕೇತವಾಗಿ ದಸಾರ ಸಂಭ್ರಮ ಆಚರಿಸಲಾಗುವುದು.
ಸವದತ್ತಿ ಎಲ್ಲಮ್ಮ ದೇವಾಲಯ: ಈ ದೇವಾಲಯ ಬೆಳಗಾವಿಯಲ್ಲಿದೆ. ಈ ದೇವಾಲಯವನ್ನು ಚಾಲುಕ್ಯ ಮತ್ತು ರಾಷ್ಟ್ರಕೂಟ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯಕ್ಕೆ ಕಂಕಣ ಬಲ ಕೂಡಿ ಬರಲು, ಮದುವೆಯಾದ ದಂಪತಿ ಸಂತಾನ ಬಾಗ್ಯ ನೀಡು ಎಂದು ಪ್ರಾರ್ಥಿಸಲು ಈ ದೇವಾಲಯಕ್ಕೆ ಬರ್ತಾರೆ. ಅಲ್ಲದೆ ಈ ದೇವಾಲಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಮಂಗಳಮುಖಿಯರು ಬರ್ತಾರೆ.
ಸಿಗಂದೂರು ಚೌಡೇಶ್ವರಿ ದೇವಾಲಯ: ಈ ದೇವಾಲಯ ಶಿವಮೊಗ್ಗದ ಸಿಗಂಧೂರು ಕಳಸವಳ್ಳಿಯಲ್ಲಿದೆ. ಈ ದೇವಾಲಯಕ್ಕೆ ಪ್ರತಿನಿತ್ಯ ಸಾಕಷ್ಟು ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆಯುತ್ತಾರೆ. ಚೌಡಮ್ಮ ತಾಯಿ ಜಗತ್ತನ್ನು ಕಾಪಾಡಲು ಬಂದಿದ್ದು ಇಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾಗುವುದು. ಇಲ್ಲಿ ಬಂದು ಭಕ್ತಿಯಿಂದ ಪ್ರಾರ್ಥಸಿದರೆ ಎಲ್ಲಾ ದುಃಖಗಳು ದೂರಾಗುವುದು ಎಂದು ಹೇಳಲಾಗಿದೆ. ಚೌಡೇಶ್ವರಿಯ ಪವಾಡಗಳ ಬಗ್ಗೆ ಅವಳ ನಂಬಿದ ಭಕ್ತರು ಹೇಳುತ್ತಾರೆ. ತನ್ನ ನಂಬಿ ಬಂದ ಭಕ್ತರನ್ನು ಎಂದಿಗೂ ಕೈ ಬಿಡಲ್ಲ ಈ ತಾಯಿ.
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ: ಅನ್ನ ಪೂರ್ಣೇಶ್ವರಿ ದೇವಿಯನ್ನು ಪಾರ್ವತಿ ದೇವಿಯ ಅವತಾರ ಎಂದು ಹೇಳಲಾಗುವುದು. ಈ ದೇವಿಯನ್ನು ಪೂಜಿಸಿದರೆ ಅನ್ನದ ಕೊರತೆ ಉಂಟಾಗುವುದಿಲ್ಲ ಎಂದು ನಂಬಲಾಗಿದೆ. ಈ ದೇವಾಲಯದಲ್ಲಿ ಚೈತ್ರ ನವರಾತ್ರಿ ಸಮಯದಲ್ಲಿ ನವರಾತ್ರಿ ಅದ್ದೂರಿಯಿಂದ ಆಚರಿಸಲಾಗುವುದು.
ಕಟೀಲು ದುರ್ಗಾ ಪರಮೇಶ್ವರಿ ದೇವಾಲಯ
ಕಟೀಲು ದುರ್ಗಾ ಪರಮೇಶ್ವರಿ ದೇವಾಲಯ ಮಂಗಳೂರಿನಲ್ಲಿದೆ. ನವರಾತ್ರಿ ಸಮಯದಲ್ಲಿ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ನವರಾತ್ರಿಯ ಸಮಯದಲ್ಲಿ ದೀಪಾಂಕಾರದಿಂದ ಈ ದೇವಾಲಯ ಕಂಗೊಳಿಸುತ್ತಿರುತ್ತದೆ. ನವರಾತ್ರಿ ಸಮಯದಲ್ಲಿ ಕರ್ನಾಟಕದಲ್ಲಿ ನೋಡಲೇಬೇಕಾದ ಪವಿತ್ರ ಕ್ಷೇತ್ರಗಳಲ್ಲಿ ಇದು ಕೂಡ ಒಂದಾಗಿದೆ.
ಬಾದಾಮಿ ಬನಶಂಕರಿ ದೇವಾಲಯ:ಬಾಗಲಕೋಟೆಯಲ್ಲಿರುವ ಈ ದೇವಾಲಯ ನವ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯಕ್ಕೆ ಕರ್ನಾಟಕದಿಂದ ಮಾತ್ರವಲ್ಲ ಇತರ ರಾಜ್ಯಗಳಿಂದ ಕೂಡ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ.
ಶ್ರೀ ಮಾರಿಕಾಂಬ ದೇವಾಲಯ: ಉತ್ತರ ಕರ್ನಾಟಕದಲ್ಲಿ ಶ್ರೀ ಮಾರಿಕಾಂಬ ದೇವಾಲಯವಿದೆ. ಹುಲಿ ಮೇಲೆ ಸವಾರಿ ಬರುತ್ತಿರುವ ದೇವಿಯ ಮೂರ್ತಿಯನ್ನು ಇಲ್ಲಿ ಕಾಣಬಹುದು. ಮೈಸೂರಿನ ಚಾಮುಂಡೇಶ್ವರಿಯ ಅಕ್ಕ ಶ್ರೀ ಮಾರಿಕಾಂಬ ದೇವಿ ಎಂದು ಹೇಳಲಾಗುವುದು.



Click it and Unblock the Notifications











