Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ನವರಾತ್ರಿ ಮೊದಲ ದಿನ ಶೈಲಪುತ್ರಿಯ ಆರಾಧನೆ: ಘಟಸ್ಥಾಪನಾ ಸಮಯ ಹಾಗೂ ಪವರ್‌ಫುಲ್ ಮಂತ್ರ
ಭಾರತದಲ್ಲಿ ಸಡಗರ ಸಂಭ್ರಮದ ನವರಾತ್ರಿ. 9 ದಿನಗಳ ಈ ಆಚರಣೆಯಲ್ಲಿ ದುರ್ಗೆಯ 9 ಸ್ವರೂಪಗಳನ್ನು ಆರಾಧಿಸುತ್ತಾರೆ, ಒಂದೊಂದು ದೇವಿ ಸ್ವರೂಪದ ಹಿಂದೆ ಅನೇಕ ಧಾರ್ಮಿಕ ನಂಬಿಕೆಗಳಿವೆ, ಅದರಂತೆ ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಅವತಾರವನ್ನು ಆರಾಧಿಸಲಾಗುವುದು.

ದುರ್ಗೆಯೆಂದರೆ ಉಗ್ರಸ್ವರೂಪಿಣಿ, ಆದರೆ ಶೈಲಪುತ್ರಿ ಸೌಮ್ಯರೂಪಿ, ಶೈಲಪುತ್ರಿ ಪಾರ್ವತಿ ದೇವಿಯ ಅವತಾರವೆಂದು ಹೇಳಲಾಗುವುದು. ಈಕೆ ತಾಯಿ ಸ್ವರೂಪಿಣಿ, ಈಕೆಯ ತಲೆಯಲ್ಲಿ ಅರ್ಧ ಚಂದ್ರನಿದ್ದಾನೆ, ಬಲಗೈಯಲ್ಲಿ ತ್ರಿಶೂಲ ಹಿಡಿದಿದ್ದಾಳೆ, ಎಡಗೈಯಲ್ಲಿ ತಾವರೆಯಿದೆ, ನಂದಿ ಈಕೆಯ ವಾಹನವಾಗಿದೆ. ಈ ತಾಯಿಯನ್ನು ಶ್ವೇತ ವರ್ಣದ ಉಡುಪಿನಲ್ಲಿ ಚಿತ್ರಿಸಲಾಗಿದೆ.
ದೇವಿಯನ್ನು ಆರಾಧನೆ ಮಾಡುವುದರಿಂದ ಜೀವನದಲ್ಲಿ ಸ್ಥಿರತೆ ಇರಲಿದೆ
ಬದುಕಿನಲ್ಲಿ ಸ್ಥಿರತೆ ತುಂಬಾನೇ ಮುಖ್ಯ, ಮನಸ್ಸು ಸ್ಥಿರತೆಯಿಂದಿರಬೇಕು, ಅಲ್ಲದೆ ಆರ್ತಿಕತೆ, ಸಂಪತ್ತು, ಕೀರ್ತಿ ಇವೆಲ್ಲದರಲ್ಲೂ ಸ್ಥಿರತೆ ಇರಬೇಕೆಂದು ಬಯಸುತ್ತೇವೆ. ಶೈಲಪುತ್ರಿಯನ್ನು ಪೂಜಿಸಿದರೆ ನಮ್ಮ ಕೀರ್ತಿ ಹೆಚ್ಚಾಗಲಿದೆ, ನಾವು ನಮ್ಮ ಕಾರ್ಯಗಳಿಂದ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಲು ಸಾಧ್ಯವಾಗುವುದು.
ದೇವಾನು ದೇವತೆಗಳೇ ಶೈಲಪುತ್ರಿಯನ್ನು ಆರಾಧಿಸುತ್ತಾರೆ
ದೇವತೆಗಳ ಅಹಂ ಶೈಲಪುತ್ರಿ ಮುಂದೆ ದ್ವಂಸವಾಗಿದೆ, ಆಕೆಯ ಶಕ್ತಿಯನ್ನರಿತ ದೇವತೆಗಳು ತುಂಬಾನೇ ವಿನಮ್ರರಾಗಿ ಕೈ ಮುಗಿದು ನಿಲ್ಲುತ್ತಾರೆ ಎಂದು ಧಾರ್ಮಿಕ ಪುರಾಣಗಳಲ್ಲಿ ಹೇಳಲಾಗಿದೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ಚರ ಕೂಡ ಶೈಲಪುತ್ರಿಗೆ ಅಗ್ರಸ್ಥಾನ ನೀಡಿದ್ದಾರೆ. ಶೈಲಪುತ್ರಿಗೆ ಬಿಳಿ ಬಣ್ಣದ ಹೂವುಗಳು ಮಲ್ಲಿಗೆ ಮತ್ತಿತರ ಹೂವುಗಳು, ಬಳಿ ಬಣ್ಣದ ನೈವೇದ್ಯ ಅರ್ಪಿಸಿ ಪೂಜಿಸಲಾಗುವುದು.
ಅಕ್ಟೋಬರ್ 3ಕ್ಕೆ ಘಟಸ್ಥಾಪನ ಮುಹೂರ್ತ
ಬಳಗ್ಗೆ 6:15ರಿಂದ 07:22ರ ಒಳಗಡೆ ಮಾಡಬಹುದು
ಘಟಸ್ಥಾಒನ ಅಭಿಜಿತ್ ಮುಹೂರ್ತ ಬೆಳಗ್ಗೆ 11:46ರಿಂದ ಮಧ್ಯಾಹ್ನ 12:33ರವರೆಗೆ ಇದೆ
ಪ್ರತಿಪದ ತಿಥಿ ಅಕ್ಟೋಬರ್ 2 ಮಧ್ಯರಾತ್ರಿ 12:18ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 4 ಮುಂಜಾನೆ 02:28ರವರೆಗೆ ಇದೆ.
ಶೈಲಪುತ್ರಿ ಪೂಜೆ ಮಾಡುವಾಗ ಈ ಮಂತ್ರ ಪಠಿಸಿ
ವಂದೇ ವಾಂಚಿತಲಾಭಾಯ ಚಂದ್ರಾರ್ಧ ಕೃತಶೈಖರಾಮ್ | ವೃಷರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್
ಈ ವರ್ಷ ನವರಾತ್ರಿಗೆ ಮೊದಲ ದಿನ ಯಾವ ಬಣ್ಣ ಬಂದಿದೆ?
ಪ್ರತಿವರ್ಷವೂ ನವರಾತ್ರಿಗೆ ಪ್ರತಿದಿನ ಒಂದೊಂದು ಬಣ್ಣದ ಉಡುಪು ಧರಿಸಿ ದುರ್ಗಾ ಪೂಜೆ ಮಾಡುತ್ತಾರೆ. ಈ ವರ್ಷ ಮೊದಲ ದಿನ ಹಳದಿ ಬಣ್ಣ ಬಂದಿದೆ.
ಪಲ್ಲಕ್ಕಿಯಲ್ಲಿ ಬರ್ತಾ ಇದ್ದಾಳೆ ದುರ್ಗೆ:
ನವರಾತ್ರಿ ಪ್ರಾರಂಭದ ದಿನ ದೇವಿಯ ವಾಹನ ಕೂಡ ಗಮನಹರಿಸಲಾಗುವುದು. ಈ ಬಾರಿ ಪಲ್ಲಕ್ಕಿಯಲ್ಲಿ ಬರ್ತಾ ಇರುವುದರಿಂದ ಇದು ಮುಂಬರುವ ಅಶುಭದ ಸೂಚನೆ ಎಂಬುವುದು ಧಾರ್ಮಿಕ ನಂಬಿಕೆ. ದೇಶದಲ್ಲಿ ನೈಸರ್ಗಿ ವಿಪತ್ತು, ಯುದ್ಧ ಭೀತಿ, ಆಂತರಿಕ ಕಲಹಗಳು ಉಂಟಾಗಬಹುದು, ಸಾಂಕ್ರಾಮಿಕ ರೋಗ ಬರಬಹುದು ಎಂದು ಹೇಳುತ್ತದೆ.
ದುರ್ಗೆ ತನ್ನ ಭಕ್ತರನ್ನು ಸದಾ ರಕ್ಷಣೆ ಮಾಡುತ್ತಾಳೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯಲಿದೆ, ದೇವಿ ಕೃಪೆ ನಮ್ಮ ಮೇಲಿರಲಿದೆ.
ಎಲ್ಲರಿಗೂ ನವರಾತ್ರಿ ಶುಭ ತರಲಿ, ನವರಾತ್ರಿಯ ಶುಭಾಶಯಗಳು....



Click it and Unblock the Notifications
