Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Navratri 2025: ಭಾರತದ ಯಾವ ಭಾಗದಲ್ಲಿ ಹೇಗೆ ನವರಾತ್ರಿ ಆಚರಿಸಲಾಗುತ್ತೆ ಗೊತ್ತಾ?
ಇಂದಿನಿಂದ ನವರಾತ್ರಿ ಹಬ್ಬ ಆರಂಭಗೊಂಡಿದೆ. ಭಾರತದ ಮೂಲೆ ಮೂಲೆಯಲ್ಲೂ ಈ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಭಾರತದಲ್ಲಿ ನವರಾತ್ರಿ ಹಬ್ಬ 9 ದಿನಗಳ ಕಾಲ ಮನೆ ಮನೆಯಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಹಾಗೆ ಈ ಹಬ್ಬವು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ವಿಶೇಷತೆಯೊಂದಿಗೆ ಆಚರಿಸುವುದು ನೋಡಬಹುದು.
ಉತ್ತರ ಭಾರತದಲ್ಲಿ ಒಂದು ರೀತಿಯಾದರೆ ದಕ್ಷಿಣ, ಪಶ್ಚಿಮ, ಪೂರ್ವ ಭಾಗದಲ್ಲಿ ಬೇರೆ ಬೇರೆ ರೀತಿಯಲ್ಲಿಯೇ ಆಚರಿಸುತ್ತಾರೆ. ದಸರಾ ಹಾಗೂ ದೀಪಾವಳಿ ಎರಡೂ ಕೂಡ ಒಂದೇ ಹಬ್ಬದ ಭಾಗವಾಗಿಯೂ ನೋಡುವುದುಂಟು. ಉತ್ತರ ಭಾರತದಲ್ಲಿ ದೀಪಗಳನ್ನು ಬೆಳಗಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದರಿಂದ ಹಿಡಿದು ಪಶ್ಚಿಮ ಭಾರತದಲ್ಲಿ ಲಕ್ಷ್ಮಿ ಪೂಜೆ, ಪೂರ್ವ ಭಾರತದಲ್ಲಿ ಕಾಳಿ ಪೂಜೆ, ದಕ್ಷಿಣ ಭಾರತದಲ್ಲಿ ವಿಜಯದಶಮಿಯಾಗಿ ಮತ್ತು ಮಧ್ಯ ಭಾರತದಲ್ಲಿ ಜಾನಪದ ನೃತ್ಯಗಳು. ಹೀಗೆ ಹಲವು ರೀತಿ ಆಚರಣೆ ನೋಡಬಹುದು.

ನವರಾತ್ರಿಯು ದೇಶಾದ್ಯಂತ ವಿಭಿನ್ನ ಆಚರಣೆಗಳಿಂದ ನೋಡಬಹುದು. ದೇಶದ ವಿವಿಧ ಭಾಗಗಳಲ್ಲಿ ನವರಾತ್ರಿಯನ್ನು ಹೇಗೆ ಆಚರಿಸಲಾಗುತ್ತದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ. ಉತ್ತರ ಭಾರತವು ರಾವಣನ ಮೇಲೆ ರಾಮನ ವಿಜಯೋತ್ಸವವನ್ನಾಗಿ ಆಚರಿಸುವುದು ನೋಡಬಹುದು. ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನೊಂದಿಗೆ ಹದಿನಾಲ್ಕು ವರ್ಷಗಳ ವನವಾಸದ ನಂತರ ರಾಮನು ಅಯೋಧ್ಯೆಗೆ ಮರಳಿದ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಸಿಹಿತಿಂಡಿಗಳು, ಆಹಾರ ಪದಾರ್ಥಗಳೊಂದಿಗೆ ಆಚರಿಸಲಾಗುತ್ತದೆ. ಮಹಿಳೆಯರು ಉಪವಾಸ ಮಾಡುವುದು, ಜಾಗರಣೆ ಮಾಡುವುದು ಕೂಡ ಈ ಹಬ್ಬದ ವಿಶೇಷತೆಯಾಗಿದೆ.
ಪೂರ್ವ ಭಾರತ
ಪೂರ್ವ ಭಾರತದಲ್ಲಿ ಮುಖ್ಯವಾಗಿ ಪಶ್ಚಿಮ ಬಂಗಾಳ ಮತ್ತು ಈಶಾನ್ಯದಲ್ಲಿ, ನವರಾತ್ರಿಯನ್ನು ದುರ್ಗಾ ಪೂಜೆ ಎಂದು ಕರೆಯಲಾಗುತ್ತದೆ. ಜನರು ಮಹಿಷಾಸುರನ ಮೇಲೆ ದುರ್ಗಾದೇವಿಯ ವಿಜಯೋತ್ಸವವನ್ನು ಆಚರಿಸುತ್ತಾರೆ. ನಗರಗಳಲ್ಲಿ ಅಂದು ವಿಜಯೋತ್ಸವ ನಡೆಯಲಿದೆ. ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಲಿದೆ. ನೀರಿನಲ್ಲಿ ಮುಳುಗಿಸಿಟ್ಟ ದೇವಿ ವಿಗ್ರಹ ತೆಗೆದು ಪೂಜಿಸಲಾಗುತ್ತದೆ, ಹಬ್ಬದ ಬಳಿಕ ಮತ್ತೆ ನೀರಿನಲ್ಲಿ ಮುಳುಗಿಸುವ ವಿಭಿನ್ನ ಸಂಪ್ರದಾಯವೂ ಇದೆ.
ಪಶ್ಚಿಮ ಭಾರತ
ಪಶ್ಚಿಮ ಭಾರತದಲ್ಲಿ ವಿಶೇಷವಾಗಿ ಗುಜರಾತ್‌ನಲ್ಲಿ ನವರಾತ್ರಿ ಬಹಳ ವಿಶೇಷ ಹಬ್ಬವಾಗಿದೆ. ಇಲ್ಲಿ ಮಹಿಳೆಯ ಪಾತ್ರ ಬಹಳ ಪ್ರಮುಖವಾಗಿರಲಿದೆ. ನಿರಂತರ 9 ದಿನಗಳ ಉಪವಾಸ ಮಾಡುತ್ತಾರೆ, ಹಾಗೆ ಗರ್ಬಾ ನೃತ್ಯ ಅಲ್ಲಿನ ಸಂಪ್ರದಾಯ ಸಾರಲಿದೆ. ಪ್ರತಿ ಬೀದಿ ಬೀದಿಯಲ್ಲೂ ದೇವಿಯ ಪೂಜೆ ಹಾಗೆ ಗಾರ್ಬ ನಡೆಯುವುದು ನೋಡಬಹುದು. ದಾಂಡಿಯಾ ಎಂದು ಕರೆಯುವ ಕೋಲಾಟ ಪ್ರದರ್ಶನ ಕೂಡ ಅಲ್ಲಿನ ಆಚರಣೆಯ ಭಾಗವಾಗಿರಲಿದೆ.
ದಕ್ಷಿಣ ಭಾರತ
ನವರಾತ್ರಿಯ ಸಮಯದಲ್ಲಿ ದಕ್ಷಿಣ ಭಾರತದ ಪ್ರಮುಖ ಆಕರ್ಷಣೆಗಳಲ್ಲಿ ಗೊಂಬೆಗಳ ಪೂಜೆ ಮಾಡುವುದು. ಕರ್ನಾಟಕದಲ್ಲಿ ಬೊಂಬೆ ಹಬ್ಬ ಎಂದು ಕರೆಯಲಾಗುತ್ತದೆ, ಆದರೆ ತಮಿಳುನಾಡಿನಲ್ಲಿ ಇದನ್ನು ಬೊಮ್ಮೈ ಕೋಲು ಎಂದು ಕರೆಯಲಾಗುತ್ತದೆ. ಕೇರಳವು ಇದನ್ನು ಬೊಮ್ಮ ಗುಲ್ಲು ಎಂದು ಉಲ್ಲೇಖಿಸುತ್ತದೆ, ಆದರೆ ಆಂಧ್ರಪ್ರದೇಶದಲ್ಲಿ ಇದನ್ನು ಬೊಮ್ಮಲ ಕೊಲುವು ಎಂದು ಕರೆಯಲಾಗುತ್ತದೆ. ಹಾಗೆ 9ನೇ ದಿನ ಅದ್ದೂರಿಯಾಗಿ ವಿಜಯದಶಮಿ ಆಚರಿಸಲಾಗುತ್ತದೆ. ಅದ್ರಲ್ಲೂ ಮೈಸೂರಿನ ಜಂಬೂ ಸವಾರಿ ವಿಶ್ವ ಪ್ರಸಿದ್ಧಿ ಪಡೆದಿದೆ. ದೇಶದ ಮೂಲೆ ಮೂಲೆಯಿಂದ ಜನರು ಇಲ್ಲಿಗೆ ಆಗಮಿಸಿ ಜಂಬೂಸವಾರಿ ವೀಕ್ಷಿಸುತ್ತಾರೆ. ಕೊನೆಯ ದಿನ ಚಾಮುಂಡಿ ದೇವಿಯು ಮಹಿಷಾ ಸುರನ ಸಂಹಾರ ಮಾಡಿದ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗೆ 9ನೇ ದಿನವು ಅನ್ಯಾಯ, ಅಧರ್ಮದ ವಿರುದ್ಧ ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ. ಹಾಗೆ ಲಕ್ಷ್ಮಿ ಪೂಜೆ, ಆಯುಧ ಪೂಜೆಯಂತಹ ವಿಭಿನ್ನ ಸಂಪ್ರದಾಯ ದಕ್ಷಿಣ ಭಾರತದಲ್ಲಿದೆ.



Click it and Unblock the Notifications