Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ನವರಾತ್ರಿ ಸಮಯದಲ್ಲಿ ಈ ವಸ್ತುಗಳನ್ನು ಮನೆಗೆ ತರುವುದು ಶುಭವಂತೆ: ಯಾವ ಕಾರ್ಯ ಮಾಡಬಾರದು
ನವರಾತ್ರಿ ಪ್ರಾರಂಭವಾಗಿದೆ, ನವರಾತ್ರಿ ಶಕ್ತಿ ದೇವತೆ ದುರ್ಗೆಯ ಒಂಭತ್ತು ಅವತಾರಗಳನ್ನು ಆರಾಧಿಸಲಾಗುವುದು.
ಮೊದಲನೇ ದಿನ ಶೈಲ ಪುತ್ರಿ
ಎರಡನೇ ದಿನ ಬ್ರಹ್ಮಚಾರಿಣಿ
ಮೂರನೇ ದಿನ ರಾಯಲ್ ನೀಲಿ ಬಣ್ಣ
4ನೇ ದಿನ ಕೂಷ್ಮಾಂಡ
5ನೇ ದಿನ ಸ್ಕಂದ ಮಾತಾ
6ನೇ ದಿನ ಕಾತ್ಯಾಯನಿ
7ನೇ ದಿನ ಕಾಳರಾತ್ರಿ
8ನೇ ದಿನ ಮಹಾಗೌರಿ
9ನೇ ದಿನ ಸಿದ್ಧಿಧಾತ್ರಿ
ದೇವಿಯರನ್ನು ಆರಾಧಿಸಲಾಗುವುದು.

ನವರಾತ್ರಿಯ ಸಮಯದಲ್ಲಿ ಕೆಲವೊಂದು ವಸ್ತುಗಳನ್ನು ಮನೆಗೆ ತಂದರೆ ಶುಭ ಎಂದು ಪರಿಗಣಿಸಲಾಗುವುದು:
ದೇವರಿಗೆ ಸಂಬಂಧಿಸಿದ ಈ ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು:
ಕೃಷ್ಣ-ರಾಧೆಯ ಫೋಟೋ: ಕೃಷ್ಣ ರಾಧೆಯ ಫೋಟೋವನ್ನು ತಂದು ಮನೆಯ ಹಾಲ್ ಅಥವಾ ಬೆಡ್‌ರೂಂನಲ್ಲಿಟ್ಟರೆ ಗಂಡ-ಹೆಂಡತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಕೃಷ್ಣ-ರಾಧೆಯರಂತೆ ನಿಮ್ಮ ಸಂಬಂಧ ತುಂಬಾ ಚೆನ್ನಾಗಿರಲಿದೆ.
ಶ್ರೀ ಗಣೇಶನ ಮೂರ್ತಿ: ಶ್ರೀ ಗಣೇಶನ ಮೂರ್ತಿಯನ್ನು ತಂದು ಆರಾಧಿಸಿ, ಎಲ್ಲಾ ವಿಘ್ನಗಳನ್ನು ನಿವಾರಿಸುವ ಗಣೇಶನ ಮೂರ್ತಿಯನ್ನು ತರುವುದು ಅಥವಾ ನಿಮಗೆ ಶ್ರೀ ಗಣೇಶನ ಮೂರ್ತಿ ಅಥವಾ ಫೋಟೋ ಗಿಫ್ಟ್ ಆಗಿಯೂ ಒಳ್ಳೆಯದು.
ಲಕ್ಷ್ಮಿಯ ಪೂಜೆ: ಲಕ್ಷ್ಮಿಯ ಮೂರ್ತಿ ಅಥವಾ ಫೋಟೋವನ್ನು ತರುವುದು ಹಾಗೂ ತುಪ್ಪದ ದೀಪ ಹಚ್ಚಿ ಪೂಜಿಸಿದರೆ ತುಂಬಾ ಒಳ್ಳೆಯದು.
ಮನೆಗೆ ತುಳಸಿ ಗಿಡ: ತುಳಸಿಗೆ ಹಿಂದೂ ಧರ್ಮದಲ್ಲಿ
ತುಂಬಾನೇ ಮಹತ್ವ ನೀಡಲಾಗಿದೆ. ದೇವರ ಸ್ವರೂಪ ಎಂದು ತುಳಸಿ ಗಿಡವನ್ನು ಆರಾಧಿಸುತ್ತೇವೆ. ತುಳಸಿ ಗಿಡವನ್ನು ನವರಾತ್ರಿ ಸಮಯದಲ್ಲಿ ಮನೆಗೆ ತರುವುದು ಶುಭವಾಗಿದೆ.
ಚಿನ್ನ ಅಥವಾ ಬೆಳ್ಳಿ ಖರೀದಿಸಿ
ಚಿನ್ನ, ಬೆಳ್ಳಿಯನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ, ಹಾಗಾಗಿ ನವರಾತ್ರಿಯ ಸಮಯದಲ್ಲಿ ಚಿನ್ನ, ಬೆಳ್ಳಿ ಖರೀದಿಸುವುದು ಶುಭ ಎಂದು ಹೇಳಲಾಗುವುದು.
ಈ ಆಹಾರ ವಸ್ತುಗಳನ್ನು ಮನೆಗೆ ತರುವುದು ಶುಭ
ಕಲ್ಲುಪ್ಪು: ಕಲ್ಲುಪ್ಪು ಋಣಾತ್ಮಕ ಶಕ್ತಿಯನ್ನು ಹೊರ ಹಾಕುತ್ತದೆ, ಹಾಗಾಗಿ ಮನೆಗೆ ಕಲ್ಲುಪ್ಪು ತನ್ನಿ, ಅಲ್ಲದೆ ಮನೆಯ ಮೂಲೆ-ಮೂಲೆಯಲ್ಲಿ ಕಲ್ಲುಪ್ಪು ಸ್ವಲ್ಪ ಇಡುವುದು ಒಳ್ಳೆಯದು.
ಹಣ್ಣುಗಳು: ಮನೆಗೆ ಹಣ್ಣುಗಳನ್ನು ತನ್ನಿ
ಡ್ರೈಫ್ರೂಟ್ಸ್: ನವರಾತ್ರಿಯ ಪೂಜೆಯಲ್ಲಿ ಡ್ರೈ ಫ್ರೂಟ್ಸ್ ಬಳಸಲಾಗುವುದು. ಇದನ್ನು ಮನೆಗೆ ತನ್ನಿ.
ಹಾಲಿನ ಉತ್ಪನ್ನಗಳು: ಮನೆಗೆ ಹಾಲು, ಪನ್ನೀರ್ ಈ ಬಗೆಯ ಹಾಲಿನ ಉತ್ಪನ್ನಗಳನ್ನು ತನ್ನಿ.
ಸಾಬುದಾನ: ನವರಾತ್ರಿ ಉಪವಾಸ ಮಾಡುವವರು ಸಾಬುದಾನದಿಮದ ಮಾಡಿದ ಆಹಾರ ಸೇವಿಸುತ್ತಾರೆ.
ಪ್ರತಿದಿನ ದೇವರಿಗೆ ದೀಪ ಹಚ್ಚಿ
ಪ್ರತಿದಿನ ಬೆಳಗ್ಗೆ ಸಂಜೆ ದೇವರಿಗೆ ದೀಪ ಹಚ್ಚಿ, ದುರ್ಗಾ ಮಂತ್ರಗಳನ್ನು ಪಠಿಸಿ.
ನವರಾತ್ರಿಯ ಸಮಯದಲ್ಲಿ ಏನು ಮಾಡಬಾರದು?
ನವರಾತ್ರಿ ಪೂಜೆ ಸಮಯದಲ್ಲಿ ನಿದ್ರಿಸಬೇಡಿ, ಬೆಳಗ್ಗೆ ಬೇಗ ಎದ್ದು ಪೂಜಾ ಕಾರ್ಯಗಳನ್ನು ಮಾಡಿ
ಮನೆಯಲ್ಲಿ ಜಗಳವಾಡಬೇಡಿ, ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಬೇಕು
ಶೇವಿಂಗ್ , ಕಟ್ಟಿಂಗ್ ಮಾಡಬಾರದು
ನವರಾತ್ರಿಯ ಸಮಯದಲ್ಲಿ ಶೇವಿಂಗ್, ಕಟ್ಟಿಂಗ್ ಮಾಡಬೇಡಿ, ಉಗುರು ಕತ್ತರಿಸಬೇಡಿ.
ನಿಮ್ಮ ಕೈಯಲ್ಲಾದ ದಾನ ಮಾಡಿ
ನೀವು ಈ ಸಮಯದಲ್ಲಿ ನಿಮ್ಮ ಶಕ್ತಿಗೆ ಅನುಸಾರ ದಾನ ಮಾಡಿ.



Click it and Unblock the Notifications