Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2024: ಕರ್ನಾಟಕದ ಇಬ್ಬರು ಆಯ್ಕೆ..! ಸಂಪೂರ್ಣ ಪಟ್ಟಿ ಇಲ್ಲಿದೆ
ಸೆಪ್ಟೆಂಬರ್ 5ರಂದು ದೇಶದಾದ್ಯಂತ ಶಿಕ್ಷಕರ ದಿನ ಆಚರಿಸಲಾಗುತ್ತದೆ. ಪಾಠ ಹೇಳಿಕೊಟ್ಟು ಜೀವನದ ದಾರಿ ತೋರಿಸಿರುವ ಶಿಕ್ಷಕರನ್ನು ನೆನೆಯುವ ದಿನವಾಗಿದೆ. ಈ ದಿನ ಶಿಕ್ಷಕರಿಗೆ ಗೌರವ ಸಲ್ಲಿಸಿ ಅವರ ಕೊಡುಗೆಯನ್ನು ನೆನೆಯಲಾಗುತ್ತದೆ. ಒಂದು ಸಮಾಜ ಉತ್ತಮ ನಾಗರೀಕರ ಹೊಂದಿದ್ದರೆ ಅಲ್ಲಿ ಶಿಕ್ಷಕರ ಪಾತ್ರವೂ ಬಹಳವಾಗಿರುತ್ತೆ. ಶಾಲೆಯಲ್ಲಿ ಮಕ್ಕಳನ್ನು ತಿದ್ದಿ ತೀಡಿ ಅವರನ್ನು ಉತ್ತಮ ನಾಗರೀಕರನ್ನಾಗಿ ಮಾಡುವುದು ಈ ಶಿಕ್ಷಕರೇ.
ಇನ್ನು ಸೆಪ್ಟೆಂಬರ್ 5, 2024 ರಂದು ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 50 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2024 ನೀಡಿ ಗೌರವಿಸುವುದು ನಡೆದುಕೊಂಡು ಬಂದಿದೆ. ಪ್ರತಿ ವರ್ಷ ಉತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ಗೌರವವಾಗಿ ಪ್ರಶಸ್ತಿ ನೀಡಲಾಗುತ್ತದೆ. ಹಲವು ಆಯಾಮಗಳನ್ನು ಗಣನೆಗೆ ತೆಗೆದುಕೊಂಡು ಅತ್ಯುತ್ತಮ ಶಿಕ್ಷಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಬಾರಿಯ ಪ್ರಶಸ್ತಿಗೆ 50 ಮಂದಿ ಶಿಕ್ಷಕರನ್ನು ಸಹ ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಕರ್ನಾಟಕದ ಇಬ್ಬರು ಶಿಕ್ಷಕರು ಈ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕದಿಂದ ಆಯ್ಕೆಯಾಗಿರುವ ಶಿಕ್ಷಕರು ಯಾರು?
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ರಾಜ್ಯದಿಂದ ಇಬ್ಬರು ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಮೈಸೂರಿನ ಹುಣಸೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಚ್.ಎನ್ ಗಿರೀಶ್ ಹಾಗೂ ದೊಡ್ಡಬಳ್ಳಾಪುರದ ಬಾಷೆಟ್ಟಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆರ್. ನಾರಾಯಣಸ್ವಾಮಿ ಅವರನ್ನು ಈ ವರ್ಷದ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ರಾಜ್ಯದಿಂದ ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2024 ತಮ್ಮ ವಿದ್ಯಾರ್ಥಿಗಳ ಜೀವನ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ನೀಡಲಾಗುತ್ತದೆ. ಈ ಪ್ರಶಸ್ತಿಗೆ ಆಯ್ಕೆಯಾದವರು 50,000 ರೂಪಾಯಿ ನಗದು, ಬೆಳ್ಳಿ ಪದಕ ಮತ್ತು ಪ್ರಶಂಸಾ ಪತ್ರವನ್ನು ಪಡೆಯುತ್ತಾರೆ.
ಈ ಪ್ರಶಸ್ತಿಯು ಭಾರತದಾದ್ಯಂತ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್‌ಗಳ ಎಲ್ಲಾ ಶಿಕ್ಷಕರಿಗೆ ಮುಕ್ತವಾಗಿದೆ. ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳನ್ನು ಒಳಗೊಂಡಿರುತ್ತದೆ: ಪ್ರಾಥಮಿಕ ಶೋಧನಾ ಸಮಿತಿಯಿಂದ ಆರಂಭಿಕ ಸ್ಕ್ರೀನಿಂಗ್, ನಂತರ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಂದ ತೀರ್ಪುಗಾರರು ಅಂತಿಮವಾಗಿ ಆಯ್ಕೆ ಮಾಡುತ್ತಾರೆ.
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2024 ಕ್ಕೆ ಆಯ್ಕೆಯಾದ ಆಯ್ದ ಶಿಕ್ಷಕರ ಹೆಸರು ಇಲ್ಲಿದೆ
- ಹಿಮಾಚಲ ಪ್ರದೇಶ: ಸುನಿಲ್ ಕುಮಾರ್
- ಪಂಜಾಬ್: ಪಂಕಜ್ ಕುಮಾರ್ ಗೋಯಲ್, ರಾಜಿಂದರ್ ಸಿಂಗ್
- ರಾಜಸ್ಥಾನ: ಬಲ್ಜಿಂದರ್ ಸಿಂಗ್ ಬರಾರ್, ಹುಕುಮ್ ಚಂದ್ ಚೌಧರಿ
- ಉತ್ತರಾಖಂಡ: ಕುಸುಮ್ ಲತಾ ಗಾರಿಯಾ
- ಗೋವಾ: ಚಂದ್ರಲೇಖಾ ದಾಮೋದರ್ ಮಿಸ್ತ್ರಿ
- ಮಧ್ಯಪ್ರದೇಶ: ಮಾಧವ್ ಪ್ರಸಾದ್ ಪಟೇಲ್, ಸುನೀತಾ ಗೋಧಾ
- ಗುಜರಾತ್: ಚಂದ್ರೇಶ್ ಕುಮಾರ್ ಭೋಲಾಶಂಕರ್ ಬೋರಿಸಾಗರ್, ವಿನಯ್ ಶಶಿಕಾಂತ್ ಪಟೇಲ್
- ಛತ್ತೀಸ್‌ಗಢ: ಶಾರದಾ
- ಒಡಿಶಾ: ದ್ವಿತಿ ಚಂದ್ರ ಸಾಹು, ಸಂತೋಷ್ ಕುಮಾರ್ ಕರ್
- ಪಶ್ಚಿಮ ಬಂಗಾಳ: ಆಶಿಶ್ ಕುಮಾರ್ ರಾಯ್, ಪ್ರಶಾಂತ್ ಕುಮಾರ್ ಮಾರಿಕ್
- ಜಮ್ಮು ಮತ್ತು ಕಾಶ್ಮೀರ: ಉರ್ಫಾನಾ ಅಮೀನ್
- ಉತ್ತರ ಪ್ರದೇಶ: ರವಿಕಾಂತ್ ದ್ವಿವೇದಿ, ಶ್ಯಾಮ್ ಪ್ರಕಾಶ್ ಮೌರ್ಯ
- ಬಿಹಾರ: ಡಾ ಮೀನಾಕ್ಷಿ ಕುಮಾರಿ, ಸಿಕಂದರ್ ಕುಮಾರ್ ಸುಮನ್ ಸುಮಾ
- ಅಂಡಮಾನ್ ಮತ್ತು ನಿಕೋಬಾರ್ ಜವಾಹರ್ ನವೋದಯ ವಿದ್ಯಾಲಯ: ಸುನಿತಾ ಗುಪ್ತಾ
- ಕೇಂದ್ರೀಯ ವಿದ್ಯಾಲಯ: ಚಾರು ಶರ್ಮಾ, ಅಶೋಕ್ ಸೆಂಗುಪ್ತ
- ಕೇರಳ: ಜಿನು ಜಾರ್ಜ್, ಶಿವಪ್ರಸಾದ್
- ಆಂಧ್ರ ಪ್ರದೇಶ: ಶ್ರೀನಿವಾಸ ರಾವ್, ಸುರೇಶ್ ಕುನಾಟಿ
- ತೆಲಂಗಾಣ: ಪ್ರಭಾಕರ್ ರೆಡ್ಡಿ, ಸಂಪತ್ ಕುಮಾರ್



Click it and Unblock the Notifications











