Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
24 ವರ್ಷಗಳ ಬಳಿಕ ಶ್ರಾವಣ ಸೋಮವಾರದಂದು ಬಂದಿದೆ ನಾಗರಪಂಚಮಿ: ಪ್ರದೋಷ ಕಾಲದಲ್ಲಿ ಪೂಜಾ ವಿಧಾನ
ಈ ವರ್ಷ ಶ್ರಾವಣ ಮಾಸ ಶಿವ ಭಕ್ತಿರಿಗೆ ತುಂಬಾನೇ ವಿಶೇಷವಾಗಿದೆ, ಅಧಿಕ ಮಾಸ ಬಂದಿದ್ದ ಕಾರಣ 2 ತಿಂಗಳು ಶ್ರಾವಣ ಮಾಸ ಬಂದಿದೆ. ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಕೂಡ ಆಗಸ್ಟ್ 21ಕ್ಕೆ ನಾಗರ ಪಂಚಮಿ ಬಂದಿದೆ. ಈ ಬಾರಿ ನಾಗರ ಪಂಚಮಿ ಹಬ್ಬದ ವಿಶೇಷವೆಂದರೆ ಶ್ರಾವಣ ಸೋಮವಾರದಂದೇ ಬಂದಿದೆ. ಅದರಲ್ಲೂ ಸುಮಾರು 24 ವರ್ಷಗಳ ಬಳಿಕ ಶ್ರಾವಣ ಸೋಮವಾರದಂದು ನಾಗರ ಪಂಚಮಿ ಬಂದಿದೆ. ಆದ್ದರಿಂದ ಈ ಪ್ರದೋಷ ಕಾಲದಲ್ಲಿ ಶಿವನಿಗೆ ಮಾಡುವ ಪೂಜೆ ಮತ್ತಷ್ಟು ವಿಶೇಷವಾಗಿದೆ.

ನಾಗರ ಪಂಚಮಿಯಂದು ನಾಗದೇವರನ್ನು ಪೂಜಿಸಲಾಗುವುದು. ನಾಗನನ್ನೇ ಶಿವ ಮಾಲೆಯಾಗಿ ಧರಿಸಿದ್ದಾನೆ. ನಾಗನನ್ನು ಪೂಜಿಸುವುದರಿಂದ ಶಿವನ ಕೃಪೆಯೂ ದೊರೆಯಲಿದೆ, ಈ ದಿನ 7ನೇ ಶ್ರಾವಣ ಸೋಮವಾರ ಆಚರಿಸಲಾಗುವುದು. ಈ ದಿನ ನೀವು ಶ್ರಾವಣ ಸೋಮವಾರ ವ್ರತ ಪಾಲಿಸುವುದರಿಂದ ನಿಮಗೆ ಸಿಗುವ ಪೂಜೆಯ ಫಲ ದ್ವಿಗುಣವಾಗಲಿದೆ. ಬೆಳಗ್ಗೆ ನಾಗಮೂರ್ತಿಗೆ ಪೂಜೆಯನ್ನು ಮಾಡಿ ಸಂಜೆ ಹೊತ್ತಿನಲ್ಲಿ ಶಿವನ ಆರಾಧನೆ ಹೇಗೆ ಮಾಡಬೇಕು ಎಂದು ನೋಡೋಣ ಬನ್ನಿ:
24 ವರ್ಷಗಳ ನಂತರ ಶ್ರಾವಣ ಸೋಮವಾರದಂದು ಬಂದಿದೆ ನಾಗರ ಪಂಚಮಿ
ಆಗಸ್ಟ್ 21ಕ್ಕೆ 7ನೇ ಶ್ರಾವಣ ಸೋಮವಾರ, ಇದೇ ದಿನ ನಾಗರ ಪಂಚಮಿ, ಈ ದಿನ ಶಿವಯೋಗವಿದೆ. ಶಿವ ಯೋಗವನ್ನು ಅತ್ಯಂತ ಶುಭ ಯೋಗ ಎಂದು ಪರಿಗಣಿಸಲಾಗಿದೆ. ಈ ದಿನ ಚಿತ್ರ ನಕ್ಷತ್ರವೂ ಇರುತ್ತದೆ. 24 ವರ್ಷಗಳ ಬಳಿಕ ಇಂಥದ್ದೊಂದು ಶುಭ ದಿನ ಬಂದಿದೆ.
ಈ ದಿನ ಶಿವ ಪೂಜೆಗೆ ಶುಭ ಮುಹೂರ್ತ
ಪ್ರದೋಷ ಕಾಲ ಮುಹೂರ್ತ: 21 ಆಗಸ್ಟ್ 2023 ಸಂಜೆ 05:27 ರಿಂದ 08:27 ರವರೆಗೆ
ಶ್ರಾವಣ ಮಾಸದ ಸೋಮವಾರದಂದು ಪ್ರದೋಷ ಪೂಜೆ
* ಶ್ರಾವಣ ಸೋಮವಾರ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆ ಧರಿಸಬೇಕು.
* ನಂತರ ದೀಪವನ್ನು ಹಚ್ಚಿ ಪೂಜೆ ಮಾಡಿ ನಂಗರ ನಾಗಮೂರ್ತಿಗಳಿಗೆ ಪೂಜೆಯನ್ನು ಸಲ್ಲಿಸಬೇಕು.
* ಈ ದಿನ ಉಪವಾಸವಿದ್ದರೆ ತುಂಬಾ ಒಳ್ಳೆಯದು.
* ನಂತರ ಸಂಜೆ, ಪ್ರದೋಷ ಕಾಲದ ಪೂಜೆಯ ಸಮಯದಲ್ಲಿ, ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಗಂಗಾಜಲವನ್ನು ಬೆರೆಸಿ ಪಂಚಾಮೃತದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು.
* ಶಿವನಿಗೆ ಬಿಲ್ವೆಪತ್ರೆಯನ್ನು ಅರ್ಪಿಸಿ.
* ಶಿವನಿಗೆ ಆರತಿ ಮಾಡಿ ಶಿವನ ಮಂತ್ರಗಳನ್ನು ಪಠಿಸಿ.



Click it and Unblock the Notifications
