Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಅಯೋಧ್ಯೆ ರಾಮನ ವಿಗ್ರಹ ಸೃಷ್ಟಿಕರ್ತ ಮೈಸೂರಿನ ಶಿಲ್ಪಿ.! ಯಾರಿವರು ಗೊತ್ತಾ?
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ರಾಮನ ಮೂರ್ತಿ ಪ್ರತಿಷ್ಠಾಪನೆಯಾಗುವ ಸಮಯಕ್ಕೆ ಎಲ್ಲರೂ ಕಾತುರರಿಂದ ಕಾಯುತ್ತಿದ್ದಾರೆ. ಶ್ರೀ ರಾಮನ ಭಕ್ತರಲ್ಲಿ ಸಂಭ್ರಮ ಇಮ್ಮಡಿಯಾಗಿದ್ದು, ಸಮರೋಪಾದಿಯಲ್ಲಿ ಅಯೋಧ್ಯೆ ಈ ಸಂಭ್ರಮಕ್ಕೆ ತಯಾರಾಗುತ್ತಿದೆ.
ಇನ್ನು ಅಯೋಧ್ಯೆಯ ರಾಮನ ಮೂರ್ತಿ ಕೆತ್ತನೆಯಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಶ್ರಮವಿದೆ. ದೇಶದ ಮೂವರು ಪ್ರಖ್ಯಾತ ಶಿಲ್ಪಿಗಳ ಜೊತೆ ಅರುಣ್ ಯೋಗಿರಾಜ್ ಸಹ ಒಬ್ಬರಾಗಿದ್ದಾರೆ. ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೂಡ ಪ್ರತ್ಯೇಕ ಮೂರ್ತಿ ಕೆತ್ತನೆ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕು ಕೃಷ್ಣಶಿಲೆಯಲ್ಲಿ ಮೂರ್ತಿ ನಿರ್ಮಾಣ ಕಾರ್ಯ ಮಾಡಲಾಗಿದ್ದು, ಪ್ರತಿಮೆಯನ್ನು ಪೂರ್ಣಗೊಳಿಸಲು 6 ತಿಂಗಳು ತೆಗೆದುಕೊಂಡಿದ್ದಾರೆ.

ಅವರು ಈಗಾಗಲೇ ಕೆಲಸವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಅವರು ಮೂರ್ತಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ಯೋಗಿರಾಜ್, "ನಾನು ಕೆತ್ತಿದ ವಿಗ್ರಹ ಸೇರಿದಂತೆ ಎರಡು ವಿಗ್ರಹಗಳು ಪೂರ್ಣಗೊಂಡಿವೆ ಮತ್ತು ಒಂದು ವಿಗ್ರಹ ತಯಾರಿಕೆ ಅಂತಿಮ ಹಂತದಲ್ಲಿದೆ. ಟ್ರಸ್ಟ್ ಅಂತಿಮ ವಿಗ್ರಹವನ್ನು ಆಯ್ಕೆ ಮಾಡುತ್ತದೆ, ಆದರೆ ನನ್ನ ಕೆಲಸ ಮತ್ತು ಭರವಸೆಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ'' ಎಂದಿದ್ದಾರೆ.
ಶಂಕರಾಚಾರ್ಯರ ಪ್ರತಿಮೆ
"ಬಾಲರಾಮನ ಸೃಷ್ಟಿ ಮಾಡಿಕೊಳ್ಳುವುದೇ ದೊಡ್ಡ ಚಾಲೆಂಜ್ ಆಗಿತ್ತು. ಶ್ರೀರಾಮನ ಬಾಲಕ ಸ್ವರೂಪವನ್ನು ನಾವು ನೋಡಿರಲಿಲ್ಲ. ಆದರೆ, ಅದನ್ನ ಜನರ ಮನಸ್ಸಿಗೆ ಮುಟ್ಟುವಂತೆ ಮೂರ್ತಿ ಸೃಷ್ಟಿಸಬೇಕಿತ್ತು. ಬಾಲಕನ ದೇಹ ಸ್ವರೂಪ, ಶ್ರೀರಾಮನ ಮುಖ ಗೋಚರಿಸುವಂತೆ ಮೂರ್ತಿಯನ್ನು ಕೆತ್ತಿದ್ದೇನೆ. ಈ ಹಿಂದೆ ನಾನು ಕೆತ್ತನೆ ಮಾಡಿದ್ದ ಶಂಕರಾಚಾರ್ಯರರ ಪ್ರತಿಮೆ, ಸುಭಾಷ್ ಚಂದ್ರ ಬೋಸ್ ಪ್ರತಿಮೆಗಳು ಈ ಅವಕಾಶದಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದಿದ್ದಾರೆ.
ಎಂಬಿಎ ಪದವಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದರೂ 2008ರಲ್ಲಿ ಪೂರ್ಣಾವಧಿ ಶಿಲ್ಪಕಲೆಗೆ ಮರಳಿದರು. ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಶಾಸನದ ಹೊರತಾಗಿ, ಅವರು ತಮ್ಮ ತವರು ಮೈಸೂರಿನಲ್ಲಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ 14.5 ಅಡಿ ಬಿಳಿ ಅಮೃತಶಿಲೆಯ ಮೂರ್ತಿ ಮತ್ತು ಸ್ವಾಮಿ ರಾಮಕೃಷ್ಣ ಪರಮಹಂಸರ ಬಿಳಿ ಅಮೃತಶಿಲೆಯ ಮೂರ್ತಿಯನ್ನು ಸಹ ಕೆತ್ತಿದ್ದಾರೆ.
ಆರು ತಿಂಗಳ ಕಾಲ ಅರುಣ್ ರಾಮ ಮೂರ್ತಿಯ ಕೆತ್ತನೆಗೆ ಕೆಲಸ ಮಾಡಿದ್ದರು. ಪೀಠವನ್ನು ಒಳಗೊಂಡಿರುವ ಎಂಟು ಅಡಿ ಎತ್ತರದಲ್ಲಿ, ವಿಗ್ರಹವು ಮೂರೂವರೆ ಅಡಿ ಅಗಲ ಹೊಂದಿದ್ದು, ಅದರ ಸುತ್ತಲು ವಿಸ್ತಾರವಾದ 'ಪ್ರಭಾವಳಿ' ಅನ್ನು ಒಳಗೊಂಡಿದೆ. ಪ್ರತಿಮೆಯ ವಿವರವಾದ ಕರಕುಶಲತೆಯು ತನ್ನ ಬಾಲ್ಯದಲ್ಲಿ ಭಗವಾನ್ ರಾಮನನ್ನು ಚಿತ್ರಿಸುತ್ತದೆ, ಬಿಲ್ಲು ಮತ್ತು ಬಾಣವನ್ನು ಹಿಡಿದು, ಅವನ ದೈವಿಕ ವ್ಯಕ್ತಿತ್ವವನ್ನು ಸಂಕೇತಿಸುತ್ತದೆ.
'ನನಗೆ ನೀಡಿದ ವಿನ್ಯಾಸದ ಆಧಾರದ ಮೇಲೆ ನನ್ನ ಕೈಗಳಿಂದ ಮೂರ್ತಿಯನ್ನು ಸೂಕ್ಷ್ಮವಾಗಿ ಕೆತ್ತಿದ್ದೇನೆ ಮತ್ತು ಯಾವುದೇ ಯಂತ್ರವನ್ನು ಬಳಸಿಲ್ಲ' ಎಂದು ಯೋಗಿರಾಜ್ ಹೇಳಿದ್ದಾರೆ. ಜನವರಿ 22 ರಂದು ಮಹಾಮಸ್ತಕಾಭಿಷೇಕ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ನೂರಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಅಮೃತಶಿಲೆಯಿಂದ ಪೀಠ ನಿರ್ಮಾಣ
ರಾಮ್ ಲಲ್ಲಾ ಮೂರ್ತಿಯನ್ನು ಅಮೃತಶಿಲೆಯಿಂದ ಮಾಡಿದ ಕಮಲದ ಹೂವಿನ ಪೀಠದ ಮೇಲೆ ಇರಿಸಲಾಗುವುದು ಎಂದು ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ, ಇದನ್ನು ಗರ್ಭಗುಡಿಯಲ್ಲಿಯೂ ಸ್ಥಾಪಿಸಲಾಗಿದೆ. ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ರಾಮ್ ಲಲ್ಲಾ ಹಣೆಯನ್ನು ಸ್ಪರ್ಶಿಸಿ ಗರ್ಭಗುಡಿಯನ್ನು ಬೆಳಗಿಸುವಂತೆ ಈ ಪೀಠವನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.



Click it and Unblock the Notifications