Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಬೆಂಗಳೂರಿನಲ್ಲಿರುವ ಈ ಶಿವ ದೇವಾಲಯದಲ್ಲಿ ಶಿವಲಿಂಗಕ್ಕೆ ತುಪ್ಪ ಹಾಕಿದರೆ ಬೆಣ್ಣೆಯಾಗುತ್ತೆ!
ಭಾರತ ಪುಣ್ಯ ಭೂಮಿಯಲ್ಲಿ ಸಾವಿರಾರು ಪುಣ್ಯ ಕ್ಷೇತ್ರಗಳಿವೆ, ಪ್ರತಿಯೊಂದು ಕ್ಷೇತ್ರವು ಅಲ್ಲಿಯ ಪವಾಡ ಶಕ್ತಿಗಳಿಂದಾಗಿ ಭಕ್ತರನ್ನು ಆಕರ್ಷಿಸುತ್ತದೆ. ಅಲ್ಲಿ ನಡೆಯುವ ಪವಾಡಗಳು ವಿಜ್ಞಾನದ ಲೆಕ್ಕಚಾರಕ್ಕೂ ನಿಲುಕುವುದಿಲ್ಲ. ಬೆಣ್ಣೆಯಿಂದ ತುಪ್ಪವಾಗುತ್ತೆ ಎಂಬುವುದು ನಮಗೆ ಗೊತ್ತು, ಆದರೆ ತುಪ್ಪ ಬೆಣ್ಣೆಯಾಗಲು ಸಾಧ್ಯವೇ? ಅದು ಹೇಗೆ ಸಾಧ್ಯ ಎಂದು ನೀವು ಕೇಳುವುದಾದರೆ ತುಪ್ಪ ಬೆಣ್ಣೆ ಮಾಡುವ ದೇವಾಲಯ ಇದೆ ಗೊತ್ತಾ? ಈ ದೇವಾಲಯ ಇರುವುದು ನಮ್ಮ ಬೆಂಗಳೂರಿನಲ್ಲಿ.
ಗವಿಗಂಗಾದೇಶ್ವರ ದೇವಾಲಯ ಬೆಂಗಳೂರಿನಲ್ಲಿರುವ ಪ್ರಸಿದ್ಧ ಶಿವ ಕ್ಷೇತ್ರವಾಗಿದೆ. ಇಲ್ಲಿಯ ಪವಾಡಗಳು ಇಂದಿಗೂ ಗೋಚರಿಸುತ್ತೆ ಅಲ್ಲದೆ ಭಕ್ತರಲ್ಲಿ ವಿಸ್ಮಯವನ್ನು ಉಂಟು ಮಾಡುವ ಪವಾಡ ಈ ದೇವಾಲಯದಲ್ಲಿ ನಡೆಯುತ್ತದೆ.

ಗವಿ ಗಂಗಾಧರೇಶ್ವರನಿಗೆ ಅರ್ಪಿಸಿದ ತುಪ್ಪ ಬೆಣ್ಣೆಯಾಗಿ ಬದಲಾಗುತ್ತೆ
ಗವಿಗಂಗಾದೇಶ್ವರನಿಗೆ ಅರ್ಪಿಸುವ ತುಪ್ಪ ಇಲ್ಲಿ ಬೆಣ್ಣೆಯಾಗುತ್ತದೆ ಎಂದು ಹೇಳಲಾಗುವುದು, ನಂಬುವುದು ಕಷ್ಟ ಅಲ್ವಾ? ಹೌದು ಅಂಥದ್ದೊಂದು ಪವಾಡ ಈ ಶಿವ ದೇವಾಲಯದಲ್ಲಿ ನಡೆಯುತ್ತದೆ. ಈ ದೇವಾಲಯದಲ್ಲಿ ಶಿವಲಿಂಗಕ್ಕೆ ತುಪ್ಪವನ್ನು ಹಚ್ಚಿದರೆ ತುಪ್ಪ ಬೆಣ್ಣೆಯಾಗುತ್ತೆ, ಈ ದೇವಾಲಯದಲ್ಲಿ ಅಂಥದ್ದೊಂದು ಅಚ್ಚರಿ ನಡೆಯುತ್ತದೆ.
ಮಕರ ಸಂಕ್ರಾಂರಿಗೆ ಸೂರ್ಯ ರಶ್ಮಿ ಇಲ್ಲಿಯ ಗರ್ಭಗುಡಿಯನ್ನು ಪ್ರವೇಶಿಸಿ ಶಿವಲಿಂಗದ ಮೇಲೆ ಬೀಳುವುದು ಮತ್ತೊಂದು ವಿಶೇಷವಾಗಿದೆ
ಹೌದು ಇಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಗೆ ಇಂಥದ್ದೊಂದು ಪವಾಡ ನಡೆಯುತ್ತದೆ.ಈ ಚಮತ್ಕಾರ ನೋಡಲು ಸಾಕ್ಷಟು ಭಕ್ತರು ಕೂಡ ಬರುತ್ತಾರೆ. ಸಂಜೆ ಹೊತ್ತಿಗೆ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಬೀಳುತ್ತದೆ, ಆದರೆ ಈ ವರ್ಷ ಇಂಥದ್ದೊಂದು ಪವಾಡ ನೋಡಲು ಸಾಧ್ಯವಾಗಲಿಲ್ಲ, ಮೋಡದ ಕಾರಣದಿಂದಾಗಿ ಸುರ್ಯ ರಶ್ಮಿಗಳು ಶಿವಲಿಂಗದ ಮೇಲೆ ಬಿದ್ದಿಲ್ಲ. ಇದರಿಂದಾಗಿ ಈ ದೃಶ್ಯ ಕಣ್ತುಂಬಿಗಳು ನಿಂತಿದ್ದ ಭಕ್ತರಿಗೆ ನಿರಾಸೆ ಉಂಟಾಗಿತ್ತು, ಅಲ್ಲದೆ ಸೂರ್ಯ ರಶ್ಮಿಗಳು ಶಿವಲಿಂಗದ ಮೇಲೆ ಬೀಳದೆ ಇರುವುದು ಒಳ್ಳೆಯ ಸೂಚನೆಯಲ್ಲ, ಇದು ಮುಂಬರುವ ಕಷ್ಟಗಳ ಸೂಚನೆ ಎಂಬುವುದಾಗಿ ಕೂಡ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿ ಸಂಕ್ರಮಣಕ್ಕೆ ಸಂಜೆ ಹೊತ್ತಿ ಸೂರ್ಯ ರಶ್ಮಿ ಶಿವಲಿಂಗದ ಮೂಲಕ ಹಾದು ಹೋಗುತ್ತದೆ. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ಸಾಗುವಾಗ ಸೂರ್ಯಕಿರಣಗಳು ಗವಿಗಂಗಾಧೇಶ್ವರ ಮೇಲೆ ಬೀಳುತ್ತದೆ.
ಋಷಿಗಳು ಇಲ್ಲಿ ಬಂದು ಧ್ಯಾನ ಮಾಡಿದ್ದರು ಪೌರಾಣಿಕ ಕತೆಯಲ್ಲಿ ಹೇಳಲಾಗಿದೆ
ಗೌತಮ ಋಷಿಯು ಶಿವನ ಕೃಪೆಗೆ ಪಾತ್ರರಾಗಲು ಇಲ್ಲಿ ಧ್ಯಾನ ಮಾಡಿದ್ದರು ಎಂದು ಹೇಳಲಾಗುತರ್ತದೆ, ಭಾರಧ್ವಜ ಮುನಿಗಗಳು ಕೂಡ ಇಲ್ಲಿ ಧ್ಯಾನ ಮಾಡಿ ಶಿವನಿಂದ ವರವನ್ನು ಪಡೆದರು ಎಂದು ಹೇಳಲಾಗುತ್ತದೆ.
ಹೆಸರೇ ಸೂಚಿಸುವಂತೆ ಇದು ಗುಹೆಯೊಳಗಡೆ ಇರುವ ದೇವಾಲಯವಾಗಿದೆ, ಈ ದೇಚಾಲಯವನ್ನು 9ನೇ ಶತಮಾನದಲ್ಲಿ ಕಟ್ಟಲಾಯ್ತು, 16ನೇ ಶತಮಾನದಲ್ಲಿ ನವೀಕರಿಸಲಾಯಿತು ಎಂದು ಹೇಳಾಗುವುದು.
ಇಲ್ಲಿ ಸೂರ್ಯಾಸ್ತಕ್ಕೆ 7-8 ನಿಮಿಷ ಮುನ್ನ ಸುರ್ಯ ಕಿರಣಗಳು ಶಿವಲಿಂಗದ ಮೇಲೆ ಬೀಳುತ್ತದೆ. ನಮ್ಮ ಬೆಂಗಳೂರಿನಲ್ಲಿರುವ ಶಿವ ದೇವಾಲಯವು ವಿಶ್ವ ಪ್ರಸಿದ್ಧವಾದ ದೇವಾಲಯವಾಗಿದೆ. ಈ ದೇವಾಲಯಕ್ಕೆ ಬಂದು ಭಕ್ತರು ಭಕ್ತಿಯಿಂದ ಪ್ರಾರ್ಥಿಸಿದರೆ ಅವರ ಇಷ್ಟಾರ್ಥಗಳು
ನೆರವೇರುವುದು, ಕಷ್ಟ ನಿವಾರಣೆಯಾಗುವುದು ಎಂಬುವುದನ್ನು ಭಕ್ತರು ನಂಬುತ್ತಾರೆ.
ನೀವು ಬೆಂಗಳೂರಿನಲ್ಲಿರುವ ಈ ದೇವಾಲಯಕ್ಕೆ ಹೋಗಿಲ್ಲ ಎಂದರೆ ಒಮ್ಮೆ ಭೇಟಿ ನೀಡಲೇಬೇಕಾದ ಪವಿತ್ರ ಕ್ಷೇತ್ರವಿದು. ಮಹಾಶಿವರಾತ್ರಿ , ಮಕರ ಸಂಕ್ರಾಂತಿ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ.



Click it and Unblock the Notifications
