Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಡು ಕೆಂಪು ಬಣ್ಣಕ್ಕೆ ತಿರುಗಿದ ಇರಾನ್ ಸಮುದ್ರ..! ವಿಡಿಯೋ ನೋಡಿದರೆ ಅಚ್ಚರಿ ಆಗೋದು ಖಚಿತ
ಪ್ರಕೃತಿಯಲ್ಲಿ ಎಷ್ಟೆಲ್ಲಾ ವಿಚಿತ್ರ ವಿದ್ಯಮಾನಗಳು ಸಂಭವಿಸುತ್ತವೆ ಅನ್ನೋದನ್ನು ನಾವು ಊಹಿಸಲು ಕೂಡ ಸಾಧ್ಯವಾಗುವುದಿಲ್ಲ. ಕೆಲವೊಂದು ಘಟನೆಗಳು ನಮ್ಮನ್ನು ಅಚ್ಚರಿಗೆ ತಳ್ಳುವ ಜೊತೆಗೆ ಒಂದಿಷ್ಟು ಪ್ರಶ್ನೆಗಳ ಹುಟ್ಟುಹಾಕುತ್ತವೆ. ಹಾಗೆ ಪ್ರಕೃತಿಯ ವಿಸ್ಮಯಗಳು ನಿತ್ಯವೂ ಕುತೂಹಲಗಳ ಮೂಡಿಸುತ್ತಲೇ ಇರುತ್ತದೆ. ಇಲ್ಲಿಯೂ ಕೂದ ಈಗೊಂದು ವಿಡಿಯೋ ಎಲ್ಲರ ಅಚ್ಚರಿಗೆ ಕಾರಣವಾಗುತ್ತಿದೆ.
ನೀವು ಅನರೀಕ್ಷಿತವಾಗಿ ಮಳೆಯಾಗುವ ಸಂದರ್ಭ ನೋಡಿರಬಹುದು, ಹಾಗೆ ಬಿಸಿಲಿನಲ್ಲಿ ಮಳೆ ಬರುವುದು, ಮೀನಿನ ಮಳೆ, ದೊಡ್ಡ ದೊಡ್ಡ ಆಲಿ ಕಲ್ಲುಗಳ ಮಳೆ, ಆಮ್ಲ ಮಳೆಯನ್ನು ಸಹ ನೋಡಿರಬಹುದು, ಆದ್ರೆ ಎಂದಾದರು ರಕ್ತದ ಮಳೆ ನೋಡಿದ್ದೀರಾ? ಭಾರೀ ಮಳೆಯ ಕಾರಣ ಇರಾನ್‌ನ ಕಡಲ ತೀರ ಕಡು ಕೆಂಪು ಬಣ್ಣಕ್ಕೆ ತಿರುಗಿ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿರುವುದು ನಾವು ನೋಡಬಹುದು.

ಈ ರೀತಿಯ ಅನಿರೀಕ್ಷಿತ ಬೆಳವಣಿಗೆ ವಿಶ್ವವನ್ನೇ ದಂಗಾಗಿಸಿದೆ. ಇಡೀ ಸಮುದ್ರ ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ಕಂಡು ಜನರು ಆಘಾತಕ್ಕೆ ಒಳಗಾಗಿದ್ದಾರೆ. ಅಲ್ಲಿನ ನೀರು ರಕ್ತವನ್ನೇ ಹೋಲುವಂತಹ ಕೆಂಪು ಬಣ್ಣಕ್ಕೆ ತಿರುಗಿದೆ. ಈ ಕಡಲಿನ ಹತ್ತು ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡುಗರ ಎದೆ ನಡುಗಿಸುವಂತಿದೆ.
ಹಾರ್ಮುಜ್ ದ್ವೀಪದ ಸಿಲ್ವರ್ ಮತ್ತು ರೆಡ್ ಬೀಚ್ ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ವಿಡಿಯೋ ತೋರಿಸಲಿದೆ. ಹಾಗೆ ಬಂಡೆಗಳ ನಡುವೆ ಹರಿಯುತ್ತಿರುವ ನೀರು ಕೂಡ ಕೆಂಪು ಬಣ್ಣದಿಂದ ಕೂಡಿರುವುದು ನೋಡಬಹುದು. ಈ ಸಮುದ್ರದ ನೀರು ಕೆಂಪಾಗಿರುವುದನ್ನು ಕಂಡ ನೆಟ್ಟಿಗರು ಇದು ಕೇಡುಗಾಲ ಹಾಗೆ ಅಪಾಯದ ಮುನ್ಸೂಚನೆ ಎಂದೆಲ್ಲಾ ಅಭಿಪ್ರಾಯ ಹೊರಹಾಕಿದ್ದಾರೆ.
ವಿಡಿಯೋದಲ್ಲಿ ಈ ಕಡಲಿನ ನೀರು ಸಂಪೂರ್ಣವಾಗಿ ಕೆಂಪಾಗಿರುವುದು ನೋಡಬಹುದು. ಈ ವಿಡಿಯೋ ಯಾವುದೇ ಕಾರಣಕ್ಕೆ ಎಡಿಟ್ ಮಾಡಲಾದ ಅಥವಾ ಎಐ ರಚಿತ ವಿಡಿಯೋ ಅಲ್ಲವೇ ಅಲ್ಲ. ಈ ಸಮುದ್ರದ ನೀರು ಕೆಂಪಾಗಿರುವುದು ನೈಸರ್ಗಿಕ ಕಾರಣದಿಂದಾಗಿ. ವಿಡಿಯೋದಲ್ಲಿ ನೋಡಿದಂತೆ ಸಮುದ್ರದ ದಡದಲ್ಲಿ ವ್ಯಕ್ತಿಯೊಬ್ಬ ಓಡಾಡುತ್ತಿದ್ದಾನೆ. ಹಾಗೆ ಸಮುದ್ರದ ನೀರು ಕೆಂಪಾಗಿದೆ. ಆದ್ರೆ ಗಮನವಿಟ್ಟು ನೋಡಿದರೆ ಇಡೀ ಸಮುದ್ರದ ನೀರು ಕೆಂಪಗಾಗಿಲ್ಲ. ಬದಲಿಗೆ ಸಮುದ್ರದ ಅಲೆ ಬರುವ ಭಾಗದ ನೀರು ಮಾತ್ರ ಕೆಂಪಾಗಿದೆ. ಉಳಿದಂತೆ ಹಿಂದೆ ನೀರು ಸರಿಯಾಗಿ ಶುದ್ಧವಾಗಿ ಕಾಣಿಸುತ್ತಿದೆ.
ಹಾಗಾದ್ರೆ ಸಮುದ್ರದ ನೀರು ಕೆಂಪಾಗಲು ಕಾರಣವಾಗಿದ್ದೇನು?
ಈ ಸಮುದ್ರದ ನೀರು ಕೆಂಪಾಗಲು ಯಾವುದೇ ಅತೀಂದ್ರಿಯ ಶಕ್ತಿ ಕಾರಣವಲ್ಲ. ಬದಲಿಗೆ ನೈಸರ್ಗಿಕವಾದ ಕಾರಣದಿಂದಾಗಿ ಈ ನೀರು ಕೆಂಪಾಗಿದೆ. ವರ್ಷದ ಮೊದಲ ಮಳೆ ಅಥವಾ ಆರಂಭಿಕ ಮಳೆಯಲ್ಲಿ ಕೆಂಪು ನೀರು ಕಾಣಿಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ರೈನ್‌ಬೋ ಐಲ್ಯಾಂಡ್ ಮೇಲಿರುವ ಜ್ವಾಲಾಮುಖಿ ಮಣ್ಣಿನಲ್ಲಿನ ಅತೀ ಹೆಚ್ಚು ಪ್ರಮಾಣದ ಕಬ್ಬಿಣಾಂಶ ತುಂಬಿರುವ ಮಣ್ಣು ಕಾರಣ ಎಂದು ತಿಳಿದುಬಂದಿದೆ. ಮಳೆ ಬಿದ್ದಾಗ ಈ ಮಣ್ಣು ಕೊರೆದು ಹರಿಯುತ್ತದೆ. ಈ ಮಣ್ಣಿನಲ್ಲಿರುವ ಕಬ್ಬಿಣದ ಅಂಶ ಕೆಂಪು ನೀರಿಗೆ ಕಾರಣಗಾಗುತ್ತದೆ. ಕಲ್ಲು ಬಂಡೆಗಳ ಮೇಲೆ ಬೀಳುವ ಮಳೆಯ ನೀರು ಹರಿದು ಬರುವಾಗ ಮಣ್ಣನ್ನು ತನ್ನೊಡನೆ ಸಮುದ್ರಕ್ಕೆ ತರಲಿದೆ. ಈ ವೇಳೆ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಹಾಗೆ ಅಲ್ಲಿ ಮರಳು ಮಿಶ್ರಿತ ಮಣ್ಣು ನೋಡಲು ಸಿಗುತ್ತದೆ. ಇದರಿಂದಾಗಿ ಕೆಂಪು ಬಣ್ಣ ಸಮುದ್ರ ಸೇರುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಭಾರೀ ಮಳೆ ಬಿದ್ದಾಗ ಮೇಲಿನಿಂದ ಹರಿಯುವ ನೀರು ಕೆಂಪು ಬಣ್ಣದಲ್ಲಿರಲಿದೆ. ಇದು ಖನಿಜಗಳಿಂದ ತುಂಬಿರುವ ಮಣ್ಣಾಗಿರುವುದರಿಂದ ಇದು ಕೆಂಪು ಬಣ್ಣದ ನೀರಿಗೆ ಕಾರಣವಾಗುತ್ತದೆ. ಅಲ್ಲಿನ ಸ್ಥಳೀಯರಿಗೆ ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಅದರೆ ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.



Click it and Unblock the Notifications
