Latest Updates
-
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ
ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಮೊದಲ ಮಹಿಳಾ ರಾಷ್ಟ್ರಪತಿ ಮುರ್ಮು!!
ರಾಷ್ಟ್ರಪತಿ ದ್ರೌಪದಿ ಮುರ್ಮು ಅಧಿಕಾರಕ್ಕೆ ಬಂದ ಬಳಿಕ ಈಗ ಹೊಸ ಇತಿಹಾರ ಬರೆಯುವ ಕೆಲಸ ಮಾಡಿದ್ದಾರೆ. ಕೇರಳದ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದರು. ಇದು ರಾಷ್ಟ್ರವ್ಯಾಪಿ ಗಮನ ಸೆಳೆದಿದೆ.
ಶಬರಿಮಲೆ ದೇವಾಲಯದ ಮಹಿಳೆಯರ ಪ್ರವೇಶ ಸಂಬಂಧವಾಗಿದ್ದ ಹಲವು ವಿವಾದಗಳ ನಡುವೆ ಹಾಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಕೋರ್ಟ್ ಆದೇಶದ ಬಳಿಕ ಈಗ ಮಹಿಳಾ ರಾಷ್ಟ್ರಪತಿ ಭೇಟಿ ನೀಡುರುವುದು ಹೊಸ ಆಶಾದಾಯಕ ಬೆಳವಣಿಗೆಯಾಗಿದೆ. ಇದಕ್ಕೂ ಮೊದಲು ಮಾಜಿ ರಾಷ್ಟ್ರಪತಿ ವಿ.ವಿ. ಗಿರಿ 1970 ರ ದಶಕದಲ್ಲಿ ಶಬರಿಮಲೆಗೆ ಭೇಟಿ ನೀಡಿದ್ದರು.

ನಿನ್ನೆ ಬೆಳಗ್ಗೆ ಸುಮಾರು 11 ಗಂಟೆಗೆ ವಿಶೇಷ ಬೆಂಗಾವಲು ಪಡೆಯೊಂದಿಗೆ ಅವರು ಪಂಬಾ ನದಿಗೆ ಭೇಟಿ ನೀಡಿದರು. ಅಲ್ಲಿ ಪಾದಗಳ ತೊಳೆದು ಬಳಿಕ ದೇವಾಲಯ ಕಡೆಗೆ ಪ್ರಯಾಣ ಬೆಳೆಸಿದರು. ಅನಂತರ ಅಲ್ಲಿರುವ ವಿಶೇಷ ಗಣೇಶ ದೇವಾಲಯಕ್ಕೂ ಅವರು ಭೇಟಿ ನೀಡಿದರು. ಹಾಗೆ ದೇವಸ್ಥಾನದ ಮೇಲ್ಶಾಂತಿ ವಿಷ್ಣು ನಂಬೂದಿರಿ ಅವರು 'ಕೆಟ್ಟುನೀರ ಮಂಟಪ'ದಲ್ಲಿ ಕಪ್ಪು ಸೀರೆಯಲ್ಲಿ ಧರಿಸಿದ್ದ ಮುರ್ಮು ಅವರಿಗೆ ಇರುಮುಡಿ ಕಟ್ಟುವ ಮೂಲಕ ದೇವಾಲಯ ಸಂಪ್ರದಾಯವನ್ನು ಆಚರಿಸಲಾಯಿತು.
ದೇವಾಲಯದ ಬಳಿಯ ಕಲ್ಲಿನ ಗೋಡೆಯ ಮೇಲೆ ತೆಂಗಿನಕಾಯಿ ಪಡೆದು ಪ್ರಾರ್ಥನೆ ಸಲ್ಲಿಸಿದರು. ಹಾಗೆ ಇರುಮುಡಿಯನ್ನು ತಲೆ ಮೇಲೆ ಹೊತ್ತು ಅಯ್ಯಪ್ಪನ ಗುಡಿಯತ್ತ ಪ್ರಯಾಣ ಮಾಡಿದರು. ಅನಂತರ ಪವಿತ್ರ 18 ಮೆಟ್ಟಿಲುಗಳ ಹತ್ತಿ ಅಲ್ಲಿ ದೇವಾಲಯದ ತಂತ್ರಿ ಕಂದರರು ಮಹೇಶ್ ಮೋಹನರು ಅವರನ್ನು ಪೂರ್ಣ ಕುಂಭದೊಂದಿಗೆ ಬರಮಾಡಿಕೊಂಡರು.
ಅನಂತರ ಇರುಮುಡಿಯಿಂದಿಗೆ ಅವರು ಅಯ್ಯಪ್ಪನ ದರ್ಶನ ಪಡೆದರು. ಹಾಗೆ ಊಟಕ್ಕಾಗಿ ಅಲ್ಲಿನ ಅತಿಥಿ ಗೃಹಕ್ಕೆ ತೆರಳಿದರು. ಹಾಗೆ ಇನ್ನು 4 ದಿನಗಳ ಕಾಲ ಅವರು ಕೇರಳ ಪ್ರವಾಸದಲ್ಲಿ ಕಳೆಯಲಿದ್ದಾರೆ.
ಶಬರಿಮಲೆಯ ವಿಶೇಷ
ನೀವು ಶಬರಿ ಮಲೆಯ ವಿಶೇಷಗಳ ತಿಳಿದಿರಬಹುದು. ಶಬರಿಮಲೆಗೆ ತೆರಳಲು ಭಕ್ತರು ಮಾಲೆ ಧರಿಸುವ ಹರಕೆ ಹೊತ್ತವರು ಅತ್ಯಂತ ಕಠಿಣ ವ್ರತ ಆಚರಿಸುತ್ತಾರೆ. ಕೆಲವರು 2 ತಿಂಗಳಿಗೂ ಹೆಚ್ಚು ಕಾಲ ಈ ವೃತಾಚರಣೆ ಮಾಡುತ್ತಾರೆ. ಅಯ್ಯಪ್ಪ ಬ್ರಹ್ಮಚರ್ಯವನ್ನು ಪಾಲಿಸಿದವನು ಎನ್ನಲಾಗಿದ್ದು, ಆತನ ಬಳಿ ತೆರಳಲು ಶುದ್ಧವಾಗಿರಬೇಕು ಎಂಬ ನಿಯಮವೂ ಇದೆ. ಹೀಗಾಗಿ ಕಠಿಣ ವ್ರತ ಪಾಲಿಸುತ್ತಾರೆ. ಕಾಲಿಗೆ ಚಪ್ಪಲಿ ಹಾಕದೆ ಬೆಳಗ್ಗೆ ಬೇಗ ಎದ್ದು ತಣ್ಣೀರು ಸ್ನಾನ ಮಾಡುತ್ತಾರೆ. ಮನೆಯಿಂದ ದೂರಾಗಿ ಕಠಿಣ ಬ್ರಹ್ಮಚರ್ಯ ಪಾಲಿಸುತ್ತಾರೆ.
ಈ ಸಮಯದಲ್ಲಿ ಮಕರ ಜ್ಯೋತಿ ದರ್ಶನಕ್ಕಾಗಿ ಲಕ್ಷಾಂತರ ಮಂದಿ ದೇವಾಲಯದ ಬಳಿ ಸೇರುತ್ತಾರೆ. 8 ರಿಂದ 60 ವರ್ಷದವರೆಗಿನ ಮಹಿಳೆಯರು ಇಲ್ಲಿಗೆ ಪ್ರವೇಶಿಸಬಾರದೆಂಬ ನಿಯಮ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಭಾರಿ ಸಂಘರ್ಷಕ್ಕೂ ಕಾರಣವಾಗಿತ್ತು. ಈ ಪ್ರಕರಣವನ್ನು ಬಗೆಹರಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ದೇವಾಲಯದ ಆಡಳಿತ ಮಂಡಳಿ ಮತ್ತು ಭಕ್ತರು ಮಹಿಳೆಯು ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುವುದಕ್ಕೆ ಸಹಮತ ವ್ಯಕ್ತಪಡಿಸುತ್ತಿಲ್ಲ.
ಅನ್ಯ ಧರ್ಮಿಯರಿಂದಲೂ ದರ್ಶನ
ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋದವರು ಮಕರ ಜ್ಯೋತಿಯ ದರ್ಶನ ಪಡೆಯುವುದು ತಮ್ಮ ಪುಣ್ಯ ಎಂದು ಭಾವಿಸುತ್ತಾರೆ. ಅಯ್ಯಪ್ಪನ ಸನ್ನಿಧಾನದ ಪೂರ್ವಭಾಗದಲ್ಲಿ ಅಯ್ಯಪ್ಪನ ಅನುಯಾಯಿಯಾಗಿ ಪರಿವರ್ತನೆಗೊಂಡ ಮುಸ್ಲಿಂ ವ್ಯಕ್ತಿ ವಾವರನಿಗೆ ಮೀಸಲಾಗಿರುವ ಜಾಗವೊಂದಿದೆ. ಅದನ್ನು 'ವಾವರುನಾಡ' ಎಂದು ಕರೆಯಲಾಗುತ್ತದೆ. ಇಲ್ಲಿದೆ ವರ್ಷವೂ ಲಕ್ಷಾಂತರ ಮಂದಿ ಮುಸ್ಲಿಂ ಸಮುದಾಯದ ಮಂದಿ ಭೇಟಿ ನೀಡುತ್ತಾರೆ. ಹಾಗೆ ಅಯ್ಯಪ್ಪನ ಕುರಿತು ಅವರು ಕೂಡ ಪ್ರಾರ್ಥಿಸುತ್ತಾರೆ.



Click it and Unblock the Notifications











