Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹೆರಿಗೆ ಆಪರೇಷನ್ ವೇಳೆ ಶ್ರೀಕೃಷ್ಣನ ಮಂತ್ರ ಪಠಿಸುತ್ತಿರುವ ತಾಯಿ..! ವಿಡಿಯೋ
ಹಿಂದೂ ಧರ್ಮದಲ್ಲಿ ಮಂತ್ರಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ವೇದ, ಶಾಸ್ತ್ರಗಳ ಪ್ರಕಾರ ಈ ಮಂತ್ರಗಳು ಅತೀವ ಶಕ್ತಿ ನೀಡುವ ಬಾಹ್ಯ ಬಲಗಳಂತೆ, ಯುದ್ಧ ಭೂಮಿಯಿಂದ ಹಿಡಿದು ಮನೆ ಮಕ್ಕಳ ಪಾಲನೆಗೂ ಒಂದೊಂದು ಮಂತ್ರವಿದೆ. ಈ ಮಂತ್ರಗಳು ವ್ಯಕ್ತಿಯೊಬ್ಬರ ಜೀವನವನ್ನೇ ಬದಲಿಸುವಷ್ಟು ಪ್ರಖರ ಹಾಗೂ ಶಕ್ತಿಶಾಲಿ ಎಂದು ನಾವು ಸಹ ನಂಬುತ್ತೇವೆ.
ಅದೇ ರೀತಿ ಸಂಕಷ್ಟ ಕಾಲದಲ್ಲಿ ಯಾವ ಮಂತ್ರ ಪಠಿಸಿದರೆ ಒಳತಾಗುತ್ತದೆ. ಯಾವ ಮಂತ್ರದಿಂದ ಯಾವ ಫಲ ಪ್ರಾಪ್ತಿಯಾಗುತ್ತದೆ. ಯಾವ ಸಮಯದಲ್ಲಿ ಯಾವ ಮಂತ್ರ ಮಠಿಸಬೇಕು ಎಂಬುದನ್ನೂ ವೇದ ಶಾಸ್ತ್ರದಲ್ಲಿ ಹೇಳಲಾಗಿದೆ. ಇಲ್ಲಿಯೂ ಸಹ ಮಹಿಳೆಯೊಬ್ಬರು ಹೆರಿಗೆಯ ಸಮಯದಲ್ಲಿ ಶ್ರೀ ಕೃಷ್ಣ ಮಂತ್ರ ಪಠಿಸುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಆಪರೇಷನ್ ಮಾಡುವಾಗ ಶ್ರೀಕೃಷ್ಣನ ಕುರಿತಾದ ಮಂತ್ರ ಪಠಿಸುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಆಕೆ ಆಸ್ಪತ್ರೆಯಲ್ಲಿ ಹೆರಿಗೆ ಆಪರೇಷನ್‌ಗೆ ಒಳಗಾಗಿದ್ದು, ಈ ವೇಳೆ ಕೃಷ್ಣ ಧ್ಯಾನ ಮಾಡುತ್ತಿದ್ದಾಳೆ. ಈ ವಿಡಿಯೋ ನೋಡಿದ ಮಂದಿ ಅಚ್ಚರಿಗೆ ಒಳಗಾಗಿದ್ದಾರೆ.
ಹಿಂದೂ ಧರ್ಮದ ಪ್ರಕಾರ ವೇದಗಳಲ್ಲಿನ ಈ ಮಂತ್ರಗಳು ಧನಾತ್ಮಕ ಬಲವನ್ನು ನೀಡುತ್ತದೆ ಎಂದು ನಂಬಲಾಗಿದೆ. ಇಲ್ಲಿಯೂ ಸಹ ಆಕೆ ಆಪರೇಷನ್ ನಡೆಯುವಾಗ ಸಾಮಾನ್ಯ ವ್ಯಕ್ತಿಯಂತೆ ಮಂತ್ರ ಪಠಿಸುತ್ತಿದ್ದಾಳೆ. ಮತ್ತೊಂದೆಡೆ ವೈದ್ಯರ ತಂಡ ಆಕೆಗೆ ಶಸ್ತ್ರ ಚಿಕಿತ್ಸೆ ನೆರವೇರಿಸುತ್ತಿದ್ದಾರೆ.
ಹೆರಿಗೆ ಆಪರೇಷನ್ ಎಂದರೆ ಮಹಿಳೆಯರಿಗೆ ಭಯವಂತು ಇದ್ದೇ ಇರುತ್ತದೆ. ಅದರಲ್ಲೂ ನೈಸರ್ಗಿಕವಾಗಿ ಆಗುವ ಹೆರಿಗೆಗಿಂತಲೂ ಶಸ್ತ್ರ ಚಿಕಿತ್ಸೆ ನೆರವೇರಿಸುವಾಗ ಎಲ್ಲರಲ್ಲೂ ಒಂದು ರೀತಿ ಭಯವಿರುತ್ತದೆ. ಮಹಿಳೆಯ ಜೊತೆಗೆ ಮಗುವಿನ ಆರೋಗ್ಯ ಸಹ ಇಲ್ಲಿ ಮುಖ್ಯವಾಗಿರುತ್ತದೆ. ಜೊತೆಗೆ ಆಪರೇಷನ್ ಎಂದರೆ ಎಲ್ಲರಲ್ಲೂ ಭಯವಿರುತ್ತದೆ. ಈ ಭಯ ನಿವಾರಣೆಯಾಗಬೇಕು ಎಂಬ ಕಾರಣಕ್ಕೆ ತಾಯಿ ಶ್ರೀ ಕೃಷ್ಣನ ಕುರಿತ ಜಪ ಮಾಡುತ್ತಿದ್ದಾಳೆ.
ಈ ವಿಡಿಯೋವನ್ನು rajahmudry_pointofview2.0 ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಮಂದಿ ಆಕೆಯ ಧೈರ್ಯ ಹಾಗೂ ಕಠಿಣ ಪರಿಸ್ಥಿತಿಯಲ್ಲೂ ಆಕೆ ಪರಿಸ್ಥಿತಿ ನಿಭಾಯಿಸುತ್ತಿರುವುದಕ್ಕೆ ಸೆಲ್ಯೂಟ್ ಎಂದಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಬರೋಬ್ಬರಿ 6 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಈ ಶಸ್ತ್ರ ಚಿಕಿತ್ಸೆಯ ವೇಳೆ ಆಕೆ ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ..ಎಂಬ ಮಂತ್ರ ಪಠಿಸುತ್ತಿರುವುದು ಕಾಣಬಹುದು. ಆಕೆ ನಿರಂತರವಾಗಿ ಈ ಮಂತ್ರ ಪಠಿಸುತ್ತಿದ್ದರೆ ಇತ್ತ ವೈದ್ಯರು ಆಕೆಯನ್ನು ಹುರಿದುಂಬಿಸುತ್ತಿದ್ದಾರೆ. ಅಂತಿಮವಾಗಿ ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದುಬಂದಿದೆ.
ಈ ವಿಡಿಯೋ ನೋಡಿದ ಮಂದಿ ಆಕೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ವೇದಗಳ ಸಾರವನ್ನು ಬಹಳ ಚೆನ್ನಾಗಿ ಅರಿತುಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಮೆಚ್ಚುಗೆ ಕಮೆಂಟ್‌ಗಳಿಂದ ತುಂಬಿದೆ. ಈ ವಿಡಿಯೋ ನೋಡಿದ ಮಂದಿ ತಾಯಿಯನ್ನು ಏಕೆ ಯೋಧನಿಗೆ ಹೋಲಿಸುತ್ತಾರೆ ಅನ್ನೋದಕ್ಕೆ ಈ ವಿಡಿಯೋವೊಂದು ಸಾಕ್ಷಿಯಾಗಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಜೊತೆಗೆ ಈ ಮಹಾತಾಯಿಯ ಧೈರ್ಯಕ್ಕೆ ಎಲ್ಲರು ಮೆಚ್ಚುಗೆ ನೀಡಲೇಬೇಕು. ಮಕ್ಕಳಿಗಾಗಿ ಆಕೆ ತನ್ನ ಜೀವನ ಮುಡಿಪಾಗಿಡುವ ಕೆಲಸ ಇಂದಿನಿಂದಲೇ ಆರಂಭಗೊಂಡಿದೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಸಂಕಷ್ಟ ಹಾಗೂ ಧೈರ್ಯಕ್ಕಾಗಿ ಹಿಂದೂ ವೇಗಳಲ್ಲಿರುವ ಮಂತ್ರಗಳ ಪಠಿಸುವ ಪ್ರಕರಣ ಇದೇನು ಮೊದಲಲ್ಲ. ಹಲವು ಬಾರಿ ಇಂತಹ ಘಟನೆಗಳು ನಡೆದಿರುವುದನ್ನು ಸಹ ನಾವಿಲ್ಲ ನೆನಪಿಸಿಕೊಳ್ಳಬಹುದು.



Click it and Unblock the Notifications
