Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಮಗನ ಮೇಲೆ ತಾಯಿ ಕ್ರೌರ್ಯ..! ಆಕೆ ಮಾಡಿದ ಕೆಲಸ ಎಂತದ್ದು ನೋಡಿ..!
ಮಗುವಿಗೆ ಮನೆಯೆ ಮೊದಲ ಪಾಠ ಶಾಲೆ ತಾಯಿಯೆ ಮೊದಲ ಗುರು ಎಂದು ನಾವು ಕೇಳಿದ್ದೇವೆ. ಜೊತೆಗೆ ತಾಯಿ ಮಕ್ಕಳಿಗಾಗಿ ಏನನ್ನು ಬೇಕಾದರು ತ್ಯಾಗ ಮಾಡುತ್ತಾಳೆ. ಜೊತೆಗೆ ತಾಯಿಗಿಂತ ಮಮತಾ ಮಯಿ ಯಾರು ಮತ್ತೊಬ್ಬಳು ಸಿಗುವುದಿಲ್ಲ. ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ ಎಂದು ತಾಯಿಯನ್ನು ಹಾಡಿ ಹೊಗಳುತ್ತೇವೆ.
ಆದ್ರೆ ಇಲ್ಲೊಬ್ಬ ತಾಯಿ ಮಾಡಿದ ಕೆಲಸ ನೋಡಿದ್ರೆ ನಿಮ್ಮ ರಕ್ತ ಸಹ ಕುದಿಯುತ್ತೆ. ಎಂತವರಿಗೂ ಆಕೆಯ ಮೇಲೆ ಇನ್ನಿಲ್ಲ ಸಿಟ್ಟು ಬರುತ್ತೆ. ಯಾಕಂದ್ರೆ ಈಕೆ ಮಾಡಿದ್ದ ಕಾರ್ಯವೇ ಹಾಗಿದೆ. ಆಕೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಸ್ವಂತ ಮಗನಿಗೆ ಹಿಗ್ಗಾಮುಗ್ಗ ಹೊಡೆದಿದ್ದಾಳೆ.

ಹರಿಯಾಣದ ಫರಿದಾಬಾದ್‌ನಿಂದ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ತಾಯಿಯೊಬ್ಬಳು ತನ್ನ 11 ವರ್ಷದ ಮಗನಿಗೆ ಅಮಾನುಷವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ಈ ದೃಶ್ಯಗಳು ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದ ಮಂದಿ ಶಾಕ್ ಆಗಿದ್ದಾರೆ ಜೊತೆಗೆ ಆಕೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಾಯಿ ಮಗುವಿನ ಮೇಲೆ ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಸಹ ದಾಖಲಾಗಿದೆ.
ಮಹಿಳೆ ತನ್ನ ಮಗುವಿನ ಎದೆಯ ಮೇಲೆ ಕುಳಿತು ಆತನಿಗೆ ಕಪಾಳಮೋಕ್ಷ ಮಾಡುತ್ತಿದ್ದಾಳೆ. ಅಲ್ಲದೆ ಆತನಿಗೆ ಒದೆಯುತ್ತಿದ್ದಾಳೆ. ಮಗುವಿನ ತಂದೆ ಮಗುವನ್ನು ರಕ್ಷಿಸಲು ಮುಂದಾಗುತ್ತಿರುವುದು ಸಹ ವಿಡಿಯೋದಲ್ಲಿ ನೋಡಬಹುದು. ಆಕೆ ವೃತ್ತಿಯಲ್ಲಿ ವೈದ್ಯೆ ಎಂದು ತಿಳಿದುಬಂದಿದೆ.
ತಮ್ಮ ಮಗನ ಬಗ್ಗೆ ಕ್ರೂರವಾಗಿ ವರ್ತಿಸಿದ ಪತ್ನಿಯ ವಿರುದ್ಧ ಮಗುವಿನ ತಂದೆ ಪೊಲೀಸ್ ದೂರು ಕೂಡ ದಾಖಲಿಸಿದ್ದಾರೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಮುಂದಾದರೆ ವಿಷ ಸೇವಿಸಿ ಮಗನಿಗೆ ಕೊಡುವುದಾಗಿ ಪತ್ನಿ ಬೆದರಿಕೆ ಹಾಕಿದ್ದಾರೆ ಎಂದು ವ್ಯಕ್ತಿ ಹೇಳಿದ್ದಾನೆ.
ಇದರ ಜೊತೆಗೆ ತಾಯಿಯ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ದೂರು ನೀಡಲಾಗಿದೆ. ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲ್ಯುಸಿ) ಆದೇಶದ ಮೇರೆಗೆ ಸೂರಜ್‌ಕುಂಡ್ ಪೊಲೀಸ್ ಠಾಣೆಯು ತಾಯಿಯ ವಿರುದ್ಧ ಕ್ರೌರ್ಯ ಪ್ರಕರಣವನ್ನು ದಾಖಲಿಸಿದೆ ಎಂದು ತಿಳಿದುಬಂದಿದೆ. ಮದುವೆಯಾಗಿ ದಂಪತಿ 17 ವರ್ಷವಾಗಿದ್ದು, ಆಕೆಯ ಪತಿ ಮದ್ಯ ವ್ಯಸನಿ ಎಂದು ಆಕೆ ತಿಳಿಸಿದ್ದಾಳೆ. ಜೊತೆಗೆ ಮಗುವನ್ನು ಯಾವಗಲು ಆಕೆ ಹೊಡೆಯುತ್ತಿರುವುದಾಗಿ ತಿಳಿದುಬಂದಿದೆ.
ಈ ವಿಡಿಯೋ ಹೊರಬಿದ್ದ ಬಳಿಕ ತಾಯಿಯ ಕ್ರೌರ್ಯ ಕುರಿತು ಭಾರೀ ಟೀಕೆ ಕೇಳಿಬಂದಿದೆ. ಆಕೆಯನ್ನು ಪೊಲೀಸರು ಬಂಧಿಸಲೇ ಬೇಕು ಎಂಬ ಒತ್ತಾಯ ಮಾಡಲಾಗಿದೆ. ಆಕೆ ತಾಯಿ ಎಂಬ ಪದಕ್ಕೆ ಕಳಂಕ ತಂದಿದ್ದಾಳೆ. ವಿದ್ಯಾವಂತೆ ಎಂದು ಕರೆಸಿಕೊಳ್ಳಲು ಸಹ ಆಕೆ ಸೂಕ್ತಳಲ್ಲ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಆಕೆಯ ಕೃತ್ಯವನ್ನು ತಡೆಯುವಲ್ಲಿ ವಿಫಲನಾದ ತಂದೆಗೂ ಪೊಲೀಸರು ಶಿಕ್ಷೆ ವಿಧಿಸಬೇಕು. ಆತ ನೋಡಿಯೂ ಹೇಗೆ ಸುಮ್ಮನಿದ್ದಾನೆ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಇತ್ತ ಆಕೆ ಯಾವ ಕಾರಣಕ್ಕೆ ಮಗುನ ಮೇಲೆ ಇಷ್ಟೊಂದು ಹಲ್ಲೆ ಮಾಡುತ್ತಿದ್ದಳು ಎಂಬುದು ತಿಳಿದುಬಂದಿಲ್ಲ. ಸದ್ಯ ತನಿಖೆಯ ಮೂಲಕ ಎಲ್ಲಾ ಮಾಹಿತಿ ಹೊರಬೀಳಬೇಕಿದೆ.
ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ದೇವರಿಲ್ಲ ಎನ್ನುತ್ತಿರುವಾಗ ಈಕೆ ಮಾಡಿದ ಕೆಲಸ ನೋಡಿ ಜನ ಶಾಕ್ ಆಗಿದ್ದಾರೆ. ಮಗನ ಮೇಲೆ ಇಷ್ಟೊಂದು ಕ್ರೌರ್ಯ ಮೆರೆಯುವಂತ ತಪ್ಪು ಆತ ಏನು ಮಾಡಿದ್ದ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಸದ್ಯ ತಾಯಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ, ಆ ಪುತ್ರನಿಗೆ ಸರಿಯಾದ ಶಿಕ್ಷಣ ದೊರಕಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.



Click it and Unblock the Notifications