Latest Updates
-
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು!
ಚಂದ್ರನ ಮೇಲೆ ಮತ್ತಷ್ಟು ಮಂಜುಗಡ್ಡೆ..! ಇಸ್ರೋ ಹೇಳಿದ್ದೇನು.?
ಚಂದ್ರನ ಕುರಿತು ಅಧ್ಯಯನ ಮಾಡಲು ಎಲ್ಲಾ ದೇಶಗಳು ಹೆಚ್ಚು ಕುತೂಹಲ ಹೊಂದಿವೆ. ಅದರಂತೆ ಇಸ್ರೋ ಸಹ ಚಂದ್ರಯಾನ ಯೋಜನೆ ಮೂಲಕ ಚಂದ್ರನ ಮೇಲೆ ಇಳಿದಿದೆ. ಈಗಾಗಲೇ ಚಂದ್ರನ ಮೇಲೆ ಅಧ್ಯಯನಕ್ಕೆ ಮುಂದಾಗಿರುವ ರೋವರ್ ಹಲವು ಮಾಹಿತಿಗಳ ಹಂಚಿಕೊಂಡಿದೆ.
ಇದೀಗ ಇಸ್ರೋ ಪ್ರಕಾರ ಚಂದ್ರನ ಮೇಲೆ ಮಂಜುಗಡ್ಡೆ ರೂಪದಲ್ಲಿ ನೀರು ಇರುವುದಾಗಿ ಅಧ್ಯಯನದಲ್ಲಿ ತಿಳಿದಿದೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಮತ್ತು ಐಐಟಿ (ಐಎಸ್‌ಎಂ) ಧನ್‌ಬಾದ್‌ನ ಸಂಶೋಧಕರ ಸಹಯೋಗದೊಂದಿಗೆ ಬಾಹ್ಯಾಕಾಶ ಅಪ್ಲಿಕೇಶನ್‌ಗಳ ಕೇಂದ್ರ (ಎಸ್‌ಎಸಿ)/ಇಸ್ರೋ ವಿಜ್ಞಾನಿಗಳು ಈ ಅಧ್ಯಯನವನ್ನು ನಡೆಸಿದ್ದಾರೆ.

ಇತ್ತೀಚಿನ ಅಧ್ಯಯನದ ಪ್ರಕಾರ ಮೊದಲ ಎರಡು ಮೀಟರ್‌ಗಳಲ್ಲಿ ಭೂಗರ್ಭದ ಮಂಜುಗಡ್ಡೆಯ ಪ್ರಮಾಣವು ಎರಡೂ ಧ್ರುವಗಳಲ್ಲಿನ ಮೇಲ್ಮೈಗಿಂತ ಐದರಿಂದ ಎಂಟು ಪಟ್ಟು ದೊಡ್ಡದಾಗಿದೆ ಎಂದು ಇಸ್ರೋ ತಿಳಿಸಿದೆ. ಅಂದರೆ ಅಲ್ಲಿ ಮೊದಲು ನೀರು ದ್ರವ ರೂಪದಲ್ಲಿತ್ತು ಎಂಬುದನ್ನು ಇದು ಸೂಚಿಸುತ್ತದೆ.
ಅಂದಹಾಗೆ, ಆ ಮಂಜುಗಡ್ಡೆಯ ಉತ್ಖನನ ಮಾಡಲು ಚಂದ್ರನ ಮೇಲೆ ಕೊರೆಯುವುದು ಮುಂದಿನ ಕಾರ್ಯಾಚರಣೆಯ ಭಾಗವಾಗಿರಲಿದೆ ಎಂಬುದು ಇಸ್ರೋ ತಿಳಿಸಿದೆ.
ಇದಲ್ಲದೆ, ಉತ್ತರ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆಯ ಪ್ರಮಾಣವು ದಕ್ಷಿಣ ಧ್ರುವ ಪ್ರದೇಶದಲ್ಲಿ ಎರಡು ಪಟ್ಟು ಹೆಚ್ಚಿದೆ ಎಂದು ಅಧ್ಯಯನವು ಸೂಚಿಸುತ್ತದೆ. ಇಂಬ್ರಿಯನ್ ಅವಧಿಯಲ್ಲಿ ಜ್ವಾಲಾಮುಖಿಯ ಸ್ಪೋಟದ ಸಮಯದಲ್ಲಿ ಚಂದ್ರನ ಧ್ರುವಗಳಲ್ಲಿನ ಭೂಗರ್ಭದ ನೀರು ಮಂಜುಗಡ್ಡೆಯ ಪ್ರಾಥಮಿಕ ಮೂಲ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಚಂದ್ರನ ಮೇಲಿನ ನೀರಿನ ಮಂಜುಗಡ್ಡೆಯ ಮೂಲ ಯಾವುದು ಎಂದು ಕಂಡುಕೊಳ್ಳಲು ವಿಚಕ್ಷಣ ಆರ್ಬಿಟರ್‌ನಲ್ಲಿ ರಾಡಾರ್, ಲೇಸರ್, ಆಪ್ಟಿಕಲ್, ನ್ಯೂಟ್ರಾನ್ ಸ್ಪೆಕ್ಟ್ರೋಮೀಟರ್, ಅಲ್ಟ್ರಾ-ವೈಲೆಟ್ ಸ್ಪೆಕ್ಟ್ರೋಮೀಟರ್ ಮತ್ತು ಥರ್ಮಲ್ ರೇಡಿಯೊಮೀಟರ್ ಅನ್ನು ಒಳಗೊಂಡಿರುವ ಏಳು ಉಪಕರಣಗಳನ್ನು ಸಂಶೋಧನಾ ತಂಡವು ಬಳಸಿದ್ದು, ಈ ಮೂಲಕ ಅದರ ಮೂಲ ಪತ್ತೆಗೆ ಮುಂದಾಗಿದೆ.
ಚಂದ್ರಯಾನ-2 ಡ್ಯುಯಲ್-ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಕರಣದಿಂದ ಪೋಲಾರಿಮೆಟ್ರಿಕ್ ರಾಡಾರ್ ಡೇಟಾವನ್ನು ಬಳಸಿಕೊಂಡು ಚಂದ್ರನ ಮೇಲೆ ಮಂಜುಗಡ್ಡೆಯ ಮೂಲ ಹುಡುಕುವ ಅಧ್ಯಯನ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಹೀಗೆ ಚಂದ್ರನ ಮೇಲ್ಮೈಯಲ್ಲಿ ಮಂಜುಗಡ್ಡೆ ಉತ್ಕನನ ಪ್ರಕ್ರಿಯೆಯ ಕುರಿತು ಇಸ್ರೋ ಆಳ ಅಧ್ಯಯನ ನಡೆಸಲಿದೆ ಎಂದು ತಿಳಿದುಬಂದಿದೆ.
ಬಾಹ್ಯಾಕಾಶಕ್ಕೆ ಹಾರಲು ಸಿದ್ಧರಾದ ಗಗನಯಾತ್ರಿಗಳು
ಈ ನಡುವೆ ಇಸ್ರೋ ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲು ಮುಂದಾಗಿದೆ. ಈಗ 'ಗಗನ್‌ಯಾನ್ ಮಿಷನ್‌ಗೆ' ಭರದ ಸಿದ್ಧತೆ ನಡೆಸಿದೆ. ಇದು ಅಂತರಿಕ್ಷಕ್ಕೆ ಮಾನವನನ್ನು ಕಳುಹಿಸಲು ಭಾರತದ ಮೊಟ್ಟ ಮೊದಲ ಯೋಜನೆಯಾಗಿದ್ದು, ಭಾರತದ ಪಾಲಿಗೆ ಇದೊಂದು ಮಹತ್ವದ ಕಾರ್ಯವಾಗಲಿದೆ.
ದೇಶದ ಚೊಚ್ಚಲ ಮಾನವ ಬಾಹ್ಯಾಕಾಶ ಯಾನಕ್ಕಾಗಿ ಗಗನಯಾತ್ರಿಗಳು ತರಬೇತಿ ಪಡೆಯುತ್ತಿದ್ದಾರೆ. ಇದಕ್ಕಾಗಿ ಪ್ರಶಾಂತ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹಾರಲು ಸಿದ್ಧತೆ ನಡೆಸಿದ್ದಾರೆ.
ಗಗನಯಾನ್ ಮಿಷನ್ ಭಾರತದ ಮೊದಲ ಮಾನವ ಬಾಹ್ಯಾಕಾಶ ಕಾರ್ಯಕ್ರಮವಾಗಿದ್ದು, ವಿವಿಧ ಇಸ್ರೋ ಕೇಂದ್ರಗಳಲ್ಲಿ ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ.ಗಗನ್ಯಾನ್ ಯೋಜನೆಯು ಮೂರು ದಿನಗಳ ಕಾರ್ಯಾಚರಣೆಗಾಗಿ ಸಿಬ್ಬಂದಿ ಸದಸ್ಯರನ್ನು 400 ಕಿ.ಮೀ ಕಕ್ಷೆಗೆ ಉಡಾಯಿಸುವ ಮೂಲಕ ಮತ್ತು ಇಂಡಿಯನ್ ಸಮುದ್ರದಲ್ಲಿ ಇಳಿಯುವ ಮೂಲಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ತರುವ ಮೂಲಕ ಈ ಯೋಜನೆಗೆ ಯಶಸ್ಸಿಗೆ ಇಸ್ರೋ ಮುಂದಾಗಿದೆ.



Click it and Unblock the Notifications