Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Monthly Health Horoscope August 2023: ಆಗಸ್ಟ್ ತಿಂಗಳಿನಲ್ಲಿ ದ್ವಾದಶ ರಾಶಿಗಳ ಆರೋಗ್ಯ ಭವಿಷ್ಯ ಹೇಗಿರಲಿದೆ?
ಆಗಸ್ಟ್ ತಿಂಗಳಿನಲ್ಲಿ ಗ್ರಹಗಳು ತಮ್ಮ ಪಥವನ್ನು ಬದಲಾಯಿಸುತ್ತಿರೋದ್ರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದೆ. ಇದು ನೇರವಾಗಿ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀಳುತ್ತಿದ್ದು, ಕೆಲವು ರಾಶಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದರೆ ಇನ್ನೂ ಕೆಲವು ರಾಶಿಯವರಿಗೆ ಇದರಿಂದ ಕೆಟ್ಟದಾಗಲಿದೆ. ಇನ್ನೂ ಕುಟುಂಬಸ್ಥರ ಆರೋಗ್ಯದ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ. ಅಷ್ಟಕ್ಕು ಈ ಆಗಸ್ಟ್ ತಿಂಗಳಿನಲ್ಲಿ ದ್ವಾದಶ ರಾಶಿಗಳ ಆರೋಗ್ಯ ಭವಿಷ್ಯ ಹೇಗಿದೆ ಅನ್ನೋದನ್ನು ತಿಳಿಯೋಣ,
ಮೇಷ ರಾಶಿ
ಆರೋಗ್ಯದ ವಿಷಯದಲ್ಲಿ ಈ ತಿಂಗಳು ನೀವು ಏರಿಳಿತಗಳನ್ನು ಕಾಣುತ್ತೀರಿ. ತಿಂಗಳ ಆರಂಭದಲ್ಲಿ ನಿಮ್ಮ ಆರೋಗ್ಯವು ಹದಗೆಡುವ ಸಾಧ್ಯತೆಯಿದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕಾಗುತ್ತದೆ. ತಿಂಗಳ ದ್ವಿತೀಯಾರ್ಧದಲ್ಲಿ ನೀವು ಕೆಲವು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರಬಹುದು. ಆರೋಗ್ಯಯುತ ಆಹಾರವನ್ನು ಸೇವಿಸಿ. ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕರ ಲಾಭಗಳು ಸಿಗುತ್ತವೆ.

ವೃಷಭ ರಾಶಿ
ಈ ತಿಂಗಳು ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಅತಿಯಾದ ಕೆಲಸದ ಕಾರಣದಿಂದಾಗಿ ಅತಿಯಾದ ಓಡಾಟವನ್ನು ಮಾಡಬೇಕಾಗಬಹುದು. ಇದರಿಂದಾಗಿ ದೈಹಿಕ ಬಳಲಿಕೆ ಮತ್ತು ಮಾನಸಿಕ ಒತ್ತಡವನ್ನು ಸೃಷ್ಟಿಯಾಗಬಹುದು. ಹವಾಮಾನಕ್ಕೆ ಅನುಗುಣವಾಗಿ ನಿಮ್ಮ ಆಹಾರ ಮತ್ತು ಪಾನೀಯವನ್ನು ನಿಯಂತ್ರಿಸಿ. ಕೆಟ್ಟ ವಾತಾವರಣದಲ್ಲಿ ಹೊರಗೆ ಹೋಗುವುದನ್ನು ಸಹ ತಪ್ಪಿಸಿ. ಪತ್ನಿಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಅಗತ್ಯವಿದ್ದರೆ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. ಆರೋಗ್ಯದ ವಿಷಯದಲ್ಲಿ ಈ ತಿಂಗಳು ನಿಮಗೆ ಮಿಶ್ರವಾಗಿರುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ತಿಂಗಳು ತುಂಬಾ ಒಳ್ಳೆಯದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಕುಟುಂಬದಸ್ಥರ ಆರೋಗ್ಯದ ಬಗ್ಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಹವಾಮಾನದಲ್ಲಾಗುವ ಏರುಪೇರಿನಿಂದಾನಿ ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಆದರೆ ಈ ತಿಂಗಳು ನಿಮಗೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ಈ ತಿಂಗಳು ನೀವು ಕೆಲವು ಪ್ರಮುಖ ಕಾಯಿಲೆಗಳಿಂದ ಮುಕ್ತರಾಗಬಹುದು.
ಕರ್ಕಾಟಕ ರಾಶಿ
ಈ ತಿಂಗಳು ಕರ್ಕಾಟಕ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಕುಟುಂಬ ಸದಸ್ಯರ ಆರೋಗ್ಯವೂ ಹದಗೆಡಬಹುದು. ನೀವು ಹೊರಗೆ ಹೋದರೆ ಮಳೆಯಲ್ಲಿ ಒದ್ದೆಯಾಗುವುದನ್ನು ತಪ್ಪಿಸಿ. ಹೊರಗಿನ ಆಹಾರದಿಂದ ದೂರವಿರಿ. ಆಹಾರವನ್ನು ಸರಳವಾಗಿರಿಸಿಕೊಳ್ಳಿ. ಅಗತ್ಯವಿದ್ದರೆ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.
ಸಿಂಹ ರಾಶಿ
ಆರೋಗ್ಯದ ದೃಷ್ಟಿಯಿಂದ ಈ ತಿಂಗಳು ಸಿಂಹ ರಾಶಿಯವರಿಗೆ ಕೆಲವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆರೋಗ್ಯದ ಕಾರಣದಿಂದಾಗಿ ನೀವು ಈ ತಿಂಗಳು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದ ಬಗ್ಗೆ ಗಮನ ಕೊಟ್ಟರೆ ಒಳ್ಳೆಯದು. ಅಗತ್ಯವಿದ್ದರೆ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ. ರೋಗ ಉಲ್ಭಣವಾಗಲು ಅವಕಾಶ ಕೊಡಬೇಡಿ.
ಕನ್ಯಾ ರಾಶಿ
ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ತಿಂಗಳು ನೀವು ಕೆಲವು ಕಾಯಿಲೆಗೆ ಒಳಗಾಗಬಹುದು. ಅದು ನಿಮ್ಮ ಬಜೆಟ್‌ನ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಈ ತಿಂಗಳ ನಿಮ್ಮ ಖರ್ಚು ಹೆಚ್ಚಾಗಬಹುದು. ಕುಟುಂಬದ ಇತರ ಯಾವುದೇ ವ್ಯಕ್ತಿಯ ಆರೋಗ್ಯದಲ್ಲಿನ ಏರುಪೇರುಗಳು ನಿಮಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹವಾಮಾನದಿಂದ ಉಂಟಾಗುವ ರೋಗಗಳಿಂದ ದೂರವಿರಿ.
ತುಲಾ ರಾಶಿ
ಆರೋಗ್ಯದ ವಿಷಯದಲ್ಲಿ ಈ ತಿಂಗಳು ನಿಮಗೆ ತೊಂದರೆಯಾಗಲಿದೆ. ಕೆಲವು ಹಳೆಯ ಕಾಯಿಲೆಗಳು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ನೀವು ದೈಹಿಕ ನೋವನ್ನು ಅನುಭವಿಸಬೇಕಾಗಬಹುದು. ಹೆಂಡತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹವಮಾನದಲ್ಲಿ ಉಂಟಾಗುವ ವ್ಯತ್ಯಾಸದಿಂದ ಕಾಯಿಲೆ ಬರಬಹುದು ನಿಮ್ಮ ಬಗ್ಗೆ ನೀವು ಕಾಳಜಿ ಮಾಡಬೇಕು. ನಿಮ್ಮ ಆಹಾರ ಮತ್ತು ಪಾನೀಯದ ಬಗ್ಗೆ ಕಾಳಜಿ ಇರಲಿ.
ವೃಶ್ಚಿಕ ರಾಶಿ
ಈ ತಿಂಗಳು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಹೆಂಡತಿಯ ಆರೋಗ್ಯವು ಹದಗೆಡಬಹುದು. ಇದರಿಂದಾಗಿ ನೀವು ಮಾನಸಿಕವಾಗಿ ತೊಂದರೆಗೊಳಗಾಗುತ್ತೀರಿ. ಅಲ್ಲದೆ ನಿಮ್ಮ ಆರ್ಥಿಕ ಪರಿಸ್ಥಿತಿಯು ಹದಗೆಡಬಹುದು. ಆರೋಗ್ಯದ ಕಾರಣದಿಂದಾಗಿ ನೀವು ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು.
ಧನು ರಾಶಿ
ಧನು ರಾಶಿಯವರಿಗೆ ಈ ತಿಂಗಳು ಕೆಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಋತುಮಾನದ ವ್ಯತ್ಯಾಸದಿಂದಾಗಿ ನೀವು ಕೆಲವು ಪ್ರಮುಖ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಗಮನ ಕೊಡಿ. ಕುಟುಂಬದಲ್ಲಿ ಪೋಷಕರ ಆರೋಗ್ಯ ಕ್ಷೀಣಿಸುವ ಇರುತ್ತದೆ. ಹೆಂಡತಿಗೆ ತಲೆ ಸಂಬಂಧಿ ಸಮಸ್ಯೆ ಕಾಡಬಹುದು.
ಮಕರ ರಾಶಿ
ಮಕರ ರಾಶಿಯವರು ಈ ತಿಂಗಳು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ನೀವು ಕೆಲವು ದೀರ್ಘಕಾಲದ ಕಾಯಿಲೆಯಿಂದ ಬಳಲುವ ಸಾಧ್ಯತೆಯಿದೆ. ಇದರಿಂದಾಗಿ ನೀವು ದೈಹಿಕವಾಗಿ ತುಂಬಾ ದುರ್ಬಲರಾಗುತ್ತೀರಿ. ಹವಾಮಾನದ ಪ್ರಕಾರ ಈ ಸಮಯವು ನಿಮಗೆ ಅನುಕೂಲಕರವಾಗಿಲ್ಲ. ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕುಟುಂಬದ ಸದಸ್ಯರಿಗೂ ಕೂಡ ಆರೋಗ್ಯ ಸಮಸ್ಯೆ ಎದುರಾಗಬಹುದು. ಹೀಗಾಗಿ ಆದಷ್ಟು ಅವರ ಆರೋಗ್ಯ ಬಗ್ಗೆ ಕೂಡ ಕಾಳಜಿ ಮಾಡಿದರೆ ಒಳ್ಳೆಯದು.
ಕುಂಭ ರಾಶಿ
ಆರೋಗ್ಯದ ವಿಷಯದಲ್ಲಿ ಈ ತಿಂಗಳು ನಿಮಗೆ ಸಾಮಾನ್ಯವಾಗಿರುತ್ತದೆ. ಹವಾಮಾನದಲ್ಲಿ ಉಂಟಾದ ವ್ಯತ್ಯಾಸದಿಂದ ನೀವು ಕಾಯಿಲೆಗೆ ತುತ್ತಾಗುತ್ತರಿ. ಆರೋಗ್ಯಕರ ಆಹಾರವನ್ನು ಸೇವಿಸಿ. ಹಾಗೆಯೇ ಮಳೆಯಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ. ಈ ತಿಂಗಳು ನಿಮ್ಮ ಹೆಂಡತಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಬಹುದು.
ಮೀನ ರಾಶಿ
ಈ ತಿಂಗಳು ಮೀನ ರಾಶಿಯವರ ಆರೋಗ್ಯ ಉತ್ತಮವಾಗಿರುತ್ತದೆ. ಅತಿಯಾದ ಓಡಾಟದಿಂದಾಗಿ ದೈಹಿಕ ಆಯಾಸವನ್ನು ಅನುಭವಿಸಬೇಕಾಗಬಹುದು. ಕುಟುಂಬದಲ್ಲಿ ಪತ್ನಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಮಳೆಗೆ ಹೊರಗಡೆ ಹೋಗಬೇಡಿ. ಆರೋಗ್ಯಯುತ ಆಹಾರವನ್ನು ಸೇವಿಸಿ.



Click it and Unblock the Notifications