Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬೆಂಗಳೂರಲ್ಲಿ ನೀರಿನ ಬವಣೆ: ಮನೆಯೊಳಗೆ ನುಗ್ಗಿ ನೀರು ಕುಡಿದ ಕೋತಿ..!
ಬೇಸಿಗೆ ಬಂತೆಂದರೆ ಹೆಚ್ಚು ಹೆಚ್ಚು ನೀರು ಕುಡಿಯಬೇಕಾಗುತ್ತದೆ. ದಿನಕ್ಕೆ 3ರಿಂದ 4 ಲೀಟರ್ ನೀರು ಕುಡಿದರೆ ಡಿ ಹೈಡ್ರೇಷನ್‌ಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬಹುದು. ಮಾನವ ದೇಹಕ್ಕೆ ಬೇಸಿಗೆಯಲ್ಲಿ ಹೆಚ್ಚು ನೀರಿನ ಅಗತ್ಯವಿರುತ್ತದೆ. ಕೇವಲ ಮನುಷ್ಯರು ಮಾತ್ರವಲ್ಲ ಪ್ರಾಣಿಗಳಿಗೂ ಸಹ ಬೇಸಿಗೆಯಲ್ಲಿ ಅತಿ ಹೆಚ್ಚು ನೀರು ಬೇಕಾಗುತ್ತದೆ.
ಒಂದು ಕಡೆ ಬೇಸಿಗೆಯಲ್ಲಿ ಅವುಗಳಿಗೆ ಆಹಾರ ಸಹ ಸಿಗುವುದಿಲ್ಲ ಇನ್ನು ನೀರಿನ ಕಥೆ ಕೇಳುವುದೇ ಬೇಡ ಎನ್ನು ಪರಿಸ್ಥಿತಿ ಇರುತ್ತದೆ. ಅದರಲ್ಲೂ ನಾಡಿನಲ್ಲಿ ಜನರ ನಡುವೆ ವಾಸಿಸುವ ಪ್ರಾಣಿಗಳಿಗಂತೂ ಆಹಾರ ನೀರು ಹುಡುಕುವುದೇ ಬಹುದೊಡ್ಡ ಸವಾಲು. ಹೀಗಾಗಿಯೇ ಮನೆಯ ಮೇಲೆ ಅಥವಾ ಮನೆಯ ಬಳಿ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ಇಡಿ ಎಂದು ಪರಿಸರ ಹಾಗೂ ಪ್ರಾಣಿ ಪ್ರೇಮಿಗಳು ಮನವಿ ಮಾಡುತ್ತಿರುತ್ತಾರೆ.

ಅದರಲ್ಲೂ ಮಹಾನಗರಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರವೇ ಉಂಟಾಗಿದೆ. ಈ ಬೇಸಿಗೆಯಲ್ಲಿ ಹಲವು ಕಡೆ ನೀರಿಗೆ ಸಮಸ್ಯೆ ಉಂಟಾಗಿರುವುದು ಗೊತ್ತೇ ಇದೆ. ಇನ್ನು ಮುಂಗಾರು ಪೂರ್ವ ಮಳೆಯಾಗದಿರುವ ಕಾರಣ ನೀರಿನ ಕೊರತೆ ಇದ್ದು, ಪ್ರಾಣಿ, ಪಕ್ಷಿಗಳಿಗೂ ಈ ಬಿಸಿ ತಟ್ಟಿದೆ.
ಈ ನಡುವೆ ಬಾಯಾರಿಕೆಯಿಂದ ಬಳಲಿದ್ದ ಕೋತಿಯೊಂದು ನೇರವಾಗಿ ಮನೆಯೊಳಗೆ ನುಗ್ಗಿ ನೀರಿಗಾಗಿ ಹುಡುಕಾಟ ನಡೆಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಮನೆಯೊಳಗೆ ನುಗ್ಗಿರುವ ಕೋತಿ ಅಡುಗೆ ಮನೆಯಲ್ಲಿ ಫಿಲ್ಟರ್ ನೀರು ಕುಡಿಯುವುದನ್ನು ನಾವು ನೋಡಬಹುದು.
ಈ ವಿಡಿಯೋವನ್ನು ಎಕ್ಸ್ (ಟ್ವಿಟರ್)ನಲ್ಲಿ @akshattak ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಕೋತಿ ಅಡುಗೆ ಮನೆಗೆ ನುಗ್ಗಿರುವುದನ್ನು ನೋಡಬಹುದು. ಅದು ಪ್ಯೂರಿಫೈಯರ್ ಟ್ಯಾಪ್‌ನಿಂದ ನೀರು ಕುಡಿಯಲು ಪ್ರಯತ್ನಿಸುತ್ತಿದೆ. ಬಾಲ್ಕನಿಯಲ್ಲಿ ಕುಳಿತಿರುವ ಇನ್ನೊಂದು ಕೋತಿ ಅದನ್ನು ಗಮನಿಸುತ್ತಿದೆ.
ಕೋತಿಗಳೂ ಸಾಮಾನ್ಯವಾಗಿ ಜನ ವಾಸಿಸುವ ಕಡೆಗಳಲ್ಲಿ ವಾಸಿಸುತ್ತವೆ. ದಟ್ಟ ಅರಣ್ಯದಲ್ಲಿ ಅವು ಕಾಣಸಿಗುವುದಿಲ್ಲ. ಏಕೆಂದರೆ ಇತ್ತೀಚಿಗೆ ಕೋತಿಗಳು ನಗರವಾಸಿಗಳಾಗಿವೆ. ಒಂದು ರೀತಿ ಮನುಷ್ಯರನ್ನೇ ನಂಬಿರುವ ಪರವಾಲಂಬಿಗಳು. ಅವು ಮನುಷ್ಯ ಬೆಳೆದ ಬೆಳೆ, ಅವರು ನೀಡಿದ ಆಹಾರ ಸೇವಿಸುವ ಮೂಲಕ ಬದುಕುತ್ತಿವೆ. ಹೀಗಾಗಿಯೇ ಬಹುತೇಕ ಪ್ರವಾಸಿ ತಾಣಗಳಲ್ಲಿ ಕೋತಿಗಳು ಕಂಡುಬರುತ್ತವೆ. ಅವು ತಮ್ಮ ಜೀವನ ಕ್ರಮದ ನಡುವೆ ಮನುಷ್ಯರನ್ನೇ ನೆಚ್ಚಿಕೊಂಡಿವೆ.
ಇಲ್ಲಿಯೂ ಸಹ ಇದೇ ರೀತಿ ನೋಡಬಹುದು. ಬೆಂಗಳೂರಿನ ನಗರ ಭಾಗದಲ್ಲೇ ಕೋತಿಗಳು ಕಂಡುಬರುತ್ತವೆ. ಹಲವು ಕಡೆ ಮಾರುಕಟ್ಟೆ, ದೇವಸ್ಥಾನ, ಪಾರ್ಕ್ ಹೀಗೆ ಹಲವು ಕಡೆಗಳಲ್ಲಿ ಕಂಡುಬರುತ್ತವೆ. ಆದರೆ ಈ ಬೇಸಿಗೆಯಲ್ಲಿ ಅವುಗಳಿಗೆ ಆಹಾರ ನೀರಿನ ಕೊರತೆ ಕಾಡಿದೆ. ಹೀಗಾಗಿ ನೀರು ಹುಡುಕಿಕೊಂಡು ಬಂದ ಕೋತಿ ಅಪಾರ್ಟ್‌ಮೆಂಟ್‌ಗೆ ನುಗ್ಗಿದೆ.
ಅದು ನೀರಿನ ಫಿಲ್ಟರ್ ಕಂಡಿದ್ದೆ ತಡ ಅದರ ಟ್ಯಾಪ್‌ನಿಂದ ನೀರು ಕುಡಿದು ತನ್ನ ದಾಹ ತೀರಿಸಿಕೊಂಡಿದೆ. ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 500 ಮಿಲಿಯನ್ ಲೀಟರ್ ನೀರಿನ ಕೊರತೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಸದ್ಯ ಬೆಂಗಳೂರಿಗೆ ಸರಿಯಾದ ಮಳೆಯಾಗಿಲ್ಲ. ಸಿಲಿಕಾನ್ ಸಿಟಿ ಜನರು ಮಳೆಯ ಎದುರು ನೋಡುತ್ತಿದ್ದರೆ ಪ್ರಾಣಿ, ಪಕ್ಷಿಗಳು ಸಹ ಮಳೆಯನ್ನೇ ಬಯಸುತ್ತಿವೆ.
ಈ ವಿಡಿಯೋ ನೋಡಿದ ಹಲವಾರು ಮಂದಿ ಪ್ರಾಣಿಗಳಿಗಾಗಿ ಮನೆಯ ಮುಂದೆ ಇಲ್ಲವೆ ಅಪಾರ್ಟ್‌ಮೆಂಟ್ ಮುಂದೆ ನೀರಿಟ್ಟು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಇನ್ನೊಂದು ತಿಂಗಳ ಕಾಲ ಪ್ರಾಣಿ ಪಕ್ಷಿಗಳಿಗೆ ನೀರಿಟ್ಟರೆ ಸಾಕು ಅವು ಬದುಕುಳಿಯುತ್ತವೆ ನಿಮಗೂ ಪುಣ್ಯ ಬರಲಿದೆ. ನೀವು ಸಹ ಪ್ರಾಣಿ, ಪಕ್ಷಿಗಳಿಗಾಗಿ ಎಲ್ಲಿ ಸಾಧ್ಯವೋ ಅಲ್ಲಿ ನೀರು ಇಟ್ಟು ಅವುಗಳ ಸಂಕಷ್ಟ ನಿವಾರಿಸಿ.



Click it and Unblock the Notifications
