Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಿಸ್ ಇಂಡಿಯಾ ತ್ರಿಪುರ ಕಿರೀಟ ಗೆದ್ದಿದ್ದ ಸುಂದರಿ ಕ್ಯಾನ್ಸರ್‌ನಿಂದ ನಿಧನ..! ಆಕೆಗೆ ಕಾಡಿದ ಕ್ಯಾನ್ಸರ್ ಯಾವುದು ಗೊತ್ತಾ?
ಕ್ಯಾನ್ಸರ್ ಎಂಬ ಮಹಾಮಾರಿ ಇತ್ತೀಚಿನ ವರ್ಷಗಳಲ್ಲಿ ತುಂಬಾ ಸಾಮಾನ್ಯ ಎನ್ನುವಂತಾಗಿದೆ. ಭಾರತದಲ್ಲಿ ಯುವ ಸಮೂಹ ಕ್ಯಾನ್ಸರ್‌ಗೆ ಒಳಗಾಗುತ್ತಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ಏಷ್ಯಾದಲ್ಲಿಯೇ ಅತೀ ಹೆಚ್ಚು ಕ್ಯಾನ್ಸರ್ ರೋಗಿಗಳಿರುವ ದೇಶಗಳಲ್ಲಿ ಭಾರತ 2ನೇ ಸ್ಥಾನದಲ್ಲಿರುವುದು ಆತಂಕದ ಸಂಗತಿ, ಕೆಲವು ದಶಕಗಳ ಹಿಂದೆ ಅಪರೂಪಕ್ಕೆ ಕಂಡು ಬರುತ್ತಿದ್ದ ಕ್ಯಾನ್ಸರ್ ಈಗ ತುಂಬಾನೇ ಹೆಚ್ಚಾಗುತ್ತಿದೆ, ಬದಲಾದ ಜೀವನಶೈಲಿ ಅಂದರೆ ಅಧಿಕ ರಾಸಾಯನಿಕ ಬಳಸಿರುವ ಆಹಾರಗಳ ಸೇವನೆ ಕ್ಯಾನ್ಸರ್ ಎಂಬ ಮಹಾಮಾರಿ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಆದರೆ ಇದೀಗ ಮಿಸ್ ಇಂಡಿಯಾ ತ್ರಿಪುರ 2017ರ ಪ್ರಶಸ್ತಿ ಗೆದ್ದುಕೊಂಡಿದ್ದ ಸುಂದರಿ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ರಿಂಕಿ ಚಕ್ಮಾ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅಸುನೀಗಿದ್ದಾರೆ. ಅವರಿಗಿನ್ನು ಕೇವಲ 28 ವರ್ಷವಾಗಿತ್ತು. 2022ರಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ರಿಂಕಿ ಚಕ್ಮಾಗೆ ಕಾಡಿತ್ತು ಸ್ತನ ಕ್ಯಾನ್ಸರ್
2022 ರಿಂದ ಅವರು ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ರಿಂಕಿಗೆ ಮೊದಲು ಮಾರಣಾಂತಿಕ ಫಿಲೋಡೆಸ್ ಟ್ಯೂಮರ್ (ಸ್ತನ ಕ್ಯಾನ್ಸರ್) ಇದೆ ಎಂದು ತಿಳಿಸಲಾಗಿತ್ತು. ಇದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದಾಗ್ಯೂ, ಕ್ಯಾನ್ಸರ್ ಆಕೆಯ ಶ್ವಾಸಕೋಶಕ್ಕೂ ಹರಡಿತು. ಜೊತೆಗೆ ಮೆದುಳಿನಲ್ಲಿ ಗಡ್ಡೆ ಬೆಳೆಯಲು ಕಾರಣವಾಯಿತು. ಬಳಿಕ ಆಕೆಯನ್ನು ಉಳಿಸಲು ಕೀಮೋಥೆರಪಿಯನ್ನು ಸಹ ಮಾಡಲಾಗಿತ್ತು. ಆದರೆ ಕ್ಯಾನ್ಸರ್‌ನಿಂದ ಉಳಿಸಲು ಸಾಧ್ಯವಾಗಿಲ್ಲ.
ಚಿಕಿತ್ಸಾ ಹಣ ಭರಿಸುವಂತೆ ಮನವಿ ಮಾಡಿದ್ದ ರಿಂಕಿ
ಕಳೆದ ವರ್ಷ ಅವರು ಆಸ್ಪತ್ರೆಯಲ್ಲಿ ಇದ್ದಾಗಲೇ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿಕಿತ್ಸಾ ಹಣಕ್ಕಾಗಿ ಮನವಿ ಮಾಡಿದ್ದರು. ಕಳೆದ ವರ್ಷ ಫೆಬ್ರವರಿ 22 ರಂದು ಮ್ಯಾಕ್ಸ್ ಹಾಸ್ಪಿಟಲ್ ಸಾಕೇತ್‌ಗೆ ದಾಖಲಿಸಲಾಗಿತ್ತು. ಆಕೆಯ ಒಂದು ಶ್ವಾಸಕೋಶವು ಬಹುತೇಕ ಕಾರ್ಯನಿರ್ವಹಿಸದ ಕಾರಣ ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದರು. ಈ ವೇಳ ತಮ್ಮ ಚಿಕಿತ್ಸೆಗಾಗಿ ಹಣಕಾಸಿನ ನೆರವು ನೀಡುವಂತೆ ಜನರನ್ನು ವಿನಂತಿಸುವ ಪೋಸ್ ಮಾಡಿದ್ದರು.
ಸ್ತನ ಕ್ಯಾನ್ಸರ್‌ನ ಲಕ್ಷಣಗಳೇನು?
ಸ್ತನದಲ್ಲಿ ಗಡ್ಡೆ ಕಂಡುಬರುವುದು, ಸ್ತನದ ತೊಟ್ಟಿನಿಂದ ರಕ್ತ ಬರುವುದು, ತೊಟ್ಟು ಕುಗ್ಗುವುದು, ತೊಟ್ಟುಗಳು ಒಳಕ್ಕೆಳೆದುಕೊಳ್ಳುವುದು, ತೊಟ್ಟುಗಳ ಮೇಲೆ ದದ್ದುಗಳು ಬೀಳುವುದು ಇತ್ಯಾದಿ ಸ್ತನದ ಕ್ಯಾನ್ಸರ್ ಲಕ್ಷಣಗಳಾಗಿವೆ. ಸ್ತನದಲ್ಲಿ ಗಡ್ಡೆ ಕಂಡುಬರುವುದು ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣವಾಗಿದೆ.
ಪ್ರತಿಯೊಂದು ಗಡ್ಡೆ ಕೂಡ ಅಪಾಯಕಾರಿಯಲ್ಲ. ಸ್ತನದಲ್ಲಿ ಕಂಡುಬರುವಂತಹ ಶೇ.10ರಷ್ಟು ಗಡ್ಡೆಗಳು ಮಾತ್ರ ಕ್ಯಾನ್ಸರ್ ಗಡ್ಡೆಗಳಾಗಿರುತ್ತದೆ. ಸ್ತನದಲ್ಲಿ ಕೋಶಗಳು ಕಂಡುಬರುತ್ತಿದ್ದರೆ ಆಗ ಅದು ಕ್ಯಾನ್ಸರ್ ಎಂದೇ ಹೇಳಬಹುದಾಗಿದೆ.
ಸ್ತನ ಕ್ಯಾನ್ಸರ್‌ನ ಮುಂದಿನ ಲಕ್ಷಣವೆಂದರೆ ಗಡ್ಡೆಗಳು ಕಂಡುಬರುವುದು. ಇದು ಹೆಚ್ಚಾಗಿ ಕಂಡುಬರುವಂತಹ ಸ್ತನದ ಕ್ಯಾನ್ಸರ್‌ನ ಲಕ್ಷಣವಾಗಿದೆ. ನಿಮಗೆ 50ಕ್ಕಿಂತ ಹೆಚ್ಚಿನ ವಯಸ್ಸಾಗಿದ್ದರೆ ಸ್ತನದ ಗಡ್ಡೆಗಳು ಕಂಡುಬರುತ್ತಿದ್ದರೆ ಚರ್ಮದ ಆ ಭಾಗದಲ್ಲಿ ಕೈಯಾಡಿಸಿ ಅದು ವೇಗವಾಗಿ ಚಲಿಸದೆ ಇದ್ದರೆ ಆಗ ಅದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.
ಯಾವುದು ಸ್ತನ ಕ್ಯಾನ್ಸರ್ ಅಲ್ಲ
ಸ್ತನಗಳು ಒಬ್ಬ ಮಹಿಳೆಗೆ ಇರುವಂತೆ ಮತ್ತೊಬ್ಬರಿಗೆ ಇರುವುದಿಲ್ಲ, ತುಂಬಾ ಮಹಿಳೆಯರಿಗೆ ತಮ್ಮ ಎರಡು ಸ್ತನದ ಗಾತ್ರ ಒಂದೇ ರೀತಿಯಿಲ್ಲ ಎಂಬ ಆತಂಕವಿರುತ್ತದೆ. ಇನ್ನು ಕೆಲವರು ನನ್ನ ಸ್ತನಗಳಲ್ಲಿ ನೋವಿದೆ ಸ್ತನ ಕ್ಯಾನ್ಸರ್ ಇರಬಹುದೇ ಎಂದು ಆತಂಕ ಪಡುತ್ತಾರೆ. ಮುಟ್ಟಿನ ಸಮಯದಲ್ಲಿ, ಅಂಡೊತ್ಪತ್ತಿ ಸಮಯದಲ್ಲಿ ಸ್ತನಗಳಲ್ಲಿ ನೋವು ಕಂಡು ಬರುವುದು ಸಹಜ. ಅಲ್ಲದೆ ವಯಸ್ಸಾಗುತ್ತಿದಂತೆ ಸ್ತನಗಳಲ್ಲಿಯೂ ಬದಲಾವಣೆ ಕಂಡು ಬರುವುದು. ಕೆಲವರಿಗೆ ಸ್ತನಗಳಲ್ಲಿ ಗಡ್ಡೆ ಉಂಟಾಗುವುದು, ಆದರೆ ಕ್ಯಾನ್ಸರ್ ಗಡ್ಡೆಯಾಗಿರುವುದಿಲ್ಲ. ಗಡ್ಡೆಯಾದಾಗ ನೀವು ವೈದ್ಯರ ಬಳಿ ತೋರಿಸಿ ಆ ಗಡ್ಡೆ ಏಕೆ ಬಂದಿದೆ ಎಂದು ತಿಳಿದುಕೊಂಡು, ಇದಕ್ಕೆ ಚಿಕಿತ್ಸೆ ಪಡೆಯಿರಿ. ಆದರೆ ಎಲ್ಲಾ ಗಡ್ಡೆಗಳು ಕ್ಯಾನ್ಸರ್ ಆಗಿರುವುದಿಲ್ಲ ಎಂಬುದನ್ನು ಸಹ ನೀವು ತಿಳಿದುಕೊಂಡಿರಿ.



Click it and Unblock the Notifications