Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ವಿಮಾನ ದುರಂತದಲ್ಲಿ ಪವಾಡದಂತೆ ಬದುಕುಳಿದ ಏಕೈಕ ವ್ಯಕ್ತಿ: ಆತ ಬದುಕಿದ್ದೇ ಪವಾಡ!
ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಗುರುವಾರ ಅಹಮದಾಬಾದ್‌ನಲ್ಲಿ ಪತನಗೊಂಡಿತು. ಘಟನೆಯಲ್ಲಿ ವಿಮಾಣದ ಅವಶೇಷಗಳು ಮಾತ್ರ ಉಳಿದಿರುವುದು ಕಂಡು ಜನರು ಆಘಾತಕ್ಕೊಳಗಾದರು. ಅದರಲ್ಲೂ ಎಲ್ಲರು ವಿಮಾನ ದುರಂತದ ವಿಡಿಯೋಗಳ ನೋಡಿ ಶಾಕ್ ಆಗಿದ್ದಾರೆ. ಟೇಕ್ ಆಫ್ ಆದ ಕೆಲವೇ ಸೆಕೆಂಡ್‌ನಲ್ಲಿ ವಿಮಾನವು ನೆಲಕಪ್ಪಳಿಸಿದೆ. ಹೀಗಾಗಿ ವಿಮಾನದಲ್ಲಿದ್ದ ಎಲ್ಲರು ಮೃತಪಟ್ಟಿದ್ದಾರೆ ಎಂದು ನಂಬಲಾಗಿತ್ತು.
ವಿಮಾನದಲ್ಲಿ 12 ಮಂದಿ ಸಿಬ್ಬಂದಿ ಹಾಗೂ 230 ಮಂದಿ ಪ್ರಯಾಣಿಕರಿದ್ದರು. ಆದ್ರೆ ಇಷ್ಟು ಜನರ ಪೈಕಿ ಓರ್ವ ಮಾತ್ರ ಈಗ ಬದುಕುಳಿದಿದ್ದಾನೆ ಎಂದು ತಿಳಿದುಬಂದಿದೆ. ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI 171 ನ ಸೀಟ್ ನಂ 11ಎ ನಲ್ಲಿ ಕುಳಿತಿದ್ದ ರಮೇಶ್ ಕುಮಾರ್ ಎಂಬುವವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನ ಪತನವಾಗುವ ಮುನ್ನ ಹೊರಗೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ. ಡ್ರೀಮ್ ಲೈನರ್ ವಿಮಾನವು ಲಂಡನ್‌ಗೆ ತೆರಳುವ ಮುನ್ನ ತಡವಾಗಿ ಟೇಕ್ ಆಫ್ ಆಗಿತ್ತು ಎಂದು ಹೇಳಲಾಗಿದೆ. ಏರ್ ಇಂಡಿಯಾದ ಬೋಯಿಂಗ್ 787 ಡ್ರೀಮ್‌ಲೈನರ್ ನಿರ್ವಹಿಸುತ್ತಿತ್ತು. ವಿಮಾನ ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾದ ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲ ಹಿಂದೆ ಬ್ರಿಟಿಷ್ ಪ್ರಜೆ 38 ವರ್ಷದ ರಮೇಶ್ ಕುಳಿತಿದ್ದರು. ಅವರು ವಿಮಾನದಿಂದ ಜಿಗಿದು ಆಂಬ್ಯಲೆನ್ಸ್ ಕಡೆ ನಡೆದುಕೊಂಡು ಬರುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಸಣ್ಣ ಪುಟ್ಟ ಗಾಯಗೊಳೊಂದಿಗೆ ಅವರು ಬದುಕುಳಿದಿರುವುದು ಎಲ್ಲರಲ್ಲೂ ಅಚ್ಚರಿ ತಂದಿದೆ.
ವಿಮಾನ ಸ್ಫೋಟಗೊಂಡಿದೆ ಎಂದು ಗುಜರಾತಿ ಭಾಷೆಯಲ್ಲಿ ಮಾತನಾಡುತ್ತಿರುವ ವ್ಯಕ್ತಿ ವೀಡಿಯೊದಲ್ಲಿ ಹೇಳುತ್ತಿರುವುದು ಕೇಳಿಬರುತ್ತದೆ. ಹಾಗೆ ರಮೇಶ್ ತಾನು ವಿಮಾನದಿಂದ ಜಿಗಿದಿರುವುದಾಗಿಯೂ ಹೇಳುತ್ತಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿದ್ದು ಯಾವುದೇ ಮಾಹಿತಿ ಅಥವಾ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್‌ಗಳಲ್ಲಿ ಸೀಟ್ 11A ಎಕಾನಮಿ ಕ್ಲಾಸ್ ಕ್ಯಾಬಿನ್‌ನ ಮೊದಲ ಸಾಲಿನಲ್ಲಿದೆ. ಇದು ವಿಂಡೋ ಸೀಟ್ ಆಗಿದ್ದು, ಇದರ ಬಳಿಯೇ ತುರ್ತು ನಿರ್ಗಮನದ ಬಾಗಿಲು ಸಹ ಇರಲಿದೆ. ಈ ಸೀಟ್ ಈಗ ರಮೇಶ್ ಎಂಬುವರ ಜೀವ ಉಳಿಸಿದೆ. ಅವರು ವಿಮಾನದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಅನುಮಾನಗೊಂಡ ತಕ್ಷಣವೇ ಸೀಟ್ ಬೆಲ್ಟ್ ತೆಗೆದು ವಿಮಾನದಿಂದ ಹೊರ ಜಿಗಿದಿರಬಹುದು ಎಂದು ಶಂಕಿಸಲಾಗಿದೆ. ಆದರೆ ತನಿಖೆಗಳು ನಡೆಯುತ್ತಿದ್ದು, ಬ್ಲಾಕ್ ಬಾಕ್ಸ್ ಕೂಡ ಪತ್ತೆ ಮಾಡಲಾಗಿದೆ.
ಇನ್ನು ಈ ಘಟನೆಯಲ್ಲಿ ವಿಮಾನದ ಅವಶೇಷಗಳು ಬಹಳಷ್ಟು ದೂರದವರೆಗೂ ಹರಡಿಕೊಂಡಿದೆ. ಹಾಗೆ ವಿಮಾನವು 625 ಅಡಿ ಎತ್ತರಿಂದ ಬಿದ್ದಿದೆ ಎಂದು ತಿಳಿದುಬಂದಿದೆ ಹಾಗೆ ವಿಮಾನವು ಬಿ ಜೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಹೀಗಾಗಿ ಮತ್ತಷ್ಟು ಸಾವು ನೋವಿಗೆ ಇದು ಕಾರಣವಾಗಿದೆ. 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಹೊತ್ತ ವಿಮಾನವು ಮಧ್ಯಾಹ್ನ 1:39 ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು ಮತ್ತು ಒಂದು 1:41ಕ್ಕಿಂತ ಮುನ್ನವೇ ವಾಯು ಸಂಚಾರ ನಿಯಂತ್ರಣದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು, ಹಾಗೆ 1 ನಿಮಿಷದೊಳಗೆ ಪತನಗೊಂಡಿತು ಎಂದು ತಿಳಿದುಬಂದಿದೆ.



Click it and Unblock the Notifications
