Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಟೈಟಾನಿಕ್ ಮುಳುಗುವ ಕೆಲವೇ ಗಂಟೆ ಹಿಂದೆ ಭರ್ಜರಿ ಭೋಜನ..! ಮೆನು ಕಾರ್ಡ್ ವೈರಲ್...!
ನಮಗೆ ಟೈಟಾನಿಕ್ ಹಡಗಿನ ಬಗ್ಗೆ ತಿಳಿದಿರುತ್ತೆ. ಅತ್ಯಂತ ಐಷಾರಾಮಿ ಹಡಗು ಸಮುದ್ರದಲ್ಲಿ ಮುಳುಗಿದ ದುರಂತವದು. 1912ರಲ್ಲಿ ಉತ್ತರ ಅಟ್ಲಾಂಟಿಕ ಸಾಗರದಲ್ಲಿ ವಿಶ್ವದ ಅತೀ ದೊಡ್ಡ ಹಡಗು ಮುಳುಗಿತ್ತು. 1912 ಏಪ್ರಿಲ್ 10ರಂದು ನ್ಯೂಯಾರ್ಕ್ ಕಡೆಗೆ ಪ್ರಯಾಣ ಬೆಳೆಸಿದ್ದ ಟೈಟಾನಿಕ್ ಕೇವಲ 4 ದಿನದಲ್ಲಿ ಮಂಜುಗಡ್ಡೆಗೆ ಡಿಕ್ಕಿಯಾಗಿ ಸಂಪೂರ್ಣ ಮುಳುಗಿತ್ತು.
ಈ ದುರಂತವನ್ನ ಆಧರಿಸಿ ಸಿನಿಮಾ ಕೂಡ ಹಾಲಿವುಡ್‌ನಲ್ಲಿ ತೆರೆಕಂಡು ದಾಖಲೆ ಬರೆದಿತ್ತು. ಇನ್ನು ಟೈಟಾನಿಕ್ ಮುಳುಗಿ ಸಾವಿರಾರು ಜನ ಪ್ರಾಣ ಕಳೆದುಕೊಂಡರು. ಹಡಗಿನಲ್ಲಿ ಲೈಫ್ ಜಾಕೆಟ್‌ಗಳ ಕೊರತೆ ಹಾಗೂ ರಕ್ಷಣಾ ದೋಣಿ ವ್ಯವಸ್ಥೆ ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿರುವುದು ಸಾವು ನೋವಿನ ಸಂಖ್ಯೆ ಹೆಚ್ಚಲು ಕಾರಣವಾಗಿತ್ತು ಎಂದು ತಿಳಿದುಬಂದಿತ್ತು.

ಆದರೆ ಹಡಗು ಮುಳುಗಿ ದಶಕಗಳು ಕಳೆದರು ಆ ಕುರಿತು ಅಚ್ಚರಿಯ ಮಾಹಿತಿಗಳು ಆಗಾಗ ಹೊರಬೀಳುತ್ತಲೇ ಇರುತ್ತವೆ. ಟೈಟಾನಿಕ್ ಹಡಗಿನ ಕುರಿತ ಕೆಲವು ಅಚ್ಚರಿಯ ವಿಚಾರಗಳು ಆಗಾಗ ಮುನ್ನಲೆಗೆ ಬರುತ್ತವೆ. ಇದೀಗ ಈ ಐಷಾರಾಮಿ ಹಡಗಲ್ಲಿ ಅಪಘಾತಕ್ಕೆ ಒಳಗಾಗುವ ಒಂದು ದಿನದ ಮೊದಲು ಏನೆಲ್ಲಾ ನಡೆದಿತ್ತು, ಅಲ್ಲಿ ಯಾವ ರೀತಿಯ ಊಟ ನೀಡಲಾಗಿತ್ತು? ಅಂದಿನ ಮೆನು ಕಾರ್ಡ್ ಹೇಗಿತ್ತು ಎಂಬುದಕ್ಕೆ ಪುರಾವೆಯೊಂದು ಸಿಕ್ಕಿದ್ದು, ಈ ಫೋಟೋಗಳು ವೈರಲ್ ಆಗುತ್ತಿವೆ.
ಟೈಟಾನಿಕ್‌ನ ಮೊದಲ ಮತ್ತು ಮೂರನೇ ದರ್ಜೆಯ ಪ್ರಯಾಣಿಕರಿಗೆ ಮೂಲ ಮೆನು ಕಾರ್ಡ್‌ಗಳ ಚಿತ್ರಗಳನ್ನು ಒಳಗೊಂಡಿರುವ ಎರಡು ಸ್ಲೈಡ್‌ಗಳನ್ನು ಪುಟವನ್ನು ಎಕ್ಸ್ (ಟ್ವಿಟರ್) ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಮೊದಲ ಮತ್ತು ಮೂರನೆ ದರ್ಜೆ ಪ್ರಯಾಣಿಕರಿಗೆ ಯಾವೆಲ್ಲಾ ಆಹಾರ ನೀಡಲಾಗಿತ್ತು. ಅಪಘಾತದ ಹಿಂದಿನ ದಿನ ಅಲ್ಲಿ ಏನೆಲ್ಲಾ ವಸ್ತು ಊಟಕ್ಕೆ ಕೊಡಲಾಗಿತ್ತು ಎಂಬುದನ್ನು ವಿವರಿಸುತ್ತದೆ.
ಈ ಮೆನು ಕಾರ್ಡ್ ಮೇಲೆ 1912 ಏಪ್ರಿಲ್ 14 ಎಂದು ಬರೆಯಲಾಗಿದೆ. ಅಂದರೆ ಟೈಟಾನಿಕ್ ಹಡಗು ಏಪ್ರಿಲ್ 15ರಂದು ಅಪಘಾತಕ್ಕೆ ಒಳಗಾಗಿತ್ತು. ಈ ಅಪಘಾತ ನಡೆಯುವ ಒಂದು ದಿನದ ಮೊದಲು ಈ ಮೆನು ಸಿದ್ಧವಾಗಿತ್ತು ಎಂದು ತಿಳಿದುಬಂದಿದೆ.
ಈ ಮೆನುವಿನ ಪ್ರಕಾರ, ಫಿಲೆಟ್ ಆಫ್ ಬ್ರಿಲ್, ಚಿಕನ್ ಎ ಲಾ ಮೇರಿಲ್ಯಾಂಡ್, ಕಾರ್ನ್ಡ್ ಬೀಫ್ ಮತ್ತು ಡಂಪ್ಲಿಂಗ್‌ಗಳನ್ನು ಒಳಗೊಂಡಿದೆ. "ಫ್ರಮ್ ದಿ ಗ್ರಿಲ್" ವರ್ಗದ ಅಡಿಯಲ್ಲಿ, ಮಟನ್ ಚಾಪ್ಸ್ ಹುರಿದ ಮತ್ತು ಬೇಯಿಸಿದ ಆಲೂಗಡ್ಡೆ, ಕಸ್ಟರ್ಡ್ ಪುಡಿಂಗ್, ಸೇಬು ಮೆರಿಂಗ್ಯೂ ಮತ್ತು ಪೇಸ್ಟ್ರಿ. ಬಫೆಯಲ್ಲಿ ಸಾಲ್ಮನ್ ಮೇಯನೇಸ್, ಪಾಟೆಡ್ ಸೀಗಡಿ, ನಾರ್ವೇಜಿಯನ್ ಆಂಚೊವಿಗಳು ಹುರಿದ ಹೆರ್ರಿಂಗ್‌ಗಳು, ಸಾರ್ಡೀನ್‌ಗಳು, ಹುರಿದ ಬೀಫ್, ಒಂದು ಸುತ್ತಿನ ಮಸಾಲೆಯುಕ್ತ ಗೋಮಾಂಸ, ಕರುವಿನ ಮತ್ತು ಹ್ಯಾಮ್ ಪೈ, ವರ್ಜಿನಿಯಾ ಮತ್ತು ಕುಂಬರ್‌ಲ್ಯಾಂಡ್ ಹ್ಯಾಮ್, ಬೊಲೊಗ್ನಾ ಸಾಸೇಜ್, ಗ್ಯಾಲಂಟೈನ್ ಆಫ್ ಚಿಕನ್, ಕೋರ್ನ್ಟ್ಯೂಸ್ ಚಿಕನ್ , ಬೀಟ್ರೂಟ್, ಟೊಮೆಟೊಗಳು, ಚೆಷೈರ್, ಸ್ಟಿಲ್ಟನ್, ಗೊರ್ಗೊನ್ಜೋಲಾ, ಎಡಮ್, ಕ್ಯಾಮೆಂಬರ್ಟ್, ರೋಕ್ಫೋರ್ಟ್, ಸೇಂಟ್ ಇವೆಲ್ ಚೆಡ್ಡರ್ ಸೇರಿದಂತೆ ಚೀಸ್ ಸಹ ಇತ್ತು.
ಇದು ವೆಜ್ ಮತ್ತು ನಾನ್ ವೆಜ್ ಮುಖ್ಯವಾಗಿ ಸೀಫುಡ್ ಹೊಂದಿದ್ದ ಮೆನು ಆಗಿತ್ತು. ಇವುಗಳೆಲ್ಲ ಎ ಕ್ಲಾಸ್‌ನಲ್ಲಿ ಅಥವಾ ಮೊದಲ ದರ್ಜೆಯ ಪ್ರಯಾಣಿಕರಿಗೆ ನೀಡುವ ಮೆನು ಆಗಿತ್ತು. ಆದರೆ ಮೂರನೆ ದರ್ಜೆಯ ಪ್ರಯಾಣಿಕರ ಮೆನು ಬೇರೆಯದ್ದೇ ಇತ್ತು.
ಮೂರನೇ ದರ್ಜೆಯ ಮೆನು, ಓಟ್ ಮೀಲ್ ಗಂಜಿ ಮತ್ತು ಹಾಲು, ಹೆರಿಂಗ್ಗಳು, ಆಲೂಗಡ್ಡೆ, ಹ್ಯಾಮ್ ಮತ್ತು ಮೊಟ್ಟೆಗಳು, ತಾಜಾ ಬ್ರೆಡ್ ಮತ್ತು ಬೆಣ್ಣೆ, ಮುರಬ್ಬ, ಸ್ವೀಡಿಷ್ ಬ್ರೆಡ್, ಚಹಾ ಮತ್ತು ಉಪಹಾರಕ್ಕಾಗಿ ಕಾಫಿಯನ್ನು ಒಳಗೊಂಡಿತ್ತು.
ಊಟದಲ್ಲಿ ಅನ್ನದ ಸೂಪ್, ತಾಜಾ ಬ್ರೆಡ್, ಬ್ರೌನ್ ಗ್ರೇವಿ, ಕ್ಯಾಬಿನ್ ಬಿಸ್ಕೇಟ್, ಸ್ವೀಟ್ ಕಾರ್ನ್, ಬೇಯಿಸಿದ ಆಲೂಗಡ್ಡೆ, ಪ್ಲಮ್ ಪುಡ್ಡಿಂಗ್, ಸಿಹಿ ಸಾಸ್ ಮತ್ತು ಹಣ್ಣುಗಳನ್ನು ಒಳಗೊಂಡಿತ್ತು. ಈ ಮೆನುವಿನಲ್ಲಿ ವಿಶೇಷವಾದ ಅಡುಗೆಗಳೇನು ಇರಲಿಲ್ಲ. ಇನ್ನೊಂದು ಅಚ್ಚರಿ ಎಂದರೆ ಟೈಟಾನಿಕ್‌ನಲ್ಲಿ ಸಾಮೂಹಿಕವಾಗಿ ತಯಾರಾದ ಕೊನೆಯ ಮೆನು ಇದಾಗಿದೆ. ಅಂದರೆ ಅಪಘಾತಕ್ಕೂ ಮುನ್ನ ಅದೇ ರಾತ್ರಿ ಮಾಡಲಾದ ಕೊನೆಯ ಅಡುಗೆ ಇದಾಗಿತ್ತು. ಈ ಊಟದ ಮುಗಿದ ದಿನವೇ ಏಪ್ರಿಲ್ 14ರ ರಾತ್ರಿ ಮಂಜುಗಡ್ಡೆಗೆ ಟೈಟಾನಿಕ್ ಡಿಕ್ಕಿ ಹೊಡೆದಿತ್ತು.
ಈ ಅಪಘಾತದಲ್ಲಿ 1,500ಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಇದು ವಿಶ್ವದ ಅತ್ಯಂತ ಐಷಾರಾಮಿ ದುರಂತ ಎಂಬ ಕಹಿ ಘಟನೆಗಳ ತನ್ನಲ್ಲಿಟ್ಟುಕೊಂಡಿತು.



Click it and Unblock the Notifications
