Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಇಂಟರ್‌ನೆಟ್‌ನಲ್ಲಿ ಹವಾ ಎಬ್ಬಿಸಿದ್ದ ಮೀಮ್ ನಾಯಿ ಇನ್ನಿಲ್ಲ..! ಎಲಾನ್ ಮಸ್ಕ್ ಸಹ ಇದರ ಫ್ಯಾನ್..!
ಇಂಟರ್‌ನೆಟ್ ಲೋಕ ಯಾರನ್ನು ಯಾವಾಗ ಫೇಮಸ್ ಮಾಡುಬಿಡುತ್ತೆ ಅನ್ನೋದು ಯಾರಿಗೂ ತಿಳಿದಿರುವುದಿಲ್ಲ. ಆನ್‌ಲೈನ್‌ನಲ್ಲಿ ಫೇಮಸ್ ಆಗಿಬಿಟ್ಟರೆ ಇಡಿ ವಿಶ್ವಕ್ಕೆ ತಿಳಿದುಬಿಡುತ್ತದೆ. ಈ ಸೋಶಿಯಲ್ ಮೀಡಿಯಾ ಯಾರನ್ನ ಬೇಕಾದರೂ ಒಂದೇ ರಾತ್ರಿಯಲ್ಲಿ ಹೀರೋ ಮಾಡಬಹುದು. ಅಲ್ಲದೆ ಪ್ರಾಣವನ್ನೂ ತೆಗೆಯಬಹುದು.
ಅದರಲ್ಲೂ ಇತ್ತೀಚಿಗೆ ಈ ಸೋಶಿಯಲ್ ಮೀಡಿಯಾ ಎಷ್ಟು ಬೆಳವಣಿಗೆ ಹೊಂದಿದೆ ಅಂದ್ರೆ ರಾತ್ರಿ ಬೆಳಗಾಗುವ ಒಳಗೆ ಜನ ಫೇಮಸ್ ಆಗಿಬಿಡುತ್ತಾರೆ. ಹೀಗೆ ಫೇಮಸ್ ಆದವರ ಪೈಕಿ ಈ ಶಿಬಾ ನಾಯಿಯೂ ಒಂದು. ನೀವು ಸಾಮಾಜಿಕ ಜಾಲತಾಣದಲ್ಲಿ ಯಾವುದಾದರು ವಿಡಿಯೋ ಫೋಟೋದಲ್ಲಿ ಈ ನಾಯಿಯ ಮುಖ ನೋಡಿರಬಹುದು.

ಹೆಚ್ಚಿನದಾಗಿ ಕೈಯಲ್ಲಿ ದೊಣ್ಣೆಯೊಂದನ್ನು ಹಿಡಿದು ಗಾಡ್ಜಿಲ್ಲಾ ಹಾಗೂ ಕಿಂಗ್‌ಕಾಂಗ್ ಅನ್ನು ಅಟ್ಟಾಡಿಸುತ್ತಿರುವ ಫೋಟೋಗಳು ಯಾವಾಗಲು ಹರಿದಾಡುತ್ತಿದ್ದವು ಆ ಫೋಟೋದಲ್ಲಿ ಇದೇ ನಾಯಿ ಕಂಡು ಬಂದಿತ್ತು. ಆದ್ರೆ ಈ ನಾಯಿ ಈಗ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಈ ವರ್ಡ್ ಫೇಮಸ್ ಮೀಮ್ ನಾಯಿ ಅನಾರೋಗ್ಯದ ಕಾರಣದಿಂದಾಗಿ ಇಂದು ಮೃತಪಟ್ಟಿದೆ. ಕಬೋಸು ಎಂದು ಕರೆಯಲ್ಪಡುವ ಈ ನಾಯಿ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿತ್ತು. ಜಪಾನಿನ ಈ ನಾಯಿ ಲ್ಯುಕೇಮಿಯಾ ಮತ್ತು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿತ್ತು ಎಂದು ತಿಳಿದುಬಂದಿದೆ. ಆದರೆ ಈಗ ಮೃತಪಟ್ಟಿದ್ದು ಪ್ರಾಣಿ ಪ್ರಿಯರು ಕಂಬಿನಿ ಮಿಡಿದಿದ್ದಾರೆ. ಈ ನಾಯಿ ಸಾಯುವಾಗ ಅದಕ್ಕೆ 18 ವರ್ಷವಾಗಿತ್ತು.
ಈ ನಾಯಿ ಸಾವಿನ ಕುರಿತು ಅದರ ಮಾಲೀಕ ಮಾಹಿತಿ ಹಂಚಿಕೊಂಡಿದ್ದು, ಇಂದು ನಮ್ಮ ಸಮುದಾಯದ ಹಂಚಿಕೊಂಡ ಸ್ನೇಹಿತ ಮತ್ತು ಸ್ಫೂರ್ತಿ ಕಬೋಸು ತನ್ನ ವ್ಯಕ್ತಿಯ ತೋಳುಗಳಲ್ಲಿ ಶಾಂತಿಯುತವಾಗಿ ಮಲಗಿದಳು. ಈ ಒಂದು ನಾಯಿ ಪ್ರಪಂಚದಾದ್ಯಂತ ಮಾಡಿದ ಪ್ರಭಾವವು ಊಹಿಸಲಾಗದು. ಅವಳು ಸಂತೋಷ ಮತ್ತು ಮಿತಿಯಿಲ್ಲದ ಪ್ರೀತಿಯನ್ನು ಮಾತ್ರ ತಿಳಿದಿದ್ದ ಜೀವಿ. ದಯವಿಟ್ಟು ಅವಳ ಆತ್ಮವನ್ನು ಉಳಿಸಿಕೊಳ್ಳಿ ಮತ್ತು ಆಕೆಯ ಕುಟುಂಬವು ನಿಮ್ಮ ಹೃದಯದಲ್ಲಿದೆ, ಮತ್ತು ಮುಖ್ಯವಾಗಿ, ನಿಮ್ಮ ಕಥೆಯು ಮುಂದುವರಿಯುತ್ತಿರುವಾಗ ಅವಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ ಎಂದು ಪೋಸ್ಟ್ ಮಾಡಲಾಗಿದೆ.
ಜಪಾನ್‌ನಲ್ಲಿ ಶಿಕ್ಷಕಿಯಾಗಿರುವ ಸಾಟೊ 2008 ರಲ್ಲಿ ತನ್ನ ಆಗಿನ್ನು ಮರಿಯಾಗಿದ್ದ ಈ ಕುಬೋಸುವನ್ನು ದತ್ತು ಪಡೆದು ಸಾಕಿದರು. ಕುಬೋಸು 2010ರಲ್ಲಿ ತೆಗೆಗಿದ್ದ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
2013 ರಲ್ಲಿ, ಕ್ರಿಪ್ಟೋಕರೆನ್ಸಿ ವ್ಯಾಮೋಹದ ನಡುವೆ, ಕುಬೋಸು ಫೋಟೋ ವೈರಲ್ ಮೀಮ್ ಚಿತ್ರವು ಡಾಗ್‌ಕಾಯಿನ್ ರಚನೆಗೆ ಸ್ಫೂರ್ತಿ ನೀಡಿತ್ತು. ಇದಾದ ಬಳಿಕ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಟ್ವಿಟರ್ ಲೋಗೋ ಆಗಿದ್ದ ನೀಲಿ ಹಕ್ಕಿಯ ಬದಲಿಗೆ ಇದೇ ನಾಯಿಯ ಫೋಟೋವನ್ನು ಹಾಕಿದ್ದರು. ಇದಾದ ಬಳಿಕ ಈ ನಾಯಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಯಾವ ನಾಯಿ ಎಂದು ಜನರು ಹುಡುಕಾಡಲು ಮುಂದಾಗಿದ್ದರು. ಆದರೆ ಈ ನಾಯಿ.
ಆದರೆ ಈ ನಾಯಿ ಈಗ ಮೃತಪಟ್ಟಿರುವ ಸುದ್ದಿ ತಿಳಿಯುತ್ತದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಶೋಕ ವ್ಯಕ್ತಿವಾಗಿದೆ. ವಿಡಿಯೋ, ಫೋಟೋಗಳಲ್ಲಿ ಎಲ್ಲರನ್ನು ನಗಿಸುತ್ತಿದ್ದ ನಾಯಿ ಇಂದು ನಮ್ಮೊಂದಿಗಿಲ್ಲ ಎಂಬುದನ್ನು ಸಕ್ರಿಯ ಬಳಕೆದಾರರು ನಂಬುತ್ತಿಲ್ಲ. ಬದಲಿಗೆ ಅದರ ಫೋಟೋ, ವಿಡಿಯೋಗಳ ಹಂಚಿಕೊಂಡು ದುಖಃ ತೋಡಿಕೊಂಡಿದ್ದಾರೆ.
ನೀವು ಸಹ ಈ ನಾಯಿಯ ಫೋಟೋ, ವಿಡಿಯೋ ನೋಡಿರುತ್ತೀರಿ. ಆದ್ರೆ ಇಂತಹ ಪ್ರಾಣಿಳು ಅನಾರೋಗ್ಯ ಕಾರಣದಿಂದ ಅರ್ಧ ವಯಸ್ಸಿನಲ್ಲೇ ಮೃತಪಡುವುದು ನಿಜಕ್ಕೂ ವಿಷಾದನೀಯ



Click it and Unblock the Notifications
