Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಪ್ಲೇಟ್‌ನಿಂದ ಜಿಗಿದು ಕೆಳಗೆ ಬಿದ್ದ ಮಾಂಸ..! ಇದರ ಹಿಂದಿರುವ ಕಾರಣವೇನು?
ಯಾವುದಾದ್ರು ಹೋಟೆಲ್‌ನಲ್ಲಿ ನೀವು ಆರ್ಡರ್ ಮಾಡಿದ್ದ ಮಾಂಸಹಾರದ ಫುಡ್ ಇದ್ದಕ್ಕಿದ್ದಂತೆ ಜೀವ ಪಡೆದುಬಿಟ್ಟರೆ ನಿಮಗೆ ಹೇಗಾಗುತ್ತೆ. ಇಲ್ಲೊಂದು ವೈರಲ್ ಆಗಿರುವ ವಿಡಿಯೋದಲ್ಲಿಯೂ ಸಹ ಇದೇ ರೀತಿ ತಟ್ಟೆಯಲ್ಲಿರುವ ಮಾಂಸವೊಂದು ಜೀವ ಪಡೆದು ಕೆಳಗ್ಗೆ ಬೀಳುತ್ತಿದೆ.
ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ ತಟ್ಟೆಯಲ್ಲಿದ್ದ ಮಾಂಸವೊಂದು ತಟ್ಟೆಯಿಂದ ಜಿಗಿದು ಕೆಳಗೆ ಬೀಳುತ್ತಿದೆ. ಇದು ಯಾವ ಪ್ರಾಣಿಯ ಮಾಂಸ ಎಂಬುದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಈ ವಿಡಿಯೋ ನೋಡಿದವರು ವಾಕಿಂಗ್ ಇನ್ ಡೆತ್ ಎಂಬ ಕಮೆಂಟ್ ಮಾಡುತ್ತಿದ್ದಾರೆ.

ವಿಡಿಯೋ ಮಾಡುತ್ತಿದ್ದಾತ ಭಯದಿಂದ ಕೂಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ತಟ್ಟೆಯಲ್ಲಿದ್ದ ಮಾಂಸದ ತುಂಡೊಂದು ತಟ್ಟೆಯಿಂದ ಜಿಗಿದು ಕೆಳಗೆ ಬೀಳುತ್ತಿದೆ. ಆದರೆ ಒಮ್ಮೆ ಜೀವ ತೆಗೆದರೆ ಮಾಂಸ ಅಲುಗಾಡಲು ಸಾಧ್ಯವೇ? ಈ ಮಾಂಸಕ್ಕೆ ಜೀವಬಂದಿದ್ದು ಹೇಗೆ ಇದರ ಹಿಂದಿರುವ ವಿಜ್ಞಾನವೇನು ಎಂದು ಮೊದಲು ತಿಳಿದುಕೊಳ್ಳೋಣ.
ಆದರೆ ಈ ವಿಡಿಯೋ ನೋಡಿದ ಮಂದಿ ಶಾಕ್‌ಗೆ ಒಳಗಾಗಿದ್ದಾರೆ. ಈ ಮಾಂಸ ತಟ್ಟೆಯಿಂದ ಕೆಳಗಿಳಿದು ಓಡಿದ ಕಂಡು ಇದೇನು ನಡೆಯುತ್ತಿದೆ ಎಂದು ಆಘಾತಕ್ಕೆ ಒಳಗಾಗಿದ್ದಾರೆ, ಒಮ್ಮೆ ಸತ್ತ ಪ್ರಾಣಿಗೆ ಮತ್ತೆ ಜೀವ ಬರುವುದು ಸಾಧ್ಯವೇ ಇಲ್ಲ ಆದರೆ ಈ ಮಾಂಸ ಹೇಗೆ ಜೀವ ಪಡೆದುಕೊಂಡಿತು ಎಂದು ಬಾಯಿ ಮೇಲೆ ಬೆರಳಿಟ್ಟಿದ್ದಾರೆ. ಜೊತೆಗೆ ಈ ಹೋಟೆಲ್ ಇರುವುದು ಎಲ್ಲಿ, ಇದೇನು ದೆವ್ವದ ಆಟ ಇರುವ ಹೋಟೆಲ್ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಮ್ಮೆ ದೇಹದಿಂದ ತಲೆಯ ಭಾಗ ಬೇರ್ಪಟ್ಟಾಗ ಯಾವ ಪ್ರಾಣಿಯು ಬುದುಕುಳಿಯುವುದಿಲ್ಲ. ಆದರೆ ಕೆಲವು ಪ್ರಕರಣದಲ್ಲಿ ನಾವು ಮಾಂಸ ಖಂಡಗಳ ಚಲನೆಯನ್ನು ನೋಡಬಹುದು. ಕೆಲವು ಸಮಯಗಳ ಕಾಲ ಮಾಂಸ ಖಂಡಗಳು ಅಲುಗಾಡುತ್ತವೆ. ಆದ್ರೆ ಇಲ್ಲಿರುವುದು ಕಪ್ಪೆ ಮಾಂಸವಾಗಿದೆ. ಈ ಕಪ್ಪೆ ಮಾಂಸ ಏಕೆ ಜೀವ ಪಡೆದಿದೆ ಎಂಬುದೇ ಇಲ್ಲಿ ದೊಡ್ಡ ಪ್ರಶ್ನೆಯಾಗಿದೆ.
ಈ ಮಾಂಸವು ಉಪ್ಪು ಹಾಗೂ ಸೋಯಾ ಸಾಸ್‌ನಲ್ಲಿರುವ ಸೋಡಿಯಂ ಅಯಾನ್ ರಾಸಾಯನಿಕದಿಂದ ಜೀವ ಪಡೆದಿದೆ. ಹೇಗೆ ಅಂದರೆ ಮಾಂಸದಲ್ಲಿರುವ ನ್ಯೂರಾನ್‌ಗಳು ಈ ರಾಸಾಯನಿಕ ಬಿದ್ದ ತಕ್ಷಣ ಪ್ರತಿಕ್ರಿಯಿಸಲು ಆರಂಭಿಸುತ್ತವೆ. ಹೀಗಾಗಿ ಆ ಮಾಂಸದ ತುಂಡು ಮತ್ತೆ ಜೀವ ಪಡೆದಂತೆ ಕಾಣುತ್ತದೆ. ಮಾಂಸ ಖಂಡಗಳಲ್ಲಿನ ನ್ಯೂರಾನ್‌ಗಳು ಉಪ್ಪಿನ ಸೋಡಿಯಂಗೆ ಪ್ರತಿಕ್ರಿಯಿಸಿವೆ ಎಂದು ವಿವರಿಸಲಾಗಿದೆ.
ಈ ಸತ್ಯ ತಿಳಿಯದ ಮಂದಿ ಈ ವಿಡಿಯೋಗೆ ಚಿತ್ರ ವಿಚಿತ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಮಾಂಸದೊಳಗೆ ಯಾವುದೋ ಆತ್ಮ ಸೇರಿಕೊಂಡಿದೆ ಎಂದು ಒಬ್ಬರು ಪ್ರತಿಕ್ರಿಯಿಸಿದರೆ ಮತ್ತೊಬ್ಬರು ಇದು ಝೋಂಬಿ ಮಾಂಸ ಎಂದು ಶಾಕ್ ಆಗಿದ್ದಾರೆ. ಇನ್ನು ಕೆಲವರು ಪ್ರಾಣಿಗಳನ್ನು ಕತ್ತರಿಸಿದ ಬಳಿಕ ಅವುಗಳ ಮಾಂಸ ಖಂಡ ಚಲನೆಯಲ್ಲಿರುವುದು ಸತ್ಯ ಇದನ್ನು ನಾವು ಸಹ ನೋಡಿದ್ದೇವೆ ಎನ್ನುತ್ತಿದ್ದಾರೆ.
ಆದರೆ ಈ ರೀತಿಯ ಬೆಳವಣಿಗೆ ಕಂಡ ಜನ ಮಾತ್ರ ತಮ್ಮ ಕಣ್ಣನ್ನೇ ನಂಬದೇ ಶಾಕ್ ಆಗಿದ್ದಾರೆ. ನಮ್ಮ ಎದುರಲ್ಲಿ ಈ ರೀತಿ ನಡೆದರೆ ಖಂಡಿತ ಆ ಹೋಟೆಲ್ ಬಿಟ್ಟು ಕೂಗಿಕೊಂಡು ಓಡುತ್ತಿದ್ದೆವು. ಈ ರೀತಿ ನಮ್ಮೆದುರು ಮುಂದೆಂದೂ ಆಗದಿರಲಿ ಎಂಬುದು ಅವರ ಅಭಿಪ್ರಾಯವಾಗಿದೆ.



Click it and Unblock the Notifications
