Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಅಯ್ಯಪ್ಪನ ಅರವಣ ಪ್ರಸಾದದಿಂದ ಗೊಬ್ಬರ ತಯಾರಿಕೆ: ಈ ನಿರ್ಧಾರ ಏಕೆ ಗೊತ್ತಾ?
ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ಒಂದಲ್ಲಾ ಒಂದು ರೀತಿಯ ವಿವಾದಗಳಿಂದ ಈಗ ಸುದ್ದಿಯಾಗುತ್ತಿದೆ. ಈ ಹಿಂದೆ ಅತೀ ಹೆಚ್ಚು ಭಕ್ತರು ಒಂದೇ ದಿನ ಆಗಮಿಸಿದ್ದ ಕಾರಣ ಭಾರೀ ನೂಕುನುಗ್ಗಲು, ಕಾಲ್ತುಳಿತ ಉಂಟಾಗಿ ಬಾರಿ ದುರಂತಗಳು ಸಂಭವಿಸಿದ್ದವು. ಇದಾದ ಬಳಿಕ ಸಣ್ಣ ಪುಟ್ಟ ಘಟನೆಗಳು ವರದಿಯಾಗುತ್ತಲೇ ಇವೆ.
ಈಗ ದೇವಾಲಯದ ಪ್ರಸಾದ ವಿಚಾರವಾಗಿ ಮತ್ತೊಂದು ಸುದ್ದಿ ಹೊರಬಿದ್ದಿದೆ. ಇತ್ತ ತಿರುಪತಿ ದೇವಾಲಯದ ಪ್ರಸಾದವಾಡ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಪತ್ತೆಯಾದ ಘಟನೆ ನಡೆದಿರುವ ಬಳಿಕ ಅಯ್ಯಪ್ಪ ಸ್ವಾಮಿ ಅರವಣ ಪ್ರಸಾದದಲ್ಲಿ ಕೀಟನಾಶಕ ಅಂಶ ಪತ್ತೆಯಾದ ಸುದ್ದಿ ಈಗ ಮತ್ತೆ ಮುನ್ನಲೆಗೆ ಬಂದಿದೆ. ಕಳೆದೊಂದು ವರ್ಷದ ಹಿಂದೆ ಅಯ್ಯಪ್ಪ ಸ್ವಾಮಿಯ ಪ್ರಸಾದವಾದ ಆರವಣದಲ್ಲಿ ಕೀಟನಾಶಕ ಅಂಶ ಪತ್ತೆಯಾಗಿತ್ತು.

ಈ ಘಟನೆ ಸುಪ್ರೀಂಕೋರ್ಟ್ ಮೆಟ್ಟಿಲೇರುವಂತೆ ಮಾಡಿತ್ತು. ಆದರೆ ಇನ್ನು ವಿಚಾರಣೆ ನಡೆಯುತ್ತಿದೆ. ಆದರೆ ಇದಕ್ಕೆ ಪೂರಕ ಸಾಕ್ಷಿಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ, ಆದರೆ ಈ ನಡುವೆ ಅಯ್ಯಪ್ಪನ ಸನ್ನಿಧಾನದಲ್ಲಿ ಅರವಣ ಪ್ರಸಾದ ಹಂಚಿಕೆ ನಿಷೇಧಿಸಲಾಗಿತ್ತು. ಹಾಗೆ ದೇವಾಲಯದಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಅರವಣ ಸಂಗ್ರಹ ಹಾಗೆಯೆ ಉಳಿದಿತ್ತು.
ಈಗ ಉಳಿದಿರುವ ಈ ಅರವಣ ಪ್ರಸಾದವನ್ನು ದೇವಾಲಯ ಕಮಿಟಿ ಗೊಬ್ಬರವನ್ನಾಗಿ ಮಾಡಲು ಮುಂದಾಗಿದೆ. ಸುಮಾರು 6 ಕೋಟಿ ಮೌಲ್ಯದ ಪ್ರಸಾದ ಸಂಗ್ರಹವಾಗಿದ್ದು, ಇದನ್ನು ನಾಶ ಮಾಡಬೇಕಾದ ಸ್ಥಿತಿ ಬಂದಿದೆ. ಇದನ್ನು ಭಕ್ತರಿಗೆ ಹಂಚುವುದು ಕಾನೂನು ಬಾಹಿರವಾಗಲಿದೆ ಹೀಗಾಗಿ ಇದನ್ನು ಸಾವಯವ ಗೊಬ್ಬರವನ್ನಾಗಿ ಮಾಡಲು ಕಮಿಟಿ ನಿರ್ಧರಿಸಿದೆ.
ಕಳೆದ ವರ್ಷ ಅರವಣ ಪ್ರಸಾದದಲ್ಲಿ ಕೀಟನಾಶಕ ಪ್ರಮಾಣವಿದೆ ಎಂಬ ಆರೋಪ ಕೇಳಿ ಬಂದಿತ್ತು. ಅರವಣ ಪ್ರಸಾದ ಮಾಡುವಾಗ ಬಳಸಲಾಗುವ ಏಲಕ್ಕಿ ಮೂಲಕ ಈ ಕೀಟನಾಶಕ ಪ್ರಮಾಣ ಪ್ರಸಾದದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿತ್ತು, ಈ ಏಲಕ್ಕಿಗಳಿಗೆ ನಿಗದಿಗಿಂತ ಹೆಚ್ಚಿನ ಕೀಟನಾಶಕ ಬಳಸಿ ಬೆಳೆಯಲಾಗಿತ್ತು. ಪ್ರಸಾದ ತಯಾರಿಕೆಗೂ ಮುನ್ನ ಏಲಕ್ಕಿಯನ್ನು ಶುಚಿಗೊಳಿಸಿದ ಹೊರತಾಗಿಯೂ ಅದರಲ್ಲಿ ಕೀಟನಾಶಕ ಅಂಶ ಉಳಿದು ಅಪಾಯಕ್ಕೆ ಕಾರಣವಾಗಿತ್ತು.
ಈ ಆರೋಪ ಹಿನ್ನೆಲೆ 2023ರ ಜನವರಿ 11 ರಂದು ಪ್ರಸಾದ ಮಾರಾಟಕ್ಕೆ ಹೈಕೋರ್ಟ್ ನಿರ್ಬಂಧಿಸಿತ್ತು. ಈ ಹಿನ್ನೆಲೆ ಕಳೆದ 1 ವರ್ಷದಿಂದ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಈ ಅರವಣ ಪ್ರಸಾದ ನೀಡದೆ ಮಲಿಕಪ್ಪುರಂ ದೇವಸ್ಥಾನದಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಈಗ ಈ ಪ್ರಸಾದವನ್ನು ಗೊಬ್ಬರವನ್ನಾಗಿ ಮಾಡಲು ಮುಂದಾಗಲಾಗಿದೆ. ಈ ಕಾರ್ಯದಿಂದ ದೇವಸ್ಥಾನ ಕಮಿಟಿಗೆ ಬರೋಬ್ಬರಿ 7 ಕೋಟಿ ರೂಪಾಯಿ ನಷ್ಟವಾಗಹುದು ಎಂದು ಅಂದಾಜಿಲಾಗಿದೆ.
ಭಕ್ತರಿಗೆ ಆನ್‌ಲೈನ್ ನೋಂದಣಿ ಕಡ್ಡಾಯ
ಶಬರಿಮಲೆ ಯಾತ್ರೆಗೆ ಇನ್ನು ಆನ್‌ಲೈಕ್ ಬುಕಿಂಗ್ ಕಡ್ಡಾಯ ಮಾಡಲಾಗಿದ್ದು, ಪ್ರತಿದಿನ 80,000 ಭಕ್ತರಿಗೆ ಮಾತ್ರ ಆಗಮಿಸಲು ಅವಕಾಶ ನೀಡಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ. ಇನ್ನು ಮುಂದೆ ದೆವಾಲಯಕ್ಕೆ ಬರುವ ಪ್ರತಿಯೊಬ್ಬರು ಕೂಡ ಆನ್‌ಲೈನ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಲಿದೆ.
ಶಬರಿಮಲೆ ದೇವಾಲಯದ ವಾರ್ಷಿಕ ಮಂಡಲಂ ಮಕರವಿಳಕ್ಕು ಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ನಿತ್ಯ ಲಕ್ಷ ಲಕ್ಷ ಮಂದಿ ಭಕ್ತರು ದೇವಾಲಯಕ್ಕೆ ಹರಿದು ಬರುವ ಸಾಧ್ಯತೆ ಇದೆ. ಹೀಗಾಗಿ ಭಕ್ತರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ವಿಚಾರವಾಗಿ ಈ ಹೊಸ ನಿಯಮ ಜಾರಿ ಮಾಡಲಾಗಿದೆ.



Click it and Unblock the Notifications