Latest Updates
-
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ! -
ಸಲಿಂಗ ಜೋಡಿಗಳಿಗೆ ಸಿಕ್ತು ಭದ್ರತೆ: ಹೈಕೋರ್ಟ್ನ ಈ ತೀರ್ಪು ನಿಮ್ಮ ಬದುಕನ್ನೇ ಬದಲಿಸಬಹುದು! -
ಸುಡುವ ಬಿಸಿಲಿಗೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ನಕಲಿ ಜಿಮ್ ಸಪ್ಲಿಮೆಂಟ್ ಬಳಸುತ್ತಿದ್ದೀರಾ? ದೆಹಲಿಯ ಈ ದಾಳಿ ನಿಮ್ಮ ಕಣ್ಣು ತೆರೆಸುತ್ತದೆ! -
40 ಡಿಗ್ರಿ ಬಿಸಿಲಲ್ಲೂ ಫ್ರೆಶ್ ಆಗಿರಬೇಕಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ! -
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ!
ನವಗ್ರಹಗಳ ಶಕ್ತಿಯನ್ನು ಬಲಪಡಿಸಲು ಸ್ನಾನದ ನೀರಿಗೆ ಈ ವಸ್ತುಗಳನ್ನು ಹಾಕಿರಿ!
ಕೆಲವೊಂದು ಸಲ ನಾವು ಅಂದುಕೊಂಡ ಯಾವುದೇ ಕೆಲಸಗಳು ಆಗೋದೇ ಇಲ್ಲ. ಅರ್ಧದಲ್ಲೇ ನಿಂತು ನಮಗೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದಕ್ಕೆಲ್ಲಾ ಕಾರಣ ನಮ್ಮ ಗ್ರಹಗತಿಗಳು. ಯಾವಾಗ ನಮ್ಮ ಗ್ರಹಗತಿಗಳು ಚೆನ್ನಾಗಿ ಇರೋದಿಲ್ವೋ ನಾವು ಅಂದುಕೊಂಡ ಯಾವುದೇ ಕೆಲಸಗಳು ಆಗೋದೇ ಇಲ್ಲ. ಗ್ರಹಗಳ ಚಲನೆಯು ಕೆಲವೊಂದು ಸಾರಿ ನಮಗೆ ಶುಭ ಫಲಿತಾಂಶಗಳನ್ನು ನೀಡಿದ್ರೆ, ಇನ್ನೂ ಕೆಲವು ಸಾರಿ ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಯಾವುದೇ ಗ್ರಹವು ನಿಮ್ಮ ಕುಂಡಲಿಯಲ್ಲಿ ದುರ್ಬಲ ಸ್ಥಿತಿಯಲ್ಲಿದ್ದರೆ, ಮತ್ತು ಅದು ನಿಮಗೆ ದೈಹಿಕ ಮತ್ತು ಮಾನಸಿಕ ನೋವನ್ನು ನೀಡುತ್ತಿದ್ದರೆ, ನೀವು ಯಾವುದೇ ರೀತಿಯ ರತ್ನಗಳನ್ನು ಧರಿಸಬಾರದು. ಬದಲಿಗೆ, ನೀವು ಆಯಾ ಗ್ರಹಕ್ಕೆ ಸಂಬಂಧಿಸಿದ ಔಷಧೀಯ ಸ್ನಾನವನ್ನು ಮಾಡಬೇಕು. ಇದರಿಂದಾಗಿ ನೀವು ಗ್ರಹದಿಂದ ಉಂಟಾಗುವ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು. ಅಷ್ಟುಕ್ಕು ನಮ್ಮ ಕುಂಡಲಿಯಲ್ಲಿರುವ ನವಗ್ರಹಗಳ ಶಕ್ತಿಯನ್ನು ಬಲ ಪಡಿಸಲು ಏನು ಮಾಡಬೇಕು ಅನ್ನೋದನ್ನು ತಿಳಿಯೋಣ.

ಔಷಧೀಯ ಸ್ನಾನವನ್ನು ತೆಗೆದುಕೊಳ್ಳೋದು ಹೇಗೆ?
ಪ್ರತಿಯೊಂದು ಗ್ರಹವನ್ನು ಬಲ ಪಡಿಸೋದಕ್ಕೆ ಬೇರೆ ಬೇರೆ ವಸ್ತುಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಬೇಕು. ಅದೇ ರೀತಿ ಆ ವಸ್ತುವನ್ನು ನೀರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಡಬೇಕು. ಮಾರನೇ ದಿನ ಬೆಳಗ್ಗೆ ಆ ನೀರಿನಲ್ಲಿ 108 ಬಾರಿ ನಿಮ್ಮ ಬೆರಳನ್ನು ಅದ್ದಿ ತಿರುಗಿಸುತ್ತಾ ಇರಬೇಕು. ಈ ಬಾರಿ ಮಂತ್ರ ಪಠಣೆಯನ್ನೂ ಮಾಡಬೇಕು. ಇನ್ನೂ ಸ್ನಾನ ಮಾಡುವಾಗಲೂ ಮೌನವಾಗಿ ಅದೇ ಮಂತ್ರವನ್ನು ಹೇಳುತ್ತಿರಬೇಕು.
ಸೂರ್ಯದೇವ
ನಿಮ್ಮ ಕುಂಡಲಿಯಲ್ಲಿ ಸೂರ್ಯನು ದುರ್ಬಲ ಸ್ಥಿತಿಯಲ್ಲಿದ್ದರೆ ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ. ಆ ನೀರಿಗೆ ಕೆಂಪು ಹೂವುಗಳು, ಕೇಸರಿ ಹಾಗೂ ಕೆಲ ವಸ್ತುಗಳನ್ನು ಸೇರಿಸಿ ಶನಿವಾರ ರಾತ್ರಿ ನೀರಿನಲ್ಲಿ ನೆನೆಸಿಡಿ. ಭಾನುವಾರ ಬೆಳಗ್ಗೆ ಆ ನೀರಿನಲ್ಲಿ ನಿಮ್ಮ ಉಂಗುರದ ಬೆರಳನ್ನು ಸುತ್ತುವ ಮೂಲಕ ಕೆಳಗೆ ಕೊಟ್ಟಿರುವ ಮಂತ್ರವನ್ನು ಪಠಿಸಿ. ಇದರಿಂದ ನೀರು ಮಂತ್ರಗಳ ಪ್ರಭಾವವನ್ನು ಪಡೆಯುತ್ತದೆ. ಇದರ ನಂತರ, ಈ ನೀರನ್ನು ಮತ್ತೊಂದು ಬಕೆಟ್ ನಲ್ಲಿ ನೀರು ಬೆರೆಸಿ ಸ್ನಾನ ಮಾಡಿ.
ಮಂತ್ರ : ಓಂ ಹರಿ ಘ್ರಾಣಿ ಸೂರ್ಯಾಯ ನಮಃ
ಚಂದ್ರ ದೇವ
ಚಂದ್ರ ಗ್ರಹವು ನಿಮ್ಮ ಜಾತಕದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿದ್ದರೆ, ಭಾನುವಾರದಂದು ಬೆಳ್ಳಿಯ ಪಾತ್ರೆಯಲ್ಲಿ ಈ ಕೆಳಗಿನ ಔಷಧಿಯನ್ನು ನೆನೆಸಿ ಮತ್ತು ಸೋಮವಾರದಂದು ಈ ಔಷಧೀಯ ನೀರನ್ನು ಸಾಮಾನ್ಯ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ. ಮತ್ತು ಸ್ನಾನ ಮಾಡುವಾಗ ಈ ಕೆಳಗಿನ ಮಂತ್ರವನ್ನು ಪಠಿಸೋದ್ರಿಂದ ರೋಗಗಳು ಮತ್ತು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಔಷಧಿ
ಬಿಳಿ ಶ್ರೀಗಂಧ ಮತ್ತು ಪಂಚಗವ್ಯ ಮುಂತಾದ ಪದಾರ್ಥಗಳನ್ನು ಕುದಿಸಿ ಮತ್ತು ಅವುಗಳನ್ನು ಫಿಲ್ಟರ್ ಮಾಡಿ ಮತ್ತು ಅದು ತಣ್ಣಗಾಗುವವರೆಗೆ ಕಾಯಿರಿ. ಈಗ ಈ ನೀರನ್ನು ಮತ್ತೊಂದು ಬಕೆಟ್‌ನಲ್ಲಿರುವ ಸಾಮಾನ್ಯ ನೀರಿನಲ್ಲಿ ಬೆರೆಸಿ ಮತ್ತು ಅದರಲ್ಲಿ ನಿಮ್ಮ ಬೆರಳನ್ನು 108 ಬಾರಿ ತಿರುಗಿಸುವ ಮೂಲಕ ಈ ಕೆಳಗಿನ ಮಂತ್ರವನ್ನು ಪಠಿಸಿ.
ಮಂತ್ರ : ಓಂ ಸೋಂ ಸೋಮಾಯ ನಮಃ
ಮಂಗಳ ದೇವ
ಮಂಗಳ ದೇವ ನಿಮ್ಮ ಕುಂಡಲಿಯಲ್ಲಿ ನಕಾರಾತ್ಮಕ ಪರಿಣಾಮವನ್ನು ಬೀರಿದ್ದರೆ ಅನಂತಮೂಲ, ದೇವದಾರು, ಕೆಂಪು ಚಂದನ ಮತ್ತು ದಾಸವಾಳದ ಹೂವುಗಳನ್ನು ಸೋಮವಾರ ತಾಮ್ರದ ಪಾತ್ರೆಯಲ್ಲಿ ನೀರಿನೊಂದಿಗೆ ಹಾಕಿ ರಾತ್ರಿಯಿಡೀ ನೆನೆಸಿ. ಮಂಗಳವಾರ ಬೆಳಗ್ಗೆ ಕುದಿಸಿ ಸ್ವಲ್ಪ ತಣ್ಣಗಾಗಿಸಿ. ಆ ನಂತರ ಸಾಮಾನ್ಯ ನೀರಿಗೆ ಇದನ್ನು ಸೇರಿಸಿ, ಕೆಳಗಿನ ಮಂತ್ರವನ್ನು ಪಠಿಸುತ್ತಾ ಸ್ನಾನ ಮಾಡಿ.
ಮಂತ್ರ : ಓಂ ಅಂಗಾರಕಾಯ ನಮಃ
ಬುಧ ದೇವ
ನಿಮ್ಮ ಜಾತಕದಲ್ಲಿ ಬುಧ ದೇವನು ಅಶುಭ ಫಲಗಳನ್ನು ನೀಡುತ್ತಿದ್ದರೆ, ಮಂಗಳವಾರ ರಾತ್ರಿ ಮಣ್ಣಿನ ಪಾತ್ರೆಯಲ್ಲಿ ವಿಧಾರ ಮೂಲ, ಸ್ವಲ್ಪ ಹಸುವಿನ ಸಗಣಿ, ಕಮಲದ ಬೀಜಗಳು, ಯಾವುದಾದರೂ ಹಸಿರು ಹಣ್ಣು, ಜೇನುತುಪ್ಪ ಮತ್ತು ಸ್ವಲ್ಪ ಅಕ್ಕಿಯನ್ನು ಸೇರಿಸಿ ಮಣ್ಣಿನ ಪಾತ್ರೆಯಲ್ಲಿ ನೀರಿನೊಂದಿಗೆ ನೆನೆಸಿಡಿ. ಬುಧವಾರ ಬೆಳಗ್ಗೆ ಸಾಮಾನ್ಯ ನೀರಿಗೆ ಅದನ್ನು ಹಾಕಿ ಬೆರೆಸಿ. ಹಾಗೂ ಕೆಳಗಿನ ಮಂತ್ರವನ್ನು 108 ಬಾರಿ ಪಠಿಸುತ್ತಾ ಸ್ನಾನ ಮಾಡಿ.
ಮಂತ್ರ : ಓಂ ಬುಂ ಬುಧಾಯ ನಮಃ
ಗುರು ದೇವ
ಗುರುದೇವ ನಿಮ್ಮ ಜಾತಕದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದರೆ, ಬುಧವಾರ ರಾತ್ರಿ ಚಿನ್ನ ಅಥವಾ ಹಿತ್ತಾಳೆಯ ಪಾತ್ರೆಗಳಲ್ಲಿ ಅರಿಶಿನ, ಮಲ್ಲಿಗೆ, ಜೇನು ತುಪ್ಪ, ಮದ್ಯಸಾರವನ್ನು ನೀರಿನಲ್ಲಿ ನೆನೆಸಿಡಿ. ಗುರುವಾರದಂದು ಸಾಮಾನ್ಯ ನೀರನ್ನು ಹೊಂದಿರುವ ಮತ್ತೊಂದು ಬಕೆಟ್‌ಗೆ ಈ ನೀರನ್ನು ಬೆರೆಸಿ ಕೆಳಗಿನ ಮಂತ್ರವನ್ನು ಪಠಿಸಿ ಸ್ನಾನ ಮಾಡಿ.
ಮಂತ್ರ : ಓಂ ಬೃಹಸ್ಪತಯೇ ನಮಃ
ಶುಕ್ರ ದೇವ
ಶುಕ್ರ ದೇವನ ನಕಾರಾತ್ಮಕ ಪ್ರಭಾವದಿಂದಾಗಿ ನಿಮ್ಮ ಜೀವನದಲ್ಲಿ ತೊಂದರೆಗಳು ಹಾಗೂ ಆರೋಗ್ಯ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ, ಏಲಕ್ಕಿ, ಬಿಳಿ ಕಮಲ, ಮತ್ತು ಕೇಸರಿಯನ್ನು ಬೆಳ್ಳಿಯ ಪಾತ್ರೆಯಲ್ಲಿ ನೀರಿನೊಂದಿಗೆ ಬೆರಿಸಿ ರಾತ್ರಿಯಿಡೀ ನೆನೆಸಿಡಿ. ಬೆಳಗ್ಗೆ ಎದ್ದ ತಕ್ಷಣ ಸಾಮಾನ್ಯ ನೀರಿಗೆ ಇದನ್ನು ಬೆರೆಸಿ ಈ ಕೆಳಗಿನ ಮಂತ್ರವನ್ನು ಪಠಿಸಿ ಸ್ನಾನ ಮಾಡಿ.
ಮಂತ್ರ : ಓಂ ಶುಂ ಶುಕ್ರಾಯ ನಮಃ
ಶನಿ ದೇವ
ಬುಧನು ನಿಮ್ಮ ಜಾತಕದಲ್ಲಿ ಅಶುಭ ಫಲಿತಾಂಶಗಳನ್ನು ನೀಡುತ್ತಿದ್ದರೆ, ಶುಕ್ರವಾರ ರಾತ್ರಿ ಕಬ್ಬಿಣದ ಪಾತ್ರೆಯಲ್ಲಿ ಕಪ್ಪು ಬಣ್ಣದ ಧಾನ್ಯ, ಕಪ್ಪು ಎಳ್ಳು, ಲವಂಗ ಮತ್ತು ಯಾವುದಾದರೂ ಪರಿಮಳಯುಕ್ತ ಹೂವನ್ನು ನೀರಿನಲ್ಲಿ ಹಾಕಿ ನೆನೆಸಿಡಿ. ಶನಿವಾರ ಬೆಳಗ್ಗೆ ಈ ನೀರನ್ನು ಸಾಮಾನ್ಯ ನೀರಿಗೆ ಹಾಕಿ, ಈ ಮಂತ್ರವನ್ನು ಪಠಿಸುತ್ತಾ ಸ್ನಾನ ಮಾಡಿ.
ಮಂತ್ರ : ಓಂ ಶನ ಶನಿಶ್ಚರಾಯ ನಮಃ
ರಾಹು
ರಾಹುವಿನ ಪ್ರಭಾವ ತುಂಬಾನೇ ಕಠಿಣವಾಗಿರುತ್ತದೆ. ಒಂದು ವೇಳೆ ನಿಮ್ಮ ಜಾತಕದಲ್ಲಿ ರಾಹುವಿನ ಪ್ರಭಾವವಿದ್ದರೆ ಒಂದು ದಿನ ಮುಂಚಿತವಾಗಿ ಎಳ್ಳು, ಲೋಭನ, ಮುತ್ತು, ಲೋಧ್ರ ಹೂವನ್ನು ನೀರಿನಲ್ಲಿ ನೆನೆಸಿ. ಬುಧವಾರ ಅಥವಾ ಶನಿವಾರ ಈ ಮಂತ್ರ ಪಠಿಸುತ್ತಾ ಸ್ನಾನ ಮಾಡಬಹುದು. ಸ್ನಾನ ಮಾಡುವಾಗ ಕಬ್ಬಿಣದ ಬಕೆಟ್ ಬಳಸಿರಿ
ಮಂತ್ರ : ಓಂ ರಾ ರಾಹವೇ ನಮಃ
ಕೇತು
ನಿಮ್ಮ ಕುಂಡಲಿಯಲ್ಲಿ ಕೇತು ಗ್ರಹವು ದುರ್ಬಲ ಸ್ಥಿತಿಯಲ್ಲಿದ್ದರೆ, ನೀರಿಗೆ ಲೋಭನ, ಸಾಸಿವೆಯನ್ನು ಹಾಕಿ ಕುದಿಸಿ ಮತ್ತು ಅದನ್ನು ಬುಧವಾರ ಅಥವಾ ಶನಿವಾರದಂದು ಫಿಲ್ಟರ್ ಮಾಡಿ. ಸಾಮಾನ್ಯ ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ. ಸ್ನಾನ ಮಾಡುವ ಸಂದರ್ಭದಲ್ಲಿ ಈ ಕೆಳಗಿನ ಮಂತ್ರವನ್ನು 108 ಬಾರಿ ಪಠಿಸುತ್ತಾ ಸ್ನಾನ ಮಾಡಿ. ಇದು ನಿಮ್ಮ ಎಲ್ಲಾ ಸಮಸ್ಯೆಗಳು ಮತ್ತು ರೋಗಗಳನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ.
ಮಂತ್ರ : ಓಂ ಕೇ ಕೇತ್ವೇ ನಮಃ
ನವಗ್ರಹಗಳು ನಿಮ್ಮ ರಾಶಿಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದ್ದರೆ ಅವುಗಳ ಪರಿಣಾಮ ಕಡಿಮೆ ಮಾಡೋದಕ್ಕೆ ಈ ರೀತಿ ಮಾಡಿ. ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.



Click it and Unblock the Notifications

