Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
100 ದಿನ ನೀರಿನೊಳಗೆ ಕಳೆದ ವ್ಯಕ್ತಿ..! ಹೊರಬಂದಾಗ 10 ವರ್ಷ ಚಿಕ್ಕವನಾಗಿದ್ದ.!
ಜಗತ್ತಿನಲ್ಲಿ ಎಷ್ಟು ವಿಚಿತ್ರ ಹಾಗೂ ವಿಭಿನ್ನ ರೀತಿಯ ವ್ಯಕ್ತಿಗಳಿದ್ದಾರೆ ಎಂದು ನಾವು ನೋಡಿರುತ್ತೇವೆ. ಅದರಲ್ಲೂ ಕೆಲವರು ಎಂತೆಂತ ಸಾಹಸಕ್ಕೆ ಕೈಹಾಕುತ್ತಾರೆ ಅಂದ್ರೆ ನಾವು ನಂಬಲು ಸಾಧ್ಯವಾಗುವುದಿಲ್ಲ. ಇಲ್ಲಿಯೂ ಸಹ ಒಬ್ಬ ಅಂತಹ ಸಾಹಸ ಮಾಡಿ ಈಗ ಎಲ್ಲರ ಗಮನ ಸೆಳೆದಿದ್ದಾನೆ.
ಆತ ವಯಸ್ಸಾಗದಿರಲು ಮಾಡಿದ ಸಾಹಸ ಕಂಡು ಜನರೆ ನಿಬ್ಬೆರಗಾಗಿದ್ದಾರೆ. ಏಕೆಂದರೆ ಆತ ಸಮುದ್ರದಲ್ಲಿ ಬರೋಬ್ಬರಿ 100 ದಿನಗಳ ಕಾಲ ಕಳೆದಿದ್ದ. ಇದರಿಂದ ಆತ 10 ವರ್ಷ ಚಿಕ್ಕವನಾಗಿದ್ದಾನಂತೆ. ವಯಸ್ಸಾದಿಕೆಯನ್ನು ತಡೆಯುವುದು ಅಸಾಧ್ಯ ಆದ್ರೆ ಇದನ್ನು ಮಾಡಿಯೇ ತೀರುತ್ತೇವೆ ಎಂದು ಪ್ರಪಂಚದಾದ್ಯಂತದ ವಿಜ್ಞಾನಿಗಳು ನಿರಂತರ ಅಧ್ಯಯನದಲ್ಲಿ ತೊಡಗಿದ್ದಾರೆ.

(ಫೋಟೋ ಕೃಪೆ:drdeepsea.com)
ಇದಕ್ಕೆ ಜೀವಂತ ಸಾಕ್ಷಿ ಒದಗಿಸಬೇಕು ಎಂದು ಯೋಚಿಸಿದ ಜೋಸೆಫ್ ಡಿಟೂರಿ ಎಂಬ ವ್ಯಕ್ತಿ 100 ದಿನಗಳ ಕಾಲ ನೀರಿನೊಳಗೆ ಬದುಕಲು ನಿರ್ಧರಿಸಿದ್ದ, ಹೊರ ಜಗತ್ತಿನ ಸಂಪರ್ಕವೇ ಇಲ್ಲದೆ ನೀರಿನೊಳಗೆ 100 ದಿನ ಕಳೆದು ಆತ ಈಗ ಎಲ್ಲರ ಹುಬ್ಬೇರುವಂತೆ ಮಾಡಿದ್ದಲ್ಲದೆ 10 ವರ್ಷ ಚಿಕ್ಕವನಾಗಿದ್ದಾನಂತೆ.
ಯಾರು ಈ ಜೋಸೆಫ್ ದಿಟುರಿ ?
ಡಾ.ಡೀಪ್ ಸೀ ಎಂದೂ ಕರೆಯಲ್ಪಡುವ ಡಿಟುರಿ, 2023ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಮೇಲ್ಮೈಯಿಂದ 6.7 ಮೀಟರ್ ಕೆಳಗೆ ಒಂದು ಚಿಕ್ಕ ಪಾಡ್‌ನೊಳಗೆ 93 ದಿನಗಳನ್ನು ಕಳೆಯುವ ಮೂಲಕ ವಿಶ್ವದಾಖಲೆಯನ್ನು ಮಾಡಿದ್ದರು. ಅಮೆರಿಕ ನೌಕಾಪಡೆಯ ನಿವೃತ್ತ ಸೈನಿಕನಾದ ಆತ ಹೊಸ ವಿಶ್ವ ದಾಖಲೆಯನ್ನು ಮಾಡಿದ ಬಳಿಕವೂ 100 ದಿನಗಳ ಪೂರೈಸದೆ ಹೊರಬರುವುದಿಲ್ಲ ಎಂದಿದ್ದ.
ನೀರಿನ ಅಡಿ 100 ದಿನ ವಾಸ ಮಾಡಿದ್ದೇಕೆ ?
ಇದು ಎಂದಿಗೂ ದಾಖಲೆಯ ಬಗ್ಗೆ ಅಲ್ಲ. ಪ್ರಾಜೆಕ್ಟ್ ನೆಪ್ಚೂನ್ 100 ಎಂಬ ವ್ಯಾಪಕ ಸಂಶೋಧನೆಯು ಮಾನವ ದೇಹದ ಮೇಲೆ ಸಂಕೋಚನೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ತನ್ನ ಪಾಡ್‌ನಿಂದ ಹೊರಬಂದ ಸ್ವಲ್ಪ ಸಮಯದ ನಂತರ, ದಿಟೂರಿ ತಮ್ಮ ದೇಹದಲ್ಲಾಗಿರುವ ಅಭೂತ ಪೂರ್ವ ಬದಲಾವಣೆಯನ್ನು ವರದಿ ಮಾಡಿದ್ದಾರೆ.
ನೀರಿನೊಳಗಿದ್ದ ಡಿಟೂರಿಗೆ ಏನಾಯಿತು ?
ಅವರು ಸುಮಾರು 10 ವರ್ಷಗಳ ಕಿರಿಯವರಂತೆ ಕಂಡು ಬಂದಿರುವುದಾಗಿ ವರದಿಯಾಗಿದೆ. ಡಿಎನ್‌ಎ ಪರೀಕ್ಷೆಗಳು ಸೇರಿದಂತೆ ವ್ಯಾಪಕವಾದ ವೈದ್ಯಕೀಯ ಪರೀಕ್ಷೆಗಳು, ಡಿಟೂರಿ ಅವರು ದೈಹಿಕವಾಗಿ ಅಲ್ಲದಿದ್ದರೂ ಜೈವಿಕ ಕ್ರಿಯೆಯಲ್ಲಿ ಕಿರಿಯರಾಗಿರುವುದರಿಂದ ಗಮನಾರ್ಹವಾಗಿ ಬದಲಾವಣೆ ಕಂಡುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯಕೀಯ ಮೌಲ್ಯಮಾಪನಗಳ ನಂತರ, ಡಿಟೂರಿಯ ಟೆಲೋಮಿಯರ್‌ಗಳು, ಕ್ರೋಮೋಸೋಮ್‌ಗಳ ಅಂತ್ಯದಲ್ಲಿರುವ ಡಿಎನ್‌ಎ ಕ್ಯಾಪ್‌ಗಳು ಸಾಮಾನ್ಯವಾಗಿ ವಯಸ್ಸಿನೊಂದಿಗೆ ಕುಗ್ಗುತ್ತವೆ, ಆದರೆ ಈಗ ಮೂರು ತಿಂಗಳ ಹಿಂದಿನದಕ್ಕಿಂತ 20 ಪ್ರತಿಶತದಷ್ಟು ಬೆಳವಣಿಗೆ ಹೊಂದಿವೆ ಎಂದು ಕಂಡುಬಂದಿದೆ.
ಇದಿಷ್ಟೆ ಅಲ್ಲ ಡಿಟೂರಿಯ ಸ್ಟೆಮ್ ಸೆಲ್ ಎಣಿಕೆಯು ಗಣನೀಯವಾಗಿ ಏರಿಕೆ ಕಂಡಿದೆ, ಆತನ ಕೊಲೆಸ್ಟ್ರಾಲ್ ಮಟ್ಟ 72 ಪಾಯಿಂಟ್‌ಗಳಷ್ಟು ಕಡಿಮೆಯಾಯಿತು ಮತ್ತು ಅವನ ಉರಿಯೂತದ ಗುರುತುಗಳು ಅರ್ಧದಷ್ಟು ಕಡಿಮೆಯಾಯಿತು. ಆತನ ನಿದ್ರೆಯ ಗುಣಮಟ್ಟವು ಗಮನಾರ್ಹವಾಗಿ ಸುಧಾರಿಸಿತು ಎಂದು ಕಂಡುಕೊಂಡರು.
ನೀರಿನೊಳಗಿದ್ದರೆ ಜೈವಿಕವಾಗಿ ಚಿಕ್ಕವರಾಗಲು ಹೇಗೆ ಸಾಧ್ಯವಾಯಿತು ಎಂಬುದು ಅಚ್ಚರಿ ಹುಟ್ಟಿಸಿದೆ. ಅವರು ಹೊರ ಜಗತ್ತಿಗೆ ಕಾಣಿಸಿಕೊಳ್ಳದ ಕಾರಣ ಇದು ಸಂಭವಿಸಿರಬಹುದು ಎಂದು ನಂಬಲಾಗಿದೆ. ಅವರು ಸಣ್ಣ ಪಾಡ್‌ನೊಳಗೆ ಅಗತ್ಯವಾಗಿ ಬೇಕಾಗಿದ್ದ ಆಹಾರ, ಆಮ್ಲಜನಕ ಹಾಗೂ ತುರ್ತು ಸಂದರ್ಭದಲ್ಲಿ ಬಳಕೆಗೆ ಅಗತ್ಯವಾದ ವಸ್ತುಗಳನ್ನು ಇಟ್ಟುಕೊಂಡಿದ್ದರು. ಕೆಲವೇ ಗ್ಯಾಜೆಟ್‌ಗಳು ಅವರನ್ನು ಸುತ್ತುವರೆದಿದ್ದವು. ಅಲ್ಲಿ ಅವರಿಗೆ ಒತ್ತಡವೇನು ಇರಲಿಲ್ಲ. ಸಮುದ್ರ ಮಟ್ಟದಿಂದ ಅವರು ಕೇವಲ 6.7 ಮೀಟರ್ ದೂರದಲ್ಲಿದ್ದರು.



Click it and Unblock the Notifications











