Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
24 ಗಂಟೆಯಲ್ಲಿ 10 ಕೆ.ಜಿ ತೂಕ ಹೆಚ್ಚಿಸಿದ ಸಾಹಸಿಗ..! ಹೇಗೆ ಗೊತ್ತಾ?
ತೂಕ ಇಳಿಸೋದು ಎಷ್ಟು ಕಷ್ಟವೋ ತೂಕ ಹೆಚ್ಚಿಸಿಕೊಳ್ಳುವುದು ಸಹ ಅಷ್ಟೇ ಕಷ್ಟದ ಕೆಲಸ. ಏಕೆಂದರೆ ತೂಕ ಹೆಚ್ಚಿಸಿಕೊಳ್ಳಬೇಕು ಅಂದ್ರೆ ಕಠಿಣ ಶ್ರಮದ ಅಗತ್ಯವಿದೆ. ತೂಕ ಹೆಚ್ಚಿಸಲು ಸಹ ಡಯೆಟ್ ಪ್ಲಾನ್ ಮಾಡಲೇಬೇಕು. ತೂಕ ಇಳಿಸಲು ನಾವು ಹೇಗೆಲ್ಲಾ ಡಯೆಟ್ ಮಾಡುತ್ತೇವೋ ಅದೇ ರೀತಿ ತೂಕ ಹೆಚ್ಚಿಸಿಕೊಳ್ಳಲು ಸಹ ಡಯೆಟ್ ಇದೆ.
ಅದ್ರೆ ಇಲ್ಲೊಬ್ಬ ವ್ಯಕ್ತಿ ಕೇವಲ 24 ಗಂಟೆಯಲ್ಲಿ 10 ಕೆ.ಜಿ ತೂಕ ಹೆಚ್ಚಿಸಿಕೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ. ಹಾಗಾದ್ರೆ ಆತ ಒಂದೇ ದಿನದಲ್ಲಿ 10 ಕೆ.ಜಿ ಹೆಚ್ಚಿಸಿಕೊಂಡಿರುವುದು ಹೇಗೆ? ಇದಕ್ಕೆ ಆತ ಯಾವ ರೀತಿ ಡಯೆಟ್ ಮಾಡಿಕೊಂಡಿದ್ದ ಎಂಬುದನ್ನು ನೋಡಿ.

38 ವರ್ಷದ ಅಲ್ಟ್ರಾ-ಅಥ್ಲೀಟ್ ರಾಸ್ ಎಡ್ಗ್ಲಿ ಈಗ ಈ ರೀತಿಯ ಸಾಧನೆ ಮಾಡಿದ್ದಾರೆ. ಈತ ಒಬ್ಬ ಅಥ್ಲೀಟ್ ಆಗಿದ್ದು, ಈ ಹಿಂದೆ ಕ್ರೀಡಾ ಲೋಕದಲ್ಲಿ ಹಲವು ಸಾಧನೆಗಳ ಮಾಡಿರುವ ದಾಖಲೆ ಹೊಂದಿದ್ದಾರೆ. ಇತ್ತೀಚಿಗೆ ಅವರು ಡಾಕ್ಯೂಮೆಂಟರಿವೊಂದಕ್ಕೆ ಈ ರೀತಿಯ ಸಾಧನೆ ಮಾಡಿದ್ದಾರೆ, ಶಾರ್ಕ್‌ನಂತೆ ಈಜುವುದು ಹುಲಿಯಂತೆ ಆಹಾರ ಸೇವನೆ ಮಾಡುವುದು ಸೇರಿ ಟೈಗರ್ ಶಾರ್ಕ್‌ನಂತೆ ಬದುಕುವ ಸಾಹಸ ಇದಾಗಿದೆ.
ಅಲ್ಲದೆ ಹುಲಿ ಮತ್ತು ಶಾರ್ಕ್‌ನಂತೆ ಆಹಾರ ಸೇವನೆಯ ಚಾಲೆಂಜ್ ಸ್ವೀಕರಿಸಿದ್ದ ಆತ ಶಾರ್ಕ್ ಮತ್ತು ಟೈಗರ್ ಆಹಾರ ಹುಡುಕುತ್ತಾ ನೂರಾರು ಕಿ.ಮೀಟರ್ ದೂರ ಸಾಗುತ್ತವೆ. ಹೀಗೆ ದಾರಿಯಲ್ಲಿ ಸಿಕ್ಕ ಎಲ್ಲವನ್ನೂ ಅವು ತಿನ್ನುತ್ತವೆ. ಇದನ್ನ ರಾಸ್ ಎಡ್ಗ್ಲಿ ಒಂದು ದಿನದಲ್ಲಿ ಮಾಡಿದರಂತೆ.
ಎಡ್ಗ್ಲಿ ಅವರು ಎಲ್ಲಾ ನಾಲ್ಕು ಕಾರ್ಯಗಳಲ್ಲಿ, ಹುಲಿ ಶಾರ್ಕ್‌ನಂತೆಯೇ ಅದೇ ಪ್ರಮಾಣದಲ್ಲಿ ತಿನ್ನುವ ಸಾಮರ್ಥ್ಯದಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದರು ಎಂದು ಬಹಿರಂಗಪಡಿಸಿದರು, ಅವರು "ವಾಸ್ತವವಾಗಿ ಸ್ಪರ್ಧಿಸಬಹುದು" ಎಂದು ಹೇಳಿದರು. ಅವರ ಪ್ರಕಾರ, ಟೈಗರ್ ಶಾರ್ಕ್‌ಗಳು ಆಹಾರವನ್ನು ಹುಡುಕಿಕೊಂಡು ನೂರಾರು ಕಿಲೋಮೀಟರ್‌ಗಳಷ್ಟು ಪ್ರಯಾಣಿಸಬಲ್ಲವು, ಟೈರ್‌ಗಳು ಮತ್ತು ಬಿನ್ ಮುಚ್ಚಳಗಳಿಂದ ಹಿಡಿದು ತಿಮಿಂಗಿಲ ಶವಗಳು ಮತ್ತು ಆಮೆ ಚಿಪ್ಪುಗಳವರೆಗೆ ಎಲ್ಲವನ್ನೂ ತಿನ್ನುತ್ತವೆ. ಈ ಅಪೆಕ್ಸ್ ಪರಭಕ್ಷಕಗಳು ಎಡ್ಗ್ಲಿ ಅವರನ್ನು "ಸಮುದ್ರದ ಕಸದ ತೊಟ್ಟಿಗಳು" ಎಂದು ಕರೆಯುವುದರೊಂದಿಗೆ ಬೃಹತ್ ಪ್ರಮಾಣದ ಆಹಾರವನ್ನು ಸೇವಿಸಬಹುದು.
ಹೀಗಾಗಿ ಅವರು ಒಂದೇ ದಿನದಲ್ಲಿ ಅತೀ ಹೆಚ್ಚು ಕ್ಯಾಲೋರಿ ಫುಡ್ ಸೇವಿಸಿದರು. ಇದಕ್ಕಾಗಿ ದೊಡ್ಡದಾದ ಜೆಲ್ಲಿ ಲಾಲಿಪಾಪ್ ಸೃಷ್ಟಿಸಿದ್ದರಂತೆ. ಈ ಲಾಲಿಪಾಪ್ ತಿಮಿಂಗಿಲ ಕೊಬ್ಬಿನಿಂದ ಮಾಡಲ್ಪಟ್ಟಿತ್ತು, ಸುಮಾರು 20 ಸಾವಿರ ಕ್ಯಾಲೋರಿ ಹೊಂದಿತ್ತು. ಅಲ್ಲದೆ ಒಂದೇ ದಿನದಲ್ಲಿ ಅವರು ಬರೋಬ್ಬರಿ 41,103 ಕ್ಯಾಲೋರಿಯಷ್ಟು ಫುಡ್ ಸೇವಿಸಿದ್ದರು. ಇದು ಕೇವಲ 24 ಗಂಟೆಯಲ್ಲಿ 10 ಕೆ.ಜಿ ಏರಿಕೆಯಾಗಲು ಕಾರಣವಾಗಿತ್ತು.
ಆದರೆ ಇದಕ್ಕಾಗಿ ಅವರು 2 ದಿನದ ಹಿಂದಿನಿಂದಲೇ ತಯಾರಿ ನಡೆಸಿದ್ದರು. ಅದೇನೆಂದರೆ ಇಷ್ಟು ಆಹಾರ ಸೇವಿಸಲು ಅವರು ಮೊದಲು ತೂಕ ಕಳೆದುಕೊಳ್ಳಬೇಕಾಯಿತು. ಒಂದು ದಿನ ಮೊದಲು ಆಹಾರ ಸೇವಿಸದೆ ಹಣ್ಣು, ಲಘು ಉಪಹಾರ ಸೇವನೆ ಮಾಡಿದ್ದರು. ತೀರ ಶಾಖ ಇರುವ ರೂಮಿನಲ್ಲಿ ನಿರಂತರ ಸ್ಲೈಕ್ಲಿಂಗ್ ಹಾಗೂ ವ್ಯಾಯಾಮ ಮಾಡಿದ್ದರು. ಇದರಿಂದ ದೇಹದಲ್ಲಿದ್ದ ಹೆಚ್ಚುವರಿ ಕೊಬ್ಬು ಕರಗುವಂತೆ ಮಾಡಿದರು.
ಹೀಗೆ ಹೆಚ್ಚುವರಿ ಕೊಬ್ಬು ಕರಗಿದ ಬಳಿಕ ಅವರು ತೂಕ ಹೆಚ್ಚಿಸಿಕೊಳ್ಳಲು ಮುಂದಾದರು. ಇದರ ಫಲಿತಾಂಶವಾಗಿ ಅವರು 24 ಗಂಟೆಯಲ್ಲಿ 10 ಕೆ.ಜಿ ಹೆಚ್ಚಳವಾದರು. ಆದ್ರೆ ಈ ರೀತಿ ಒಂದೇ ದಿನ ಇಷ್ಟೊಂದು ಕ್ಯಾಲೋರಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ.



Click it and Unblock the Notifications