Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
217 ಕೋವಿಡ್ ಲಸಿಕೆ ಪಡೆದ ಭೂಪ..! ಆಮೇಲೆ ಆತನಿಗೆ ಆಗಿದ್ದೇನು?
ಕೋವಿಡ್ ಸಮಯದಲ್ಲಿ ಜನ ಸೋಂಕಿನ ಕಾರಣದಿಂದ ಮೃತಪಡುತ್ತಿದ್ದ ಸಮಯವದು. ಆಗ ಈ ಕೋವಿಡ್ ವಿರುದ್ಧ ಹೋರಾಡಲೆಂದು ಕೋವಿಡ್ ಲಸಿಕೆಗಳ ಸಂಶೋಧನೆ ಮಾಡಲಾಗಿತ್ತು. ಈ ಲಸಿಕೆ ಒಂದೇ ರಾತ್ರಿಯಲ್ಲಿ ಕಂಡು ಹಿಡಿದಿದ್ದು ಅಲ್ಲ. ಬದಲಿಗೆ ನೂರಾರು ವಿಜ್ಞಾನಿಗಳು ಹಗಲು ರಾತ್ರಿ ಶ್ರಮಿಸಿದ ಫಲವಾಗಿ ಈ ಕೋವಿಡ್ ಲಸಿಕೆ ಹೊರಬಂದಿತ್ತು.
ಆದರೆ ಕೋವಿಡ್ ಲಸಿಕೆ ಪಡೆಯಲು ಜನ ಹಿಂದೇಟು ಹಾಕಿದ್ರು. ಕೋವಿಡ್ ಲಸಿಕೆಯಿಂದ ಅನಾರೋಗ್ಯ ಸಮಸ್ಯೆ ಎದುರಾಗುತ್ತದೆ ಎಂಬ ಭೀತಿಯಲ್ಲಿ ಎಷ್ಟೋ ಜನ ಲಸಿಕೆ ಹಾಕಿಸಿಕೊಳ್ಳದೆ ನಿರ್ಲಕ್ಷ ಮಾಡಿದ್ದರು. ಆದರೆ ಇನ್ನೂ ಕೆಲವರು ಮೊದಲ ಡೋಸ್ ಪಡೆದು ಎರಡನೇ ಡೋಸ್ ಪಡೆಯಲು ಮುಂದಾಗಿರಲಿಲ್ಲ. ಹೀಗೆ ಕೋವಿಡ್ ಲಸಿಕೆ ಕುರಿತು ಒಂದಿಷ್ಟು ಆರೋಪಗಳು ಸಹ ಹರಿದಾಡಿದವು.

ಆದ್ರೆ ಇಲ್ಲೊಬ್ಬ ನಾವು ನೀವು ಅಂದುಕೊಂಡಿದ್ದನ್ನೇ ಬುಡಮೇಲು ಮಾಡಿದ್ದಾನೆ. ಆತ ಬರೋಬ್ಬರಿ 217 ಬಾರಿ ಕೋವಿಡ್ ಲಸಿಕೆ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಹೌದು ನೀವು ಈ ಸುದ್ದಿ ಕೇಳಿದ ಕ್ಷಣ ಅಚ್ಚರಿ ಪಡಬಹುದು. ಆತ 217 ಕೋವಿಡ್ ಲಸಿಕೆ ಪಡೆದು ಜೀವಂತ ಪ್ರಯೋಗಾಲಯದಂತೆ ಓಡಾಡಿಕೊಂಡಿದ್ದಾನೆ. ಹಾಗಾದ್ರೆ ಯಾರಾತ? ಇಷ್ಟು ಲಸಿಕೆ ಪಡೆದಿದ್ದೇಕೆ? 217 ಲಸಿಕೆ ಪಡೆದ ಮೇಲೆ ಅವನಿಗೆ ಏನಾಯಿತು ನೋಡಿ.
ಆತ ಒಬ್ಬ ಜರ್ಮನ್ ವ್ಯಕ್ತಿ, ಆದರೆ ಆತ ತನ್ನ ಹೆಸರನ್ನು ಹಾಗೂ ಗುರುತು ಬಹಿರಂಗಪಡಿಸಲು ಇಚ್ಛಿಸಿಲ್ಲ. ಇದು ಜರ್ಮನ್ ಕಾನೂನಿಗೂ ವಿರುದ್ಧವಂತೆ. ಆದರೆ ಆತನಿಗೆ 62 ವರ್ಷ ವಯಸ್ಸಾಗಿದ್ದು, 29 ತಿಂಗಳ ಅವಧಿಯಲ್ಲಿ ಆತ ಬರೋಬ್ಬರಿ 217 ಬಾರಿ ಕೋವಿಡ್ ಲಸಿಕೆ ಪಡೆದಿದ್ದಾನೆ. ಅಂದರೆ ಸರಾಸರಿ 4 ದಿನಕ್ಕೊಂದು ಲಸಿಕೆ ಹಾಕಿಸಿಕೊಂಡಿದ್ದಾನೆ. ನಿಮಗೆ ನೆನಪಿರಬಹುದು, ಒಂದು ಕೋವಿಡ್ ಲಸಿಕೆ ಹಾಗೂ ಮತ್ತೊಂದು ಲಸಿಕೆ ನಡುವೆ 6 ತಿಂಗಳ ಅಂತರ ಕಾಯ್ದುಕೊಳ್ಳಬೇಕು ಎಂದು ವೈದ್ಯರೇ ಶಿಫಾರಸ್ಸು ಮಾಡುತ್ತಿರುವಾಗ ಈತ ಮಾತ್ರ 4 ದಿನಕ್ಕೊಮ್ಮೆ ಲಸಿಕೆ ಪಡೆಯುತ್ತಲೇ ಇದ್ದ.
ಆತನಿಗೆ ಕೋವಿಡ್ ಕಾಯಿಲೆ ಏನು ಇರಲಿಲ್ಲ. ಬದಲಿಗೆ ಆತ ಕೋವಿಡ್ ಲಸಿಕೆ ಕುರಿತ ಎಲ್ಲಾ ಅಪನಂಬಿಕೆಗಳ ಹೋಗಲಾಡಿಸಲು ತಾನಾಗಿಯೇ ಈ ಪರೀಕ್ಷೆಗೆ ಒಳಪಟ್ಟಿದ್ದ. ಈ ಪ್ರಯೋಗವನ್ನು 'ಹೈಪರ್‌ವ್ಯಾಕ್ಸಿನೇಷನ್' ಎಂದು ಕರೆಯಲಾಯಿತು. ಆದರೆ ಇಷ್ಟೊಂದು ಲಸಿಕೆ ಪಡೆದರು ಆತನ ಆರೋಗ್ಯದಲ್ಲಿ ಯಾವುದೇ ಏರಿಳಿತಗಳು ದಾಖಲಾಗಲಿಲ್ಲ ಎಂಬುದೇ ಮತ್ತೊಂದು ಅಚ್ಚರಿ.
ಜೂನ್ 2021 ಮತ್ತು ನವೆಂಬರ್ 2023ರ ನಡುವೆ 217 ಕೋವಿಡ್ ಲಸಿಕೆಗಳನ್ನು ಆತ ಸ್ವೀಕರಿಸಿದ್ದ ಅವುಗಳನ್ನು ಪ್ರಾಸಿಕ್ಯೂಟರ್ ಮತ್ತು ವ್ಯಾಕ್ಸಿನೇಷನ್ ಸೆಂಟರ್ ದಾಖಲಾತಿಯ ಮೂಲಕ ದೃಢೀಕರಿಸಲಾಗಿದೆ. ಮೇ 2022 ಮತ್ತು ನವೆಂಬರ್ 2023ರ ನಡುವೆ ಆತನ ಆರೋಗ್ಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ ವೇಳೆ ಆತನಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆಗಳು ದಾಖಲಾಗಿಲ್ಲ. ಲಸಿಕೆ ಸಂಬಂಧಿತ ಯಾವುದೇ ಅಡ್ಡಪರಿಣಾಮವು ಸಹ ಆತನಿಗೆ ಆಗಿಲ್ಲ.
ಹೋದಲ್ಲಿ ಬಂದಲ್ಲಿ ಲಸಿಕೆ ಪಡೆದ
ಆ ವ್ಯಕ್ತಿ ಜೂನ್ 2021ರಲ್ಲಿ ತನ್ನ ಮೊದಲ ಕೋವಿಡ್ ಲಸಿಕೆಯನ್ನು ಪಡೆದಿದ್ದನಂತೆ. ನಂತರ ಸ್ಯಾಯಾಕ್ಸೋನಿಯ ಲಸಿಕಾ ಕೇಂದ್ರಗಳಲ್ಲಿ 16 ಲಸಿಕೆಗಳನ್ನು ಪಡೆದಿದ್ದ. ಆದರೆ ಯಾರಿಗೂ ಆತನ ಮೇಲೆ ಅನುಮಾನ ಬಂದಿರಲಿಲ್ಲ. ಜೊತೆಗೆ ಆತನಲ್ಲೂ ಯಾವ ಅಡ್ಡಪರಿಣಾಮ ಕಾಣಿಸಲಿಲ್ಲ. ಹೀಗಾಗಿ ಮತ್ತೆ ಮತ್ತೆ ಲಸಿಕೆ ಪಡೆಯಲು ಮುಂದಾದ. ಬಳಿಕ 2022ರ ಜನವರಿಯಲ್ಲಿ ಪ್ರತಿದಿನ ತಮ್ಮ ಬಲ ಮತ್ತು ಎಡಗೈಗಳೆರಡರ ಮೇಲೂ ಲಸಿಕೆ ಪಡೆಯಲು ಮುಂದಾದ, ಆ ತಿಂಗಳು ಒಟ್ಟು 48 ಲಸಿಕೆ ಪಡೆದಿದ್ದ.
ನಂತರ ಫೆಬ್ರವರಿಯಲ್ಲಿ 34 ಮತ್ತು ಮಾರ್ಚ್‌ನಲ್ಲಿ ಇನ್ನೂ 6 ಲಸಿಕೆ ಪಡೆದ. ಈ ಸಮಯದಲ್ಲಿ ಡ್ರೆಸ್ಡೆನ್ ನಗರದಲ್ಲಿನ ಜರ್ಮನ್ ರೆಡ್ ಕ್ರಾಸ್ ಸಿಬ್ಬಂದಿಗೆ ಈತನ ಮೇಲೆ ಅನುಮಾನ ಮೂಡಿತ್ತು. ಆ ವ್ಯಕ್ತಿ ಮತ್ತೊಮ್ಮೆ ಕಂಡರೆ ಪೊಲೀಸರಿಗೆ ಕರೆ ಮಾಡುವಂತೆ ಲಸಿಕಾ ಕೇಂದ್ರಗಳಿಗೆ ತಿಳಿಸಲಾಗಿತ್ತು.
ಮಾರ್ಚ್ ಆರಂಭದಲ್ಲಿ ಐಲೆನ್‌ಬರ್ಗ್ ಪಟ್ಟಣದ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಕಾಣಿಸಿಕೊಂಡರು ಮತ್ತು ಅವರನ್ನು ಪೊಲೀಸರು ಬಂಧಿಸಿದರು. ಆರ್‌ಟಿಎಲ್ ಪ್ರಕಾರ ಲಸಿಕೆ ಕಾರ್ಡ್‌ಗಳನ್ನು ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂದು ಶಂಕಿಸಲಾಗಿತ್ತು. ಆದರೆ ತನಿಖೆಯಲ್ಲಿ ಆತ ಒಟ್ಟು ಇಷ್ಟು ಲಸಿಕೆ ಪಡೆದಿರುವುದು ಪತ್ತೆಯಾಯಿತು. ಇದಾದ ಬಳಿಕ ಆತ ನಡೆದಾಡುವ ಪ್ರಯೋಗಾಲಯ ಆಗಿಬಿಟ್ಟ. ವೈದ್ಯರು, ಸಂಶೋಧಕರು ಈತನ ಹಿಂದೆ ಬಿದ್ದು ಪರೀಕ್ಷೆ ನಡೆಸಲು ಮುಂದಾದರು.



Click it and Unblock the Notifications