Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಕೇರಳ ಲಾಟರಿ ಗೆದ್ದ ಮಂಡ್ಯ ವ್ಯಕ್ತಿ..!! 25 ಕೋಟಿ ರೂ. ಬಂಪರ್ ಜಾಕ್‌ಪಾಟ್..! ನೀವು ಖರೀದಿಸೋದು ಹೇಗೆ?
ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧವಾಗಿರುವ ಕುರಿತು ನಿಮಗೆಲ್ಲಾ ತಿಳಿಸಿದೆ. ಆದ್ರೆ ಭಾರತದ ಹಲವು ರಾಜ್ಯಗಳಲ್ಲಿ ಇಂದಿಗೂ ಈ ಲಾಟರಿ ಮಾರಾಟ ಕಾನೂನಾತ್ಮಕವಾಗಿ ಸರ್ಕಾರದ ಅಧೀನಕ್ಕೆ ಒಳಪಟ್ಟು ನಡೆಯುತ್ತಿದೆ. ಅದರಲ್ಲೂ ನೀವು ಕೇರಳ ಲಾಟರಿ ಕುರಿತಂತೆ ಕೇಳಿರುತ್ತೀರಿ. ಕೆಲವೊಬ್ಬರು ರಾತ್ರೋರಾತ್ರಿ ಕೋಟ್ಯಧಿಪತಿಗಳಾಗಿರುವುದು ಕೂಡ ನಡೆದಿದೆ.
ಕೇರಳದಲ್ಲಿ ಹಲವು ಹೆಸರಿನಲ್ಲಿ ಲಾಟರಿ ನಡೆಯುತ್ತದೆ. ಆದರೆ ಎಲ್ಲವೂ ರಾಜ್ಯ ಸರ್ಕಾರದ ಇಲಾಖೆಯ ಕೆಳಗೆ ಕೆಲಸ ಮಾಡುತ್ತವೆ. ಈಗ ಕೇರಳದ ಲಾಟಿ ಟಿಕೆಟ್ ಖರೀದಿಸಿದ್ದ ಕರ್ನಾಟಕದ ವ್ಯಕ್ತಿಯೋರ್ವನಿಗೆ 25 ಕೋಟಿ ರೂಪಾಯಿಯ ಬಂಪರ್ ಲಾಟರಿ ಜಾಕ್‌ಪಾಟ್ ಹೊಡೆದಿದೆ. ಕೇರಳದ ತಿರುವೋಣಂ ಬಂಪರ್ ಲಾಟರಿಯಲ್ಲಿ ಕರ್ನಾಟಕದ ಮೆಕ್ಯಾನಿಕ್ ಅಲ್ತಾಫ್ ಅದೃಷ್ಟಶಾಲಿಯಾಗಿ ಹೊರಹೊಮ್ಮಿದ್ದಾರೆ. ಅವರು 25 ಕೋಟಿ ರೂಪಾಯಿಯ ಅದೃಷ್ಟದ ಜಾಕ್‌ಪಾಟ್ ಗೆದ್ದು ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ.

ಅಲ್ತಾಫ್ ಎಂಬಾತ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಸುಮಾರು 15 ವರ್ಷಗಳಿಂದಲೂ ಲಾಟರಿ ಖರೀದಿಸುತ್ತಿದ್ದಾರೆ. ಆದರೆ ಈ ಬಾರಿ ಅವರಿಗೆ ಬಂಪರ್ ಜಾಕ್‌ಪಾಟ್ ಹೊಡೆದಿದೆ. ಈ ಹಣದಲ್ಲಿ ಅವರು ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ನಿನ್ನೆ ಮಧ್ಯಾಹ್ನ ತಿರುವನಂತಪುರಂನ ಗೋರ್ಕಿ ಭವನದಲ್ಲಿ ಡ್ರಾ ನಡೆಸಿದ್ದು, ಈ ವೇಳೆ ಅಲ್ತಾಫ್ ವಿಜೇತರವಾಗಿದ್ದಾರೆ.
ಈ ಲಕ್ಕಿ ಡ್ರಾ ಸಮಾರಂಭದಲ್ಲಿ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್, ಶಾಸಕ ವಿ ಕೆ ಪ್ರಶಾಂತ್ ಮತ್ತು ಲಾಟರಿ ಇಲಾಖೆಯ ನಿರ್ದೇಶಕ ಅಬ್ರಹಾಂ ರೆನ್ ಸಹ ಭಾಗಿಯಾಗಿದ್ದರು.
25 ಕೋಟಿ ರೂಪಾಯಿಯಲ್ಲಿ ಸಿಗುವುದು ಬರೀ 12 ಕೋಟಿ ರೂ.!
ಇನ್ನು ಲಾಟರಿ ಬಹುಮಾನ 25 ಕೋಟಿ ರೂಪಾಯಿ ಆಗಿದ್ದರೂ ಕೂಡ ವಿಜೇತರಿಗೆ ಸಿಗುವುದು ಬರೀ 12.11 ಕೋಟಿ ರೂಪಾಯಿ ಮಾತ್ರ. ಏಕೆಂದರೆ ಉಳಿದ ಹಣವನ್ನು ತೆರಿಗೆ ರೂಪದಲ್ಲಿ ಅವರು ಸರ್ಕಾರಕ್ಕೆ ಕಟ್ಟಬೇಕಾಗುತ್ತದೆ. ಅರ್ಧದಷ್ಟ ತೆರಿಗೆ ಕಟ್ಟಿದ ಬಳಿಕ ಅವರ ಬಳಿ 12 ಕೋಟಿ ರೂಪಾಯಿ ಉಳಿಯಲಿದೆ.
ಕೇರಳ ಲಾಟರಿ ಖರೀದಿಸುವುದು ಹೇಗೆ?
ಕೇರಳ ಸರ್ಕಾರ ಲಾಟರಿ ನಿಯಮ ಜಾರಿ ಮಾಡಿರುವುದನ್ನು ಟಿಕೆಟ್ ಖರೀದಿಗೂ ಮುನ್ನ ಒಮ್ಮೆ ನೋಡಬೇಕಿದೆ. ಕೇರಳ ಲಾಟರಿಯನ್ನು ಬೇರೆ ರಾಜ್ಯದಲ್ಲಿ ಮಾರಾಟ ಮಾಡುವಂತಿಲ್ಲ, ಒಂದು ವೇಳೆ ನೀವು ಕೇರಳದಿಂದ ಲಾಟರಿ ಟಿಕೆಟ್ ಅನ್ನು ಖರೀದಿಸಿ ತಂದು ಬೇರೆ ರಾಜ್ಯದಲ್ಲಿ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ರೆ ನೀವು ಯಾವುದೇ ರಾಜ್ಯದವರಾಗಿದ್ದರೂ ಕೇರಳಕ್ಕೆ ಹೋಗಿ ಟಿಕೆಟ್ ಖರೀದಿಸಬಹುದು.
ಹಾಗೆ ನೀವು ಲಾಟರಿಯಲ್ಲಿ ನಮೂದಿಸಲಾದ ಮೊತ್ತ ಗೆದ್ದರೆ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು ಮತ್ತು ಬಹುಮಾನದ ಹಣವನ್ನು ಸಂಗ್ರಹಿಸಬಹುದು. ಲಾಟರಿ ನಿಯಮಗಳ ಪ್ರಕಾರ, ನಿಮ್ಮ ಬಳಿ ಲಾಟರಿ ಘೋಷಣೆಯಾದ ಅಂಕಿಗಳ ಟಿಕೆಟ್ ಇರುವುದು ಮುಖ್ಯ. ಫೋಟೋ, ಜೆರಾಕ್ಸ್, ಫೋಟೋ ಕಾಪಿ ಇದ್ದರೆ ನಡೆಯುವುದಿಲ್ಲ.
ಹಾಗೆ ಆನ್‌ಲೈನ್ ಮೂಲಕ ಟಿಕೆಟ್ ಖರೀದಿ ಕೂಡ ಕಾನೂನು ಬಾಹಿರವಾಗಿದೆ. ಟಿಕೆಟ್‌ಗಳನ್ನು ಮಾರಾಟ ಮಾಡಲು ಲಾಟರಿ ಏಜೆಂಟ್‌ಗಳು ಹಲವಾರು ವಾಟ್ಸಾಪ್ ಗುಂಪುಗಳನ್ನು ಪ್ರಾರಂಭಿಸಿದ್ದಾರೆ. ಆದರೆ ಇದು ಸುರಕ್ಷಿತವಲ್ಲ. ಈ ಹಿಂದೆ ಹಲವು ನಕಲಿ ಲಾಟರಿ, ವಂಚನೆ ಪ್ರಕರಣಗಳು ಸಹ ದಾಖಲಾಗಿವೆ.
ಹಾಗೆ ಸರ್ಕಾರ ಈ ಲಾಟರಿ ಟಿಕೆಟ್‌ನಿಂದ ಗಳಿಸುವ ಆದಾಯವನ್ನು ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟಿದೆ. ಉದಾಹರಣೆಗೆ ಕಾರುಣ್ಯ ಲಾಟರಿ ಟಿಕೆಟ್‌ಗಳಿಂದ ಬರುವ ಆದಾಯವನ್ನು ಬಡ ಜನರಿಗೆ ಉಚಿತ ವೈದ್ಯಕೀಯ ನೆರವು ನೀಡಲು ಬಳಸಲಾಗುತ್ತದೆ ಮತ್ತು ಅದೇ ರೀತಿ, ಸ್ತ್ರೀಶಕ್ತಿ ಲಾಟರಿ ಟಿಕೆಟ್ ಆದಾಯವನ್ನು ಮಹಿಳಾ ಸಬಲೀಕರಣ ಯೋಜನೆಗಳಿಗೆ ಬಳಸಲಾಗುತ್ತದೆ.
ಪ್ರತಿಯೊಂದು ಟಿಕೆಟ್‌ಗೂ ಬಾರ್‌ಕೋಡ್‌ಗಳಿರುತ್ತವೆ, ಹೀಗಾಗಿ ಈ ಟಿಕೆಟ್‌ಗಳನ್ನು ನಕಲು ಮಾಡಲು ಸಾಧ್ಯವೇ ಇಲ್ಲ. ಹಾಗೆ ಲಾಟರಿ ಟಿಕೆಟ್ ಡ್ರಾ ದಿನಕ್ಕೂ ಮುನ್ನ ಏಜೆಂಟರುಗಳು ಎಲ್ಲಾ ಟಿಕೆಟ್‌ಗಳನ್ನು ಇಲಾಖೆಗೆ ವಾಪಾಸು ಮಾಡಬೇಕಾಗುತ್ತದೆ. ಬಹುಮಾನ ಗೆದ್ದ 90ದಿನದ ಒಳಗೆ ಅಸಲಿ ಟಿಕೆಟ್ ಹಾಗೂ ದಾಖಲೆಗಳ ನೀಡಿ ಬಹುಮಾನ ಮೊತ್ತ ಪಡೆಯಬಹುದಾಗಿದೆ.



Click it and Unblock the Notifications