Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಕಲ್ಲು ಒಡೆಯುತ್ತಿದ್ದವನ ಅದೃಷ್ಟ ಬದಲಿಸಿದ ವಜ್ರ.!
ಭೂಮಿ ಒಳಗೆ ಸಿಗುವ ಅತ್ಯಂತ ಮೌಲ್ಯಯುವ ವಸ್ತುಗಳೆಂದರೆ ಅದು ಚಿನ್ನ, ವಜ್ರ, ತೈಲಗಳು, ಒಂದಕ್ಕಿಂತ ಒಂದು ದುಬಾರಿಯೇ. ಹೀಗಾಗಿ ಇವು ಸಿಗುವುದು ಸಹ ಬಲು ಅಪರೂಪ. ಆದ್ರೆ ಕೆಲವೊಂದು ಬಾರಿ ಭೂಮಿಯಲ್ಲಿ ಚಿನ್ನ, ವಜ್ರಗಳು ಸಿಕ್ಕಿರು ಉದಾಹರಣೆಯನ್ನು ನಾವು ನೋಡಿದ್ದೇವೆ.
ವಿಶ್ವದ ಹಲವು ಕಡೆಗಳಲ್ಲಿ ವಜ್ರದ ನಿಕ್ಷೇಪಗಳಿವೆ. ವಜ್ರ ಎಲ್ಲಾ ಭಾಗದಲ್ಲೂ ಸಿಗುವುದಿಲ್ಲ. ಸಾವಿರಾರು ಟನ್ ಮಣ್ಣು ಅಗೆದ ಬಳಿಕ ಒಂದು ಕ್ಯಾರೆಟ್ ಅಷ್ಟು ವಜ್ರ ಸಿಗಬಹುದು. ಆದ್ರೆ ಇಲ್ಲೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಜ್ರವನ್ನು ತೆಗೆಯುತ್ತಿರುವುದು ವೈರಲ್ ಆಗಿದೆ.

ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಕಲ್ಲು ಒಡೆದು ವಜ್ರವನ್ನ ತೋರಿಸುವತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಆತ ಕಲ್ಲು ಒಡೆಯುವ ಸಲಕರಣೆಗಳಿಂದ ಕಲ್ಲನ್ನು ಕಷ್ಟಪಟ್ಟ ಒಡೆಯುತ್ತಿರುವುದನ್ನು ನಾವು ನೋಡಬಹುದು. ಕೊನೆಯಲ್ಲಿ ಕಲ್ಲಿನಿಂದ ಒಂದು ದೊಡ್ಡ ಗಾತ್ರದ ವಜ್ರವನ್ನು ಆತ ತೋರಿಸುತ್ತಿದ್ದಾನೆ.
ನಿಮ್ಮ ಅದೃಷ್ಟ ಯಾವಾಗ ಬದಲಾಗುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ ಮಾತ್ರ ಕಲ್ಲಿನಿಂದ ಆ ಅದೃಷ್ಟ ಒಲಿದಿದೆ ಎಂದರೆ ತಪ್ಪಾಗುವುದಿಲ್ಲ. ಕೆಲವೊಮ್ಮೆ ಜನರು ಜನರಿಗೆ ರಾತ್ರೋರಾತ್ರಿ ಲಾಟರಿ ಹೊಡೆದು ಹೇಗೆ ಶ್ರೀಮಂತರಾಗುತ್ತಾರೋ ಅದೇ ರೀತಿ ಇಲ್ಲೊಬ್ಬನಿಗೂ ಅನಿರೀಕ್ಷಿತ ನಿಧಿಯಂತೆ ಈ ವಜ್ರ ಸಿಕ್ಕಿದೆ. ಇನ್ಸ್‌ಸ್ಟಾಗ್ರಾಮ್ ನಲ್ಲಿ, ನಾವು ಸಾಮಾನ್ಯವಾಗಿ ನಿಧಿ ಬೇಟೆಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತೇವೆ.
ಕೆಲವರು ಈ ವಿಡಿಯೋಗಳು ನಿಜವೆಂದು ನಂಬಿದರೆ, ಕೆಲವರು ವಿಡಿಯೋವನ್ನು ನಕಲಿ ಎನ್ನುತ್ತಾರೆ. ಇಂದು ನಾವು ಅಂತಹ ಒಂದು ವಿಡಿಯೋ ಬಗ್ಗೆ ಮಾತನಾಡುತ್ತೇವೆ, ಇದರಲ್ಲಿ ಒಬ್ಬ ವ್ಯಕ್ತಿಯು ಗಂಟೆಗಳ ಕಠಿಣ ಪರಿಶ್ರಮದ ನಂತರ ಕಲ್ಲನ್ನು ಒಡೆದ ಬಳಿಕ ಆತ ವಜ್ರ ಕಂಡುಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಅಚ್ಚರಿಗೆ ಒಳಗಾಗಿದ್ದಾರೆ.
ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಕಲ್ಲು ಒಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಆತ ನಿರಂತರ ಕಲ್ಲು ಒಡೆದ ಬಳಿಕ ಅದು ಪುಡಿಯಾಗುತ್ತದೆ. ಪುಡಿ ಆದ ಬಳಿಕ ಆತ ಕಲ್ಲಿನಿಂದ ಒಂದು ತುಂಡು ವಜ್ರವನ್ನು ಹೊರಗೆ ತೆಗೆಯುತ್ತಾನೆ. ಬೆಲೆಬಾಳುವ ಈ ವಜ್ರ ಕಂಡು ಆತ ಸಹ ಬೆರಗಾಗುತ್ತಾನೆ. ರಾ ಸ್ಪೆಸಿಮೆನ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ ವ್ಯಕ್ತಿ, "ಕೆಲವು ವಾರಗಳ ಹಿಂದೆ ಹರ್ಕಿಮರ್ ಡೈಮಂಡ್ ಮೈನ್ಸ್‌ನಲ್ಲಿನ ಪ್ರಾಜೆಕ್ಟ್‌ನಲ್ಲಿನ ಇಡಿಯೋ ಎನ್ನಲಾಗಿದೆ. ಈ ವಿಡಿಯೋ 5 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಜೊತೆಗೆ ಸಾವಿರಾರು ಮಂದಿ ಕಮೆಂಟ್‌ಗಳ ಮಾಡಿದ್ದಾರೆ.
ಆದರೆ ಈ ವಿಡಿಯೋ ಎಷ್ಟು ಅಸಲಿ ಎಂಬುದನ್ನು ಸಹ ಪತ್ತೆ ಮಾಡಬೇಕಿದೆ. ಏಕೆಂದರೆ ಆತನಿಗೆ ವಜ್ರ ಇರುವ ಸ್ಥಳ ಅಷ್ಟೊಂದು ನಿಖರವಾಗಿ ತಿಳಿದಿದ್ದು ಹೇಗೆ ಎಂಬುದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ ಅದು ಅಸಲಿ ವಜ್ರವೇ ಎಂಬುದು ಸಹ ತಿಳಿದುಬರಬೇಕಿದೆ ಎಂದು ಹಲವರು ಕಮೆಂಟ್ ಮೂಲಕ ಹೇಳುತ್ತಿದ್ದಾರೆ.
ಮತ್ತೆ ಕೆಲವರು ಆತ ನಿಜವಾಗಿಯೂ ಅದೃಷ್ಟವಂತನೆ, ಆತನ ಶ್ರಮ ವ್ಯರ್ಥವಾಗಲಿಲ್ಲ. ಅದು ನಿಜವಾದ ವಜ್ರವಾಗಿದ್ದರೆ ಅದಕ್ಕಿಂತ ಒಳ್ಳೆಯ ವಿಚಾರ ಮತ್ತೊಂದಿಲ್ಲ ಎಂದಿದ್ದಾರೆ. ಆದ್ರೆ ಈ ವಿಡಿಯೋ ಎಷ್ಟು ನಿಜ ಎಂಬುದು ತಿಳಿದುಬರಬೇಕಿದೆ.



Click it and Unblock the Notifications
