Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಿಮಾ ಹಣಕ್ಕಾಗಿ ತನ್ನ ಎರಡೂ ಕಾಲನ್ನು ಕತ್ತರಿಸಿಕೊಂಡ..! ಆದ್ರೆ ಆಮೇಲೆ ಆಗಿದ್ದೇ ಬೇರೆ..!
ನಮ್ಮ ಜೀವನದಲ್ಲಿ ಯಾವಾಗ ಬೇಕಾದರು ಅಪಾಯಗಳು ಎದುರಾಗಬಹುದು. ಅದರಲ್ಲೂ ಆರೋಗ್ಯದಲ್ಲಿ ಯಾವಾಗ ಬೇಕಾದರು ಹದಗೆಟ್ಟು ಆಸ್ಪತ್ರೆ ಸೇರಬಹುದು. ಅಪಘಾತ, ಅಕಾಲಿಕವಾಗಿ ಉಂಟಾಗುವ ಅನಾರೋಗ್ಯ ಸಮಸ್ಯೆ ಇದೆಲ್ಲದರಿಂದ ಪಾರಾಗಲು ನಾವು ವಿಮೆ ಮಾಡಿಸಿರುತ್ತೇವೆ. ವಾಹನ ವಿಮೆ, ಆರೋಗ್ಯ ವಿಮೆ ಹೀಗೆ ಹತ್ತಾರು ರೀತಿಯ ವಿಮೆಗಳಿವೆ.
ನಾವು ಸಹ ನಮ್ಮ ಮರಣದ ನಂತರ ಕುಟುಂಬಕ್ಕೆ ಇಂತಿಷ್ಟು ಹಣ ಸಿಗುವಂತೆ ವಿಮೆ ಮಾಡಬಹುದು. ಇದರ ಜೊತೆ ನಮ್ಮ ದೇಹದ ಎಲ್ಲಾ ಅಂಗಗಳಿಗೂ ವಿಮೆ ಮಾಡಿಸಬಹುದು. ಒಂದು ವೇಳೆ ನಮಗೆ ಅಪಘಾತವಾದರೆ ಈ ವಿಮೆ ಮೂಲಕ ಆಸ್ಪತ್ರೆ ಖರ್ಚು ಭರಿಸಬಹುದು. ಇಷ್ಟೆಲ್ಲಾ ಲಾಭವಿರುವ ವಿಮೆಯನ್ನು ಹಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಹೌದು ವಿಮೆಯನ್ನು ದುರುಪಯೋಗ ಪಡಿಸಿಕೊಂಡ ಹಲವು ಘಟನೆಗಳನ್ನು ನಾವು ಕೇಳಿದ್ದೇವೆ. ಹಣ ಹೊಡೆಯಲು ತಮ್ಮ ಸಾವನ್ನೇ ನಕಲು ಮಾಡಿರುವುದು, ವಿಮಾ ಹಣಕ್ಕಾಗಿ ಬೇರೆಯವರನ್ನು ಸಾಯಿಸಿರುವುದು ಹೀಗೆ ಹಲವು ರೀತಿಯ ಘಟನೆಗಳ ಬಗ್ಗೆ ನಾವು ಕೇಳಿರುತ್ತೇವೆ. ಇದೇ ರೀತಿ ಇಲ್ಲೊಬ್ಬ ವಿಮಾ ಹಣ ಪಡೆಯಲು ತನ್ನ ಕಾಲು ಕತ್ತರಿಸಲು ವ್ಯಕ್ತಿಯೊಬ್ಬನ ನೇಮಿಸಿಕೊಂಡಿದ್ದ ಘಟನೆ ವರದಿಯಾಗಿದೆ.
ವಿಮಾ ಹಣ ಪಡೆದುಕೊಳ್ಳಲು ತಾನೇ ಒಬ್ಬ ವ್ಯಕ್ತಿಯನ್ನು ನೇಮಿಸಿ ತನ್ನ ಕಾಲನ್ನು ಆತನಿಂದ ಕತ್ತರಿಸಲು ಹೇಳಿದ್ದ ಎಂದು ತಿಳಿದುಬಂದಿದೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ? ಮುಂದಾಗಿದ್ದು ಏನು ಎಂಬುದನ್ನು ನಾವಿಂದು ನೋಡೋಣ.
ಈ ಘಟನೆ ನಡೆದಿರುವುದು ಅಮೆರಿಕದ ಮಿಸೌರಿ ಪ್ರದೇಶದ ಹೋವೆಲ್ ಕೌಂಟಿಯಲ್ಲಿ ಟ್ರ್ಯಾಕ್ಟರ್ ಹೊಂದಿದ್ದ ಆತ ಹಣಕ್ಕಾಗಿ ಈ ರೀತಿಯ ಯೋಜನೆ ರೂಪಿಸಿದ್ದ ತನ್ನ ಎರಡೂ ಕಾಲುಗಳನ್ನು ಕತ್ತರಿಸಲು ವ್ಯಕ್ತಿಯೊಬ್ಬನಿಗೆ ಹಣ ನೀಡಿ ನೇಮಿಸಿದ. ಬಳಿಕ ಟ್ರ್ಯಾಕ್ಟರ್ ಅಪಘಾತದಲ್ಲಿ ಕಾಲು ಕಳೆದುಕೊಂಡಂತೆ ಪ್ಲಾನ್ ಮಾಡಿದ್ದ.
ಕಾಲು ಕತ್ತರಿಸಿದ ವ್ಯಕ್ತಿ
ವಿಮಾ ಹಣ ಪಡೆಯಲು ಆತ ತನ್ನ ಕಾಲು ಕತ್ತರಿಸಲು ವ್ಯಕ್ತಿಯ ನೇಮಿಸಿದ. ಆತನಿಗೆ ಹಣ ನೀಡಿ ತನ್ನ ಎರಡೂ ಕಾಲು ಕತ್ತರಿಸಲು ಹೇಳಿದ. ಬಳಿಕ ಮದ್ಯ ಸೇವಿಸಿ ಆತನಿಗೆ ಕಾಲು ಕತ್ತರಿಸಲು ಹೇಳಿದ. ಆತ ಹೇಳಿದ್ದಂತೆ ವಿಲೋ ಎಂಬಾತನ ಎರಡೂ ಕಾಲುಗಳನ್ನು ಕತ್ತರಿಸಿದ.
ವಿಲೋ ಸ್ಪ್ರಿಂಗ್ಸ್‌ನ 60 ವರ್ಷದ ವ್ಯಕ್ತಿಯೊಬ್ಬರು ಬ್ರಷ್ ಹಾಗ್ (ಟ್ರ್ಯಾಕ್ಟರ್ ಹಿಂದೆ ಇರುವ ರೋಟರಿ) ಅಪಘಾತದಿಂದ ಬಳಲುತ್ತಿದ್ದ ನಂತರ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ರೋಟರಿಗೆ ಸಿಲುಕಿ ಕಾಲು ಕಳೆದುಕೊಂಡಿರುವುದಾಗಿ ಆತ ಹೇಳಿಕೊಂಡಿದ್ದ.
ಆದರೆ ಪೊಲೀಸರು ಇದರಲ್ಲಿ ಏನೋ ಬೇರೆ ವಿಚಾರ ಇದೆ ಎಂದು ಮೊದಲ ಬಾರಿಗೆ ಅನುಮಾನಿಸಿದ್ದರು. ಏಕೆಂದರೆ ರೋಟರಿಗೆ ಸಿಲುಕಿ ಕಾಲುಗಳು ತುಂಡಾದಂತೆ ಅದು ಕಾಣಿಸುತ್ತಿರಲಿಲ್ಲ. ಯಾರೋ ಕತ್ತರಿಸಿದಂತೆ ಕಾಣುತ್ತಿತ್ತು. ಏಕೆಂದರೆ ಕಾಲು ಕತ್ತರಿಸಿದ ಗಾಯಬಿಟ್ಟರೆ ಬೇರೆಲ್ಲು ಒಂದು ಸಣ್ಣ ಗಾಯವೂ ಆಗಿರಲಿಲ್ಲ. ಅಪಘಾತ ಸಂಭವಿಸಿದ್ದೇ ಆದರೆ ಒಂದಿಷ್ಟು ಗಾಯಗಳು ಆಗಬೇಕಿತ್ತು ಎಂಬುದು ಪೊಲೀಸರ ವಾದವಾಗಿತ್ತು.
ಅಪಘಾತ ನಡೆದ ಸ್ಥಳಕ್ಕೆ ಬಂದಾಗಲು ಅಚ್ಚರಿ ಇತ್ತು. ಆತನ ಎರಡು ಕಾಲುಗಳನ್ನು ರೋಟರಿ ಮೇಲೆ ಹಾಕಲಾಗಿತ್ತು. ಇದು ರೋಟರಿಗೆ ಸಿಕ್ಕಂತ ಕಾಣದಿದ್ದರೂ ಯಾರೋ ಬೇಕಂತಲೇ ಕಾಲನ್ನು ಅಲ್ಲಿ ಇಟ್ಟು ಹೋದಂತೆ ಕಾಣುತ್ತಿತ್ತು. ಇಲ್ಲಿಂದ ತನಿಖೆ ಚುರುಕುಗೊಂಡಿತು. ಆತನನ್ನು ಎಲ್ಲಾ ಆಯಾಮದಿಂದಲೂ ವಿಚಾರಣೆ ನಡೆಸಿದಾಗ ಆತ ನಿಜಾಂಶವೇನು ಎಂಬುದನ್ನು ತಿಳಿಸಿದ್ದ.
60 ವರ್ಷದ ಅಂಗವೈಕಲ್ಯ ವಿಮಾ ಹಣ ಪಡೆಯಲು ಈ ರೀತಿಯ ವಂಚನೆ ಮಾಡಲು ಯೋಜನೆಯನ್ನು ರೂಪಿಸಿದೆ ಎಂದು ನಂತರ ಬಹಿರಂಗಪಡಿಸಲಾಯಿತು. ಜೊತೆಗೆ ಆತನಿಗೆ ವಿಮಾ ಕಂಪನಿಯಿಂದ ಯಾವುದೇ ಹಣ ಸಿಗದೆ ಹೋಯಿತು. ಆದರೆ ಕಾಲುಗಳಿಲ್ಲದೆ ಆತ ಕಷ್ಟಪಡುತ್ತಿದ್ದ, ಅಲ್ಲದೆ ಗಾಯಗಳು ದೊಡ್ಡದಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು.



Click it and Unblock the Notifications
