Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ಇಟ್ಟಿಗೆ ಬಳಸಿ ಮನೆಯಲ್ಲೇ ಕೂಲರ್ ತಯಾರಿಸಿದ ವ್ಯಕ್ತಿ..! ಐಡಿಯಾಗೆ ಜನ ಫಿದಾ.!
ಇಂಟರ್‌ನೆಟ್‌ನಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ಎಂತವರನ್ನು ಚಕಿತಗೊಳಿಸುತ್ತೆ. ಕೆಲವೊಂದು ತಮಾಷೆಯಾಗಿದ್ದರೆ ಮತ್ತೆ ಕೆಲವು ಸಿಕ್ಕಾಪಟ್ಟೆ ಇನೋವೇಟಿವ್ ಐಡಿಯಾ ಆಗಿರುತ್ತೆ. ಇತ್ತೀಚಿಗೆ ಇದೊಂದು ಟ್ರೆಂಡ್ ಸಹ ಆಗಿದೆ. ಮನೆಯಲ್ಲೇ ಕುಳಿತು ಸಣ್ಣ ಪುಟ್ಟ ಆವಿಷ್ಕಾರ ಮಾಡಿ ಜನರನ್ನು ಅಚ್ಚರಿಗೊಳಪಡಿಸುತ್ತಾರೆ.
ಈಗ ಬೇಸಿಗೆಯಲ್ಲಿ ಜನ ಹೈರಾಣಾಗಿದ್ದು, ಮನೆಯಲ್ಲಿ ಎಸಿ, ಫ್ಯಾನ್ ಇದ್ದರೇನೇ ಬದುಕಲು ಸಾಧ್ಯ ಎನ್ನುವಂತಾಗಿದೆ. ಹೀಗಿರುವಾಗ ಇಲ್ಲೊಬ್ಬ ಮನೆಯಲ್ಲೇ ಕೂಲರ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಮಾರುಕಟ್ಟೆಯಲ್ಲಿ ಈಗ ತರಹೇವಾರಿ ಕೂಲರ್‌ಗಳು ಲಭ್ಯವಿದೆ. ಆದರೆ ಇಲ್ಲೊಬ್ಬ ಮನೆಯ ಟೇಬಲ್ ಫ್ಯಾನ್ ಬಳಸಿ ಕೂಲರ್ ರೆಡಿ ಮಾಡಿದ್ದಾನೆ.

ಕೂಲರ್‌ಗೆ ಹೆಚ್ಚು ಹಣ ನೀಡಬೇಕು, ಆದ್ರೆ ಈತ ಒಂದು ಟೇಬಲ್ ಫ್ಯಾನ್ ಇಂದಲೇ ಕೂಲರ್ ರೆಡಿ ಮಾಡಿದ್ದಾನೆ. ಈತನ ಐಡಿಯಾ ಕಂಡು ಜನರು ಅಚ್ಚರಿಗೊಳಗಾಗಿದ್ದಾರೆ. ಜೊತೆಗೆ ಆತನ ಐಡಿಯಾಗೆ ಮಾರುಹೋಗಿದ್ದಾರೆ.
ರಾಜಸ್ಥಾನದ ವ್ಯಕ್ತಿಯೊಬ್ಬ ಅಸಾಂಪ್ರದಾಯಿಕ ಕೂಲರ್ ಮೂಲಕ ಬೇಸಿಗೆ ವಿರುದ್ಧ ಹೋರಾಡಲು ಮುಂದಾಗಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಗ್ಗದ ಹವಾನಿಯಂತ್ರಣ ಯಂತ್ರಕ್ಕೆ ಜನ ಫಿದಾ ಆಗಿದ್ದಾರೆ. ಆತ ಒಂದು ಕಡೆ ಟೇಬಲ್ ಫ್ಯಾನ್ ಹಾಗೂ ಇಟ್ಟಿಗೆಗೆಳ ಸಹಾಯದಿಂದ ಕೂಲರ್ ನಿರ್ಮಿಸಿದ್ದಾರೆ.
ಇಟ್ಟಿಗೆಗಳ ನಡುವೆ ಸಣ್ಣ ಮೋಟಾರ್ ಸಹಾಯದಿಂದ ನೀರು ಹನಿಹಾಕುತ್ತಿದ್ದರೆ ಫ್ಯಾನ್‌ನಿಂದ ಬರುವ ಹಾಳಿಯಲ್ಲಿ ಆ ನೀರಿನ ಅಂಶ ಬೆರೆತು ಹೊರಬರುವ ಹಾಳಿ ತಂಪಾಗುತ್ತದೆ. ಇದು ಆತ ಐಡಿಯಾ. ಈ ಸರಳ ದಾರಿ ಕಂಡುಹಿಡಿದ ಆತನ ಬುದ್ಧಿವಂತಿಕೆಗೆ ಜನರು ಸಲ್ಯೂಟ್ ಅಂದಿದ್ದಾರೆ.
ಸುಲಭವಾದ, ಸರಳ ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಆತನ ಕೂಲರ್ ಅನ್ವೇಷಣೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆತ ಇಂಜಿನಿಯರಿಂಗ್ ಮುಗಿಸಿ ಕೆಲಸವಿಲ್ಲದೆ ಮನೆಯಲ್ಲಿರಬಹುದು. ಹೀಗಾಗಿ ಇಂತಹ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಜನರು ಅಭಿಪ್ರಾಯ ಹೊರಹಾಕಿದ್ದಾರೆ.
ಇದರಲ್ಲಿ ಮುಖ್ಯವಾಗಿ ಆತ ಒಂದು ಚಿಕ್ಕ ನೀರಿನ ಪೈಪ್, ಒಂದು ಮೋಟಾರ್ ಹಾಗೂ ಇಟ್ಟಿಗೆಯ ಸಹಾಯದಿಂದ ಈ ರೀತಿ ಕೂಲರ್ ರಚಿಸಿದ್ದಾನೆ. ಇದರಲ್ಲಿ ಆತನಿಗೆ ಯಾವ ಖರ್ಚು ಇಲ್ಲದೆ ಕೂಲರ್ ರೆಡಿಯಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಕೂಲರ್‌ಗಳು ಸಹ ಇದೇ ಐಡಿಯಾದಲ್ಲಿ ಕೆಲಸ ಮಾಡುತ್ತವೆ. ಆದ್ರೆ ಹೆಚ್ಚು ಬೆಲೆ ಹಾಗೂ ಒಂದಿಷ್ಟು ವೈಶಿಷ್ಟ್ಯಗಳು ಅದಕ್ಕೆ ಸೇರಿಸಲಾಗುತ್ತವೆ. ಎಷ್ಟಾದರೂ ಅದರಿಂದಲೂ ಬರುವುದು ಗಾಳಿಯೇ ಎಂಬುದು ಜನರ ಅಭಿಪ್ರಾಯವಾಗಿದೆ.
ಇತ್ತ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ. ಜನರು ಒಂದೊಂದು ರೀತಿ ಕಮೆಂಟ್ ಮಾಡಿದ್ದಾರೆ. ಕೆಲವರು ಇದೊಂದು ಒಳ್ಳೆಯ ಐಡಿಯಾ ಎಂದಿದ್ದರೆ ಮತ್ತೆ ಕೆಲವರು ಇದಕ್ಕಿಂತ ಫ್ಯಾನ್‌ನಿಂದ ನೇರವಾಗಿ ಗಾಳಿ ಬಂದರೆನೇ ಉತ್ತಮ ಎನ್ನುತ್ತಿದ್ದಾರೆ. ಏಕೆಂದರೆ ಈ ಫ್ಯಾನ್‌ಗೆ ಅಳವಡಿಸಲಾದ ಪರಿಕರಗಳು ಯಾವಾಗ ಬೇಕಾದರು ಹಾಳಾಗಬಹುದು. ಇದಕ್ಕೆ ಗ್ಯಾರಂಟಿ ಎಂಬುದಿಲ್ಲ. ಜೊತೆಗೆ ಇದನ್ನು ಎತ್ತಿಡುವುದು ಸಾಗಿಸುವುದು ಹೇಗೆ? ಇದಕ್ಕೆ ಯವಾಗಲು ನೀರು ಹಾಕುತ್ತಿರಬೇಕು. ಅದಕ್ಕೆ ಫ್ಯಾನ್ ಗಾಳಿಯೇ ಉತ್ತಮ ಎಂದು ಬಳಕೆದಾರರೊಬ್ಬರು ಕಮೆಂಟ್ ಮೂಲಕ ತಿಳಿಸಿದ್ದಾರೆ.
ಈ ರೀತಿಯ ಹೊಸ ಹೊಸ ಆವಿಷ್ಕಾರಗಳು ಭಾರತದಲ್ಲಿ ಹುಟ್ಟುವುದು ಇದೇನು ಮೊದಲಲ್ಲ. ಈ ಮೊದಲು ವ್ಯಕ್ತಿಯೊಬ್ಬ ಮನೆಯಲ್ಲಿ ಫ್ರಿಡ್ಜ್ ಇಲ್ಲದಿದ್ದರೂ ತಣ್ಣನೆಯ ನೀರು ಕುಡಿಯುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದ. ಆತ ನೀರಿನ ಬಾಟಲಿಗೆ ಬಟ್ಟೆಯನ್ನು ಸುತ್ತಿ ಮನೆ ಮುಂದಿನ ಮರಕ್ಕೆ ನೇತು ಹಾಕಿದ್ದ. ತಣ್ಣನೆಯ ಹಾಳಿ ಬೀಸಿ ಆ ನೀರು ಫ್ರಿಡ್ಜ್‌ನಲ್ಲಿಟ್ಟ ನೀರಿನಂತೆ ತಣ್ಣಗಾಗಿದ್ದು ನೋಡಬಹುದಿತ್ತು. ಈ ಐಡಿಯಾ ಕಂಡ ಜನರು ಸಹ ಶಾಕ್ ಆಗಿದ್ದರು.



Click it and Unblock the Notifications
