Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೈವೇಯಲ್ಲಿ ಗಾಡಿ ಓಡಿಸುವಾಗ ಈ ರೀತಿಯ ವಂಚಕರ ಬಗ್ಗೆ ಎಚ್ಚರ.. ಎಚ್ಚರ
ಹೈವೇಯಲ್ಲಿ ಗಾಡಿ ಚಲಾಯಿಸುವಾಗ ಎಷ್ಟು ಜಾಗ್ರತೆವಹಿಸಿದರೂ ಸಾಲದು, ಮೋಸ ಮಾಡಲೆಂದೇ ಒಂದಿಷ್ಟು ವಂಚಕರ ಗುಂಪು ಹೊಂಚು ಹಾಕಿ ಕಾಯುತ್ತಿರುತ್ತದೆ. ಇನ್ನು ಕೆಲವರು ರಾಜಾರೋಷವಾಗಿಯೇ ವಂಚನೆಗೆ ಇಳಿಯುತ್ತಾರೆ, ಕೆಲವರು ಪ್ರಶ್ನೆ ಮಾಡಲ್ಲ ಆ ವಂಚನೆಗೆ ಬಲಿಪಶು ಆಗ್ತಾರೆ, ಆದರೆ ಇಲ್ಲೊಬ್ಬ ವ್ಯಕ್ತಿ ಪ್ರಶ್ನೆ ಮಾಡುವ ಧೈರ್ಯ ಮಾಡಿ ಹಲವರನ್ನು ಈ ವಂಚನೆಯಿಂದ ಪಾರು ಮಾಡಿದ್ದಾರೆ, ಹೀಗಾಗಿ ನೆಟ್ಟಿಗರು ಆತನ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಘಟನೆಯ ದೃಶ್ಯವನ್ನು ಸೆರೆ ಹಿಡಿದಿದ್ದು ಆ ವೀಡಿಯೋ ವೈರಲ್ ಆಗುತ್ತಿದೆ
ಇದು ತೆಲಂಗಾಣದ ವೀಡಿಯೋ ಆಗಿದೆ. ಹೈವೇಯಲ್ಲಿ ನಡೆಯುತ್ತಿರುವ ದೊಡ್ಡ ವಂಚನೆಯನ್ನು ಬಹಿರಂಗ ಪಡಿಸಿದ್ದಾರೆ. ಫೇಕ್ ರೋಡ್ ಸೇಫ್ಟಿ ನೀಡಿ ಹಣಗಳಿಸುವ ದಂಧೆಯನ್ನು ಬಯಲು ಮಾಡಿದ್ದಾರೆ. ಈ ವೀಡಿಯೋವನ್ನು ಅಕ್ಟೋಬರ್ 16ರಂದು ತೆಗೆಯಲಾಗಿದೆ, ಈ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಅವರು ಧೈರ್ಯ ಮಾಡಿ ಬೈಯ್ಯುವುದನ್ನು ಕಾಣಬಹುದು, ಅವರು ಆ ವಂಚನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಏನಿದು ಘಟನೆ?
ರೋಡ್ ಸೇಫ್ಟಿ ಕ್ಯಾಂಪ್ ಅಂತ ಒಂದು ಸ್ಲಿಪ್ ಕೊಡ್ತಾರೆ, ಅದನ್ನು ಏಕೆ ಕೊಡ್ತಾ ಇದ್ದಾರೆ? ಏಕೆ ದುಡ್ಡು ಕೊಟ್ಟು ಅದನ್ನು ಖರೀದಿಸಬೇಕು ಎಂಬುವುದು ಕೂಡ ಹೇಳುವುದಿಲ್ಲ. ರೋಡ್ ಸೇಫ್ಟಿಗಾಗಿ ಇಷ್ಟು ದುಡ್ಡು ಕಟ್ಟಿ ಅಂತಾರೆ, ಅದರಲ್ಲಿಯೇ ನೋಡಬಹುದು ಆ ಚೀಟಿಗೆ 2 ತಿಂಗಳ ವ್ಯಾಲಿಡಿಟಿ ಬೇರೆ ಕೊಟ್ಟಿದ್ದಾರೆ. ಇನ್ನು ಆ ವೀಡಿಯೋದಲ್ಲಿ ಹಿಂದುಗಡೆ ಒಬ್ಬ ಪೊಲೀಸ್ ಕೂಡ ಕಾಣಬಹುದು. ಆ ಡ್ರೈವರ್ ಕೇಳ್ತಾರೆ ಈ ಸ್ಟಿಕ್ಕರ್ ಏಕೆ ಹಾಕಬೇಕು? ಅದಕ್ಕೆ ಸರಿಯಾದ ಉತ್ರವಿಲ್ಲ, ಆ ಸ್ಟಿಕ್ಕರ್ ಹಂಚುತ್ತಿರುವ ವ್ಯಕ್ತಿಗೆ ತೆಲುಗು ಬರಲ್ಲ, ಆವಾಗ ಈ ಡ್ರೈವರ್ ಹಿಂದಿಯಲ್ಲಿಯೇ ತೆಲುಗು ಬರಲ್ಲ ಮತ್ತೆ ತೆಲಂಗಾಣದಲ್ಲಿ ಏನು ಮಾಡ್ತಾ ಇದ್ದೀಯಾ ಎಂದು ಕೇಳುತ್ತಾರೆ.
ನನ್ನನ್ನು ಡ್ಯೂಟಿಗೆ ಹಾಕಿದ್ದಾರೆ ಎಂದು ಹೇಳುತ್ತಾನೆ, ಆವಾಗ ಇವರು ಲೆಟರ್ ತೋರಿಸಲು ಹೇಳ್ತಾರೆ, ನಮ್ಮದು ಸರ್ಕಾರಿ ಗಾಡಿ, ಸರ್ಜಾರಿಯ ಪಬ್ಲಿಸಿಟಿ ಮಾಡ್ತಾ ಇದ್ದೀವಿ, ಸರಕಾರದ ಲೆಟರ್ ಇದೆಯೇ? ಎಂದು ಕೇಳುತ್ತಾರೆ.
ಆವಾಗ ಅಲ್ಲಿ ಪೊಲೀಸ್ ವೇಷಧಾರಿ ಬರ್ತಾನೆ, ಆದರೆ ಆ ಪೊಲೀಸ್‌ಗೆ ನೇಮ್ ಬ್ಯಾಡ್ಜ್ ಕೂಡ ಇರಲ್ಲ, ಆ ಪೊಲೀಸ್ ವೇಷಧಾರಿ ಮೊದಲಿಗೆ ಜೋರು ಮಾಡಲು ನೋಡ್ತಾನೆ, ಇವನು ನಿಮ್ಮ ಹೆಸರಿನ ಬ್ಯಾಡ್ಜ್ ಎಲ್ಲಿ ಎಂದು ಕೇಳಿದಾಗ ಆತನಿಗೆ ಭಯವಾಗುತ್ತೆ, ಅಲ್ಲದೆ ನೀವು ಬಂದಿರುವುದು ಪೊಲೀಸ್ ಬೈಕ್‌ನಲ್ಲಿ ಕೂಡ ಅಲ್ಲ ಎಂದು ಹೇಳ್ತಾರೆ. ಇವರು ನಾನು ಈಗ ಪೊಲೀಸ್‌ಗೆ ಕರೆ ಮಾಡ್ತೀನಿ ಅಂತ ಹೇಳುವುದನ್ನು ಕೇಳಬಹುದು.
New Highway Scam Kinda Kalesh pic.twitter.com/B7a7BZpEwE
— Ghar Ke Kalesh (@gharkekalesh) October 21, 2024
ಹಾಡಹಗಲೇ ಈ ರೀತಿ ದಂಧೆಗೆ ಇಳಿಯುತ್ತಾರೆ ಎಂದರೆ...
ಆತ ಪೊಲೀಸ್ ಡ್ರೆಸ್ ಹಾಕಿ ವಂಚನೆಗೆ ಇಳಿದಿದ್ದಾನೆ, ಪೊಲೀಸ್ ವೇಷದಲ್ಲಿರುವ ವ್ಯಕ್ತಿ ಗಾಡಿ ನಿಲ್ಲಿಸುತ್ತಾನೆ ಮತೊಬ್ಬ ಬಂದು ಸ್ಟಿಕ್ಕರ್ ಕೊಡ್ತಾನೆ, ಜನರು ಪೊಲೀಸ್ ಇಲ್ಲಿಯೇ ಇದ್ದಾರೆ, ಏನೋ ಹೊಸ ರೂಲ್ಸ್ ಇರಬಹುದು ಎಂದು ದುಡ್ಡು ಕಟ್ಟಿ ಹೋಗಿದ್ದಾನೆ.
ಹೈವೇಯಲ್ಲಿ ಹತ್ತು ಹಲವು ರೀತಿಯ ವಂಚನೆ ನಡೆಯುತ್ತೆ ಜಾಗ್ರತೆವಹಿಸಬೇಕು
ಗಾಡಿ ನಿಲ್ಲಿಸಿ ಪಂಚರ್ ಆಗಿದೆ ಎಂದು ಹೇಳುವುದು ಅಥವಾ ಟೈರ್‌ಗೆ ಬೆಂಕಿ ಹೊತ್ತಿದೆ ಎಂದು ಹೇಳಿ ನಿಲ್ಲಿಸುವುದು ಹೀಗೆ ಹತ್ತು ಹಲವು ಸ್ಕ್ಯಾಮ್ ಮಾಡ್ತಾ ಇರ್ತಾರೆ. ಅದರಲ್ಲಿಯೂ ರಾತ್ರಿ ಹೊತ್ತಿನಲ್ಲಿ ಪ್ರಯಾಣ ಮಾಡುವಾಗ ತುಂಬಾನೇ ಜಾಗ್ರತೆವಹಿಸಬೇಕು. ಮೊಟ್ಟೆ ಎಸೆಯುವುದು ಹೀಗೆ ಹಲವು ರೀತಿಯಲ್ಲಿ ವಂಚನೆ ಮಾಡ್ತಾರೆ.
ಇದು ಮಾತ್ರ ಜನರನ್ನು ಪೂರ್ತಿ ಮಂಗ ಮಾಡಿದಂತಿದೆ, ಪೊಳಿಸ್ ವೇಷದಲ್ಲಿ ಒಬ್ಬ, ಸ್ಟಿಕ್ಕರ್ ಹಂಚುವವ ಮತ್ತೊಬ್ಬ...ಎಚ್ಚರ ಜನರೇ ಎಚ್ಚರ



Click it and Unblock the Notifications
