Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಪತ್ನಿಯರು ಬಾಡಿಗೆಗೆ ಸಿಗ್ತಾರೆ..! ಸ್ಟಾಂಪ್ ಪೇಪರ್ ಬರೆಸಿಕೊಂಡು ನಡೆಯುತ್ತೆ ಒಪ್ಪಂದ !
ಭಾರತದಲ್ಲಿ ಕಾಣಸಿಗುವಷ್ಟು ವಿಚಿತ್ರ ಆಚರಣೆಗಳು, ಸಂಸ್ಕೃತಿಗಳು ಬೇರೆ ಯಾವ ದೇಶದಲ್ಲಿ ಬಹುಶಃ ಕಾಣಲು ಸಾಧ್ಯವಿಲ್ಲ ಏಕೆಂದರೆ ಇಲ್ಲಿ ಅಚ್ಚರಿ ಹುಟ್ಟಿಸುವ ಆಚರಣೆಗಳು ನಮ್ಮ ನಡುವೆ ಇವೆ. ಇನ್ನು ಮಧ್ಯ ಪ್ರದೇಶದಲ್ಲಿ ಇಂತಹ ಅಚ್ಚರಿಗೆ ಕಾರಣವಾಗುವಂತಹ ನೂರಾರು ಆಚರಣೆಗಳಿವೆ.
ಮಧ್ಯಪ್ರದೇಶ ಸಾಂಸ್ಕೃತಿಕ ಕಾರಣಗಳಿಂದಾಗಿ ವಿಶೇಷ ರಾಜ್ಯ ಎನಿಸಿಕೊಂಡಿದೆ. ಆದರೆ ಅಲ್ಲೊಂದು ಅಚ್ಚರಿ ಹುಟ್ಟಿಸುವ ಪದ್ಧತಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದೇನೆಂದರೆ ಇಲ್ಲೊಂದು ಕಡೆ ಹೆಂಡತಿಯರು ಸಹ ಬಾಡಿಗೆಗೆ ಸಿಗುತ್ತಾರೆ. ಹೌದು ಇದನ್ನು ಕೇಳಿದ್ರೆ ನಿಮಗೂ ಅಚ್ಚರಿಯಾಗಬಹುದು. ಇಂತಹದೊಂದು ಪದ್ಧತಿ ಅಲ್ಲಿ ರೂಢಿಯಲ್ಲಿದೆ.

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ 'ಧಾಡಿಚಾ' ಎಂಬ ಪದ್ಧತಿ ಆಚರಿಸಲಾಗುತ್ತದೆ. ಕನ್ಯೆಯರಿಂದ ಹಿಡಿದು ವಿವಾಹಿತ ಮಹಿಳೆಯರು ಬಾಡಿಗೆ ನೀಡುವ ವಿಚಿತ್ರ ಪದ್ಧತಿ ಇದಾಗಿದೆ. ಒಂದು ದಿನದಿಂದ ಹಿಡಿದು ಒಂದು ವರ್ಷದ ವರೆಗೂ ಒಪ್ಪಂದ ಮಾಡಿಕೊಂಡು ಆಕೆಯನ್ನು ಬಾಡಿಗೆಗೆ ಪಡೆಯಬಹುದು.
ಇದಕ್ಕಾಗಿ ಶ್ರೀಮಂತ ಕುಟುಂಬದ ಮಂದಿ 10 ರೂಪಾಯಿಯಿಂದ ಹಿಡಿದು 100 ರೂ.ವರೆಗಿನ ಸ್ಟಾಂಪ್ ಪೇಪರ್ ಒಪ್ಪಂದ ಮಾಡಿಕೊಳ್ಳುತ್ತಾರೆ. ಇಲ್ಲಿಗೆ ಬರುವ ಪುರುಷರು ತಮ್ಮ ನೆಚ್ಚಿನ ಮಹಿಳೆಯನ್ನು ನಿಗದಿತ ಅವಧಿಗೆ ನಿಗದಿತ ಮೊತ್ತವನ್ನು ಪಾವತಿಸಿ ಬಾಡಿಗೆಗೆ ತೆಗೆದುಕೊಳ್ಳುತ್ತಾರೆ.
ಪ್ರತಿ ವರ್ಷ ನಿಗದಿತ ಸಮಯದಲ್ಲಿ ಧಾಡಿಚಾ ಪದ್ಧತಿಯಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತದೆ. ಈ ಹರಾಜಿನಲ್ಲಿ ಭಾಗಿಯಾಗಲೆಂದು ದೂರದ ಊರಿನಿಂದಲೂ ಪುರುಷರು ಬರುತ್ತಾರೆ. ಅಲ್ಲದೆ ಹುಡುಗಿಯರು, ಮಹಿಳೆಯರು ಬರುತ್ತಾರೆ. ಈ ಹರಾಜು ಪ್ರಕ್ರಿಯೆಯಲ್ಲಿ ವಿವಾಹಿತ ಮಹಿಳೆಯ ಬೆಲೆ 15 ಸಾವಿರ ರೂ.ನಿಂದ ಆರಂಭವಾಗುತ್ತದೆ. ಈ ಬೆಲೆ ಕೇವಲ ಇಲ್ಲಿಗೆ ಸೀಮಿತವಾಗಿಲ್ಲ, ಬೆಲೆ 15 ಸಾವಿರದಿಂದ ಪ್ರಾರಂಭವಾಗಿ 4 ಲಕ್ಷ ರೂ ವರೆಗೂ ಹೋಗುತ್ತದೆ. ಪುರುಷನು ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಮೊತ್ತವನ್ನು ಪಾವತಿಸಿ ಹೆಂಡತಿಯಾಗಿ ಆಕೆಯನ್ನ ಬಾಡಿಗೆಗೆ ತೆಗೆದುಕೊಳ್ಳುತ್ತಾನೆ.
ಸ್ಟಾಂಪ್ ಪೇಪರ್ ನಲ್ಲಿ 10 ರಿಂದ 100 ರೂ.ವರೆಗೆ ಎರಡೂ ಕಡೆಯವರ ನಡುವೆ ಒಪ್ಪಂದವಾಗುತ್ತದೆ. ಎರಡೂ ಪಕ್ಷಗಳ ಷರತ್ತುಗಳನ್ನು ಅದರಲ್ಲಿ ಬರೆಯಲಾಗುತ್ತದೆ. ಇದರ ನಂತರ ಗಂಡ ಮತ್ತು ಹೆಂಡತಿ ಇಬ್ಬರೂ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಒಪ್ಪಂದವನ್ನು ಪೂರ್ಣಗೊಳಿಸಿದ ನಂತರ, ಪತಿ ತನಗೆ ಅದೇ ಹೆಂಡತಿ ಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧಾರ ಮಾಡುತ್ತಾರೆ.
ಹೆಂಡತಿ ಈ ಒಪ್ಪಂದವನ್ನು ಮುರಿಯಬಹುದೇ?
ಬೇರೆಯವರ ಜೊತೆ ಒಪ್ಪಂದ ಮಾಡಿಕೊಂಡ ಬಳಿಕ ಆಕೆ ಈ ಒಪ್ಪಂದ ಮುರಿಯಬಹುದೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆಕೆ ಈ ಹೊಸ ಸಂಬಂಧದಲ್ಲಿ ಸಂತೋಷವಾಗಿಲ್ಲದಿದ್ದರೆ ಅಥವಾ ಆಕೆಗೆ ಇಷ್ಟವಿಲ್ಲದಿದ್ದರೆ ಒಪ್ಪಂದ ಮುರಿಯಬಹುದು. ಆದರೆ ಹಾಗೆ ಮಾಡಲು ಅವಳು ಸ್ಟಾಂಪ್ ಪೇಪರ್ನಲ್ಲಿ ಅಫಿಡವಿಟ್ ನೀಡಬೇಕು. ಇದರ ನಂತರ ಅವರು ಖರೀದಿದಾರರಿಗೆ ನಿಗದಿತ ಮೊತ್ತವನ್ನು ಹಿಂದಿರುಗಿಸಬೇಕು. ಈ ರೀತಿಯ ನಿಯಮ ಸಹ ಈ ಪದ್ಧತಿಯಲ್ಲಿದೆ.
ಒಂದು ವೇಳೆ ಈ ಒಪ್ಪಂದದ ಪ್ರಕಾರವಾಗಿ ಆಕೆ 1 ವರ್ಷಗಳ ಕಾಲ ಬೇರೊಬ್ಬನ ಜೊತೆ ಪತ್ನಿಯಾಗಿ ಬಾಡಿಗೆ ಸಮಯ ಪೂರೈಸಿದರೆ ಈ ಒಪ್ಪಂದವನ್ನು ಮತ್ತೆ ನವೀಕರಿಸಬಹುದು, ಯಾವ ಹರಾಜು ಇಲ್ಲದೆ ಮತ್ತೆ ಹಣ ಹಾಗೂ ಸ್ಟಾಂಪ್ ಪೇಪರ್ ಸಿದ್ಧಪಡಿಸಿ ಒಪ್ಪಂದ ಮುಂದುವರೆಸಬಹುದು. ಸದ್ಯ ಈ ವಿಚಿತ್ರ ಪದ್ಧತಿ ನೋಡಿ ಜನರು ಸಹ ಶಾಕ್ ಆಗಿದ್ದಾರೆ. ದೇಶದ ಯಾವು ಮೂಲೆಯಲ್ಲೂ ಇಲ್ಲದ ಈ ಪದ್ಧತಿಗೆ ಜನರು ಬೆಚ್ಚಿ ಬೀಳುತ್ತಾರೆ. ಅಲ್ಲಿ ಹಣದ ಅವಶ್ಯಕತೆ ಇರುವವರು ಬಡವರು ಮಾತ್ರ ಈ ಪದ್ಧತಿ ಅನುಸರಿಸುವುದಿಲ್ಲ ಎಲ್ಲರೂ ಇದರಲ್ಲಿ ಭಾಗಿಗಳಾಗುತ್ತಾರೆ.



Click it and Unblock the Notifications
