Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
250 ಗ್ರಾಮ್ ಆಲೂಗಡ್ಡೆ ಕಾಣಿಸುತ್ತಿಲ್ಲ: ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ..! ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ನಮಗೆ ಎಂತಹ ವಿಚಿತ್ರ, ಕುತೂಹಲ ಮೂಡಿಸುವಂತಹ ಘಟನೆಗಳು ನೋಡಲು ಸಿಗುತ್ತವೆ ಅಂದ್ರೆ ಕೆಲವೊಮ್ಮೆ ಈ ರೀತಿ ಘಟನೆಗಳು ನಡೆಯುತ್ತವೆ ಅನ್ನೋದನ್ನ ಯೋಚಿಸಲು ಸಹ ಸಾಧ್ಯವಾಗೋದಿಲ್ಲ. ಅಂತಹ ವಿಚಿತ್ರ ಘಟನೆಗಳಿಂದ, ವಿಡಿಯೋಗಳಿಂದ ಸೋಶಿಯಲ್ ಮೀಡಿಯಾ ತುಂಬಿಕೊಂಡಿರುತ್ತೆ. ಅದರಲ್ಲೂ ಕೆಲವು ಘಟನೆಗಳು ಎಲ್ಲರ ಕುತೂಹಲ ಮೂಡಿಸುತ್ತವೆ.
ಹಾಗೆ ನೀವು ಮದ್ಯಪಾನ ಮಾಡಿ ಗಲಾಟೆ ಮಾಡುವುದು, ಎಲ್ಲೆಂದರಲ್ಲಿ ಬಿದ್ದಿರುವುದು, ಇಲ್ಲವೆ ನಡೆಯಲಾಗದೆ ಮನೆಗೆ ತೆರಳಲು ಪರದಾಡುವುದು ಇಂತಹ ಹಲವು ವಿಇಡಯೋಗಳನ್ನ ನೋಡಿರಬಹುದು. ಕೆಲವರು ಕುಡಿದ ಮತ್ತಿನಲ್ಲಿ ಪ್ರಾಣಕ್ಕೆ ಸಂಚಕಾರ ತರುವಂತಹ ಕೆಲಸ ಮಾಡುವುದು ಸಹ ನೋಡಿರುತ್ತೇವೆ. ಹಾವು ಹಿಡಿಯಲು ಮುಂದಾಗುವುದು, ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುವುದು ಕೂಡ ನೋಡಿರುತ್ತೇವೆ.

ಈಗ ಇಲ್ಲೊಬ್ಬ ಮದ್ಯಪಾನ ಮಾಡಿದ ವ್ಯಕ್ತಿ ಕುಡಿದ ಮತ್ತಿನಲ್ಲಿ ಯಾರು ಮಾಡದಂತಹ ಕೆಲಸ ಮಾಡಿ ಸುದ್ದಿಯಾಗಿದ್ದಾನೆ. ಆತ ಮದ್ಯ ಸೇವಿಸಿ ಪೊಲೀಸರಿಗೆ ಕರೆ ಮಾಡಿ ಆಲೂಗಡ್ಡೆ ಹುಡುಕಿ ಕೊಡುವಂತೆ ಕೇಳಿಕೊಂಡಿದ್ದಾನೆ. ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಇಂತಹ ಕೆಲಸ ಮಾಡಿ ಈಗ ಸುದ್ದಿಯಾಗಿದ್ದಾನೆ. ಆತ ಮನೆಯಲ್ಲಿ ಅಡುಗೆ ಮಾಡಲು ತಂದಿದ್ದ ಆಲೂಗಡ್ಡೆಯನ್ನು ಯಾರೋ ಕದ್ದಿದ್ದಾರೆ ಎಂದು ಪೊಲೀಸರಿಗೆ ಕರೆ ಮಾಡಿದ್ದಾನೆ.
ಕ್ವಿಂಟಾಲ್, ಕೆ.ಜಿಯ ಆಲೂಗಡ್ಡೆ ಕಳ್ಳತನವಾಗಿದ್ದರೆ ಪೊಲೀಸರಿಗೆ ದೂರು ನೀಡುವು ಸರಿ, ಆದ್ರೆ ಆತ ಕೇವಲ 250 ಗ್ರಾಮ್ ಆಲೂಗಡ್ಡೆ ಕಾಣಿಸುತ್ತಿಲ್ಲ ಎಂಬ ಕಾರಣಕ್ಕೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಸ್ಥಳಕ್ಕಾಗಮಿಸಿದ ಪೊಲೀಸರು ಆತನ ಹೆಸರು, ವಿಳಾಸ ಏನು ಎಂಬುದನ್ನು ಕೇಳಿದ್ದಾರೆ. ಈ ವೇಳೆ ಆತ ವಿಜಯ್ ವರ್ಮಾ ಎಂದು ತಿಳಿಸಿದ್ದಾನೆ.
ಹಾಗೆ ದೀಪಾವಳಿ ಹಿಂದಿನ ದಿನ ಮನೆಯಲ್ಲಿ ಅಡುಗೆ ಮಾಡಲು ತಂದಿರುವ 250 ಗ್ರಾಮ್ ಆಲೂಗಡ್ಡೆ ಕಳ್ಳತನವಾಗಿದೆ ಎಂದು ಆತ ಪೊಲೀಸರ ಎದುರು ಹೇಳುತ್ತಿದ್ದಾರೆ. ಆಲೂಗಡ್ಡೆ ಬೇಯಿಸಿ ಮದ್ಯದೊಂದಿಗೆ ಸೇವಿಸಲು ತಯಾರಿಸಲು ಇಟ್ಟಿದೆ, ಆದ್ರೆ ಆ ಆಲೂಗಡ್ಡೆಗಳು ಈಗ ಕಾಣಿಸುತ್ತಿಲ್ಲ ಎಂದು ದೂರು ನೀಡಿದ್ದಾನೆ. ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ ಮತ್ತು ಸಂಜೆ ಕೆಲವು ದಿನಗಳವರೆಗೆ ಮದ್ಯಪಾನ ಮಾಡುತ್ತೇವೆ, ಆದರೆ ಪ್ರಶ್ನೆಯು ಮದ್ಯದ ಬಗ್ಗೆ ಅಲ್ಲ. ಇದು ಆಲೂಗಡ್ಡೆ ಬಗ್ಗೆ. ಅದನ್ನು ಹುಡುಕಿ ಕೊಡಿ ಎಂದು ಆತ ಹೇಳುತ್ತಿದ್ದಾನೆ.
ಪೊಲೀಸರು ಕೂಡ ಶಾಂತ ರೀತಿಯಲ್ಲಿ ಆತನ ವಿಚಾರಿಸುತ್ತಿದ್ದಾರೆ, ಎಷ್ಟು ಕೆ.ಜಿ ಆಲೂಗಡ್ಡೆ ಇತ್ತು, ಮದ್ಯ ಸೇವಿಸಿದ್ದೀಯಾ? ಎಲ್ಲಿ ಸಿಗುತ್ತೆ? ಎಷ್ಟು ಕುಡಿದಿದ್ದೀಯಾ ಎಂಬೆಲ್ಲಾ ವಿಚಾರ ಆತನಿಂದ ಕೇಳುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಸದ್ಯ ಘಟನೆಯಲ್ಲಿ ಆಲೂಗಡ್ಡೆ ಸಂಬಂಧ ಆತನಿಗೆ ಯಾವುದೇ ನ್ಯಾಯ ಸಿಕ್ಕಂತಿಲ್ಲ. ಏಕೆಂದರೆ ಪೊಲೀಸರು ಆತನಿಗೆ ಹಣ ನೀಡಿ ಮತ್ತೆ ಖರೀದಿಸಲು ಹೇಳಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕುಡುಕನ ಈ ಕಾರ್ಯ ನೋಡಿ ಜನರು ಅಚ್ಚರಿಗೆ ಒಳಗಾಗಿದ್ದಾರೆ. ಆತ ನಿಷ್ಟಾವಂತ, ತಾನು ದುಡಿದ ಹಣದಲ್ಲಿ ಆಲೂಗಡ್ಡೆ ಖರೀದಿಸಿ ತಂದು ಸವಿಯಲು ಮುಂದಾಗಿದ್ದ, ಆದ್ರೆ ಯಾರೋ ಅದನ್ನು ಕದ್ದಿದ್ದಾರೆ. ಆತನ ಮಾತಿನಲ್ಲಿ ನೋವಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications