Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಾಲಯ ಅಮವಾಸ್ಯೆ: ಕಾವೇರಿ ನದಿ ತೀರದಲ್ಲಿ ಪಿತೃ ತರ್ಪಣ ಮಾಡಿದರೆ ದೊರೆಯುವ ಪ್ರಯೋಜನಗಳೇನು?
ಕಾವೇರಿ ನದಿಯನ್ನು ದಕ್ಷಿಣದ ಗಂಗೆ ಎಂದು ಕರೆಯಲಾಗುವುದು. ಕಾವೇರಿ ಕೊಡಗಿನ ಭಾಗಮಂಡಲದಲ್ಲಿ ಹುಟ್ಟಿ ಹರಿಯುತ್ತಾಳೆ. ಕರ್ನಾಟಕದ ಬಹು ಸಂಖ್ಯಾತ ಜನರು ಕಾವೇರಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ, ಕಾವೇರಿಯ ಅವರ ಜೀವನಾಡಿ. ಕುಡಿಯುವ ನೀರಿನಿಂದ ಹಿಡಿದು ಬೆಳೆಯುವ ಬೆಳೆಯವರೆಗೆ ಕಾವೇರಿಯನ್ನೇ ಅವಲಂಬಿಸಿದ್ದಾರೆ.
ಕಾವೇರಿ ಉಗಮ ಸ್ಥಾನ ಭಾಗಮಂಡಲ ತೀರ್ಥ ಸ್ಥಾನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ, ಅದರಲ್ಲೂ ಕಾವೇರಿ ಸಂಕ್ರಮಣ ಸಮಯದಲ್ಲಿ ಲಕ್ಷಾಂತರ ಜನರು ಕಾವೇರಿ ಭಾಗಮಂಡಲಕ್ಕೆ ಬಂದು ತೀರ್ಥವನ್ನು ಪಡೆದು ಹೋಗುತ್ತಾರೆ. ಕಾವೇರಿಗೆ ಬಂದು ತರ್ಪಣ ನೀಡಿದರೆ ಮರಣವೊಂದಿದವರಿಗೆ ಮೋಕ್ಷ ಸಿಗುವುದು. ಈ ಕಾರಣಕ್ಕೆ ಮರಣವೊಂದಿದವರಿಗೆ ಕಾವೇರಿ ಪುಣ್ಯ ಕ್ಷೇತ್ರಕ್ಕೆ ಬಂದು ಪಿತೃತರ್ಪಣ ಮಾಡಲಾಗುವುದು.

ಮಹಾಲಯ ಅಮವಾಸ್ಯೆಯಂದು ಸಾವಿರಾರು ಜನರು ಬಂದು ಶ್ರಾದ್ಧ ಕಾರ್ಯ ಮಾಡುತ್ತಾರೆ. ಅಗಲಿದ ಪಿತೃಗಳಿಗೆ ತಿಲತರ್ಪಣ ನೀಡಿ ಅವರಿಗೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ ಪೂಜೆಯನ್ನು ಸಲ್ಲಿಸಲಾಗುವುದು. ಕೆಲವರು ಕಾವೇರಿ ಉಗಮ ಸ್ಥಾನಕ್ಕೆ ಹೋಗಿ ಪಿತೃತರ್ಪಣ ಮಾಡಿದರೆ ಇನ್ನು ಕೆಲವರು ಶ್ರೀರಂಗಪಟ್ಟಣಕ್ಕೆ ಹೋಗಿ ಶ್ರಾದ್ಧ ಕಾರ್ಯ ಮಾಡುತ್ತಾರೆ. ಈ ಮಹಾಲಯ ಅಮವಾಸ್ಯೆಯಂದು ಸ್ನಾನಘಟ್ಟ, ಪಶ್ಚಿಮವಾಹಿನಿ, ಸಂಗಮ, ಗೋಸಾಯ್ ಘಾಟ್ನ ಕಾವೇರಿ ತೀರದಲ್ಲಿ ಅರ್ಚಕರು ಬಂದು ಪಿತೃತರ್ಪಣ ಕಾರ್ಯ ನೆರವೇರಿಸಿ ಕೊಡುತ್ತಾರೆ.
ಅಕ್ಟೋಬರ್ 14ಕ್ಕೆ ಮಹಾಲಯ ಅಮವಾಸ್ಯೆ
ಪಿತೃಪಕ್ಷದ ಕೊನೆಯ ದಿನ ಮಹಾಲಯ ಅಮವಾಸ್ಯೆ. ಈ ದಿನ ಸರ್ವಪಿತೃ ಅಮವಾಸ್ಯೆಯಂದು ಆಚರಿಸಲಾಗುವುದು. ಈ ದಿನ ಶ್ರಾದ್ಧ ಕಾರ್ಯ ಮಾಡಿದವರಿಗೆ ನಮಗೆ ಎಲ್ಲಾ ಹಿರಿಯರ ಆಶೀರ್ವಾದ ಸಿಗುವುದು, ಆದ್ದರಿಂದ ಸರ್ವಪಿತೃ ಪಕ್ಷಕ್ಕೆ ತುಂಬಾನೇ ಮಹತ್ವವಿದೆ.
ಪಿತೃತರ್ಪಣ ಮಾಡುವುದರಿಂದ ದೊರೆಯುವ ಪ್ರಯೋಜನಗಳು
ಈ ದಿನ ಕಾವೇರಿ ನದಿ ತೀರದಲ್ಲಿ ಪಿತೃತರ್ಪಣ ಮಾಡುವುದರಿಂದ ಪಿತೃಗಳು ಮೋಕ್ಷವನ್ನು ಪಡೆಯುತ್ತಾರೆ, ಅವರು ಸಂತೃಪ್ತರಾಗಿ ನಮ್ಮ ಕುಟುಂಬವನ್ನು ಆಶೀರ್ವದಿಸುತ್ತಾರೆ.
* ಪಿತೃದೋಷದಿಂದ ಮುಕ್ತರಾಗಬಹುದು: ಪಿತೃದೋಷ ಉಂಟಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿ ಜೀವನದಲ್ಲಿ ಅಡೆತಡೆಗಳು ಉಂಟಾಗುವುದು, ದಂಪತಿಗೆ ಗರ್ಭಧಾರಣೆಗೆ ತೊಂದರೆ ಉಂಟಾಗುವುದು, ಪದೇ ಪದೇ ಗರ್ಭಪಾತವಾಗುವುದು, ಮನೆಯಲ್ಲಿ ನೆಮ್ಮದಿ ಇರಲ್ಲ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಪಿತೃತರ್ಪಣ ಮಾಡುವುದರಿಂದ ಪಿತೃದೋಷದಿಂದ ಮುಕ್ತರಾಗಬಹುದು, ನಮ್ಮ ಪಿತೃಗಳ ಆಶೀರ್ವಾದದಿಂದ ಎಲ್ಲವೂ ಒಳ್ಳೆಯದೇ ಸಂಭವಿಸಲಿದೆ.
ಕಾವೇರಿ ನದಿಯ ಬಗ್ಗೆ ಪೌರಾಣಿಕ ಕತೆ
ಬ್ರಹ್ಮಗಿರಿ ಪರ್ವತ ಪ್ರದೇಶದಲ್ಲಿ ಕಾವೇರಿ ಎಂಬ ರಾಜನಿದ್ದ. ಆತನಿಗೆ ಮಕ್ಕಳಿರಲಿಲ್ಲ, ಬ್ರಹ್ಮನ ತಪಸ್ಸು ಮಾಡಿ ಒಬ್ಬ ಮಗಳನ್ನು ಪಡೆಯುತ್ತಾನೆ, ಆತನಿಗೆ ಕಾವೇರಿ ಎಂಬ ಹೆಸರಿಡುತ್ತಾನೆ. ಆಕೆ ಬೆಳೆದ ಮೇಲೆ ಅಗಸ್ತ್ಯ ಮಹರ್ಷಿಗೆ ಕೊಟ್ಟು ಮದುವೆ ಮಾಡುತ್ತಾನೆ. ಕಾವೇರಿ ಅಗಸ್ತ್ಯ ಮಹರ್ಷಿ ಬಳಿ ಒಂದು ದಿನವೂ ತನ್ನ ಬಿಟ್ಟು ದೂರವಿರಬಾರದು ಎಂದು ಕೇಳಿಕೊಂಡಿರುತ್ತಾಳೆ. ಆದರೆ ಒಂದು ದಿನ ಅಗಸ್ತ್ಯ ಮಹರ್ಷಿ ತನ್ನ ಶಿಷ್ಯರಿಗೆ ಬೋಧಿಸಲು ದೂರದ ಕಾಡಿಗೆ ಹೋಗಿರುತ್ತಾರೆ, ಆ ದಿನ ಕಾವೇರಿ ಬಳಿ ಇರಲು ಸಾಧ್ಯವಾಗುವುದಿಲ್ಲ, ಇದರಿಂದ ಕೋಪಗೊಂಡ ಕಾವೇರಿ ಮೇಲಿನಿಂದ ಧುಮುಕುತ್ತಾಳೆ, ಆದರೆ ಕಾವೇರಿ ನದಿಯಾಗಿ ಮಾರ್ಪಟ್ಟು ಹರಿಯಲಾರಂಭಿಸುತ್ತಾಳೆ.
ಕಾವೇರಿ ಪುಣ್ಯ ನದಿ, ಜೀವನದಿ ಕಾವೇರಿಯಲ್ಲಿ ಸ್ವಲ್ಪ ನೀರು ಕಡಿಮೆಯಾದರೆ ಎರಡು ರಾಜ್ಯಗಳಿಗೆ ನೀರಿನ ಕ್ಷಾಮ ಉಂಟಾಗುವುದು, ಆದ್ದರಿಂದ ಕಾವೇರಿ ಸದಾ ಉಕ್ಕಿ ಹರಿಯಿಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಾರೆ. ಆ ಕಾವೇರಮ್ಮನ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಬೇಡಿಕೊಳ್ಳುತ್ತಾರೆ.



Click it and Unblock the Notifications


