Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಹಾಲಕ್ಷ್ಮಿ ರಾಜಯೋಗ: ಈ 3 ರಾಶಿಯವರಿಗೆ ಆರ್ಥಿಕವಾಗಿ ತುಂಬಾ ಒಳ್ಳೆಯದು
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಯೋಜನೆ ತುಂಬ ಮಹತ್ವವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಗ್ರಹಗಳ ಸಂಯೋಜನೆ ಕೆಲವೊಂದು ಯೋಗವನ್ನು ಸೃಷ್ಟಿಸುತ್ತದೆ. ಹಿಂದೂ ಪಂಚಾಂಗದ ಪ್ರಕಾರಮಾರ್ಚ್ 28 ರಂದು ಚಂದ್ರ ಮಿಥುನ ರಾಶಿಗೆ ಪ್ರವೇಶಿಸಲಿದೆ. ಮಂಗಳ ಗ್ರಹ ಕೂಡ ಕೂಡ ಮಿಥುನ ರಾಶಿಯಲ್ಲಿಯೇ.
ಮಿಥುನ ರಾಶಿಯಲ್ಲಿ ಮಂಗಳ ಮತ್ತು ಚಂದ್ರಗ್ರಹದ ಸಂಯೋಗವಾಗುವುದರಿಂದ ಈ ಸಂದರ್ಭದಲ್ಲಿ ಮಹಾಲಕ್ಷ್ಮಿ ರಾಜಯೋಗವು ರೂಪುಗೊಳ್ಳುತ್ತಿದೆ. ಈ ಯೋಗವು ಕೆಲವು ರಾಶಿಗಳಿಗೆ ಸಂಪತ್ತು ಹೆಚ್ಚಿಸಲಿದೆ. ಈ ಸಮಯದಲ್ಲಿ ಅಂಥ ರಾಶಿಗಳ ಮೇಲೆ ಲಕ್ಷ್ಮಿ ಕೃಪೆ ತುಂಬಾನೇ ಇರುತ್ತದೆ.

ಮಿಥುನ ರಾಶಿಯಲ್ಲಿ ಮಹಾಲಕ್ಷ್ಮಿ ರಾಜಯೋಗದ ಮಂಗಳಕರ ಪರಿಣಾಮವು ದ್ವಾದಶ ರಾಶಿಗಳ 3 ರಾಶಿಚಕ್ರ ಚಿಹ್ನೆಗಳ ಮೇಲೆ ಗರಿಷ್ಠವಾಗಿರುತ್ತದೆ. ಮಹಾಲಕ್ಷ್ಮಿ ರಾಜಯೋಗದಿಂದ ಯಾವ ರಾಶಿಯವರಿಗೆ ಅಧಿಕ ಲಾಭವಾಗಲಿದೆ ಎಂದು ತಿಳಿಯೋಣ?
ಮೇಷ ರಾಶಿ
ಮಹಾಲಕ್ಷ್ಮಿ ರಾಜಯೋಗದ ಶುಭ ಪರಿಣಾಮವು ಮೇಷ ರಾಶಿಯವರ ಮೇಲೆ ಇರಲಿದೆ. ಈ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಯಾಗಬಹುದು , ಅದೃಷ್ಟದ ಬೆಂಬಲ ಇರುವುದರಿಂದ ಆರ್ಥಿಕ ತೊಂದರೆಯಾಗುವುದಿಲ್ಲ. ಹೊಸ ಉದ್ಯೋಗ ಪಡೆಯಲು ಇಚ್ಚಿಸುತ್ತಿರುವವರು, ಸರ್ಕಾರಿ ನೌಕರಿ ಪಡೆಯಲು ಪ್ರಯತ್ನಿಸುತ್ತಿರುವವರು ಈ ಅವಧಿಯಲ್ಲಿ ಯಶಸ್ವಿಯಾಗುತ್ತಾರೆ. ಲಕ್ಷ್ಮಿ ಕೃಪೆಯಿಂದಾಗಿ ಹಣಕ್ಕೆ ತೊಂದರೆಯಾಗುವುದಿಲ್ಲ.
ಮಿಥುನ ರಾಶಿ
ಚಂದ್ರ ಮತ್ತು ಮಂಗಳ ಸಂಯೋಗದಿಂದ ರೂಪುಗೊಂಡ ಮಹಾಲಕ್ಷ್ಮಿ ರಾಜಯೋಗವು ಮಿಥುನ ರಾಶಿಯವರ ಮೇಲೂ ಶುಭ ಪರಿಣಾಮವನ್ನು ಬೀರುತ್ತದೆ. ಈ ಸಂಯೋಜನೆ ಸಮಯದಲ್ಲಿ ಸಮೃದ್ಧಿ ಹೆಚ್ಚಾಗಲಿದೆ, ವ್ಯವಹಾರ ಮಾಡುತ್ತಿರುವವರು ಒಳ್ಳೆಯ ಲಾಭ ಗಳಿಸಬಹುದು. ರಾಜುಕೀಯದಲ್ಲಿ ಇರುವವರಿಗಂತೂ ಈ ಅವಧಿ ತುಂಬಾನೇ ಚೆನ್ನಾಗಿದೆ.
ಸಿಂಹ ರಾಶಿ
ಮಹಾಲಕ್ಷ್ಮಿ ರಾಜಯೋಗದ ಶುಭ ಪರಿಣಾಮವು ಸಿಂಹ ರಾಶಿಯವರ ಮೇಲೂ ತುಂಬಾ ಉತ್ತಮವಾಗಿದೆ. ಚಂದ್ರ ಮತ್ತು ಮಂಗಳನ ಸಂಯೋಜನೆಯ ಸಮಯದಲ್ಲಿ, ಆರ್ಥಿಕ ಬೆಳವಣಿಗೆ ಕಾಣುವಿರಿ, ನಿಮಗಾಗಿ ಹೊಸ ಆದಾಯದ ಅವಕಾಶಗಳು ಸಿಗಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಈ ಸಮಯವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ವ್ಯಾಪಾರ ಕ್ಷೇತ್ರದಲ್ಲಿ ಹೊಸ ಉದ್ಯೋಗಪಡೆಯುತ್ತಿರುವವರು ಉತ್ತಮ ಲಾಭ ಪಡೆಯುವಿರಿ.



Click it and Unblock the Notifications
