Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಮಹಾ ಕುಂಭಮೇಳ ಅಂತ್ಯ: ಮುಂದಿನ ಕುಂಭಮೇಳ ಯಾವಾಗ? ಎಲ್ಲಿ ನಡೆಯಲಿದೆ?
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮ್ಮೇಳನ ಮಹಾ ಕುಂಭಮೇಳ ಮುಕ್ತಾಯಗೊಂಡಿದೆ. ತ್ರಿವೇಣಿ ಸಂಗಮದಲ್ಲಿ ಕೋಟಿ ಕೋಟಿ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ಹಾಗೆ ವಿಶ್ವದ ಮೂಲೆ ಮೂಲೆಯಿಂದಲೂ ಭಕ್ತರು ಇಲ್ಲಿದೆ ಆಗಮಿಸಿ ತಮ್ಮ ಭಕ್ತಿ ಪ್ರದರ್ಶಿಸಿದ್ದಾರೆ. ಈ ಬಾರಿ ಸುಮಾರು 66 ಕೋಟಿಗೂ ಅಧಿಕ ಮಂದಿ ಪ್ರಯಾಗ್‌ರಾಜ್ ಕುಂಭ ಮೇಳಕ್ಕೆ ಆಗಮಿಸಿದ್ದರು ಎಂದು ಹೇಳಲಾಗಿದೆ.
ಬರೋಬ್ಬರಿ 45 ದಿನಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ ಸಂಭ್ರಮದಿಂದ ಕುಂಭಮೇಳೆ ನಡೆದಿದೆ. ಹಲವು ರಾಜಕೀಯ ನಾಯಕರು, ಉದ್ಯಮಿಗಳು, ನಟ-ನಟಿಯರು ಈ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪವಿತ್ರ ಸ್ನಾನ ಮಾಡಿದ್ದಾರೆ. ಹಾಗೆ ಯೋಗಿ ಸರ್ಕಾರದ ಈ ಆಯೋಜನೆಯನ್ನು ಕೂಡ ಹೊಗಳಿದ್ದಾರೆ. ಇನ್ನು 144 ವರ್ಷದ ಬಳಿಕ ನಡೆದಿದ್ದ ಈ ಮಹಾಕುಂಭಮೇಳಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಸಾಧುಗಳು ಭಾಗಿಯಾಗಿದ್ದರು.

ಈ ವರ್ಷ ಗಂಗಾ ಯಮುನಾ ಮತ್ತು ಸರಸ್ವತಿಯ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಸುಮಾರು 66 ಕೋಟಿ ಭಕ್ತರು ಸ್ನಾನ ಮಾಡುವ ಮೂಲಕ ಮಹಾ ಕುಂಭಮೇಳ ಹೊಸ ದಾಖಲೆ ಬರೆದಿದೆ. ಕುಂಭಮೇಳದಲ್ಲಿ ಅಮೆರಿಕ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಮಂದಿ ಭಾಗಿಯಾಗಿದ್ದರು ಎಂದು ಕೂಡ ಹೇಳಲಾಗುತ್ತದೆ.
ಮುಂದಿನ ಮಹಾ ಕುಂಭ ಮೇಳ ಯಾವಾಗ?
ಮುಂದಿನ ಕುಂಭಮೇಳವು 2027 ರಲ್ಲಿ ಮಹಾರಾಷ್ಟ್ರದ ನಾಶಿಕ್‌ನಲ್ಲಿ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮವು ನಾಶಿಕ್‌ನಿಂದ ಸುಮಾರು 38 ಕಿ.ಮೀ ದೂರದಲ್ಲಿರುವ ತ್ರಿಯಂಬಕೇಶ್ವರದಲ್ಲಿ ನಡೆಯಲಿದೆ. ಗೋದಾವರಿ ನದಿಯ ದಡದಲ್ಲಿರುವ ನಾಶಿಕ್ ನಗರವು ಈ ಕುಂಭಮೇಳ ಆಯೋಜಿಸಲಿದೆ. 12 ಜ್ಯೋತಿರ್ಲಿಂಗ್‌ಗಳಲ್ಲಿ ಒಂದಾಗಿರುವ ತ್ರಿಯಂಬಕೇಶ್ವರ ಶಿವ ದೇವಾಲಯ ಈ ನಾಶಿಕ್‌ನಲ್ಲಿದೆ. ಪ್ರತಿ ವರ್ಷ ಈ ದೇವಾಲಯಕ್ಕೆ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ.
ಮುಂಬೈನಲ್ಲಿ ನಡೆದ NASSCOM ತಂತ್ರಜ್ಞಾನ ಮತ್ತು ನಾಯಕತ್ವ ವೇದಿಕೆ 2025 ರಲ್ಲಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, 2027 ರ ನಾಸಿಕ್ ಕುಂಭಮೇಳದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ವಿವರಿಸಿದ್ದಾರೆ.
ಮೂರು ವರ್ಷದಲ್ಲೇ ಕುಂಭ ಮೇಳ ಬಂದಿರುವುದೇಕೆ?
ಕುಂಭ ಮೇಳವು ದೇಶದ 4 ನಗರಗಳಲ್ಲಿ ಮಾತ್ರ ನಡೆಯುತ್ತದೆ. ಪ್ರಯಾಗ್‌ರಾಜ್, ಹರಿದ್ವಾರ, ನಾಶಿಕ್ ಹಾಗೂ ಉಜ್ಜಯಿನಿ ನಗರಗಳಲ್ಲಿ ನಡೆಯುತ್ತದೆ. ಹಾಗೆ ಕನಿಷ್ಠ 3 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಪ್ರತಿ 6 ವರ್ಷಕ್ಕೊಮ್ಮೆ ನಡೆದರೆ ಆ ಕುಂಭಮೇಳವನ್ನು ಅರ್ಧ ಕುಂಭಮೇಳ ಎಂದು ಕರೆಯಲಾಗುತ್ತದೆ. 12 ವರ್ಷಕ್ಕೊಮ್ಮೆ ನಡೆಯುವ ಮೇಳವನ್ನು ಪೂರ್ಣ ಕುಂಭ ಎಂದು, 144 ವರ್ಷದ ಬಳಿಕ ನಡೆಯುವ ಮೇಳವನ್ನು ಮಹಾ ಕುಂಭ ಮೇಳ ಎಂದು ಕರೆಯಲಾಗುತ್ತದೆ. ಹೀಗಾಗಿ ಮಹಾ ಕುಂಭ ಮೇಳವು 2169ನೇ ವರ್ಷದಲ್ಲಿ ನಡೆಯಲಿದೆ. ಈಗಾಗಲೇ ಮುಂದಿನ ಕುಂಭಮೇಳದ ಕುರಿತು ನಿರೀಕ್ಷೆ ಹೆಚ್ಚಾಗುವಂತೆ ಮಾಡಲಾಗಿದೆ. ನಾಶಿಕ್‌ನಲ್ಲಿ ನಡೆಯಲಿರುವ ಕುಂಭಮೇಳವು ಅತ್ಯಾಧುನಿಕ ಸೌಕರ್ಯ ಹೊಂದಿರಲಿದೆ ಎನ್ನಲಾಗಿದೆ.
ಈಗ ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಿಗೂ ಗಂಗಾ ನದಿ ನೀರು ರವಾನಿಸಲು ಮುಂದಾಗಲಾಗಿದೆ. ಕಾರಣಾಂತರಗಳಿಂದ ಪ್ರಯಾಗ್‌ರಾಜ್‌ಗೆ ಆಗಮಿಸಲು ಆಗದಿರುವವರು ಮನೆಯಲ್ಲೇ ಗಂಗಾಜಲ ಪಡೆಯಬಹುದು. ಇದಕ್ಕಾಗಿ ಯುಪಿ ಸರ್ಕಾರವು ಅಗ್ನಿಶಾಮಕದಳ ಮತ್ತು ತುರ್ತು ಸೇವೆಗಳ ಇಲಾಖೆಯ ಬಳಸಿಕೊಂಡಿದೆ. 78 ಜಿಲ್ಲೆಯಿಂದ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ತಮ್ಮ ವಾಹನದಲ್ಲಿ ಗಂಗಾ ಜಲ ತುಂಬಿಕೊಂಡು ವಾಪಾಸು ತೆರಳಲಿವೆ. ಕುಂಭಮೇಳದಲ್ಲಿ ಬರೋಬ್ಬರಿ 365 ವಾಹನಗಳು ಭಾಗಿಯಾಗಿದ್ದವು. ಸದ್ಯ ಈ ಅಗ್ನಿಶಾಮಕ ದಳದ ವಾಹನದಿಂದ ನೀರು ಹಂಚಿಕೆ ಮಾಡುವ ಪ್ರಕ್ರಿಯೆಯು ಆಯಾ ಜಿಲ್ಲಾಡಳಿತಕ್ಕೆ ವಹಿಸಲಾಗಿದೆ.



Click it and Unblock the Notifications
