Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಹಾ ಕುಂಭಮೇಳ 2025: ಸನಾತನ ಧರ್ಮಕ್ಕೆ ಮನಸೋತು ಯೋಗಿಗಳಾದ ವಿದೇಶಿಗರು!
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವಿಶ್ವವಿಖ್ಯಾತ ಮಹಾ ಕುಂಭಮೇಳ ನಡೆಯುತ್ತಿದೆ. ಈಗಾಗಲೇ ಹಲವು ಕಾರಣದಿಂದಾಗಿ ಸುದ್ದಿಯಾಗುತ್ತಿದೆ. ಹಾಗೆ ಕುಂಭಮೇಳದ ಬಹುದೊಡ್ಡ ಆಕರ್ಷಣೆ ಅಂದರೆ ಅದು ಸಾಧುಗಳು. ವರ್ಷ ಪೂರ್ತಿ ವಿಶ್ವದ ಮೂಲೆ ಮೂಲೆಯಲ್ಲಿರುವ ಈ ಸಾಧುಗಳು, ಕುಂಭಮೇಳದ ಸಮಯದಲ್ಲಿ ಪ್ರಯಾಗ್‌ರಾಜ್‌ನಲ್ಲಿ ಅವರು ಕಾಣಿಸುತ್ತಾರೆ.
ಕೆಲವರು ಸಿದ್ಧಯೋಗಿಗಳು, ಅಘೋರಿಗಳು ಅಲ್ಲಿ ನೋಡಬಹುದು. ಮತ್ತೆ ಕೆಲವರು ವಿದೇಶದಿಂದ ಬಂದು ಸನ್ಯಾಸ ಸ್ವೀಕರಿಸುವವರು ಕೂಡ ಈ ಸಮಯದಲ್ಲಿ ನಾವು ನೋಡಬಹುದು. ಜಗತ್ತಿನಾದ್ಯಂತ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿರುವ ಮಂದಿ ಈ ಸಮಯದಲ್ಲಿ ಪ್ರಯಾಗ್‌ರಾಜ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ ಮಹಾ ಕುಂಭಮೇಳದಲ್ಲಿ ಕಾಣಿಸಿಕೋಡಿರುವ ವಿದೇಶಿ ಸಾಧುಗಳು ಈಗ ಎಲ್ಲರ ಗಮನ ಸೆಳೆದಿದ್ದಾರೆ.

ಮಹಾಕುಂಭಮೇಳ ಕಣ್ತುಂಬಿಕೊಳ್ಳಲು ರಷ್ಯಾದಿಂದ ಭಾರತಕ್ಕೆ ಬಂದಿರುವ ಬಾಬಾ ಒಬ್ಬರು ಗಮನ ಸೆಳೆದಿದ್ದಾರೆ. ಕೇಸರಿ ಉಡುಪು ಧರಿಸಿರುವ ಒಂದು ಚೀಲ ಹಿಡಿದು ಕುಳಿತ್ತಿದ್ದಾರೆ, ಆದರೆ ಅವರ ಕಟ್ಟುಮಸ್ತಾದ ದೇಹ ನೋಡಿ ಎಲ್ಲರು ಅಚ್ಚರಿಗೆ ಒಳಗಾಗಿದ್ದಾರೆ. ಉದ್ದನೆಯ ದಾಡಿ ಬಿಟ್ಟಿರುವ ಅವರು ಮೈಮೇಲೆ ರುದ್ರಾಕ್ಷಿ ಮಾಲೆ ಧರಿಸಿದ್ದಾರೆ. ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಸ್ನಾಯು ಬಾಬಾ ಎಂಬ ಹೆಸರಿನಿಂದ ಅವರೀಗ ಭಾರತದಲ್ಲಿ ಫೇಮಸ್ ಆಗಿದ್ದಾರೆ. ಅವರು 30 ವರ್ಷದ ಹಿಂದೆ ಹಿಂದೂ ಧರ್ಮ ಸ್ವೀಕರಿಸಿದ್ದಾರೆ. 7 ಅಡಿ ಎತ್ತರ ಇರುವ ಅವರು ರಷ್ಯಾ ತೊರೆದು ಈಗ ನೇಪಾಳದಲ್ಲಿ ನೆಲೆಸಿದ್ದಾರೆ. ಹಾಗೆ ಅವರು ಹಿಂದೂ ಧರ್ಮವನ್ನು ಪಚಾರ ಮಾಡುವ ಉದ್ದೇಶದಿಂದ ಇಡೀ ಜೀವನ ಮುಡಿಪಾಗಿಟ್ಟಿದ್ದಾರೆ. ಅವರು ಇದಕ್ಕೂ ಮೊದಲು ಅಧ್ಯಾಪಕ ವೃತ್ತಿ ತೊರೆದಿದ್ದಾರೆ. ಸದ್ಯ ಇವರೀಗ ಕುಂಭಮೇಳದ ಆಕರ್ಷಣೆಯಾಗಿದ್ದಾರೆ.
ಅಮೆರಿಕ ಸೇನೆಯ ಮಾಜಿ ಸೈನಿಕ ಈಗ ಬಾಬಾ ಮೋಕ್ಷಪುರಿ!
ಅಮೆರಿಕ ಸೇನೆಯಲ್ಲಿ ಸೇವೆ ಸಲ್ಲಿರುವ ಮತ್ತೋರ್ವ ವ್ಯಕ್ತಿ ಈಗ ಪ್ರಯಾಗ್‌ರಾಜ್‌ನಲ್ಲಿ ಮೋಕ್ಷಪುರಿಯಾಗಿ ಕಾಣಿಸಿಕೊಂಡಿದ್ದಾರೆ. ಮೂಲತಃ ಮೈಕೆಲ್ ಎಂಬಾತ ಆಧ್ಯಾತ್ಮಿಕ ಒಲವಿನಿಂದ ಹಿಂದೂ ಧರ್ಮದ ಆಚರಣೆಗಳ ಆಕರ್ಷಣೆಗೆ ಒಳಗಾಗಿದ್ದಾರೆ. ಜುನಾ ಅಖಾಡದೊಂದಿಗೆ ಸಂಬಂಧ ಹೊಂದಿರುವ ಮೈಕೆಲ್ ಹಿಂದೂ ಧರ್ಮವನ್ನು ಪ್ರಚಾರ ಪಡಿಸುವುದಾಗಿ ಹೇಳಿದ್ದಾರೆ. ಹಾಗೆ ಮುಕ್ತಿಗೆ ಮೋಕ್ಷಕ್ಕೆ ಹಿಂದೂ ಧರ್ಮ ಮಾರ್ಗ ತೋರಲಿದೆ ಎಂದು ನಂಬಿದ್ದಾರೆ.
ಮಾಜಿ ಸೈನಿಕ ಈಗ ಬಾಬಾ ಮೋಕ್ಷಪುರಿ ಎಂದು ಕರೆಯಲ್ಪಡುತ್ತಾರೆ. ಇದು ಪ್ರಯಾಗ್‌ರಾಜ್‌ನಲ್ಲಿ ನನ್ನ ಮೊದಲ ಮಹಾ ಕುಂಭಮೇಳ ಇಲ್ಲಿನ ಆಧ್ಯಾತ್ಮಿಕ ಶಕ್ತಿಯು ಅಪ್ರತಿಮವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸೇನೆಯಲ್ಲಿದ್ದಾಗ ಹಲವು ಕಾರಣಗಳಿಂದಾಗಿ ಅವರು ಜೀವನದಲ್ಲಿನ ಸಾರಗಳ ಕುರಿತು ಯೋಚಿಸಿರಲಿಲ್ಲವಂತೆ. ಆದರೆ ನಿವೃತ್ತಿ ಪಡೆದ ಬಳಿಕ ಜೀವನ ಮತ್ತು ಮೋಕ್ಷದ ಕುರಿತು ಬಹುದೊಡ್ಡ ಪ್ರಶ್ನೆ ಅವರಿಗೆ ಮೂಡಿತ್ತಂತೆ. ಆದ್ರೆ ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹಲವು ಧರ್ಮಗಳ ಪವಿತ್ರ ಗ್ರಂಥಗಳು, ಪಂಡಿತರು, ಸಾಧುಗಳನ್ನು ಅವರು ಭೇಟಿಯಾದರಂತೆ.
ಇಷ್ಟೆಲ್ಲಾ ಮಾಡಿದರು ಅವರಿಗೆ ಸೂಕ್ತ ಉತ್ತರ ಸಿಕ್ಕಿರಲಿಲ್ಲವಂತೆ, ಆದ್ರೆ ಹಿಂದೂ ಧರ್ಮದಲ್ಲಿದ್ದ ಮೋಕ್ಷ ಹಾಗೂ ಮುಕ್ತಿ ಕುರಿತ ಆಲೋಚನೆಯು ಅವರ ಆಧ್ಯಾತ್ಮಿಕ ಚಿಂತನೆ ಬದಲಿಸಿತ್ತಂತೆ, ಹಾಗೆ ಸನಾತನ ಧರ್ಮದ ಕುರಿತ ಆಸಕ್ತಿಯು ಅವರನ್ನು ಸನ್ಯಾಸಿಯನ್ನಾಗಿ ಮಾಡಿತ್ತಂತೆ. ಸದ್ಯ ಈಗ ಅವರು ಸಂಪೂರ್ಣ ಜೀವನವನ್ನು ಹಿಂದೂ ಧರ್ಮದ ಪ್ರಚಾರ ಪಡಿಸಲು ಮೀಡಲಿಟ್ಟಿರುವುದಾಗಿಯೂ ಹೇಳಿಕೊಂಡಿದ್ದಾರೆ ಜೊತೆಗೆ ಅವರು ಪ್ರಯಾಗ್‌ರಾಜ್‌ನಲ್ಲಿ ವಿದೇಶಿ ಸನ್ಯಾಸಿಯಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.



Click it and Unblock the Notifications
