Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
ಮಹಾ ಕುಂಭಮೇಳ 2025: ತಲೆ ಮೇಲೆ ಗೋಧಿ, ರಾಗಿ ಬೆಳೆದ ಬಾಬಾ
ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳಕ್ಕೆ ಇನ್ನೇನು ದಿನಗಣನೆ ಆರಂಭಗೊಂಡಿದೆ. ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮ್ಮೇಳನ ಎಂಬ ಕೀರ್ತಿ ಪಡೆದಿರುವ ಕುಂಭಮೇಳವು ಹಲವು ವಿಚಾರಗಳಿಂದ ಗಮನ ಸೆಳೆಯುತ್ತದೆ. ಅದರಲ್ಲೂ ಸಾಧು ಸಂತರು ದೇಶದ ಮೂಲೆ ಮೂಲೆಯಿಂದ ಈ ವೇಳೆ ತ್ರಿವೇಣಿ ಸಂಗಮಕ್ಕೆ ಆಗಮಿಸುತ್ತಾರೆ. ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿ ಪುಣ್ಯ ಪಡೆಯಬಹುದು ಎಂಬುದು ಅವರ ನಂಬಿಕೆಯಾಗಿರುತ್ತೆ.
ಈ ಮಹಾ ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗುತ್ತಾರೆ. ಇಡೀ ತಿಂಗಳು ಅಲ್ಲಿ ಹಬ್ಬದ ವಾತಾವರಣ ಇರಲಿದೆ. ಇದಕ್ಕಾಗಿ ಉತ್ತರ ಪ್ರದೇಶದಲ್ಲಿ ಭರದ ಸಿದ್ಧತೆ ನಡೆದಿದೆ. ಹಾಗೆ ಈ ಕುಂಭ ಮೇಳದ ಪ್ರಮುಖ ಆಕರ್ಷಣೆಯಾಗಿ ಸಾಧುಗಳು, ಅಘೋರಿಗಳು ಕಾಣಸಿಗುತ್ತಾರೆ. ವರ್ಷದ ಬಹುತೇಕ ದಿನ ಅವರು ಸಾರ್ವಜನಿಕರಿಂದ ದೂರವೇ ಉಳಿದಿರುತ್ರಾರೆ, ಆದ್ರೆ ಕುಂಭ ಮೇಳದ ಸಮಯದಲ್ಲಿ ಪ್ರಯಾಗ್‌ರಾಜ್‌ನಲ್ಲಿ ನೋಡಲು ಸಿಗುತ್ತಾರೆ.

ಇಂತಹ ಲಕ್ಷಕ್ಕು ಅಧಿಕ ಸಾಧುಗಳ ಪೈಕಿ ಕೆಲವರು ವಿಚಿತ್ರವಾಗಿ, ವಿಶೇಷವಾಗಿ ಕಾಣಿಸುತ್ತಾರೆ. ಇಲೊಬ್ಬ ಸಾಧು ತಮ್ಮ ತಲೆಯ ಮೇಲೆ ಗೋಧಿ ಗಿಡಗಳ ಬೆಳೆದು ಎಲ್ಲರಲ್ಲೂ ಅಚ್ಚರಿಗೆ ಕಾರಣರಾಗಿದ್ದಾರೆ. ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯ ಈ ಯೋಗಿ, ತನ್ನ ತಲೆಯ ಮೇಲೆ ಹಸಿರು ಹುಲ್ಲುಗಳ ಬೆಳೆಸಿ ಪರಿಸರ ಜಾಗೃತಿ ಕುರಿತಂತೆ ಹೊಸ ರೀತಿಯ ಅಭಿಯಾನ ಮಾಡುತ್ತಿದ್ದಾರೆ.
ಅನಾಜ್ ವಾಲೆ ಬಾಬಾ, ತನ್ನ ತಲೆಯ ಮೇಲೆ ಗೋಧಿ ಗಿಡಗಳ ಬೆಳೆದಿದ್ದಾರೆ. ಅಮರ್‌ಜೀತ್ ಎಂಬುದು ಅವರ ನಿಜವಾದ ಹೆಸರಂತೆ. ಆದ್ರೆ ಅವರು ಸನ್ಯಾಸಿಯಾದ ಬಳಿಕ ಹೆಸರು ಕೂಡ ಬದಲಾಗಿದೆ. ಹಾಗೆ ಅವರು ತಲೆ ಮೇಲೆ ಗೋಧಿ, ರಾಗಿ, ಕಡಲೆ ಬಟಾಣಿಯನ್ನು ಬೆಳೆಸುತ್ತಿದ್ದಾರಂತೆ. ತಲೆ ಮೇಲೆ ಗಿಡಗಳ ಹಿಂದಿರುವ ಈ ಬಾಬಾ ನೋಡುಗರಿಗೆ ಅಚ್ಚರಿ ಎನಿಸುತ್ತಾರೆ. ಹಾಗೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಅನಾಜ್ ವಾಲೆ ಬಾಬಾ ಅವರಿಗೆ ಪರಿಸರದ ಮೇಲೆ ಎಲ್ಲಿಲ್ಲದ ಕಾಳಜಿಯಂತೆ. ಹೀಗಾಗಿ ಮೊದಲು ನಾವು ಪರಿಸರನ್ನು ಪೂಜಿಸಬೇಕು ಎನ್ನುತ್ತಾರೆ. ಪರಿಸರವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡಲಿದೆ ಎಂಬುದು ಅವರ ಅಭಿಯಾನದ ಉದ್ದೇಶವಾಗಿದೆ. ಹೀಗಾಗಿ ಅವರು ತಮ್ಮ ತಲೆ ಮೇಲೆ ಈ ರೀತಿ ಗಿಡಗಳ ಬೆಳೆಸುತ್ತಿದ್ದಾರೆ.
ಅರಣ್ಯನಾಶವು ಬೆಳೆಯುತ್ತಿರುವ ಸಮಸ್ಯೆಯಾಗಿದೆ ಮತ್ತು ನಾನು ಜನರನ್ನು ಹೆಚ್ಚು ಹಸಿರು ನೆಡಲು ಪ್ರೇರೇಪಿಸಲು ಬಯಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಗಿಡಗಳು ಹೇಗೆ ಕಾಣಿಸುತ್ತೆ ಎಂದು ನನಗೆ ತಿಳಿದಿಲ್ಲ. ನಿತ್ಯ ನಾನು ಅವುಗಳನ್ನು ನೋಡಲು ಸಾಧ್ಯವಿಲ್ಲ ಹೀಗಾಗಿ ಯಾವಾಗಲು ನೀರು ಹಾಕುತ್ತಿರುತ್ತೇನೆ. ಇದು ನನ್ನ ತಲೆ ಒಳಗಿಂದ ಬೆಳೆದಿರುವುದಲ್ಲ ಬದಲಿಗೆ ನಾನು ಕೃತವಾಗಿ ಮಣ್ಣು ಹಾಕಿ ಒಂದು ಪೆಟ್ಟಿಗೆಯಂತಹ ಆಕಾದಲ್ಲಿ ಅದನ್ನು ಬೆಳೆಸಿದ್ದೇನೆ. ಈ ರೀತಿ ನನ್ನ ತಲೆ ಮೇಲಿನ ಗಿಡ ನನಗೆ ತಂಪಾದ ವಾತಾವರಣದಂತೆ ಅನುಭವ ನೀಡುತ್ತೆ ಎಂದು ಬಾಬಾ ಹೇಳಿಕೊಂಡಿದ್ದಾರೆ.
ಜನರ ಮನದಲ್ಲಿ ಜಾಗೃತಿ ಎಂಬ ಬೀಜ ಬಿತ್ತಬೇಕಿದೆಯಂತೆ, ಮಹಾಕುಂಭಮೇಳದ ಬಳಿಕ ಅವರು ಸೋನಭದ್ರಕ್ಕೆ ತೆರಳಲಿದ್ದಾರಂತೆ. ಅಲ್ಲಿಯೇ ಅವರು ನೆಲೆಸಿದ್ದು ಪರಿಸರ ರಕ್ಷಣೆಯೇ ನನ್ನ ಮೂಲ ಉದ್ದೇಶ ಎಂದಿದ್ದಾರೆ.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳವು ಜನವರಿ 13 ರಿಂದ ಫೆಬ್ರವರಿ 26ರ ವರೆಗೆ ನಡೆಯಲಿದೆ. ಇದು 45 ಕೋಟಿ ಭಕ್ತರ ಸ್ವಾಗತಕ್ಕೆ ಕಾರಣವಾಗುತ್ತಿದೆ. ಹೀಗಾಗಿಯೇ ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮ್ಮೇಳನ ಎಂಬ ಕೀರ್ತಿ ಪಡೆದಿದೆ.



Click it and Unblock the Notifications











