Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವರತ್ನ ಉಂಗುರ ಎಂಬ ಅದೃಷ್ಟ..! ಬಾಲಿವುಡ್ ನಟರ ಜೀವನ ಬದಲಾಗಿದ್ದು ಹೀಗೆ..!
ಸಿನಿಮಾ ತಾರೆಯರು ಭಾರತದಲ್ಲಿ ಪೂಜಿಸಲ್ಪಡುವಂತಹ ಸಂಸ್ಕೃತಿ ಇದೆ. ಅವರನ್ನು ದೇವರಂತೆ ನೋಡುವ ಮಂದಿ ಇದ್ದಾರೆ. ಹಾಗೆ ಅವರನ್ನು ಅನುಸರಿಸುವ ಬಹಳಷ್ಟು ಅಭಿಮಾನಿಗಳ ನೋಡಬಹುದು. ಅವರು ತೆರೆ ಮೇಲೆ ಬಂದರೆ ಸಾಕು ಕೇಕೆ ಹಾಕಿ ಅವರನ್ನು ಆರಾಧಿಸುವವರನ್ನು ಸಹ ನೋಡಬಹುದು, ಹಾಗೆ ಅವರ ವಸ್ತ್ರಗಳು, ಆಭರಣಗಳು, ಅವರ ಸ್ಟೈಲ್ ಅನ್ನು ಕೂಡ ಅನುಸರಿಸುವ ಮಂದಿ ಇದ್ದಾರೆ.
ಹಾಗೆ ಅವರ ಜೀವನದ ಕುರಿತು ತಿಳಿದುಕೊಳ್ಳಲು ಎಲ್ಲರು ಇಚ್ಛಿಸಿರುತ್ತಾರೆ. ಅದರಲ್ಲೂ ಸಿನಿಮಾ ಮಂದಿ ಧರಿಸುವ ಆಭರಣಗಳು, ವಾಚ್, ಚಿನ್ನ, ಬೆಳ್ಳಿಯ ವಸ್ತುಗಳ ಕುರಿತಾಗಿ ಎಲ್ಲರಲ್ಲೂ ಆಸಕ್ತಿ ಇದ್ದೇ ಇರುತ್ತದೆ. ಹಾಗೆ ಅವರ ಕೈಯಲ್ಲಿರುವ ವಿಶೇಷ ಉಂಗುರಗಳು ಯಾವಾಗಲು ಸುದ್ದಿಯಾಗುತ್ತಿರುತ್ತದೆ. ಅದು ಬಾಲಿವುಡ್ ಮಂದಿಯಿಂದ ಹಿಡಿದು ಎಲ್ಲಾ ಭಾಷೆಯ ನಟ ನಟಿಯರಲ್ಲೂ ನೋಡಬಹುದು.

ಕೆಲವರು ವಿಶೇಷವಾಗಿ ಕೈ ಬೆರಳುಗಳಲ್ಲಿನ ಉಂಗುರಗಳು ಹಾಗೆ ಜೈನ್‌ಗಳಲ್ಲಿ ಕೆಲವು ಬಣ್ಣದ ಅದೃಷ್ಟದ ಹವಳ, ಮುತ್ತು, ಹಸಿರು ಬಣ್ಣದ ಸ್ಟೋನ್ ಇರುವ ಉಂಗುರ ಧರಿಸುವುದು ನೋಡಬಹುದು. ಇದರಿಂದ ಅವರ ಜೀವನದಲ್ಲಿ ಬದಲಾವಣೆಗಳು ಉಂಟಾಗಿರುವ ಕುರಿತಾಗಿಯೂ ಅವರು ಹೇಳಿಕೊಂಡಿರಬಹುದು. ಇಂತಹ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಬರುತ್ತವೆ.
ಹಾಗಾದ್ರೆ ಯಾವ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಕೈಯಲ್ಲಿ ವಿಶೇಷ ಉಂಗುರ ಹೊಂದಿದ್ದಾರೆ ಅದರ ಹಿಂದಿರುವ ವಿಶೇಷವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಅಮಿತಾಬ್ ಬಚ್ಚನ್
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಭಾರತೀಯರಷ್ಟೇ ಅಲ್ಲ ವಿದೇಶದಲ್ಲೂ ಅಭಿಮಾನಿ ಬಳಗ ಹೊಂದಿರುವ ಓರ್ವ ನಟ, ಅವರ ಜೀವನದಲ್ಲಿ ಹಲವು ಏರಿಳಿತಗಳು, ಹಿಟ್ ಸಿನಿಮಾಗಳು ಹಾಗೆ ಫ್ಲಾಪ್ ಸಿನಿಮಾಗಳನ್ನು ಸಹ ನೀಡಿದ್ದಾರೆ. ಅವರಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಹಾಗೆ ಅವರ ಕೈಯಲ್ಲಿ ನೀಲಿ ಬಣ್ಣದ ಸ್ಟೋನ್ ಇರುವ ಉಂಗುರ ಇರುವುದು ನೀವು ಗಮನಿಸಿರಬಹುದು. ಜ್ಯೋತಿಷಿ ಒಬ್ಬರ ಸಲಹೆಯಂತೆ ಅವರು ಈ ನೀಲಿ ಬನ್ಣದ ಸ್ಟೋನ್ ಇರುವ ಉಂಗುರ ಧರಿಸಲು ಆರಂಭಿಸಿದ್ದರಂತೆ. ಅಂದಿನಿಂದ ಅವರ ಜೀವನದ ಬದಲಾಗಿತ್ತಂತೆ. ನೀಲಿ ಸ್ಟೋನ್‌ಗಳು ಶನಿ ದೇವರಿಗೆ ಸಂಬಂಧಿಸಿದ ಕಲ್ಲು ಎಂಬುದನ್ನು ಜ್ಯೋತಿಷ್ಯವು ವಿವರಿಸುತ್ತದೆ. ಇದಾದ ಬಳಿಕ ಅವರಲ್ಲಿನ ದೊಡ್ಡ ಸಂಕಷ್ಟಗಳು ನಿವಾರಣೆಯಾಗಿತ್ತು ಎನ್ನಲಾಗಿದೆ.
ಕರೀನಾ ಕಪೂರ್
ಬಾಲಿವುಡ್ ಮಿಲ್ಕಿ ಬ್ಯೂಟಿ ಎಂದೇ ಹೆಸರಾಗಿರುವ ಕರೀನಾ ಕಪೂರ್ ತಮ್ಮ ಸಿನಿಮಾ ಜರ್ನಿಯಲ್ಲಿ ಹಲವು ಏಳುಬೀಳು ಕಂಡಿದ್ದಾರೆ. ಆದರೆ ಅವರು ಕೆಂಪು ಹವಳದ ಉಂಗುರ ಧರಿಸುವುದು ನೀವು ಕೂಡ ಗಮನಸಿರಬಹುದು. ಕೆಂಪು ಹವಳವು ನಿಮ್ಮ ಕೋಪವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಹಾಗೆ ಇದು ನಿಮ್ಮನ್ನು ಆಧ್ಯಾತ್ಮಿಕವಾಗಿ ಬಲವಾಗುವಂತೆ ಮಾಡಲಿದೆ. ನಿಮ್ಮ ಸುತ್ತಮುತ್ತ ಇರುವ ನಕಾರಾತ್ಮಕ ಶಕ್ತಿಯನ್ನು ದೂರ ತಳ್ಳಲಿದೆ ಎಂದು ಸಹ ಹೇಳಲಾಗಿದೆ.
ಸಲ್ಮಾನ್ ಖಾನ್
ಬಾಲಿವುಡ್ ಬ್ಯಾಡ್ ಬಾಯ್ ಅಂತಲೇ ಸುದ್ದಿಯಾಗುವ ಸಲ್ಮಾನ್ ಖಾನ್ ತಮ್ಮ ಕೈಯಲ್ಲಿ ದೊಡ್ಡ ಜೈನ್ ಧರಿಸುವುದು ನೋಡಬಹುದು. ಅದರಲ್ಲಿ ನೀಲಿ ಬಣ್ಣದ ಸ್ಟೋನ್ ಇರುವುದು ಕೂಡ ಗುರುತಿಸಬಹುದು. ಕೆಲವರು ಇದು ಗಿಫ್ಟ್ ಆಗಿ ಬಂದಿರುವುದು ಅಂತಲೂ ಹಾಗೆ ಸ್ಟೈಲ್‌ಗಾಗಿ ಧರಿಸುತ್ತಾರೆ ಎಂದುಕೊಂಡಿದ್ದಾರೆ, ಆದ್ರೆ ಈ ನೀಲಿ ಬಣ್ಣದ ಸ್ಟೋನ್ ಕೆಟ್ಟ ದೃಷ್ಟಿಯ ವಿರುದ್ಧ ಹಾಗೆ ಯಶಸ್ಸಿಗೆ ಕಾರಣವಾಗುವ ಸ್ಟೋನ್ ಆಗಿದೆ. ಇದನ್ನು ಧರಿಸುವವರು ಜೀವನದಲ್ಲಿ ಆರ್ಥಿಕ ಆರೋಗ್ಯ ಮತ್ತು ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ ಎಂದು ನಂಬಲಾಗಿದೆ. ಇದು ಗುರುವಿನ ಸ್ಥಾನವನ್ನು ಬಲಗೊಳಿಸಲಿದೆ ಎಂದು ನಂಬಲಾಗಿದೆ.
ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಹಾಗೆ ಅವರು ಉದ್ಯಮಿಯಾಗಿಯೂ ಗುರುತಿಸಿಕೊಂಡವರು. ಅವರು ಯೋಗ ಹಾಗೂ ಆಧ್ಯಾತ್ಮಿಕ ವಿಚಾರದಲ್ಲಿ ಬಹಳ ನಂಬಿಕೆ ಇಟ್ಟವರು. ಹಾಗೆ ಅವರು ಕೈಗೆ ಹಸಿರು ಬಣ್ಣದ ಸ್ಟೋನ್ ಇರುವ ಉಂಗುರ ಧರಿಸುತ್ತಾರೆ. ಇದನ್ನು ಪಚ್ಚೆ ಎನ್ನಲಾಗುತ್ತದೆ. ಇದು ಅದೃಷ್ಟ ಆರೋಗ್ಯ, ಹಾಗೆ ಯಶಸ್ಸಿನ ಗುಟ್ಟಾಗಿರಲಿದೆ. ಸಂಪತ್ತು ವೃದ್ಧಿಗಾಗಿ ಹಸಿರು ಸ್ಟೋನ್ ಇರುವ ಈ ಉಂಗುರ ಧರಿಸಿರುವುದಾಗಿ ಆಕೆ ಕೂಡ ಹೇಳಿಕೊಂಡಿದ್ದರು.
ಐಶ್ವರ್ಯಾ ರೈ
ಅಭಿಷೇಕ್ ಬಚ್ಚನ್ ಪತ್ನಿ ಹಾಗೂ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದ ಐಶ್ವರ್ಯ ರೈ ಕೂಡ ನೀಲಿ ಮಣಿ ಉಂಗುರ ಧರಿಸುತ್ತಾರೆ. ಅವರ ಜೀವನದ ಅತ್ಯಂತ ಯಶಸ್ಸಿನ ಸಮಯದಲ್ಲಿ ಅವರು ಈ ಉಂಗುರ ಧರಿಸಲು ಆರಂಭಿಸಿದ್ದರಂತೆ. ನೀಲಿ ಅದೃಷ್ಟದ ಪ್ರತೀಕವಾಗಿದೆ, ಹಾಗೆ ಯಾವುದೇ ಕೆಲಸಗಳಲ್ಲಿಯೂ ಅಡ್ಡಿಯಿಲ್ಲದೆ ನಡೆಯಲು ಈ ನೀಲಿ ಉಂಗುರ ಸಹಕಾರಿ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
ಅಜಯ್ ದೇವಗನ್
ಬಾಲವುಡ್ ನಟ ಅಜಯ್ ದೇವ್‌ಗನ್ ಆಧ್ಯಾತ್ಮಿಕ ವಿಚಾರದಲ್ಲಿ ಬಹಳ ನಂಬಿಕೆ ಇಟ್ಟವರು. ಅವರ ಕೈಯಲ್ಲಿ ಹಲವು ರೀತಿಯ ಉಂಗುರಗಳ ನೋಡಬಹುದು. ಅದರಲ್ಲೂ ವಿಶೇಷವಾಗಿ ಹರಳಿನ ಉಂಗುರ ಧರಿಸಲು ಮುಂದಾಗಿದ್ದರು. ಜ್ಯೋತಿಷಿ ಒಬ್ಬರ ಸಲಹೆಯ ಮೇರೆಗೆ ಅವರು ಈ ಉಂಗುರ ಧರಿಸಲು ಮುಂದಾದರಂತೆ ಅಂದಿನಿಂದ ಅವರ ಜೀವನದಲ್ಲಿ ಧನಾತ್ಮಕ ಬದಲಾವಣೆ ನೋಡಿರುವುದಾಗಿ ಹೇಳಿಕೊಂಡಿದ್ದರು. ನವರತ್ನದ ಉಂಗುರು ಧರಿಸುವುದು ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ನೀಡಲಿದೆ ಎಂದು ಹೇಳಲಾಗಿದೆ.
ನಟ ಜಗ್ಗೇಶ್ ಕೈಯಲ್ಲೂ ಇವೆ ಉಂಗುರಗಳು
ಸ್ಯಾಂಡಲ್‌ವುಡ್ ನಟ ಜಗ್ಗೇಶ್ ಅವರು ಕೂಡ ಕೈ ತುಂಬಾ ಉಂಗುರ ಧರಿಸುತ್ತಾರೆ. ಏನಿಲ್ಲಾ ಅಂದರು ಸುಮಾರು 8 ಉಂಗುರ ಅವರ ಕೈಯಲ್ಲಿವೆ. ಜಗ್ಗೇಶ್ ತಾಯಿ ನಂಜಮ್ಮಗೆ ಚಿನ್ನಾಭರಣ ಅಂದರೆ ಬಹಳ ಇಷ್ಟವಂತೆ. ಹೀಗಾಗಿ ಹೆಚ್ಚು ಆಭರಣ ಧರಿಸುತ್ತಿದ್ದರಂತೆ. ಅಂದಿನಿಂದ ಜಗ್ಗೇಶ್ ಕೂಡ ಉಂಗುರ ಧರಿಸಲು ಆರಂಭಿಸಿದ್ದರು. ಹಾಗೆ ಅವರು ರಾಶಿಗೆ ಅನುಗುಣವಾಗಿಯೂ ಉಂಗುರ ಧರಿಸಿದ್ದಾರೆ.



Click it and Unblock the Notifications










