Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ದೀಪಾವಳಿ ದಿನವೇ ಎಲ್‌ಪಿಜಿ ದರ ಏರಿಕೆ: ಈ ಎಲ್ಲಾ ನಿಯಮ ಇಂದಿನಿಂದ ಬದಲಾವಣೆ..!!
ಇಂದಿನಿಂದ ಹೊಸ ತಿಂಗಳು ಆರಂಭಗೊಂಡಿದೆ. ನವೆಂಬರ್ 1ರಿಂದ ದೇಶದಲ್ಲಿ ಕೆಲವು ಬದಲಾವಣೆಗಳನ್ನು ನಾವು ನೋಡಬಹುದು. ಇಂದಿನಿಂದ ಕೆಲವು ನಿಯಮಗಳು, ದರಗಳು ಕೂಡ ಬದಲಾಗುತ್ತಿವೆ. ಅದರಲ್ಲೀ ನೀವು ಬ್ಯಾಂಕಿಂಗ್ ವ್ಯವಹಾರದಲ್ಲಿ ತೊಡೆಗಿರುವವರು, ವ್ಯವಹಾರ ಸೇರಿ ನಿಮ್ಮ ದೈನಂದಿನ ವಿಚಾರಗಳಿಗೆ ಇದು ಸಂಬಂಧಿಸಿರಲಿದೆ.
ಪ್ರತಿ ತಿಂಗಳ ಮೊದಲನೆಯ ದಿನದಂತೆ, ಪೆಟ್ರೋಲಿಯಂ ಕಂಪನಿಗಳು ನವೆಂಬರ್ 1 ರಂದು LPG ಸಿಲಿಂಡರ್‌ಗಳಿಗೆ ಪರಿಷ್ಕೃತ ದರಗಳನ್ನು ಘೋಷಿಸುತ್ತವೆ. ದೇಶೀಯ ಬಳಕೆದಾರರು ಬೆಲೆ ಹೊಂದಾಣಿಕೆಗಳನ್ನು ನೋಡಬಹುದಾದರೂ, ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆಯಾಗುವುದು ಸಾಮಾನ್ಯ ಎನ್ನುವಂತಾಗಿದೆ.

ದೇಶಾದ್ಯಂತ ದೀಪಾವಳಿ ಸಂಭ್ರಮದ ನಡುವೆ ನಾಗರೀಕರಿಗೆ ಬೆಲೆ ಏರಿಕೆಯ ಶಾಕ್ ತಗುಲಿದೆ. ತಿಂಗಳ ಮೊದಲ ದಿನ ಎಲ್‌ಪಿಜಿ ಹೊಸ ಪರಿಷ್ಕೃತ ದರ ಹೊರಬಿದ್ದಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಪರಿಷ್ಕರಿಸಿರುವ ಕಂಪನಿಗಳು ಪ್ರತಿ 19 ಕೆ.ಜಿ ಸಿಲಿಂಡರ್ ಮೇಲೆ ಬರೋಬ್ಬರಿ 62 ರೂಪಾಯಿ ಹೆಚ್ಚಿಸಿವೆ. ಈ ಹೊಸ ದರ ಇಂದಿನಿಂದ ಜಾರಿಗೆ ಬರಲಿದೆ.
ಕಳೆದ ತಿಂಗಳಲ್ಲೂ ಕೂಡ ಎಲ್‌ಪಿಜಿ ದರ ಏರಿಕೆ ಜನರಿಗೆ ಬಿಸಿ ಮುಟ್ಟಿಸಿತ್ತು. ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ 19 ಕೆ.ಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿತ್ತು. ಅಕ್ಟೋಬರ್‌ನಲ್ಲಿ 48.50 ರೂಪಾಯಿ ಏರಿಕೆಯಾಗಿತ್ತು, ಈಗ ಮತ್ತೆ 62 ರೂಪಾಯಿ ಏರಿಕೆಯಾಗಿ ಗ್ರಾಹಕರಿಗೆ ಮತ್ತೆ ಆಘಾತ ತಂದಿದೆ. ಈ ದರ ಏರಿಕೆಯಿಂದಾಗಿ ಪ್ರಸ್ತುತ ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1802 ರೂ ಆಗಿದೆ. ಬೆಂಗಳೂರಿನಲ್ಲಿ ಈ ದರ ಬರೋಬ್ಬರಿ 1964 ರೂಪಾಯಿಗೆ ಬಂದು ತಲುಪಿದೆ. ಇನ್ನು ಗೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 1ರಿಂದ ಡೊಮೆಸ್ಟಿಕ್ ಮನಿ ಟ್ರಾಫ್ಸರ್ (DMT) ಕುಸಿತು ಹೊಸ ನಿಯಮ ಜಾರಿಗೆ ಮುಂದಾಗಿದೆ. ಈ ನಿಯಮದಲ್ಲಿ ನೀವು ಬ್ಯಾಂಕಿಂಗ್ ಔಟ್‌ಲೆಟ್‌ಗಳ ಲಭ್ಯತೆ, ಹಣ ವರ್ಗಾವಣೆಗಾಗಿ ಪಾವತಿ ವ್ಯವಸ್ಥೆಗಳಲ್ಲಿನ ಬೆಳವಣಿಗೆಗಳು ಮತ್ತು KYC ಅವಶ್ಯಕತೆಗಳನ್ನು ಪೂರೈಸುವಲ್ಲಿ ಸುಲಭವಾಗಿದೆ ಇತ್ಯಾದಿಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ.
ಹಾಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಯುಟಿಲಿಟಿ ಬಿಲ್ ಪಾವತಿಯಲ್ಲಿ ಹೆಚ್ಚಳವಾಗಲಿದೆ. ಅಸುರಕ್ಷಿತ SBI ಕ್ರೆಡಿಟ್ ಕಾರ್ಡ್‌ಗಳಿಗೆ, ಹಣಕಾಸು ಶುಲ್ಕಗಳು ತಿಂಗಳಿಗೆ 3.75% ಕ್ಕೆ ಹೆಚ್ಚಾಗುತ್ತವೆ. ಹೆಚ್ಚುವರಿಯಾಗಿ ಬಿಲ್ಲಿಂಗ್ ಅವಧಿಯಲ್ಲಿ ಮಾಡಿದ ಯುಟಿಲಿಟಿ ಪಾವತಿಗಳ ಒಟ್ಟು ಮೊತ್ತವು 50,000 ರೂಪಾಯಿ ಮೀರಿದರೆ ಆ ಮೊತ್ತಕ್ಕೆ ಶೇ.1ರಷ್ಟು ಹೆಚ್ಚಿನ ಶುಲ್ಕ ಅನ್ವಯವಾಗಲಿದೆ. ಈ ನಿಯಮ ಇದೇ ನವೆಂಬರ್ 1ರಿಂದ ಜಾರಿಯಾಗುತ್ತಿದೆ.
ಇನ್ನು ಈ ಸೈಬರ್ ವಂಚನೆ ತಡೆಯುವ ಉದ್ದೇಶದಿಂದ ಟ್ರಾಯ್ ತನ್ನ ಗ್ರಾಹಕರಿಂದ ಮಾಡಲ್ಪಟ್ಟ ಆ ವಹಿವಾಟಿನ ಮೂಲ ಪತ್ತೆಗೆ ಮುಂದಾಗಲಿದೆ. ಹಾಗೂ ಅದನ್ನು ಟ್ರ್ಯಾಕ್ ಮಾಡಲಿದೆ. ಒಂದು ವೇಳೆ ಈ ಟ್ರ್ಯಾಕಿಂಗ್‌ನಲ್ಲಿ ಟ್ರಾಯ್ ಮಾನದಂಡವನ್ನು ಪೂರೈಸಲು ವಿಫಲವಾದ ವಹಿವಾಟಿನ ಮೂಲಗಳನ್ನು ನಿರ್ಬಂಧಿಸಲಿದೆ. ಇದರಿಂದ ವಂಚನೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ.



Click it and Unblock the Notifications

